Shahid Kapoor: ವಿಜಯ್ ಅವರ ದೊಡ್ಡ ಅಭಿಮಾನಿ ಎಂದ ಶಾಹಿದ್ ಕಪೂರ್ ರಾಕಿ ಭಾಯ್ ಬಗ್ಗೆ ಏನಂದ್ರು?

ಏಪ್ರಿಲ್ ಎರಡನೇ ವಾರ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್‌ನಲ್ಲಿ ಮಹಾ ಕಾಳಗ ನಡೆಯಲಿದೆ. ಗಲ್ಲಾ ಪೆಟ್ಟಿಗೆಯಲ್ಲಿ ದಕ್ಷಿಣ ಭಾರತದ ಎರಡು ಬಿಗ್ ಬಜೆಟ್ ಸಿನಿಮಾಗಳು ಕಾದಾಟಕ್ಕೆ ಇಳಿದಿದ್ದರೆ, ಇನ್ನೊಂದು ಕಡೆ ಬಾಲಿವುಡ್‌ನಿಂದ 'ಜೆರ್ಸಿ' ತೊಟ್ಟು ಬರುತ್ತಿದ್ದಾರೆ ಶಾಹಿದ್ ಕಪೂರ್. ಈ ಮೂವರಲ್ಲಿ ಬಾಕ್ಸಾಫೀಸ್‌ ಕೊಳ್ಳೆ ಹೊಡೆಯುವುದು ಯಾರು? ಅನ್ನೋದು ಸದ್ಯಕ್ಕೀರುವ ಅತೀ ದೊಡ್ಡ ಕುತೂಹಲ.

ಶಾಹಿದ್ ಕಪೂರ್‌ ಬಾಲಿವುಡ್‌ನ ಮೋಸ್ಟ್ ಹ್ಯಾಪನಿಂಗ್ ಸ್ಟಾರ್. ಬ್ಯಾಕ್ ಟು ಬ್ಯಾಕ್ ಸೂಪರ್‌ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಟ. 'ಜೆರ್ಸಿ' ಸಿನಿಮಾಗೂ ಮುನ್ನ ತೆರೆಕಂಡಿದ್ದ 'ಕಬೀರ್ ಸಿಂಗ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ 250 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಈ ಕಾರಣಕ್ಕೆ ಮತ್ತೊಂದು ದಕ್ಷಿಣ ಭಾರತದ ಸಿನಿಮಾವನ್ನು ಬಾಲಿವುಡ್‌ಗೆ ತೆಗೆದುಕೊಂಡು ಬಂದಿದ್ದಾರೆ. ಹೀಗಾಗಿಯೇ ಏಪ್ರಿಲ್ 14ರಂದು ಬಾಕ್ಸಾಫೀಸ್‌ನಲ್ಲಿ ಮಹಾ ಕಾಳಗವೇ ನಡೆಯಲಿದೆ ಎನ್ನಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ತಮ್ಮ ಸಿನಿಮಾ ಗೆಲ್ಲಬೇಕು ಅಂತ ಆಸೆ ಪಡುವುದು ಸಹಜ. ಇದರೊಂದಿಗೆ ಅದೇ ದಿನ ಬಿಡುಗಡೆಯಾಗುತ್ತಿರುವ ಉಳಿದ ಸಿನಿಮಾ ಬಗ್ಗೆ ಮಾತಾಡುವುದು ದೊಡ್ಡತನ. ಮಾಧ್ಯಮಗಳಿಗೆ ಮಾತಾಡುವಾಗ ಶಾಹಿದ್ ಕಪೂರ್ ತೆಲುಗು ಸಿನಿಮಾ 'ಬೀಸ್ಟ್' ಹಾಗೂ ವಿಜಯ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗೇ 'ಕೆಜಿಎಫ್ 2' ಹಾಗೂ ಯಶ್ ಬಗ್ಗೆನೂ ಮಾತಾಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.

ವಿಜಯ್ ಅಭಿಮಾನಿ ಎಂದ ಶಾಹಿದ್

ವಿಜಯ್ ಅಭಿಮಾನಿ ಎಂದ ಶಾಹಿದ್

ಏಪ್ರಿಲ್ 13ರಂದು ಟಾಲಿವುಡ್‌ನ ದಳಪತಿ ವಿಜಯ್ ಅಭಿನಯದ ಸಿನಿಮಾ 'ಬೀಸ್ಟ್' ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕೂಡ ಬಾಲಿವುಡ್ ಬಾಕ್ಸಾಫೀಸ್‌ಗೆ ಲಗ್ಗೆ ಇಡಲಿದೆ. ಹೀಗಾಗಿ ಶಾಹಿದ್ ಕಪೂರ್ ವಿಜಯ್ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ. " ನಾನು ವಿಜಯ್ ಅವರ ದೊಡ್ಡ ಫ್ಯಾನ್. ನಾನು ಅವರ ಸಿನಿಮಾವನ್ನು ಇಷ್ಟ ಪಡುತ್ತೇನೆ. ಅವರು ಒಬ್ಬ ಉತ್ತಮ ಡ್ಯಾನ್ಸರ್. ಬೀಸ್ಟ್ ಸಿನಿಮಾ ಅತ್ಯದ್ಭುತ ಸಿನಿಮಾ ಆಗುತ್ತೆ ಎನ್ನುವ ನಂಬಿಕೆ ಇದೆ." ಎಂದು ಹೇಳಿದ್ದಾರೆ. ಇದು ವಿಜಯ್ ಅಭಿಮಾನಿಗಳು ಹಿರಿ ಹಿರಿ ಹಿಗ್ಗುವಂತೆ ಮಾಡಿದೆ.

