ಕಿಂಗ್ ಖಾನ್ ಶಾರುಖ್ 'ಜೀರೋ' ವಿರುದ್ಧ ಕ್ರಿಮಿನಲ್ ಕೇಸ್

By ಜೇಮ್ಸ್ ಮಾರ್ಟಿನ್

ಕಿಂಗ್ ಖಾನ್ ಶಾರುಖ್ ಕುಬ್ಜನಾಗಿ ಕಾಣಿಸಿಕೊಂಡಿರುವ 'ಜೀರೋ' ಚಿತ್ರದ ಟ್ರೈಲರ್ ಈಗಾಗಲೇ ಜನಮೆಚ್ಚುಗೆ ಪಡೆದು ಅಭಿಮಾನಿಗಳಿಗೆ ಹುಚ್ಚು ಹಿಡಿಸುತ್ತಿದೆ. ಆದರೆ, ಟ್ರೈಲರ್ ನಲ್ಲಿನ ಒಂದು ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ದೆಹಲಿಯ ಶಾಸಕರೊಬ್ಬರು, ಚಿತ್ರತಂಡದ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ್ದಾರೆ.

ಯೂಟ್ಯೂಬಿನಲ್ಲಿ ಟ್ರೈಲರ್ ಬಿಡುಗಡೆಯಾದ ಒಂದೇ ದಿನದಲ್ಲಿ 5 ಕೋಟಿಗೂ ಹೆಚ್ಚು ವೀಕ್ಷಣೆಯಾಗುವ ಮೂಲಕ ದಾಖಲೆ ಬರೆದಿದೆ. ಶಾರುಖ್, ಅನುಷ್ಕಾ, ಕತ್ರೀನಾ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅತ್ತ '2.O' - 'ಜೀರೋ' ಪೈಪೋಟಿ : ಇತ್ತ ಉಪ್ಪಿ - ಡಾಲಿ ಲವ್ವಿ ಡವ್ವಿ
ಜೀರೋ ಚಿತ್ರದ ಈ ಟ್ರೈಲರ್ ನೋಡಿದ ಸಿಖ್ ಸಮುದಾಯದ ಮುಖಂಡ, ದೆಹಲಿಯ ಅಕಾಲಿದಳ ಪಕ್ಷದ ಶಾಸಕ ಮಜೀಂದರ್ ಸಿಂಗ್ ಅವರಿಗೆ ಮಾತ್ರ ಒಂದು ದೃಶ್ಯವನ್ನು ಸಹಿಸಲು ಆಗಿಲ್ಲ.

ದೆಹಲಿಯಲ್ಲಿ ಅಕಾಲಿ ದಳದ ಎಂಎಲ್​ಎ ಮಂಜಿಂದರ್​ ಸಿಂಗ್ ಸಿರ್ಸಾ ಎಂಬುವವರು ಶಾರುಖ್ ಸೇರಿದಂತೆ ಕೆಲವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್​ ದೂರು ನೀಡಿದ್ದಾರೆ. ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಹೊರೆಸಲಾಗಿದೆ. ದೃಶ್ಯವೊಂದರಲ್ಲಿ ಚಡ್ಡಿ ಹಾಕಿಕೊಂಡಿರುವ ಶಾರುಖ್ ಅವರು ಸಿಖ್ ಸಮುದಾಯದ ಪವಿತ್ರ ಗುರುತುಗಳಲ್ಲಿ ಒಂದೆನಿಸಿರುವ ಕಿರ್ಪಾನ್(ಚಿಕ್ಕ ಕತ್ತಿ) ಧರಿಸಿದ್ದಾರೆ. ಇದು ಅನಗತ್ಯವಾಗಿದೆ ಎಂದು ಸಿಂಗ್ ವಾದಿಸಿದ್ದಾರೆ.

ದೂರು ನೀಡಿದವರು ಯಾರು?

ದೂರು ನೀಡಿದವರು ಯಾರು?

ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ(ಡಿಎಸ್ ಜಿಎಂಸಿ) ಪ್ರಧಾನ ಕಾರ್ಯದರ್ಶಿ, ಅಕಾಲಿ ದಳದ ಶಾಸಕ ಮಂಜೀಂದರ್ ಸಿಂಗ್ ಸಿರ್ಸಾ ಅವರು ನಟ ಶಾರುಖ್ ಖಾನ್, ನಿರ್ದೇಶಕ ಆನಂದ್ ರಿ ಸೇರಿದಂತೆ ಚಿತ್ರ ತಂಡದ ವಿರುದ್ಧ ದೂರು ನೀಡಿದ್ದಾರೆ, ಸಿಖ್ ಧಾರ್ಮಿಕ ಭಾವನೆಗೆ ಧಕ್ಕೆ, ಸಿಖ್ ಪವಿತ್ರ ಕಿರ್ಪಾನ್ ದುರ್ಬಳಕೆ ಎಂದು ದೂರು ನೀಡಿದ್ದಾರೆ.

