ಸುಶಾಂತ್ ಸಿಂಗ್ ಜತೆ ಅಂದು ಮಾತನಾಡಬೇಕಿತ್ತು: ಕ್ರಿಕೆಟಿಗ ಶೋಯೆಬ್ ಅಖ್ತರ್ ಪಶ್ಚಾತ್ತಾಪ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರಲ್ಲಿ ತೀವ್ರ ನೋವುಂಟುಮಾಡಿದೆ. ಸುಶಾಂತ್ ಸಾವಿನ ಬಗ್ಗೆ ಮಾತನಾಡಿರುವ ಶೋಯೆಬ್ ಅಖ್ತರ್ ಸಂತಾಪ ವ್ಯಕ್ತಪಡಿಸಿದ್ದಾರೆ ಜತೆಗೆ ಜೀವನದ ಸಮಸ್ಯೆಗಳನ್ನು ಎದುರಿಸುವ ಮಾರ್ಗಗಳ ಬಗ್ಗೆಯೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Recommended Video

Ambareesh memorial:ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಬಿಎಸ್‌ವೈ ಅಸ್ತು |Kanteerava Studio |Filmibeat Kannada

ಸುಶಾಂತ್ ಸಾವು ತಮ್ಮನ್ನು ವಿಚಲಿತಗೊಳಿಸಿದೆ ಎಂದಿರುವ ಅಖ್ತರ್, ಈ ಘಟನೆ ತುಂಬಾ ದುಃಖ ತಂದಿದೆ ಎಂದು ಹೇಳಿದ್ದಾರೆ. ನನಗೆ ಒಂದು ವಿಚಾರ ಪದೇ ಪದೇ ಕಾಡುತ್ತಿದೆ. 2016ರಲ್ಲಿ ನಾನು ಭಾರತ ತೊರೆಯುವ ಮುನ್ನ ಮುಂಬೈನ ಆಲಿವ್‌ನಲ್ಲಿ ಸುಶಾಂತ್ ಅವರನ್ನು ಭೇಟಿ ಮಾಡಿದ್ದೆ. ಉದ್ದನೆಯ ಕೂದಲು ಬಿಟ್ಟು ವಕ್ರವಾಗಿ ಟೊಪ್ಪಿ ಹಾಕಿದ್ದ ಹುಡುಗನನ್ನು ನೋಡಿದ್ದೆ ಎಂದಿದ್ದಾರೆ. ಮುಂದೆ ಓದಿ...

ಭರವಸೆ ಮೂಡಿರಲಿಲ್ಲ

ಭರವಸೆ ಮೂಡಿರಲಿಲ್ಲ

ಆತ ಎಂ.ಎಸ್. ಧೋನಿಯ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ ಎಂದು ಯಾರೋ ನನಗೆ ಹೇಳಿದಾಗ ನನಗೆ ಅವರ ಬಗ್ಗೆ ಅಷ್ಟೇನೂ ವಿಶ್ವಾಸವೇ ಮೂಡಿರಲಿಲ್ಲ. ತಮ್ಮ ತಲೆ ಕೆಳಗೆ ಹಾಕಿಕೊಂಡು ನನ್ನ ಮುಂದೆ ಹೋಗಿದ್ದರು ಎಂದು ಹೇಳಿದ್ದಾರೆ.

ಸಿನಿಮಾ ನೋಡಬೇಕು ಎನಿಸಿತ್ತು

ಸಿನಿಮಾ ನೋಡಬೇಕು ಎನಿಸಿತ್ತು

ಸುಶಾಂತ್ ಅವರನ್ನು ಆ ರೀತಿ ನೋಡಿದಾಗ ಅವರ ನಟನೆಯನ್ನು ನೋಡಬೇಕು ಎಂದು ನನಗೆ ಅನಿಸಿತ್ತು. ಅವರು ಬಹಳ ವಿನಮ್ರ ಹಿನ್ನೆಲೆಯಿಂದ ಬಂದವರು. ಅವರು ಒಳ್ಳೆಯ ಸಿನಿಮಾ ಮಾಡುತ್ತಿದ್ದರು. ಆ ಸಿನಿಮಾ ಯಶಸ್ವಿಯಾಗಿತ್ತು.

ಅನುಭವ ಹಂಚಿಕೊಳ್ಳಬೇಕಿತ್ತು

ಅನುಭವ ಹಂಚಿಕೊಳ್ಳಬೇಕಿತ್ತು

ಆದರೆ ಅಂದು ಅವರನ್ನು ಅಲ್ಲಿ ತಡೆದು ಜೀವನದ ಬಗ್ಗೆ ಮಾತನಾಡಲಿಲ್ಲ ಎಂದು ಈಗ ಪಶ್ಚಾತ್ತಾಪವಾಗುತ್ತಿದೆ. ಅಂದು ಅವರೊಂದಿಗೆ ನನ್ನ ಜೀವನದ ಅನುಭವವನ್ನು ಹಂಚಿಕೊಳ್ಳಬೇಕಿತ್ತು. ಅವರಿಗೆ ಜೀವನದ ವಿಶಾಲ ದೃಷ್ಟಿಕೋನವನ್ನು ನೀಡುವಂತೆ ಅಂದು ನಾನು ಮಾತನಾಡಬಹುದಾಗಿತ್ತೇನೋ. ಆದರೆ ಅವರೊಂದಿಗೆ ಮಾತನಾಡದಿರುವುದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ.

ದೀಪಿಕಾ ರೀತಿ ಮಾತನಾಡಬೇಕು...

ದೀಪಿಕಾ ರೀತಿ ಮಾತನಾಡಬೇಕು...

ನಿಮ್ಮ ಬದುಕನ್ನು ಅಂತ್ಯಗೊಳಿಸುವುದು ಎಂದಿಗೂ ಆಯ್ಕೆಯಾಗಬಾರದು. ಜೀವನದಲ್ಲಿ ಹಿನ್ನಡೆಯೇ ದೊಡ್ಡ ಸಂಪತ್ತು. ಆದರೆ ನಿಮಗೆ ಸಮಸ್ಯೆ ಇದೆ ಎನ್ನುವುದು ಗೊತ್ತಾದಾಗ ಅದರ ಬಗ್ಗೆ ಚರ್ಚೆ ನಡೆಸಬೇಕು. ದೀಪಿಕಾ ಪಡುಕೋಣೆ ತಮ್ಮ ಬ್ರೇಕಪ್ ಬಳಿಕ ಉದ್ವೇಗಕ್ಕೆ ಒಳಗಾಗಿ ಸಹಾಯದ ಅಗತ್ಯ ಬಿದ್ದಾಗ ಅದರಿಂದ ಹೊರಬಂದು ಚರ್ಚಿಸಿದ್ದರು. ಸುಶಾಂತ್ ಅವರಿಗೂ ಸಹಾಯ ಬೇಕಿತ್ತು ಎನಿಸುತ್ತಿದೆ ಎಂದು ಹೇಳಿದ್ದಾರೆ.

More from Filmibeat

English summary
Pakistan cricketer Shoaib Akhtar in a video said, he is regretting for not stopping and having a word about life with Sushant Singh Rajput.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X