Don't Miss!
- Sports
ICC ODI Rankings: ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ
- Automobiles
ಮಾರುತಿಯಿಂದ 2023 ರಲ್ಲಿ 5 ಹೊಸ ಎಸ್ಯುವಿಗಳ ಬಿಡುಗಡೆ... ಶೀಘ್ರದಲ್ಲೇ 3 ಕಾರುಗಳು ಮಾರುಕಟ್ಟೆಗೆ
- News
Breaking: ಹುಲಿ ಸಂರಕ್ಷಿತ ಪ್ರದೇಶದಲ್ಲಿಯೇ ತುರ್ತು ನೆಲಕ್ಕಿಳಿದ ರವಿಶಂಕರ್ ಗುರೂಜಿ ಹೆಲಿಕಾಪ್ಟರ್
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Finance
Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಚ್ಚರಿಯ ಬೆಳವಣಿಗೆ: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ ಶತ್ರುಘ್ನ ಸಿನ್ಹಾ
'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ಅನೇಕ ಹೊರಗಿನ ನಟರನ್ನು ಅವಹೇಳನೆ ಮಾಡಿದ ಆರೋಪ ಕರಣ್ ಜೋಹರ್ ಮೇಲಿದೆ. ಸ್ವಜನಪಕ್ಷಪಾತದ ವಿವಾದಕ್ಕೆ ಸಂಬಂಧಿಸಿದಂತೆ ಕರಣ್ ಜೋಹರ್ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ಈಗ ಹಿರಿಯ ನಟ ಶತ್ರುಘ್ನ ಸಿನ್ಹಾ ಕೂಡ ಕರಣ್ ವಿರುದ್ಧ ಹರಿಹಾಯ್ದಿದ್ದಾರೆ.
Recommended Video
ಶತ್ರುಘ್ನ ಸಿನ್ಹಾ ಸ್ವತಃ ನೆಪೋಟಿಸಂಗೆ ಬೆಂಬಲ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಅವರ ಮಗಳು ಸೋನಾಕ್ಷಿ ಸಿನ್ಹಾ ಪ್ರತಿಭೆ ಇಲ್ಲದೆ ಇದ್ದರೂ ದೊಡ್ಡ ದೊಡ್ಡ ನಟರೊಂದಿಗೆ ಅನೇಕ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ಕಾರಣದಿಂದ ಸೋನಾಕ್ಷಿ ಚಿತ್ರರಂಗ ಪ್ರವೇಶಿಸಿದರು. ಅವರು ಕೂಡ ಸ್ವಜನಪಕ್ಷಪಾತದ ಉತ್ಪನ್ನ ಎಂಬ ಟೀಕೆಗಳಿವೆ.
ಕರಣ್
ಜೋಹರ್
ಅವರನ್ನು
ಟ್ರೋಲ್
ಮಾಡುತ್ತಿದ್ದೀರಾ?
ಹುಷಾರ್!
ಈ ಟೀಕೆಗಳನ್ನು ಎದುರಿಸಲಾಗಿದೆ ಸೋನಾಕ್ಷಿ, ತಮ್ಮ ಟ್ವಿಟ್ಟರ್ ಖಾತೆಯನ್ನೇ ಡಿಲೀಟ್ ಮಾಡಿ ಹೋಗಿದ್ದರು. ಆದರೂ ಸೋನಾಕ್ಷಿ ಈಗಲೂ ಕೂಡ ಟೀಕೆಗಳಿಂದ ಮುಕ್ತವಾಗಿಲ್ಲ. ಈ ನಡುವೆ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ, ಕರಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ. ಮುಂದೆ ಓದಿ..

ಚಿತ್ರೋದ್ಯಮ ಯಾರೊಬ್ಬರ ಆಸ್ತಿಯಲ್ಲ
'ನಮ್ಮ ಕಾಲದಲ್ಲಿ ಕಾಫಿ ವಿತ್ ಅರ್ಜುನ್ ಶೋ ಇರಲಿಲ್ಲ' ಎಂದು ಅವರು ಕರಣ್ ಜೋಹರ್ ಕಾರ್ಯಕ್ರಮದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. 'ಇಂತಹ ಪೂರ್ವನಿಯೋಜಿತ ಕಾರ್ಯಕ್ರಮಗಳು ವಿವಾದಗಳನ್ನು ಹುಟ್ಟುಹಾಕುತ್ತದೆ. ಈ ಸಂದರ್ಭದಲ್ಲಿ ಮಾತನಾಡುತ್ತಿರುವವರೆಲ್ಲರೂ ನಮ್ಮದೇ ಸಮಾಜದ ಸದಸ್ಯರು. ಆದರೆ ಯಾರಾದರೂ ಹೇಳುವಂತೆ ಸಿನಿಮಾ ಉದ್ಯಮ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ. ಈ ವ್ಯಕ್ತಿಯನ್ನು ಬಹಿಷ್ಕರಿಸೋಣ ಅಥವಾ ಈ ವ್ಯಕ್ತಿಯನ್ನು ಚಿತ್ರರಂಗದಿಂದ ಕಿತ್ತು ಹಾಕೋಣ ಎನ್ನಲಾಗದು ಎಂದು ಕರಣ್ ಮನೋಭಾವವನ್ನು ಅವರು ಪ್ರಶ್ನಿಸಿದ್ದಾರೆ.
ಸಾವನ್ನು
ಸ್ವಂತ
ಲಾಭಕ್ಕೆ
ಬಳಸಿಕೊಳ್ಳೊಲ್ಲ:
ಕಂಗನಾ
ರಣಾವತ್‌ಗೆ
ತಾಪ್ಸಿ
ಪನ್ನು
ತಿರುಗೇಟು

