For Quick Alerts
  ALLOW NOTIFICATIONS  
  For Daily Alerts

  ಅಯ್ಯೋ ನನಗೆ ಕೊರೊನಾ ವೈರಸ್ ಬಂದಿಲ್ಲ, ನಾನು ಹುಷಾರಾಗಿದ್ದೇನೆ ಎಂದ ನಟಿ

  |

  ಬಾಲಿವುಡ್ ನಟಿ ಶೆಫಾಲಿ ಶಾ ಮತ್ತು ಅವರ ಕುಟುಂಬಕ್ಕೆ ಕೊರೊನಾ ವೈರಸ್ ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಕಾರಣವಾಗಿದ್ದು ಅವರ ಫೇಸ್‌ಬುಕ್‌ ಅಧಿಕೃತ ಖಾತೆಯಲ್ಲಿನ ಪೋಸ್ಟ್. ಕೊನೆಗೆ ಇದಕ್ಕೆ ಸ್ಪಷ್ಟೀಕರಣ ನೀಡಿರುವ ಶೆಫಾಲಿ, ತಾವೆಲ್ಲರೂ ಆರಾಮಾಗಿ ಇದ್ದೇವೆ ಎಂದು ತಿಳಿಸಿದ್ದಾರೆ.

  Karabu song released date postponed | Pogaru | Dhruva sarja | Filmibeat kannada

  ತಮ್ಮ ಫೇಸ್‌ಬುಕ್ ಖಾತೆಯನ್ನು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ತಮ್ಮ ಕುಟುಂಬಕ್ಕೆ ಕೊರೊನಾ ವೈರಸ್ ತಗುಲಿದೆ ಎಂಬ ಸುದ್ದಿ ಶುದ್ಧ ಸುಳ್ಳು ಎಂದು ಅವರು ತಿಳಿಸಿದ್ದಾರೆ.

  ಬಾಲಿವುಡ್ ನಿರ್ಮಾಪಕನ ಅವಳಿ ಹೆಣ್ಣುಮಕ್ಕಳಿಬ್ಬರಿಗೂ ಕೊರೊನಾ ಪಾಸಿಟಿವ್!ಬಾಲಿವುಡ್ ನಿರ್ಮಾಪಕನ ಅವಳಿ ಹೆಣ್ಣುಮಕ್ಕಳಿಬ್ಬರಿಗೂ ಕೊರೊನಾ ಪಾಸಿಟಿವ್!

  'ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಎಲ್ಲರೂ ಹೇಗೆ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೋ ಹಾಗೆಯೇ ಎದುರಿಸುತ್ತಿದ್ದೇನೆ. ನಾನು ಚೆನ್ನಾಗಿದ್ದೇನೆ ಮತ್ತು ನಾನು ಯಾವುದಾದರೂ ನಕಾರಾತ್ಮಕ ಸಂಗತಿಗಳ ಬಗ್ಗೆ ಚಿಂತಿಸುವುದಿಲ್ಲ. ನಾವೆಲ್ಲರೂ ಮನೆಯಲ್ಲಿದ್ದೇವೆ ಮತ್ತು ಸುರಕ್ಷಿತರಾಗಿದ್ದೇವೆ. ನನ್ನ ಪೋಸ್ಟ್‌ನಲ್ಲಿ (ಬರೆದಿದ್ದು ಯಾರೋ ದೇವರಿಗೇ ಗೊತ್ತು) ಬರೆದಿರುವಂತೆ ನಮಗೆ ಕೊರೊನಾ ಪಾಸಿಟಿವ್ ಆಗಿಲ್ಲ' ಎಂದು ಶೆಫಾಲಿ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಮುಂದೆ ಓದಿ...

