ಇದೇನಾ ನಿಮ್ಮ ಯೋಗಾಯೋಗ ; ಬೆಟ್ಟ ಹತ್ತುವ ಬದಲು ಹೇಸರಗತ್ತೆ ಮೇಲೆ ಕುಳಿತ ಶಿಲ್ಪಾ ಶೆಟ್ಟಿ..!

ಮದುವೆಯಾದ ನಂತರ ಅವಕಾಶದ ಕೊರತೆ ಎದುರಾದ ಮೇಲೆ ಸಾಮಾನ್ಯವಾಗಿ ತಮ್ಮ ಫಿಟ್ನೆಸ್ ಬಗ್ಗೆ ನಾಯಕಿಯರು ಗಮನ ಕೊಡಲ್ಲ. ಆದರೆ ಮಂಗಳೂರು ಮೀನು ಶಿಲ್ಪಾ ಶೆಟ್ಟಿ ಇದಕ್ಕೆ ತದ್ವಿರುದ್ದ. ವಯಸ್ಸು 48 ಆದರೂ ಸಪೂರ ಮೈಕಟ್ಟು ಹೊಂದಿರುವ ಶಿಲ್ಪಾ ಅವರ ಯೋಗಾಸನವನ್ನ ನೋಡುವುದೇ ಅನೇಕರಿಗೆ ಹಿತವಾದ ಅನುಭವ.

ತೆಳ್ಳಗಿನ ದೇಹ, ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಜೀವನಶೈಲಿಗೆ ಹೆಸರುವಾಸಿಯಾದ ಶಿಲ್ಪಾ ಶೆಟ್ಟಿ ಸ್ನಾಯುಗಳ ಬಲವರ್ಧನೆಗೆ ಚಯಾಪಚಯವನ್ನು ಹೆಚ್ಚಿಸಲು ತೂಕ ಎತ್ತುವಿಕೆ, ಸ್ಕ್ವಾಟ್‌ಗಳು, ಶ್ವಾಸಕೋಶಗಳು ಮತ್ತು ಪುಷ್-ಅಪ್‌ಗಳಂತಹ ಶಕ್ತಿ ತರಬೇತಿ ವ್ಯಾಯಾಮಗಳನ್ನು ಮಾಡುತ್ತಾರೆ. ಸಮತೋಲಿತ ಮತ್ತು ಪೌಷ್ಟಿಕ ಆಹಾರಕ್ರಮವನ್ನು ಅನುಸರಿಸುತ್ತಾರೆ

Shilpa Shetty Trolled For Riding Horseback To Vaishno Devi Temple Netizens Says Does Yoga Have Benefits

ಇಂತಹ ಶಿಲ್ಪಾ ಶೆಟ್ಟಿ ಅವರ ಫಿಟ್ನೆಸ್ ಬಗ್ಗೆ ಈಗ ಹತ್ತಾರು ಪ್ರಶ್ನೆ ಅನೇಕರಲ್ಲಿ ಎದ್ದಿವೆ. ಇದಕ್ಕೆ ಕಾರಣ ಶಿಲ್ಪಾ ಅವರ ಇತ್ತೀಚಿನ ಆಧ್ಯಾತ್ಮಿಕ ಪ್ರವಾಸ. ಹೌದು, ಉತ್ತರಾಖಾಂಡ್‌ನಲ್ಲಿ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. 6 ತಿಂಗಳಿಗೆ ಒಮ್ಮೆ ತೆರೆಯುವ ಈ ಯಾತ್ರಾ ಸ್ಥಳಗಳಿಗೆ ದೇಶ-ವಿದೇಶಗಳಿಂದ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

ಶಿಲ್ಪಾ ಶೆಟ್ಟಿ ಕೂಡ ತಮ್ಮ ಕುಟುಂಬದ ಜೊತೆ ಚಾರ್ ಧಾಮ್ ಯಾತ್ರೆ ಕೈಗೊಂಡಿದ್ದಾರೆ. ತಾಯಿ ಸುನಂದಾ ಶೆಟ್ಟಿ, ಸಹೋದರಿ ಶಮಿತಾ ಶೆಟ್ಟಿ ಮತ್ತು ಪುತ್ರಿ ಸಮೀಷಾ ಜೊತೆ ಕೇದಾರನಾಥ್ ದೇವಾಲಯದ ಮುಂದೆ ಫೋಟೋ ಕ್ಲಿಕಿಸಿಕೊಂಡು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

Shilpa Shetty Trolled For Riding Horseback To Vaishno Devi Temple Netizens Says Does Yoga Have Benefits

ಕೇದಾರನಾಥ್ ದೇವಾಲಯದ ನಂತರ ಮಾತಾ ವೈಷ್ಣೋದೇವಿ ದರ್ಶನ ಪಡೆಯಲು ತೆರಳಿರುವ ಶಿಲ್ಪಾ ಶೆಟ್ಟಿ ಕಾಲ್ನಡಿಗೆಯಲ್ಲಿ ಬೆಟ್ಟವನ್ನ ಹತ್ತದೇ ಹೇಸರಗತ್ತೆಯ ಮೇಲೆ ಕುಳಿತು ಹೋಗಿದ್ದಾರೆ. ಸದ್ಯಕ್ಕೆ ಹೇಸರಗತ್ತೆ ಮೇಲೆ ಶಿಲ್ಪಾ ಶೆಟ್ಟಿ ಕುಳಿತ ವಿಡಿಯೋ ವೈರಲ್ ಆಗಿದೆ. ಇವರನ್ನ ಟ್ರೋಲ್ ಕೂಡ ಮಾಡಲಾಗುತ್ತಿದೆ.

ಫಿಟ್ನೆಸ್‌ಗೆ ಹೆಸರುವಾಸಿಯಾದವರಿಂದ ನಡೆಯಲು ಸಾಧ್ಯವಾಗದೇ ಇರುವುದನ್ನ ನೋಡಿದರೆ ಅವರ ಫಿಟ್ನೆಸ್ ಮೇಲೆ ಅನುಮಾನ ಬರುತ್ತೆ ಎಂದು ಕೆಲವರು ಹೇಳಿದರೆ, ಯೋಗ ಮತ್ತು ಕಾರ್ಡಿಯೋ ಮಾಡಿ ಆದ ಪ್ರಯೋಜವಾದರೂ ಏನು ಅನ್ನುವ ಪ್ರಶ್ನೆಯನ್ನು ಕೂಡ ಶಿಲ್ಪಾಗೆ ಕೇಳುತ್ತಿದ್ದಾರೆ. ಇದೇನಾ ನಿಮ್ಮ ಯೋಗಾಯೋಗ ಎಂದು ಕಾಲೆಳೆಯುತ್ತಿದ್ದಾರೆ.

Shilpa Shetty Trolled For Riding Horseback To Vaishno Devi Temple Netizens Says Does Yoga Have Benefits

ಸದ್ಯಕ್ಕೆ ಶಿಲ್ಪಾ ಶೆಟ್ಟಿಯವರ ವೈಷ್ಣೋದೇವಿ ಪ್ರವಾಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವ್ಯಾಪಕವಾಗಿ ಟ್ರೋಲ್ ಕೂಡ ಆಗ್ತಿದೆ,

More from Filmibeat

English summary
Bollywood Actress Shilpa Shetty Faces Backlash for Traveling on Horseback to Vaishno Devi Temple: Is There Any Benefit in Practicing So Much Yoga?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X