KGF ನಟಿ ಮೌನಿ ರಾಯ್ ಬಿಕಿನಿ ಫೋಟೊ ಲೈಕ್ ಮಾಡಿ ಪೇಚಿಗೆ ಸಿಲುಕಿದ್ದ ಉದ್ಯಮಿ: ಅಂತಹದ್ದು ಏನಾಗಿತ್ತು?
ಬಾಲಿವುಡ್ ನಟಿ ಮೌನಿ ರಾಯ್ ಸಿಕ್ಕಾ ಪಟ್ಟೆ ಬೋಲ್ಡ್. ಇನ್‌ಸ್ಟಾಗ್ರಾಂನಲ್ಲಿ ಯಾವಾಗಲೂ ಆಕ್ಟಿವ್ ಆಗಿ ಇರುತ್ತಾರೆ. ಆಗಾಗ ತನ್ನ ಬೋಲ್ಡ್ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಈಕೆಯನ್ನು ಫಾಲೋ ಮಾಡೋರಿಗೇನು ಕಮ್ಮಿಯಿಲ್ಲ.
ಸುಮಾರು 26.9 ಮಿಲಿಯನ್ ಮಂದಿಗೆ ಈಕೆಯನ್ನು ಕೇವಲ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಾರೆ. ಇವರಲ್ಲಿ ಭಾರತದ ಉದ್ಯಮಿ, ಜನಪ್ರಿಯ ಬ್ಯುಸಿನೆಸ್ ಶೋ ಶಾರ್ಕ್ ಟ್ಯಾಂಕ್ ಸೀಸನ್ 1ರ ಜಡ್ಜ್ ಆಗಿದ್ದ ಅಶ್ಮೀರ್ ಗ್ರೋವರ್ ಕೂಡ ಒಬ್ಬರಾಗಿದ್ದರು.

ಮೌನಿ ರಾಯ್ ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಕೆಜಿಎಫ್ ಚಾಪ್ಟರ್ 1'ರ ಹಿಂದಿ ವರ್ಷನ್‌ನಲ್ಲಿ ಹೆಜ್ಜೆ ಹಾಕಿದ್ದರು. ಅಲ್ಲಿಂದ ಕನ್ನಡಿಗರು ಈಕೆಯನ್ನು ಕೆಜಿಎಫ್ ಸಿನಿಮಾದಿಂದಲೇ ಗುರುತಿಸುತ್ತಾರೆ. ಈಕೆ ಬಿಕಿನಿ ಫೋಟೊ ಲೈಕ್ ಮಾಡಿ ಉದ್ಯಮಿ ಅಶ್ನೀರ್ ಗ್ರೋವರ್ ಪೇಚಿಗೆ ಸಿಕ್ಕಿಕೊಂಡಿದ್ದರು. ಅಸಲಿಗೆ ಆ ಘಟನೆ ಏನು? ಅನ್ನೋದನ್ನು ವಿವರಿಸಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ.
ಅಶ್ನೀರ್ ಗ್ರೋವರ್ ಹಿನ್ನೆಲೆ ಏನು?
40 ವರ್ಷದ ಅಶ್ನೀರ್ ಗ್ರೋವರ್ ಭಾರತದ ಜನಪ್ರಿಯ ಉದ್ಯಮಿ. ಭಾರತ್ ಪೇ ಸಂಸ್ಥೆ ಮಾಜಿ ಸಂಸ್ಥಾಪಕ ಹಾಗೂ ಎಂಡಿ ಆಗಿದ್ದವರು. ಇತ್ತೀಚೆಗೆ ಕಿರುತೆರೆಯಲ್ಲಿ ಜನಪ್ರಿಯವಾಗಿರುವ 'ಶಾರ್ಕ್ ಟ್ಯಾಂಕ್ ಇಂಡಿಯಾ' ಸೀಸನ್ 1ರ ಜಡ್ಜ್ ಆಗಿದ್ದರು. ಅದಲ್ಲಿಂದ ವಿಶ್ವದಾದ್ಯಂತ ಆಶ್ನೀರ್ ಗ್ರೋವರ್ ಹೆಸರು ಮನೆ ಮಂದಿಗೆಲ್ಲ ಪರಿಚಯವಾಯಿತು.
ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದ ಅಶ್ನೀರ್ 'ಭಾರತ್ ಪೇ'ಯಿಂದ ಹೊರಬರಬೇಕಾಯಿತು. ಈಗ ಥರ್ಡ್ ಯುನಿಕಾರ್ನ್ ಅನ್ನೋ ಹೊಸ ಉದ್ಯಮವನ್ನು ಆರಂಭಿಸಿದ್ದಾರೆ. ಇದೇ ಉದ್ಯಮಿ ಬಾಲಿವುಡ್ ನಟಿಯ ಬಿಕಿನಿ ಫೋಟೊವನ್ನು ಲೈಕ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಸನ್ನಿವೇಶವನ್ನು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ಮೌನಿ ರಾಯ್ ಬಿಕಿನಿ ಸನ್ನಿವೇಶವೇನು?