ಹೀಗೆ ಹೇಳಲು ನೀವು ಯಾರು?
ಹೀಗೆ ಹೇಳಲು ನೀವು ಯಾರು? ನೀವು ಹೇಗೆ ಚಿತ್ರೋದ್ಯಮದ ಒಳಗೆ ಪ್ರವೇಶಿಸಿದಿರಿ? ನಿಮ್ಮ ಜೀವನದಲ್ಲಿ ಏನು ಸಾಧಿಸಿದ್ದೀರಿ? ಎಂದು ಶತ್ರುಘ್ನ ಸಿನ್ಹಾ ಕೇಳಿದ್ದಾರೆ. 'ಕಾಫಿ ವಿತ್ ಕರಣ್' ಕಾರ್ಯಕ್ರಮದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಇದ್ದರೂ ನಟ ಅರ್ಜುನ್ ಕಪೂರ್ ಅವರನ್ನು ಪ್ರತಿಬಾರಿಯೂ ಕರಣ್ ಜೋಹರ್ ಪ್ರಮೋಟ್ ಮಾಡುವ ಕೆಲಸ ಮಾಡುವುದಕ್ಕೆ ಪರೋಕ್ಷವಾಗಿ ತಿವಿದಿರುವುದು ಎನ್ನಲಾಗಿದೆ.

ಸುಶಾಂತ್ ಪ್ರಕರಣ ಸಿಬಿಐ ತನಿಖೆ
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಒತ್ತಾಯಕ್ಕೆ ಶತ್ರುಘ್ನ ಸಿನ್ಹಾ ಕೂಡ ದನಿಗೂಡಿಸಿದ್ದಾರೆ. ಬಿಹಾರದವರೇ ಆದ ಶತ್ರುಘ್ನ, ತಮ್ಮ ರಾಜ್ಯದ ನಟನ ಸಾವಿನ ಪ್ರಕರಣದ ಸೂಕ್ತ ತನಿಖೆಯಾಗಬೇಕು. ಸತ್ಯ ಹೊರಬರಬೇಕು ಎಂದು ಹೇಳಿದ್ದಾರೆ.

'ಶತ್ರುಘ್ನ ಸಿನ್ಹಾ ಅವಕಾಶವಾದಿ'
ಆದರೆ, ಶತ್ರುಘ್ನ ಸಿನ್ಹಾ ಹೇಳಿಕೆ ಕುರಿತು ನೆಟ್ಟಿಗರು ವಿವಿಧ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಶತ್ರುಘ್ನ ಅವರ ಮಗಳೇ ಇಲ್ಲಿ ನೆಪೋಟಿಸಂನ ಲಾಭ ಪಡೆದಿರುವಾಗ ಶತ್ರುಘ್ನ ಕರಣ್ ಜೋಹರ್ ವಿರುದ್ಧ ಮಾತನಾಡಲು ಬೇರೆ ಯಾವುದೋ ಲಾಭ ಪಡೆಯುವ ಹುನ್ನಾರ ಇರಬೇಕು. ಅವರೊಬ್ಬ ಅವಕಾಶವಾದಿ. ಈ ಪರಿಸ್ಥಿತಿಯ ಪ್ರಯೋಜನ ಪಡೆದುಕೊಳ್ಳಲು ಅವರು ಮುಂದಾಗಿದ್ದಾರೆ ಎಂದೂ ಆರೋಪಿಸಲಾಗಿದೆ.
ಕಂಗನಾ
ರಣಾವತ್
ಬೆಳೆದಿದ್ದೇ
ನೆಪೋಟಿಸಂ
ಪಿಲ್ಲರ್
ಮೇಲೆ:
ನಟಿ
ನಗ್ಮಾ
ಟೀಕೆ