Shah Rukh Khan: 'ಬೀಸ್ಟ್'ಗೆ ಶುಭಕೋರಿದ ಶಾರುಖ್ 'ಜೀರೊ' ಮಾಡಿದ ಹೀರೊನಾ ಮರೆತುಬಿಟ್ರಾ?
ಒಂದ್ಕಡೆ ಯಶ್ ಸಿನಿಮಾ 'ಕೆಜಿಎಫ್ 2'. ಇನ್ನೊಂದು ಕಡೆ ವಿಜಯ್ ಸಿನಿಮಾ 'ಬೀಸ್ಟ್'. ಇವೆರಡು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಅದ್ಯಾವ ಮಟ್ಟಕ್ಕೆ ಗುದ್ದಾಡುತ್ತೆ ಅನ್ನೋದನ್ನು ನೋಡಲು ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಒಂದು ಪ್ಯಾನ್ ಇಂಡಿಯಾ ಸಿನಿಮಾ. ಇನ್ನೊಂದು ಸೂಪರ್‌ಸ್ಟಾರ್ ಸಿನಿಮಾ ಈ ಎರಡೂ ಸಿನಿಮಾಗಳ ಕಾದಾಟ ಜೋರಾಗೇ ಇರುತ್ತೆ.
Recommended Video

ತಮಿಳುನಾಡು, ಆಂಧ್ರದಲ್ಲಿ 'ಬೀಸ್ಟ್' ಅಬ್ಬರ ಜೋರಾಗಿದೆ. ಇನ್ನೊಂದು ಕಡೆ 'ಕೆಜಿಎಫ್ 2' ಕರ್ನಾಟಕ, ಉತ್ತರ ಭಾರತ, ಆಂಧ್ರ-ತೆಲಂಗಾಣದಲ್ಲಿ ಕ್ರೇಜ್ ಜೋರಾಗಿದೆ. ಒಂದ್ಕಡೆ 'ಬೀಸ್ಟ್' ಟಕ್ಕರ್ ಕೊಟ್ಟರೆ, ಇನ್ನೊಂದು ಕಡೆ 'ಕೆಜಿಎಫ್ 2' ಟಕ್ಕರ್ ಕೊಡುತ್ತಿದೆ. ಈ ಕಾರಣಕ್ಕೆ ಬಾಕ್ಸಾಫೀಸ್ ಲೆಕ್ಕಾಚಾರದ ಮೇಲೆ ಸೋಲು ಗೆಲುವು ನಿಂತಿದೆ.
ಈ ಎರಡೂ ಸಿನಿಮಾಗಳ ಮಧ್ಯೆ ಶಾರುಖ್ ಖಾನ್ ಹೆಸರು ಮತ್ತೆ ತೇಲಿ ಬಂದಿದೆ. ಅದಕ್ಕೆ ಕಾರಣ ಕಿಂಗ್ ಖಾನ್ ಮಾಡಿದ ಒಂದೇ ಒಂದು ಟ್ವೀಟ್. ಇದೇ ಟ್ವೀಟ್ ನೋಡಿದರೆ, ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ ಇಂಡಿಯಾ ಸಿನಿಮಾವನ್ನೇ ಮರೆತುಬಿಟ್ರಾ ಶಾರುಖ್ ಖಾನ್ ಅನ್ನೋ ಅನುಮಾನ ಮೂಡುತ್ತೆ. ಅಷ್ಟಕ್ಕೂ ಶಾರುಖ್ ಮಾಡಿದ ಆ ಟ್ವೀಟ್ ಏನು? 'ಕೆಜಿಎಫ್ 2' ಹಾಗೂ 'ಬೀಸ್ಟ್' ಮಧ್ಯೆ ಕಿಂಗ್ ಖಾನ್ ಹೆಸರು ಬಂದಿದ್ದೇಗೆ? ಅಂತ ತಿಳಿಯಲು ಮುಂದೆ ಓದಿ.
'ಬೀಸ್ಟ್' ಟ್ರೈಲರ್‌ಗೆ ಶಾರುಖ್ ಹೇಳಿದ್ದೇನು?
ದಳಪತಿ ವಿಜಯ್ ಸಿನಿಮಾ 'ಬೀಸ್ಟ್' ಏಪ್ರಿಲ್ 13ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ವಿಜಯ್ ಫ್ಯಾನ್ಸ್ ಸಿನಿಮಾ ನೋಡಲು ಕಾದು ಕೂತಿದ್ದಾರೆ. ಈ ಮಧ್ಯೆ ಕಿಂಗ್ ಖಾನ್ ಶಾರುಖ್ 'ಬೀಸ್ಟ್' ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಶಾರುಖ್ ಖಾನ್ ಟ್ರೈಲರ್ ಲಿಂಕ್ ಶೇರ್ ಮಾಡಿ, ಟ್ವೀಟ್ ಮಾಡಿದ್ದಾರೆ." ನಾನು ನಿರ್ದೇಶಕ ಆಟ್ಲಿ ಜೊತೆ ಕೂತಿದ್ದೇನೆ. ಅವರು ನನ್ನಂತೆಯೇ ವಿಜಯ್ ಅವರ ದೊಡ್ಡ ಅಭಿಮಾನಿ. 'ಬೀಸ್ಟ್' ಸಿನಿಮಾದ ಇಡೀ ತಂಡಕ್ಕೆ ಶುಭಾಶಯಗಳು. " ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದರು.

