Cannes 2023: ಐಶ್ವರ್ಯಾ ರೈ ಟೀಕಿಸಿದ ಲೇಖಕಿ ಶೋಭಾ ಡೇ.. "ಆಕೆ ಗೋಣಿ ಚೀಲವನ್ನೇ ಧರಿಸಲಿ ನಿಮಗೇನು? ಎಂದ ಫ್ಯಾನ್ಸ್!

ಕಾನ್‌ ಫಿಲ್ಮ್ ಫೆಸ್ಟಿವಲ್‌ 2023 ಈ ಬಾರಿನೂ ಅದ್ಧೂರಿಯಾಗಿ ನಡೆಯುತ್ತಿದೆ. ಭಾರತದ ಸೆಲೆಬ್ರೆಟಿಗಳು ವಿಭಿನ್ನ ವಿನ್ಯಾಸದ ಕಾಸ್ಟ್ಯೂಮ್ ಧರಿಸಿ ಕ್ಯಾಮರಾಗೆ ಪೋಸ್ ಕೊಡುತ್ತಿದ್ದಾರೆ. ಕೆಲವರು ಧರಿಸಿದ ವಸ್ತ್ರ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಮತ್ತೆ ಕೆಲವರು ಟ್ರೋಲ್ ಆಗಿದ್ದಾರೆ. ಅದಕ್ಕೆ ಐಶ್ವರ್ಯಾ ರೈ ಬಚ್ಚನ್ ಕೂಡ ಒಬ್ಬರು.

ಬಾಲಿವುಡ್ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಔಟ್‌ಫಿಟ್ ಕಂಡು ಮುಸಿಮುಸಿ ನಕ್ಕಿದ್ದರು. ಇತ್ತ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಅಸಮಧಾನ ಹೊರಹಾಕಿದ್ದರು. ಕಾನ್‌ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಲುಕ್‌ ಕಂಡು 'ವೇಷಭೂಷಣದ ಗುಲಾಮರು' ಎಂದು ಟೀಕಿಸಿದ್ದರು.

ವಿವೇಕ್ ಅಗ್ನಿ ಹೋತ್ರಿ ಹಿಂದೆನೇ ಜನಪ್ರಿಯ ಲೇಖಕಿ ಶೋಭಾ ಡೇ ಕೂಡ ಐಶ್ವರ್ಯಾ ಔಟ್‌ಫಿಟ್ ಅನ್ನು ಟೀಕಿಸಿದ್ದಾರೆ. ಇದೇ ವಿಚಾರವಾಗಿ ಐಶ್ ಅಭಿಮಾನಿಗಳು ತಿರುಗಿಬಿದ್ದಿದ್ದು, ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಅಸಲಿ ಶೋಭಾ ಡೇ ಕಮೆಂಟ್ ಏನು?

Shobhaa De slams Aishwarya Rai Bachchan Cannes 2023 outfit: Fans defend former miss world

ಐಶ್ವರ್ಯಾ ವಿರುದ್ಧ ತಿರುಗಿಬಿದ್ದ ಶೋಭಾ ಡೇ

ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ರೆಡ್ ಕಾರ್ಪೆಟ್ ಲುಕ್ ಕಂಡು ಲೇಖಕಿ ಶೋಭಾ ಡೇ ಟೀಕಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ಐಶ್ವರ್ಯಾ ಧರಿಸಿದ್ದ ಸಿಲ್ವರ್ ಗೌನ್ ಫೋಟೊವನ್ನು ಶೇರ್ ಮಾಡಿ, "ಇದೇನಿದು..? ದಯವಿಟ್ಟು ಯಾರಾದರೂ ಹೇಳುವಿರಾ?" ಎಂದು ಟೀಕಿಸಿದ್ದರು.