ಯಾವ ಠಾಣೆಯಲ್ಲಿ ದೂರು ದಾಖಲು?

ದೆಹಲಿಯ ನಾಥ್ ಅವಿನ್ಯೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಟ ಶಾರುಖ್ ಖಾನ್, ನಿರ್ದೇಶಕ ಆನಂದ್ ರೈ ಅವರಿಗೆ ಈ ಆಕ್ಷೇಪಾರ್ಹ ದೃಶ್ಯದ ಬಗ್ಗೆ ವಿವರಿಸಿ, ದೃಶ್ಯಕ್ಕೆ ಕತ್ತರಿ ಹಾಕುವಂತೆ ಕೋರಿ ಪತ್ರ ಬರೆದಿದ್ದೇನೆ. ಕಿರ್ಪಾನ್ ಅನ್ನು ಸಾಮಾನ್ಯ ಕತ್ತಿಯಂತೆ ಬಳಸಲಾಗಿದೆ. ಈ ಬಗ್ಗೆ ದುರು ನೀಡಿದ್ದೇನೆ. ಸಿಖ್ ಸಮುದಾಯಕ್ಕೆ ನೋವುಂಟಾಗಿದೆ ಎಂದಿದ್ದಾರೆ.

ವಿವಾದಕ್ಕೆ ಕಾರಣವಾದ ಪೋಸ್ಟರ್

ಪೋಸ್ಟರ್ ನಲ್ಲಿ ಏನಿದೆ?: ರಸ್ತೆಯೊಂದರಲ್ಲಿ ಬನಿಯನ್, ಚಡ್ಡಿಯಲ್ಲಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ಅವರ ಕೊರಳಿಗೆ ದುಡ್ಡಿನ ಹಾರ ಹಾಕಲಾಗಿದೆ. ಜೊತೆಗೆ ಕಿರ್ಪಾನ್(ಪವಿತ್ರ ಕತ್ತಿ) ಧರಿಸಿದ್ದಾರೆ. ಎಡಗೈ ಕತ್ತಿಯ ಹಿಡಿಕೆ ಮೇಲಿದೆ. ಈ ಪೋಸ್ಟರ್ ನಲ್ಲಿ ಶಾರುಖ್ ಖಾನ್ ಅವರು ಹಾಸ್ಯದ ಮೂಡ್ ನಲ್ಲಿದ್ದಾರೆ. ಇದು ಇನ್ನೊಂದು ಅಂಶವಾಗಿದ್ದು, ಸಿಖ್ ಸಮುದಾಯವನ್ನು ಕೀಳಾಗಿ ಕಾಣುವಂತಾಗಿದೆ ಎಂದು ದೂರಿದ್ದಾರೆ.

ಶಾರುಖ್ ಅವರ ವಿಶೇಷ ಚಿತ್ರ

ಶಾರುಖ್ ಅವರ ವಿಶೇಷ ಚಿತ್ರ

ಕುಬ್ಜನಾಗಿ ಶಾರುಖ್ ಖಾನ್, ಚಲನೆ ರಹಿತರಾಗಿ ವ್ಹೀಲ್ ಚೇರ್ ನಲ್ಲಿ ಕುಳಿತು, ಯಂತ್ರದ ಸಹಾಯದಿಂದ ಮಾತುಕತೆ, ಕಷ್ಟಪಟ್ಟು ನಡಿಗೆ ಹೊಂದಿರುವ ಯುವತಿಯಾಗಿ ಅನುಷ್ಕಾ ಶರ್ಮ ಕಾಣಿಸಿಕೊಂಡಿದ್ದಾರೆ. ಕತ್ರೀನಾ ಕೈಫ್ ಸ್ಟಾರ್ ನಟಿಯಾಗಿದ್ದಾರೆ.

ಶ್ರೀದೇವಿ, ರಾಣಿ ಮುಖರ್ಜಿ, ಕಾಜೋಲ್, ಆಲಿಯಾ ಭಟ್, ಅಭಯ್ ಡಿಯೋಲ್, ಆರ್ ಮಾಧವನ್, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡಿಸೆಂಬರ್ 21ರಂದು ತೆರೆಗೆ ಬರಲಿದೆ.

More from Filmibeat

English summary
The Delhi Sikh Gurudwara Management Committee (DSGMC) General Secretary Manjinder Singh Sirsa has registered a criminal complaint against Shah Rukh Khan and others after the trailer of the film showed the actor wearing Kirpan in one of the sequences in the trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X