'ಕೆಜಿಎಫ್ 2' ಟ್ರೈಲರ್ ಮರೆತ್ರಾ ಶಾರುಖ್
'ಬೀಸ್ಟ್' ಸಿನಿಮಾದ ಟ್ರೈಲರ್ ರಿಲೀಸ್ ಆಗುವುದಕ್ಕಿಂತ ಮುನ್ನ 'ಕೆಜಿಎಫ್ 2' ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಆದರೆ, ಅಲ್ಲಿಂದ ಇಲ್ಲಿವರೆಗೂ ಶಾರುಖ್ ಖಾನ್ ಟ್ರೈಲರ್ ಬಗ್ಗೆ ಒಂದೇ ಒಂದು ಮಾತೂ ಹೇಳಿಲ್ಲ. ಅದಕ್ಕೆ ಶಾರುಖ್ ಹಿಂದಿನ ಕಹಿ ಘಟನೆಯನ್ನು ಮರೆತಿಲ್ಲ ಎಂದು ಚರ್ಚೆಯಾಗುತ್ತಿದೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್' ಸಿನಿಮಾ ಶಾರುಖ್ ನಟಿಸಿದ್ದ 'ಜೀರೋ' ಚಿತ್ರವನ್ನು ಉಲ್ಟಾ ಮಲಗಿಸಿತ್ತು. ಹೀಗಾಗಿ ಶಾರುಖ್ 'ಕೆಜಿಎಫ್ 2' ಟ್ರೈಲರ್‌ಗೆ ವಿಶ್ ಮಾಡಿಲ್ಲ ಎನ್ನಲಾಗುತ್ತಿದೆ. ಆದರೆ, ಅಸಲಿ ಕಥೆಯೇ ಬೇರೆ.

ವಿಜಯ್ ಅಭಿಮಾನಿ ಶಾರುಖ್
ಶಾರುಖ್ ಖಾನ್ 'ಬೀಸ್ಟ್' ಸಿನಿಮಾ ಟ್ರೈಲರ್ ಬಿಡುಗಡೆ ಮಾಡುವುದಕ್ಕೆ ಕಾರಣವಿದೆ. ವಿಜಯ್ ಸಿನಿಮಾ 'ಬಿಗಿಲ್' ನಿರ್ದೇಶಿಸಿದ್ದ ಅಟ್ಲಿ ಈಗ ಶಾರುಖ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ 'ಬೀಸ್ಟ್' ಟ್ರೈಲರ್ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಂದು ಕಡೆ ಟ್ವೀಟ್‌ನಲ್ಲೇ "ನಾನೂ ವಿಜಯ್ ಅಭಿಮಾನಿ" ಎಂದು ಹೇಳಿಕೊಂಡಿದ್ದಾರೆ. ಅಸಲಿಗೆ ಮೊದಲಿನಿಂದಲೂ ಶಾರುಖ್‌ಗೆ ತಮಿಳು ಸಿನಿಮಾ ಕಡೆ ಒಲವಿದೆ.

ಯಶ್‌ಗೆ ಶಾರುಖ್ ಮಾಡಿಲ್ಲ
'ಕೆಜಿಎಫ್ ಚಾಪ್ಟರ್ 1' ಬಿಡುಗಡೆಯಾದಾಗ ಶಾರುಖ್ ಸಿನಿಮಾ 'ಜೀರೋ' ರಿಲೀಸ್ ಆಗಿತ್ತು. ಕಿಂಗ್ ಖಾನ್ ಸಿನಿಮಾ ಮುಂದೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಗೆಲ್ಲೋದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ, ಆ ಎಲ್ಲಾ ಲೆಕ್ಕಾಚಾರವೂ ತಲೆಕೆಳಗಾಗಿತ್ತು. ಬಾಕ್ಸಾಫೀಸ್‌ನಲ್ಲಿ ಶಾರುಖ್ ಖಾನ್ ಸಿನಿಮಾ ಸೋತು ಸುಣ್ಣವಾಗಿತ್ತು. ಈ ಮೂಲಕ 'ಕೆಜಿಎಫ್' ಪ್ರಾಂಚೈಸಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ.



Click it and Unblock the Notifications