ಇತ್ತೀಚೆಗೆ ಅಶ್ನೀರ್ ಗ್ರೋವರ್ ಹಾಗೂ ಪತ್ನಿ ಮಾಧುರಿ ಜೈನ್ ಇಬ್ಬರೂ 'ಕಪಲ್ ಆಫ್ ಥ್ರಿಂಗ್ಸ್' ಅನ್ನೋ ಯೂಟ್ಯೂಬ್ ಶೋನಲ್ಲಿ ಭಾಗವಹಿಸಿದ್ದರು. ಈ ಶೋ ಅನ್ನು ಬಾಲಿವುಡ್ ನಟಿ ಅಮೃತಾ ರಾವ್ ಹಾಗೂ ಆರ್‌ಜೆ ಅನ್‌ಮೋಲ್ ನಡೆಸಿಕೊಡುತ್ತಾರೆ. ಈ ವೇಳೆ ಮೌನಿ ರಾಯ್ ಬಿಕಿನಿ ಫೋಟೊ ಲೈಕ್ ಮಾಡಿದ್ದಕ್ಕೆ ಪತ್ನಿ ಎದುರು ಸಂಕಷ್ಟ ಸಿಲುಕಿದ್ದಾಗಿ ಹೇಳಿಕೊಂಡಿದ್ದಾರೆ.
" ನಾನು ಅಂದು ಸಿಕ್ಕಾಪಟ್ಟೆ ಭಯ ಪಟ್ಟಿದ್ದೆ. ಒಂದು ದಿನ ನಾನು ಮೌನಿ ರಾಯ್ ಬಿಕಿನಿ ಫೋಟೊವನ್ನು ಲೈಕ್ ಮಾಡಿಬಿಟ್ಟೆ. ನಾನು ಇನ್‌ಸ್ಟಾಗ್ರಾಂನಲ್ಲಿ ಕೆಲವೇ ಮಂದಿಯನ್ನು ಫಾಲೋ ಮಾಡುತ್ತೇನೆ. ಹೆಚ್ಚು ಕಡಿಮೆ 60 ಮಂದಿ ಅಷ್ಟೇ. ಅದರಲ್ಲಿ ಮೌನಿ ರಾಯ್ ಅವರನ್ನು ಫಾಲೋ ಮಾಡುತ್ತಿದೆ. ಮೌನಿ ರಾಯ್ ಬಿಕಿನಿಯಲ್ಲಿ ಒಂದು ಫೋಟೊ ಪೋಸ್ಟ್ ಮಾಡಿದ್ದರು. ನಾನು ಲೈಕ್ ಮಾಡಿದೆ. ಮನೆಗೆ ಬಂದಾಗ ನನ್ನ ಹೆಂಡ್ತಿ ಕೋಪಗೊಂಡಿದ್ದಳು." ಎಂದು ಅಶ್ನೀರ್ ಗ್ರೋವರ್ ಅಂದಿನ ಘಟನೆಯನ್ನು ನೆನೆದಿದ್ದಾರೆ.
ಮೌನಿ ಜೊತೆ 20 ನಟಿಯರ ಅನ್‌ಫಾಲೋ
ಆಶ್ನೀರ್ ಗ್ರೋವರ್ ಹಾಗೂ ಪತ್ನಿ ಮಾಧುರಿ ಇಬ್ಬರು ಈ ಶೋನಲ್ಲಿ ಕಾಲೆದುಕೊಂಡಿದ್ದಾರೆ. ಇದೇ ವೇಳೆ ಪತ್ನಿಯ ಕೋಪಕ್ಕೆ ಗುರಿಯಾಗಿದ್ದ ಉದ್ಯಮಿ ಅಶ್ನೀರ್ ಗ್ರೋವರ್ ಕೊನೆಗೆ ಮೌನಿ ರಾಯ್ ಅವರನ್ನು ಇನ್‌ಸ್ಟಾಗ್ರಾಂನಿಂದ ಅನ್ ಫಾಲೋ ಮಾಡಬೇಕಾಗಿ ಬಂದಿತ್ತು.
ಮೌನಿ ರಾಯ್ ಜೊತೆ ಇನ್ನೂ 15 ರಿಂದ 20 ಮಂದಿ ನಟಿಯನ್ನು ಅನ್‌ಫಾಲೋ ಮಾಡಬೇಕಾಗಿ ಅಂತ ಹೇಳಿಕೊಂಡಿದ್ದಾರೆ. ಇದರಲ್ಲಿ ಸೋನಂ ಬಾಜ್ವಾ ಹಾಗೂ ದಿಶಾ ಪಟಾನಿ ಕೂಡ ಸೇರಿಕೊಂಡಿದ್ದಾರೆ. ಉದ್ಯಮಿ ಅಶ್ಮೀರ್ ಗ್ರೋವರ್ ಹಾಗೂ ಮಾಧುರಿ ಜೈನ ವೈವಾಹಿಕ ಜೀವನಕ್ಕೆ ಕಾಲಿಟ್ಟು 17 ವರ್ಷಗಳಾಗಿವೆ. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ.


Click it and Unblock the Notifications











