ಬೆಳ್ಳಿ ತೆರೆಗೆ ಹಿಂತಿರುಗಿದ 'ಶಕ್ತಿಮಾನ್': ಭಾರತದ ಸೂಪರ್ ಹೀರೋ ಪಾತ್ರದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್

ಹಾಲಿವುಡ್ ಸಿನಿಮಾಗಳಲ್ಲಿ ಅದಾಗಲೇ ಸೂಪರ್‌ ಹೀರೋ ಹುಟ್ಟಿಕೊಂಡಿದ್ದು ಆಗಿತ್ತು. ಭಾರತದಲ್ಲಿ ಕಥೆಗಳಿಗೇನು ಕೊರತೆ ಇರಲಿಲ್ಲ. ಆದರೆ, ದೇಸಿ ಸೂಪರ್ ಹೀರೋ ಕೊರತೆ ಇತ್ತು. ಬೆಳ್ಳಿ ತೆರೆಯಲ್ಲಾಗಲಿ, ಕಿರುತೆರೆಯಲ್ಲಾಗಲಿ, ಜನರ ಕಷ್ಟಗಳಿಗೆ ಸ್ಪಂದಿಸುವ ಒಬ್ಬನೇ ಒಬ್ಬ ಸೂಪರ್ ಹೀರೋ ಸಿಕ್ಕಿರಲಿಲ್ಲ. ಆಗಲೇ ಕಿರುತೆರೆಗೆ ಎಂಟ್ರಿಕೊಟ್ಟಿದ್ದು 'ಶಕ್ತಿಮಾನ್'. 80 ಹಾಗೂ 90ರ ದಶಕದಲ್ಲಿ ಜನಿಸಿದವರಿಗೆ 'ಶಕ್ತಿಮಾನ್' ತಾಕತ್ತಿನ ಬಗ್ಗೆ ಅರಿವಿದೆ.

ಕಿರುತೆರೆಯಲ್ಲಿ 'ಶಕ್ತಿಮಾನ್' ಸಾಹಸಗಳು ಥ್ರಿಲ್ಲಿಂಗ್ ಆಗಿರುತ್ತಿದ್ದವು. ಈ ಧಾರಾವಾಹಿಯನ್ನು ನೋಡವುದಕ್ಕಾಗಿಯೇ ಕಾದು ಕೂರುತ್ತಿದ್ದ ಕಾಲವದು. ಆದರೆ, ಇಂದಿನ ಮಕ್ಕಳಿಗೆ 'ಶಕ್ತಿಮಾನ್' ಶಕ್ತಿಯ ಬಗ್ಗೆ ಅರಿವು ಮೂಡಿಸಲು ಸೋನಿ ಸಂಸ್ಥೆ ಮುಂದಾಗಿದೆ. 'ಶಕ್ತಿಮಾನ್' ದಶಕಗಳ ಬಳಿಕ ಬೆಳ್ಳಿ ತೆರೆಮೇಲ ಎಂಟ್ರಿ ಕೊಡಲಿದ್ದಾನೆ. ಈ ವಿಷಯ ಸ್ವತಃ 'ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಷನಲ್ ಪ್ರೊಡಕ್ಷನ್' ಸಂಸ್ಥೆ ಘೋಷಣೆ ಮಾಡಿದ್ದು ಕುತೂಹಲವನ್ನು ದುಪ್ಪಟ್ಟು ಮಾಡಿದೆ.

 ಬೆಳ್ಳಿತೆರೆಗೆ 'ಶಕ್ತಿಮಾನ್' ಎಂಟ್ರಿ

ಬೆಳ್ಳಿತೆರೆಗೆ 'ಶಕ್ತಿಮಾನ್' ಎಂಟ್ರಿ

ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಷನಲ್ ಪ್ರೊಡಕ್ಷನ್ ಸಂಸ್ಥೆ 'ಶಕ್ತಿಮಾನ್' ಅನ್ನು ಬೆಳ್ಳಿಪರದೆ ಮೇಲೆ ತರಲು ಮುಂದಾಗಿದೆ. 'ಶಕ್ತಿಮಾನ್' ಹಕ್ಕುಗಳನ್ನು ಪಡೆದುಕೊಂಡಿದ್ದು, ಶಕ್ತಿಮಾನ್ ಸಿನಿಮಾದಲ್ಲಿ ಚಿಕ್ಕ ಅನೌನ್ಸ್‌ಮೆಂಟ್ ಟೀಸರ್ ಅನ್ನೂ ಬಿಡುಗಡೆ ಮಾಡಿದೆ. ಸೋನಿ ಸಂಸ್ಥೆ ಮಾಜಿ ಸಿನಿಮಾ ಪತ್ರಕರ್ತರು ಪ್ರಶಾಂತ್ ಸಿಂಗ್ ಹಾಗೂ ಮಧುರ್ಯಾ ವಿನಯ್ ಅವರ ಜೊತೆ ಈ ಸಿನಿಮಾಗಾಗಿ ಕೈ ಜೋಡಿಸಿದೆ. ಅಲ್ಲದೆ 'ಶಕ್ತಿಮಾನ್' ಧಾರಾವಾಹಿಯ ನಟ-ನಿರ್ಮಾಪಕ ಮುಖೇಶ್ ಖನ್ನಾ ಅವರ ಭೀಷ್ಮ್ ಇಂಟರ್‌ನ್ಯಾಷನಲ್ ಜೊತೆ ಸೇರಿಕೊಂಡು ಈ ಸಾಹಸಕ್ಕೆ ಕೈಹಾಕಿದೆ.