ಶೋಭಾ ಡೇ, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಐಶ್ವರ್ಯಾ ರೈ ಬಚ್ಚನ್ ಅಭಿಮಾನಿಗಳು ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಶೋಭಾ ಡೇ ಪೋಸ್ಟ್‌ಗೆ ತಿರುಗೇಟು ನೀಡುತ್ತಿದ್ದಾರೆ. ಈ ಕಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಐಶ್ವರ್ಯಾ ಬೆಂಬಲಕ್ಕೆ ನಿಂತ ಫ್ಯಾನ್ಸ್

ಶೋಭಾ ಡೇ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಇತ್ತ ಅಭಿಮಾನಿಗಳು ತಿರುಗೇಟು ನೀಡುವುದಕ್ಕೆ ರೆಡಿಯಾಗಿದ್ದರು. ಒಬ್ಬರು "ಶೋಭಾಜೀ ಇನ್ನೂ ಐಶ್ವರ್ಯಾ ರೈ ಅವರ ಲುಕ್ಸ್ ಮೇಲೆ ವ್ಯಾಮೋಹ ಬೆಳೆಸಿಕೊಂಡಿದ್ದೀರಾ? ಪ್ರತಿ ವರ್ಷಅವರಿಗೆ ಕಾನ್‌ಗೆ ಆಹ್ವಾನ ನೀಡಲಾಗುತ್ತಿದೆ. ಅದಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಎಂದಿದ್ದಾರೆ.

ಮತ್ತೊಬ್ಬರು " ಮೇಡಂ.. ಅವರು ಐಶ್ವರ್ಯಾ ರೈ ಬಚ್ಚನ್. ಆಕೆ ಗೋಣಿ ಚೀಲವನ್ನೇ ಧರಿಸಿ, ಅದನ್ನು ಡಿಸೈನರ್ ಡ್ರೆಸ್‌ನಂತೆ ಮಾಡಬಹುದು. ವಿಪರ್ಯಾಸ ಏನಂದ್ರೆ, ನೀವು ಬಾಂದ್ರಾ, ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಪೈಜಾಮ ಧರಿಸಿ, ನಿಮ್ಮ ಒಂದು ಕೈಯಲ್ಲಿ ಟೀ ಹಾಗೂ ಇನ್ನೊಂದು ಕೈಯಲ್ಲಿ ಮೊಬೈಲ್‌ ಇಟ್ಕೊಂಡು ಎಲ್ಲವನ್ನು ನಿರ್ಣಯಿಸುತ್ತಿರ" ಎಂದು ಕಮೆಂಟ್ ಮಾಡಿದ್ದಾರೆ.

Shobhaa De slams Aishwarya Rai Bachchan Cannes 2023 outfit: Fans defend former miss world

ಮಗಳೊಂದಿಗೆ ತೆರಳಿದ್ದ ಐಶ್ವರ್ಯಾ ರೈ

ಈ ಬಾರಿ 2023 ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಐಶ್ವರ್ಯಾ ರೈ ಬಚ್ಚನ್ ತಮ್ಮ ಪುತ್ರಿ ಆರಾಧ್ಯ ಜೊತೆ ತೆರಳಿದ್ದರು. 'ಇಂಡಿಯಾನಾ ಜೋನ್ಸ್' ಹಾಗೂ 'ಡಯಲ್ ಆಫ್ ಡೆಸ್ಟಿನಿ' ಸಿನಿಮಾ ಸ್ಕ್ರೀನಿಂಗ್‌ ವೇಳೆ ರೆಡ್ ಕಾರ್ಪೆಟ್‌ನಲ್ಲಿ ವಾಕ್ ಮಾಡಿದರು.

ಈ ವೇಳೆ ಐಶ್ವರ್ಯಾ ರೈ ಬಚ್ಚನ್ ಧರಿಸಿದ್ದ ಸಿಲ್ವರ್ ಗೌನ್ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಐಶ್ವರ್ಯಾ ರೈ ಕಳೆದ ಹಲವು ವರ್ಷಗಳಿಂದ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿದ್ದಾರೆ.

More from Filmibeat

English summary
Shobhaa De slams Aishwarya Rai Bachchan Cannes 2023 outfit: Fans defend former miss world, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X