ಬೆಂಗಳೂರಿಗೂ ಬಂತು ಶಿಲ್ಪಾ ಶೆಟ್ಟಿಯ ರೆಸ್ಟೊರೆಂಟ್; 'ಬಾಸ್ಟಿಯನ್' ಎಲ್ಲಿದೆ? ಏನೇನು ಸಿಗುತ್ತೆ? ಬೆಲೆ ಎಷ್ಟು? ಫುಲ್ ಡೀಟೆಲ್ಸ್

ಮಂಗಳೂರು ಬೆಡಗಿ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ನಟಿಯಷ್ಟೇ ಅಲ್ಲ. ಯಶಸ್ವೀ ವ್ಯಾಪಾರಸ್ಥೆ ಕೂಡಾ ಹೌದು. ಈಗಾಗ್ಲೇ ಮುಂಬೈನ ಎರಡು ಕಡೆಗಳಲ್ಲಿ 'ಬಾಸ್ಟಿಯನ್' ಅನ್ನೋ ಸೂಪರ್ ಹಿಟ್ ರೆಸ್ಟೊರೆಂಟ್ ನಡೆಸ್ತಿದ್ದಾರೆ. ಈ ಎರಡೂ ರೆಸ್ಟೊರೆಂಟ್‌ಗಳಲ್ಲಿ ಊಟ ತಿಂಡಿ ರುಚಿ ಮಾತ್ರ ಅಲ್ಲ. ಅಲ್ಲಿನ ಆಂಬಿಯನ್ಸ್, ವೈಬ್ ಎಲ್ಲವೂ ಸಿಕ್ಕಾಪಟ್ಟೆ ಫೇಮಸ್. ಎಷ್ಟರ ಮಟ್ಟಿಗೆ ಜನ ಈ ರೆಸ್ಟೊರೆಂಟ್‌ಗಳನ್ನು ಇಷ್ಟಪಡ್ತಾರೆ ಅಂದ್ರೆ, ವಾರಗಟ್ಟಲೆ ಮೊದಲೇ ಟೇಬಲ್ ಬುಕ್ ಆಗುತ್ತಂತೆ.

ಪತಿ ರಾಜ್ ಕುಂದ್ರಾ ಜೊತೆ ಸೇರಿ ಶಿಲ್ಪಾ ಆರಂಭಿಸಿದ ಈ ರೆಸ್ಟೊರೆಂಟ್ ಚೈನ್ ಈಗ ರೆಕ್ಕೆ ಬಿಚ್ಚಿ ಬೇರೆ ಕಡೆಗಳಿಗೂ ಹರಡಲು ಸಜ್ಜಾಗಿದೆ. ಮುಂಬೈನ ಹೊರಗೆ ಮೊದಲನೇ ಬ್ರಾಂಚ್‌ ಅನ್ನು ಶಿಲ್ಪಾ ಬೆಂಗಳೂರಿನಲ್ಲಿ ಆರಂಭಿಸ್ತಿದ್ದಾರೆ. ಬೆಂಗಳೂರಿನ ಬಾಸ್ಟಿಯನ್ ಬಹು ದೊಡ್ಡ ಕಾರ್ಪೆಟ್ ಏರಿಯಾ ಹೊಂದಿದ್ದು ಇಂಟೀರಿಯರ್ ಕೆಲಸ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಮುಂದಿನ ತಿಂಗಳು ಅಂದ್ರೆ ಮಾರ್ಚ್ 2024ಕ್ಕೆ 'ಬಾಸ್ಟಿಯನ್ ಬೆಂಗಳೂರು' ಆಹಾರ ಪ್ರಯರಿಗೆ ಬಾಗಿಲು ತೆರೆಯಲಿದೆ.

Shilpa Shetty restaurant bastian opens in Bengaluru know location food menu

ನಿನ್ನೆಯಷ್ಟೇ ಇದಕ್ಕೆ ಸಂಬಂಧಿಸಿದಂತೆ ಸರಳ ಪೂಜೆಯನ್ನು ರೆಸ್ಟೊರೆಂಟ್‌ನಲ್ಲಿ ಶಿಲ್ಪಾ ಶೆಟ್ಟಿ ನೆರವೇರಿಸಿದ್ರು. ಆ ಫೋಟೊಗಳನ್ನು ಖುದ್ದು ಶಿಲ್ಪಾ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನೇನು ಬೆಂಗಳೂರಿಗೆ ಬಂದೇಬಿಟ್ಟೆವು ಎಂದು ಶಿಲ್ಪಾ ಖುಷಿಯಲ್ಲಿ ಈ ವಿಚಾರ ಶೇರ್ ಮಾಡಿಕೊಂಡಿದ್ದಾರೆ.