ಯಶ್ ಬಗ್ಗೆ ಶಾಹಿದ್ ಹೇಳಿದ್ದೇನು?

ಯಶ್ ಬಗ್ಗೆ ಶಾಹಿದ್ ಹೇಳಿದ್ದೇನು?

ವಿಜಯ್ ದೊಡ್ಡ ಅಭಿಮಾನಿ. 'ಬೀಸ್ಟ್' ಸಿನಿಮಾ ಅತ್ಯುತ್ತಮ ಸಿನಿಮಾ ಆಗಲಿ ಎಂದು ಹಾರೈಸಿದ್ದಾರೆ. ಅದರಂತೆ, 'ಕೆಜಿಎಫ್ 2' ಸಿನಿಮಾ ಕೂಡ 'ಜೆರ್ಸಿ' ಜೊತೆಗೆ ಬಿಡುಗಡೆಯಾಗುತ್ತಿದೆ. ಹೀಗಾಗಿ ರಾಕಿ ಭಾಯ್‌ಗೆ ವಿಶ್ ಮಾಡುವುದನ್ನು ಮರೆತಿಲ್ಲ. " ರಾಕಿಭಾಯ್‌ಗೆ ಆಲ್‌ ದಿ ಬೆಸ್ಟ್ ಹೇಳುತ್ತೇನೆ. ಇದೊಂದು ವಿಭಿನ್ನ ಕಥೆ, ದೊಡ್ಡ ಆಕ್ಷನ್ ಸಿನಿಮಾ, ನಮ್ಮ ಭಾವನಾತ್ಮಕ ಸ್ಟೋರ್ಟ್ಸ್ ಸಿನಿಮಾ. ಕೌಟುಂಬಿಕ ಕಥೆ ಹಾಗೂ ಸಂದೇಶವಿದೆ. " ಎಂದು ಶಾಹಿದ್ ಹೇಳಿದ್ದಾರೆ.

'ಕೆಜಿಎಫ್ 2'ಜನರೇ ಇಷ್ಟ ಪಟ್ಟ ಸಿನಿಮಾ

'ಕೆಜಿಎಫ್ 2'ಜನರೇ ಇಷ್ಟ ಪಟ್ಟ ಸಿನಿಮಾ

'ಕೆಜಿಎಫ್ 2' ಸೀಕ್ವೆಲ್ ಆಗಿರುವುದರಿಂದ ಪ್ರೇಕ್ಷಕರು ತುಂಬಾ ಇಷ್ಟಪಟ್ಟಿದ್ದಾರೆ. ಹೀಗಾಗಿ ನಮಗೆ ನಮ್ಮದೆ ಆದ ಸ್ಪೇಸ್ ಸಿಗುತ್ತೆ ಎಂದು ಕೊಂಡಿದ್ದೇನೆ. ನಮಗೆ ನಾಲ್ಕು ರಜೆಯ ದಿನಗಳಿವೆ. ಥಿಯೇಟರ್‌ಗಳೂ ಸಿಕ್ಕಿವೆ. ಹೀಗಾಗಿ ಪ್ರೇಕ್ಷಕರು ಎಲ್ಲಾ ಸಿನಿಮಾವನ್ನು ನೋಡುತ್ತಾರೆ. ದೊಡ್ಡ ದೊಡ್ಡ ಸಿನಿಮಾಗಳು ಒಟ್ಟಿಗೆ ಬರುತ್ತಿರುವುದು ಖುಷಿ ವಿಚಾರ." ಎಂದು ಶಾಹಿದ್ ಅಭಿಪ್ರಾಯ ಪಟ್ಟಿದ್ದಾರೆ.

'ಇದು ನಮಗೆ ಸರಿಯಾದ ಸಮಯ'

'ಇದು ನಮಗೆ ಸರಿಯಾದ ಸಮಯ'

ಬಿಗ್ ಬಜೆಟ್ ಸಿನಿಮಾಗಳೊಂದಿಗೆ 'ಜೆರ್ಸಿ' ರಿಲೀಸ್ ಆಗುತ್ತಿರುವುದರ ಬಗ್ಗೆನೂ ಶಾಹಿದ್ ಪ್ರತಿಕ್ರಿಯೆ ನೀಡಿದ್ದಾರೆ. "ಈ ಸಮಯದಲ್ಲಿ ನಾವು ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದರೆ, ಇದು ಸರಿಯಾದ ಸಮಯ ಎಂದರ್ಥ. ಇಲ್ಲಾ ನಾವೇಕೆ ಸಿನಿಮಾ ಬಿಡುಗಡೆ ಮಾಡುತ್ತಿದ್ದೆವು. ಮೂರು ವಿಭಿನ್ನ ಸಿನಿಮಾಗಳಿಗೆ ಅವರದ್ದೇ ಆದ ಸ್ಪೇಸ್ ಸಿಕ್ಕಿದೆ." ಎಂದು ಶಾಹಿದ್ ಕಪೂರ್ ಪಾಸಿಟಿವ್ ಆಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

More from Filmibeat

English summary
Shahid Kapoor Says He Is Thalapathy Vijay Fan And Wished Yash Good Luck for KGF 2. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X