3 ಭಾಗಗಳಲ್ಲಿ 'ಶಕ್ತಿಮಾನ್' ರಿಲೀಸ್?

ಬೆಳ್ಳಿ ಪರದೆಗೆ 'ಶಕ್ತಿಮಾನ್' ಎಂಟ್ರಿ ಕೊಡುವುದು ಪಕ್ಕಾ ಆಗಿದೆ. ಇದೊಂದು ಖುಷಿ ವಿಚಾರ ಆಗಿದ್ದರೆ, ಇದರೊಂದಿಗೆ ಮತ್ತೊಂದು ಖುಷಿ ವಿಷಯ ಕೂಡ ಇದೆ. ಬಾಲಿವುಡ್ ಮೂಲಗಳ ಪ್ರಕಾರ 'ಶಕ್ತಿಮಾನ್' ಸಿನಿಮಾ ಮೂರು ಭಾಗಗಳಾಗಿ ಬಿಡುಗಡೆಯಾಗಲಿದೆ. ಬಾಲಿವುಡ್ ಸೂಪರ್‌ಸ್ಟಾರ್ ಒಬ್ಬರು ಈ 'ಶಕ್ತಿಮಾನ್' ಅವತಾರವೆತ್ತಲಿದ್ದಾರೆ ಎಂದು ಹೇಳಲಾಗಿದೆ. ಸೋನಿಯಂತಹ ಸುಪ್ರಸಿದ್ಧ ಸಂಸ್ಥೆ 'ಶಕ್ತಿಮಾನ್' ಸಿನಿಮಾಗೆ ಕೈ ಹಾಕಿರುವುದರಿಂದ ಚಿತ್ರದ ಸ್ಕೇಲ್ ಕೂಡ ದೊಡ್ಡದೇ ಇರುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.

 'ಶಕ್ತಿಮಾನ್' ವಿಶ್ವಕ್ಕೆ ಹೀರೋ ಆಗುವ ಸಾಧ್ಯತೆ

'ಶಕ್ತಿಮಾನ್' ವಿಶ್ವಕ್ಕೆ ಹೀರೋ ಆಗುವ ಸಾಧ್ಯತೆ

ಭಾರತದ ಸೂಪರ್ ಹೀರೋ 'ಶಕ್ತಿಮಾನ್' ವಿಶ್ವದ ಮಗನ ಸೆಳೆಯುವ ಸಾಧ್ಯತೆಯಿದೆ. ಸೋನಿ ಸಂಸ್ಥೆ ಈ ಸಿನಿಮಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿರುವ ತಂತ್ರಜ್ಞರನ್ನು ಬಳಸಿಕೊಳ್ಳಲಿದೆ. ಅಲ್ಲದೆ ತನ್ನದೇ ವಿತರಣಾ ಸಂಸ್ಥೆಯನ್ನೂ ಹೊಂದಿರುವುದರಿಂದ ಭಾರತದ ಸೂಪರ್ ಹೀರೋ 'ಶಕ್ತಿಮಾನ್' ನನ್ನು ವಿಶ್ವದಾದ್ಯಂತ ರಿಲೀಸ್ ಮಾಡಲು ಆಲೋಚಿಸುತ್ತಿದೆ. ಈ ಮೂಲಕ 'ಶಕ್ತಿಮಾನ್' ಹಾಲಿವುಡ್ ಸೂಪರ್‌ ಹೀರೊಗಳಂತೆ ವಿಶ್ವ ಮಟ್ಟದಲ್ಲಿ ಹೊಳೆಯುವ ಸಾಧ್ಯತೆಗಳು ಹೆಚ್ಚಿವೆ.

 520 ಕಂತುಗಳಲ್ಲಿ 'ಶಕ್ತಿಮಾನ್' ಪ್ರಸಾರ

520 ಕಂತುಗಳಲ್ಲಿ 'ಶಕ್ತಿಮಾನ್' ಪ್ರಸಾರ

ಶಕ್ತಿಮಾನ್ ಜನರ ಪಾಲಿನ ಸೂಪರ್ ಹೀರೋ ಆಗಿದ್ದ. ಈ ಕಾರಣಕ್ಕೆ 90 ದಶಕದಲ್ಲಿಯೇ ಈ ಧಾರಾವಾಹಿಗೆ ಜನಮನ್ನಣೆ ಸಿಕ್ಕಿತ್ತು. ಸುಮಾರು 520 ಕಂತುಗಳಲ್ಲಿ 'ಶಕ್ತಿಮಾನ್' ಧಾರಾವಾಹಿ ಪ್ರಸಾರವಾಗಿತ್ತು. ಆದರೆ, 'ಶಕ್ತಿಮಾನ್' ನಿಂದ ಪ್ರೇರಿತರಾಗಿದ್ದ ಜನರು ಹುಚ್ಚು ಸಾಹಸಕ್ಕೆ ಕೈ ಹಾಕಿದ್ದರು. ಹೀಗಾಗಿ ಈ ಧಾರಾವಾಹಿಯನ್ನು 2005ರಲ್ಲಿ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಈಗ 17 ವರ್ಷಗಳ ಬಳಿಕ ಮತ್ತೆ 'ಶಕ್ತಿಮಾನ್' ಬೆಳ್ಳಿ ಪರೆದೆಗೆ ಎಂಟ್ರಿಕೊಡಲಿದ್ದಾನೆ.

More from Filmibeat

English summary
Shaktimaan Returns on Big Screen Bollywood Superstar To Lead series. ‘Shaktimaan’, to date, remains India’s most iconic superhero brand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X