ಬಿಳಿ ಮತ್ತು ನೀಲಿ ಕಾಂಬಿನೇಶನ್ ಕುರ್ತಾ ಸಲ್ವಾರ್ ಧರಿಸಿ ಪೂಜೆಯಲ್ಲಿ ಪಾಲ್ಗೊಂಡ ಶಿಲ್ಪಾ ಶೆಟ್ಟಿ ಪೂಜೆ ನಂತರ ಪ್ರಸಾದ ಸವಿಯೋದನ್ನು ಮಾತ್ರ ಮರೆಯಲಿಲ್ಲ. ಇತ್ತೀಚೆಗಷ್ಟೇ 'ಇಂಡಿಯನ್ ಪೊಲೀಸ್ ಫೋರ್ಸ್' ಅನ್ನೋ ಸೀರೀಸ್‌ನಲ್ಲಿ ಕಾಣಿಸಿಕೊಂಡಿದ್ದ ಶಿಲ್ಪಾ ಈಗ ಸದ್ಯಕ್ಕೆ ಬ್ಯುಸಿನೆಸ್ ವೃದ್ಧಿಸುವಲ್ಲಿ ಬ್ಯುಸಿಯಾಗಿದ್ದಾರೆ.

ಬೆಂಗಳೂರಿನ ಅಶೋಕನಗರದ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಬಾಸ್ಟಿಯನ್ ಆಹಾರ ಪ್ರಿಯರಿಗೆ ಬಾಗಿಲು ತೆರೆಯಲಿದೆ. ಈ ರಸ್ತೆ ಮತ್ತು ಇದರ ಅಕ್ಕ ಪಕ್ಕದ ಚರ್ಚ್ ಸ್ಟ್ರೀಟ್, ರಿಚ್ಮಂಡ್ ರಸ್ತೆಗಳೆಲ್ಲಾ ಒಂದಕ್ಕಿಂತ ಒಂದು ವಿಭಿನ್ನ ರೆಸ್ಟೊರೆಂಟ್‌ಗಳಿಗೆ, ವಿವಿಧ ಪ್ರದೇಶದ ಅದ್ಭುತ ರುಚಿಯನ್ನು ಜನರಿಗೆ ಉಣಬಡಿಸುವುದಕ್ಕೆ ಹೆಸರುವಾಸಿ. ಈ ಸಾಲಿಗೆ ಬಾಲಿವುಡ್ ಬೆಡಗಿ, ಕುಡ್ಲ ಕುವರಿ ಶಿಲ್ಪಾ ಶೆಟ್ಟಿಯ ಹೊಸಾ ರೆಸ್ಟೊರೆಂಟ್ ಬಾಸ್ಟಿಯನ್ ಸೇರುತ್ತಿರೋದು ಅವರ ಅಭಿಮಾನಿಗಳಿಗಂತೂ ಸಖತ್ ಖುಷಿ ಕೊಟ್ಟಿದೆ.

Shilpa Shetty restaurant bastian opens in Bengaluru know location food menu

ಇನ್ನು ಶಿಲ್ಪಾ ಶೆಟ್ಟಿ ಮತ್ತು ಆಕೆಯ ಆಹಾರ ಪ್ರೀತಿ ವರ್ಷಗಳಿಂದ ಸಕತ್ ಫೇಮಸ್ ಬಿಡಿ. ಸಂಡೇ ಬಿಂಜ್ ಅನ್ನೋ ಕಾನ್ಸೆಪ್‌ ಅನ್ನು ಒಂದು ಬ್ರಾಂಡ್ ರೀತಿ ಬೆಳೆಸಿದ ಕೀರ್ತಿ ಆಕೆಯದ್ದೇ ಅಂದ್ರೂ ತಪ್ಪಾಗಲ್ಲ. ಸದಾ ಯೋಗ, ಡಯೆಟ್, ಆರೋಗ್ಯ ಸೂತ್ರಗಳ ಬಗ್ಗೆ ಹೆಚ್ಚು ಒತ್ತು ಕೊಡುವ ಶಿಲ್ಪಾ ಭಾನುವಾರದ ಒಂದು ಊಟದಲ್ಲಿ ಮಾತ್ರ ತನ್ನಿಷ್ಟದ ಸಿಹಿತಿಂಡಿಗಳನ್ನು ಅಥವಾ ತಾನು ಭೇಟಿ ಕೊಟ್ಟಿರುವ ಸ್ಥಳದ ವಿಶೇಷ ತಿನಿಸುಗಳನ್ನು ಪರಿಚಯಿಸಿ, ಅದನ್ನು ಬಾಯಿ ಚಪ್ಪರಿಸಿಕೊಂಡು ಮನಸ್ಸಿಗೆ ಖುಷಿಯಾಗುವಂತೆ ಸವಿಯುತ್ತಾರೆ. ಅವರ ಈ ಸಂಡೇ ಬಿಂಜ್ ವಿಡಿಯೋಗಳೇ ಇನ್‌ಸ್ಟಾಗ್ರಾಂನಲ್ಲಿ ನೂರಾರಿವೆ. ತಾನು ಖುದ್ದು ಆಹಾರ ಪ್ರಿಯೆಯಾಗಿರುವಾಗ ರೆಸ್ಟೊರೆಂಟ್ ವಹಿವಾಟಿಗೆ ಕೈ ಹಾಕಿ ಗೆದ್ದಿರುವ ಶಿಲ್ಪಾ ಈಗ ಬೆಂಗಳೂರಿನಲ್ಲಿ ಹೆಜ್ಜೆಯಿಟ್ಟು ವಹಿವಾಟು ವಿಸ್ತರಿಸ್ತಾ ಇರೋದು ಅಭಿಮಾನಿಗಳಿಗೆ ಖುಷಿಯ ವಿಚಾರವೇ.

More from Filmibeat

English summary
Shilpa Shetty restaurant Bastian in Bengaluru:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X