ಮಾಜಿ ಬಾಯ್‌ಫ್ರೆಂಡ್‌ ರೀತಿಯೇ ಸಾವನ್ನಪ್ಪಿದ್ದ ಹುಡುಗರು ನಟಿ; "ಒಂದು ದಿನ ನಾವು ಮತ್ತೆ ಸಿಗೋಣ" ಎಂದಿದ್ದ ಶೆಫಾಲಿ

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಶೆಫಾಲಿ ಜರಿವಾಲಾ ನಿಧನ ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಇನ್ನೂ ಇವರ ಹಠಾತ್ ನಿಧನವನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. 42 ವರ್ಷದ ನಟಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು ಜನರಲ್ಲಿ ಆತಂಕವನ್ನು ಮೂಡಿಸಿದೆ. ಕಿರುತೆರೆ, ರಿಯಾಲಿಟಿ ಶೋ ಹಾಗೂ ಮ್ಯೂಸಿಕ್ ಅಲ್ಬಮ್‌ಗಳಲ್ಲಿ ನಟಿಸಿದ್ದ ಶೆಫಾಲಿ ಭಾರತದ ಜನಪ್ರಿಯರ ನಟಿಯರಲ್ಲಿ ಒಬ್ಬರಾಗಿದ್ದರು.

ಶೆಫಾಲಿ ಜರಿವಾಲಾ ನಿಧನ ಕಿರುತೆರೆ ಹಾಗೂ ಸಿನಿಮಾ ಮಂದಿಗೆ ದೊಡ್ಡ ಶಾಕ್. ಇನ್ನೂ ಈ ಸಡನ್ ಶಾಕ್‌ನಿಂದ ತಾರೆಯರು ಹೊರ ಬಂದಿಲ್ಲ. ಶೆಫಾಲಿ ಅಂತ್ಯಕ್ರಿಯೆ ನೆರವೇರಿದ ಬಳಿಕ ಅವರ ಸಾವಿನ ಕುರಿತು ಹತ್ತು ಹಲವು ರೀತಿಯ ಚರ್ಚೆ ನಡೆಯುತ್ತಿದೆ. ಶೆಫಾಲಿ ಬಗ್ಗೆ 10 ತಿಂಗಳ ಹಿಂದೆ ಪರಾಸ್ ಛಾಬ್ರಾ ನುಡಿದ ಭವಿಷ್ಯ ಕೂಡ ಸಿಕ್ಕಾಪಟ್ಟೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Shefali Jariwala tweeted in 2021 after her ex-boyfriend Sidharth Shukla passed away and fans got emotional

ಇದೇ ವೇಳೆ ಶೆಫಾಲಿ ಜರಿವಾಲಾ ಮಾಡಿದ್ದ ಟ್ವೀಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 2021ರಲ್ಲಿ ತನ್ನ ಮಾಜಿ ಬಾಯ್‌ಫ್ರೆಂಡ್ ಸಿದ್ಧಾರ್ಥ್ ಶುಕ್ಲಾ ಸಾವಿನ ಬಳಿಕ ಶೆಫಾಲಿ ಮಾಡಿದ ಟ್ವೀಟ್ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಅಂದು ಶೆಫಾಲಿ ಹೇಳಿದಂತೆಯೇ ಆಗಿ ಬಿಟ್ಟಿತ್ತಲ್ಲ ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಆ ಟ್ವೀಟ್ ಏನು ಎಂದು ನೋಡುವುದಕ್ಕೆ ಮುಂದೆ ಓದಿ.

ಹುಡುಗರು ಪಂಕಜಾ ನಿಧನಕ್ಕೆ ಶೋಕ

'ಹುಡುಗರು' ಸಿನಿಮಾದಲ್ಲಿ "ತೊಂದ್ರೆ ಇಲ್ಲ ಪಂಕಜಾ.." ಹಾಡಿನಲ್ಲಿ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ಸಾವಿನ ಸುದ್ದಿ ಸಿನಿಮಾ ಮಂದಿಯನ್ನು ಭಾವುಕರನ್ನಾಗಿಸಿದೆ. 2002ರಲ್ಲಿ ಬಂದಿದ್ದ ಹಿಂದಿ ವಿಡಿಯೋ ಅಲ್ಬಮ್ "ಕಾಂಟಾ ಲಗಾ.." ಮೂಲಕ ರಾತ್ರೋ ರಾತ್ರಿ ಶೆಫಾಲಿ ಸಂಚಲನ ಸೃಷ್ಟಿಸಿಬಿಟ್ಟಿದ್ದರು. ಇವರ ಹೆಜ್ಜೆಗಳಿಗೆ ಅದೆಷ್ಟೋ ಮಂದಿ ಅಭಿಮಾನಿಗಳಾಗಿದ್ದರು. ಇಲ್ಲಿಂದ ಶೆಫಾಲಿ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಅದರಲ್ಲಿ ಬಿಗ್ ಬಾಸ್ ಸೀಸನ್ 13 ಕೂಡ ಒಂದು.