  ಫೇಸ್‌ಬುಕ್ ಖಾತೆ ಹ್ಯಾಕ್

  ಫೇಸ್‌ಬುಕ್ ಖಾತೆ ಹ್ಯಾಕ್

  'ಕಳೆದ ರಾತ್ರಿ ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿತ್ತು. ಸಾವಿರಾರು ಮೆಸೇಜ್‌ಗಳಿಂದ ನಾನು ಎದ್ದೆ. ಕಳವಳಗೊಂಡ ಜನರು ಕಾಳಜಿಯಿಂದ ನನ್ನನ್ನು ಸಂಪರ್ಕಿಸುತ್ತಿದ್ದರು. ನನಗಾಗಿ ಅದ್ಭುತ ಸಂಗತಿಗಳನ್ನು ತಿಳಿಸುತ್ತಿದ್ದರು. ನಿಮ್ಮೊಂದಿಗೆ ಮಾತನಾಡುವ ಅಗತ್ಯವಿದೆಯೇ? ಕರೆ ಮಾಡಲೇ ಎಂದು ಕೇಳುತ್ತಿದ್ದರು. ಕೆಲವು ಜನರು ತಮ್ಮ ಫೋನ್‌ ನಂಬರ್‌ಗಳನ್ನೂ ಹಂಚಿಕೊಂಡಿದ್ದರು' ಎಂದು ತಿಳಿಸಿದ್ದಾರೆ.

  ಭೇಟಿ ಮಾಡಿದವರು, ಮಾಡದವರು ಎಲ್ಲರೂ...

  ಭೇಟಿ ಮಾಡಿದವರು, ಮಾಡದವರು ಎಲ್ಲರೂ...

  'ಈ ಜನರಲ್ಲಿ ಕೆಲವರು ನಾನು ಭೇಟಿ ಮಾಡಿದವರು, ಕೆಲವರು ಭೇಟಿ ಮಾಡದೆಯೇ ಇರುವವರು ಅಥವಾ ಎಲ್ಲೋ ಒಂದೆರಡು ಸಂದರ್ಭದಲ್ಲಿ ಭೇಟಿಯಾಗಿರುವವರು. ಅವರೆಲ್ಲರೂ ನನ್ನ ಕಡೆಗೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿದರು' ಎಂದಿದ್ದಾರೆ.

  ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್: ಮತ್ತೆ ಟ್ರೋಲಿಗರಿಗೆ ಆಹಾರಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್: ಮತ್ತೆ ಟ್ರೋಲಿಗರಿಗೆ ಆಹಾರ

  ಅದು ನೀವು ಹೇಳಿದಂತಿಲ್ಲ ಎಂದ ಜನರು

  'ನಿಜಕ್ಕೂ ತುಂಬಾ ಜನ ಸಂದೇಶ ಕಳುಹಿಸಿದ್ದಾರೆ. ಇದು ನೀವು ಹೇಳಿರುವಂತೆ ಅನಿಸುತ್ತಿಲ್ಲ. ಏಕೆಂದರೆ ಅದರಲ್ಲಿ ಪಾಸಿಟಿವ್ ಧ್ವನಿ ಇಲ್ಲ. ಹಾಗಾಗಿ ಅದು ನೀವು ಎನಿಸುತ್ತಿಲ್ಲ. ನೀವು ಎಂದಿಗೂ ಈ ರೀತಿ ಮಾತನಾಡಿದವರಲ್ಲ. ಹೀಗಾಗಿ ನಿಮ್ಮ ಖಾತೆ ಹ್ಯಾಕ್ ಆಗಿದೆ ಎನಿಸುತ್ತಿದೆ' ಎಂದು ಕಾಳಜಿಯಿಂದ ಕೇಳಿದ್ದಾಗಿ ತಿಳಿಸಿದ್ದಾರೆ.

  ನೀವೆಲ್ಲರೂ ನನಗೆ ಮುಖ್ಯ

  ನೀವೆಲ್ಲರೂ ನನಗೆ ಮುಖ್ಯ

  'ಏಕೆಂದರೆ ನೀವು ನನಗೆ ಬಹಳ ಅಮೂಲ್ಯ ಮತ್ತು ಮುಖ್ಯವಾದವರು. ನಿಮಗೆಲ್ಲರಿಗೂ ಧನ್ಯವಾದಗಳು. ನನಗಾಗಿ ಮುಂದೆ ಬಂದವರಿಗೆ ಮತ್ತು ಜತೆಯಲ್ಲಿ ಇರುವುದಕ್ಕೆ ಕೃತಜ್ಞತೆಗಳು. ಇದು ನನಗೆ ಸಾಕಷ್ಟು ಶಕ್ತಿ ನೀಡಿದೆ' ಎಂದು ಶೆಫಾಲಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  English summary
  Bollywood actress Shefali Shah revealed that she has not testes COVID 19 Positive. She said her Facebook account was hacked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X