ಜಾಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ 'ಲವ್ ಜಿಹಾದ್'; 'ಶಕ್ತಿಮಾನ್' ಮುಕೇಶ್ ಖನ್ನಾ ಹೇಳಿದ್ದೇನು?

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ಬಾಲ್ ಮದುವೆ ಟ್ರೋಲಿಗೆ ಆಹಾರ ಆಗಿದೆ. ಅನ್ಯ ಕೋಮಿನ ಯುವಕನನ್ನು ಮದುವೆ ಆಗಿದ್ದಕ್ಕೆ ನಿರಂತರವಾಗಿ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ. ಕೆಲವರು ಈ ಮದುವೆಯನ್ನು 'ಲವ್ ಜಿಹಾದ್' ಎಂದೂ ಟೀಕೆಗಳನ್ನು ಮಾಡುವುದಕ್ಕೆ ಶುರುಮಾಡಿದ್ದಾರೆ. ಇನ್ನೊಂದು ಕಡೆ ಸೋನಾಕ್ಷಿ ಸಿನ್ಹಾ ಕುಟುಂಬಕ್ಕೂ ಈ ಮದುವೆ ಇಷ್ಟವಿರಲಿಲ್ಲ ಅನ್ನೋ ಮಾತು ಕೂಡ ಕೇಳಿಬಂದಿತ್ತು.

ಏನೇ ಕಾಮೆಂಟ್‌ಗಳು ಬಂದರೂ ಸೋನಾಕ್ಷಿ ಸಿನ್ಹಾ ತನ್ನ ಬಹು ದಿನಗಳ ಗೆಳೆಯ ಜಾಹೀರ್ ಇಕ್ಬಾಲ್‌ರನ್ನು ಜೂನ್ 23ರಂದು ವಿವಾಹವಾಗಿದ್ದಾರೆ. ಎರಡೂ ಕುಟುಂಬದ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಮಗಳ ಮದುವೆಯಲ್ಲಿ ಸ್ವತ: ಶತ್ರುಘ್ನ ಸಿನ್ಹಾ ಭಾಗವಹಿಸಿ ಟೀಕೆಗಳಿಗೆಲ್ಲ ಬ್ರೇಕ್ ಹಾಕಿದ್ದರು. ಆದರೂ, ಇದು 'ಲವ್ ಜಿಹಾದ್' ಅಂತ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಲೇ ಇದ್ದಾರೆ.

Shaktiman fame Mukesh Khanna reacts to calling Sonakshi Sinha Zaheer Iqbal marriage is love jihad

ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ಬಾಲ್ ಮದುವೆ ಬಗ್ಗೆ 'ಶಕ್ತಿಮಾನ್' ಖ್ಯಾತಿಯ ಮುಕೇಶ್ ಖನ್ನಾ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗಷ್ಟೇ ನೀಡಿದ ಸಂದರ್ಶನದಲ್ಲಿ ಮುಕೇಶ್ ಖನ್ನಾ ಈ ಜೋಡಿಯ ಮದುವೆ 'ಲವ್ ಜಿಹಾದ್' ಅಂತ ಟೀಕಿಸುತ್ತಿರುವವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ 'ಶಕ್ತಿಮಾನ್' ವಾದವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ವಾಲ್ ಮದುವೆ 'ಲವ್ ಜಿಹಾದ್' ಅನ್ನೋರಿಗೆ 'ಶಕ್ತಿಮಾನ್' ಖ್ಯಾತಿಯ ಮುಕೇಶ್ ಖನ್ನಾ ತಿರುಗೇಟು ನೀಡಿದ್ದಾರೆ. ಈ ಮದುವೆಯನ್ನು ಹಿಂದೂ- ಮುಸ್ಲಿಂ ಅನ್ನುವ ಭಾವದಲ್ಲಿಯೇ ನೋಡಬೇಡಿ. ನಮ್ಮ ಕಾಲದಲ್ಲೂ ಇಂತಹ ಮದುವೆಗಳನ್ನು ನೋಡಿದ್ದೇವೆ ಎಂದು ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ಸಂದರ್ಶನದಲ್ಲಿ ಲವ್ ಜಿಹಾದ್ ಅಂದರೆ ಏನು? ಅಂತ ಟ್ರೋಲಿಗರಿಗೆ ಪಾಠನೂ ಮಾಡಿದ್ದಾರೆ. ಹಿಂದೂ ಮುಸ್ಲಿಂ ಮದುವೆನೇ ಆಗಬಾರದಾ? ಎಂದು ಪ್ರಶ್ನೆ ಮಾಡಿದ್ದಾರೆ. " ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ಬಾಲ್ ಮದುವೆಯನ್ನು ಕೇವಲ ಹಿಂದೂ-ಮುಸ್ಲಿಂ ದೃಷ್ಟಿಯಿಂದಲೇ ನೋಡಬೇಡಿ. ಸೋನಾಕ್ಷಿ ಸಿನ್ಹಾ ತೆಗೆದುಕೊಂಡಿದ್ದು ದಿಢೀರ್ ನಿರ್ಧಾರವಲ್ಲ. ಅವರು ಮದುವೆ ಆಗುವುದಕ್ಕಿಂತ ಆರೇಳು ವರ್ಷ ಒಟ್ಟಿಗೆ ಇದ್ದಾರೆ." ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Shaktiman fame Mukesh Khanna reacts to calling Sonakshi Sinha Zaheer Iqbal marriage is love jihad

ಇದೇ ಸಂದರ್ಶನದಲ್ಲಿ ಹಿಂದೂ ಮುಸ್ಲಿಂ ಮದುವೆ ಬಗ್ಗೆನೂ ಹೇಳಿಕೊಂಡಿದ್ದಾರೆ. " ಜನರು ಈ ಮದುವೆಯನ್ನು ಲವ್ ಜಿಹಾದ್ ಎಂದು ಹೇಳುತ್ತಿದ್ದಾರೆ. ಹುಡುಗಿಯನ್ನು ಯಾವಾಗ ಮದುವೆ ಆಗಲು ಒತ್ತಡ ಹೇರಲಾಗುತ್ತದೆಯೋ ಅದನ್ನು ಲವ್ ಜಿಹಾದ್ ಎನ್ನುತ್ತಾರೆ. ಹಿಂದೂ ಮುಸ್ಲಿಂ ಮದುವೆ ಆಗುವುದಕ್ಕೆ ಸಾಧ್ಯವೇ ಇಲ್ಲವೇ? ನಮ್ಮ ಕಾಲದಲ್ಲಿ ಬಹಳಷ್ಟು ಮಂದಿ ಮದುವೆ ಆಗಿದ್ದಾರೆ. ಅವರೀಗ ಖುಷಿಯಾಗಿದ್ದಾರೆ. ಇದು ಮದುವೆ ಅವರ ಕೌಟುಂಬಿಕ ವಿಷಯ" ಎಂದು ಹಿರಿಯ ನಟ ಮುಕೇಶ್ ಖನ್ನಾ ಹೇಳಿಕೊಂಡಿದ್ದಾರೆ.

ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ವಾಲ್ ಮದುವೆ ಮ್ಯಾಟರ್ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಆದರೆ, ಈ ಜೋಡಿ ಇದ್ಯಾವುದರ ಬಗ್ಗೆನೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮದುವೆ ಬಳಿಕ ಹನಿಮೂನ್‌ ಮೂಡಿನಲ್ಲಿರುವ ಜೋಡಿ ಮ್ಯಾರೇಜ್ ಲೈಫ್ ಅನ್ನು ಎಂಜಾಯ್ ಮಾಡುತ್ತಿದೆ. ಇತ್ತ ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ಕೂಡ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ.

More from Filmibeat

English summary
Actor Mukesh Khanna reaction on Sonakshi Sinha Zaheer Iqbal marriage:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X