ಇದೇ ಬಿಗ್‌ ಬಾಸ್ ಸೀಸನ್ 13ರಲ್ಲಿ ಶೆಫಾಲಿ ಹಾಗೂ ಅವರ ಮಾಜಿ ಭಾಯ್‌ಫ್ರೆಂಡ್ ಸಿದ್ದಾರ್ಥ್ ಶುಕ್ಲಾ ಭಾಗವಹಿಸಿದ್ದರು. 15 ವರ್ಷಗಳ ಹಿಂದೆ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಈಗ ಬ್ರೇಕಪ್ ಬಳಿಕವೂ ಸ್ನೇಹಿತರಾಗಿ ಮುಂದುವರೆದಿದ್ದರು. ಅದರಲ್ಲೂ ಬಿಗ್‌ ಬಾಸ್‌ನಲ್ಲಿ ಇಬ್ಬರೂ ನಡೆದುಕೊಂಡಿದ್ದ ರೀತಿಗೆ ಕಿರುತೆರೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸೀಸನ್ ಅನ್ನು ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ ಗೆದ್ದಿದ್ದರು.

Shefali Jariwala tweeted in 2021 after her ex-boyfriend Sidharth Shukla passed away and fans got emotional


"ನಾವು ಒಟ್ಟಿಗೆ ಸೇರೋಣ"

2021ರಲ್ಲಿ ಹಿಂದಿ ಕಿರುತೆರೆಯ ನಟ ಹಾಗೂ ಬಿಗ್‌ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಇದೇ ಹೃದಯಾಘಾತದಿಂದ ನಿಧನರಾಗಿದ್ದರು. ಆ ವೇಳೆ ಶೆಫಾಲಿ ಜರಿವಾಲಾ ಭಾವುಕರಾಗಿ ಮಾಡಿದ್ದ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಿದ್ಧಾರ್ಥ್ ನಿಧನದ ವೇಳೆ ಶೆಫಾಲಿ "ನೀನು ಒಳ್ಳೆಯ ಜಾಗಕ್ಕೆ ಸೇರಿದ್ದೀಯ ಅಂತ ನನಗೆ ಗೊತ್ತು. ಒಂದು ನಾವು ಒಟ್ಟಿಗೆ ಸೇರೋಣ" ಎಂದು ಟ್ವೀಟ್ ಮಾಡಿದ್ದರು. ಅದೇ ಟ್ವೀಟ್ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಈ ಟ್ವೀಟ್ ನೋಡಿ ಭಾವುಕರಾಗಿದ್ದಾರೆ.

ಇನ್ನೊಂದು ಕಡೆ ಬಿಗ್ ಬಾಸ್ 13 ಶಾಪಗ್ರಸ್ತ ಸೀಸನ್ ಎಂದು ಹಲವರು ಹೇಳುತ್ತಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಹಾಗೂ ನಟಿ ಶೆಫಾಲಿ ಜರಿವಾಲಾ ಇಬ್ಬರೂ ಹೃದಯಾಘಾತದಿಂದಲೇ ಕೊನೆಯುಸಿರೆಳೆದಿದ್ದಾರೆ. ಸಿದ್ಧಾರ್ಥ್ ಶುಕ್ಲಾಗೆ ಕೇವಲ 40 ವರ್ಷ ವಯಸ್ಸಾಗಿತ್ತು. ಶೆಫಾಲಿ ಜರಿವಾಲಾ ಕೇವಲ 42ನೇ ವರ್ಷ ವಯಸ್ಸಿಗೆ ನಿಧನರಾಗಿದ್ದಾರೆ. ಶೆಫಾಲಿ ದಿಢೀರ್ ಸಾವು ಈಗ ಬಾಲಿವುಡ್‌ ಮಂದಿಯನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.

More from Filmibeat

English summary
Shefali Jariwala tweeted in 2021 after her ex-boyfriend Sidharth Shukla passed away, and fans got emotional.
Read more about: actress death bollywood actors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X