Stree 2 Box Office Day 7: ಪ್ರಭಾಸ್ 'ಕಲ್ಕಿ 2898 AD'ಯನ್ನೇ ಹಿಂದಿಕ್ಕಿದ 'ಸ್ತ್ರೀ 2'; 7 ದಿನದಲ್ಲಿ ಗಳಿಸಿದ್ದೆಷ್ಟು?
ಒಂದು ಕಡೆ ಕನ್ನಡ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರೆ, ಅತ್ತ ಬಾಲಿವುಡ್‌ನಲ್ಲಿ ಸ್ಮಾಲ್ ಬಜೆಟ್ ಸಿನಿಮಾವೊಂದು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬರೀ ಏಳು ದಿನಗಳಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. ಸೂಪರ್‌ಸ್ಟಾರ್ ಸಿನಿಮಾಗಳಿಗೆ ಹೋಲಿಸಿದರೆ, ಈ ಸಿನಿಮಾದ ಗಳಿಕೆ ದಾಖಲೆ ಅಂತನೇ ಹೇಳಬಹುದು. ಆ ಸಿನಿಮಾವೇ 'ಸ್ತ್ರೀ 2'.
ಈ ಹಿಂದೆ 2018ರಲ್ಲಿ 'ಸ್ತ್ರೀ' ಪಾರ್ಟ್ 1 ರಿಲೀಸ್ ಆಗಿತ್ತು. ಅದೂ ಕೂಡ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆಯನ್ನೇ ಕಂಡಿತ್ತು. ಸುಮಾರು ಆರು ವರ್ಷಗಳ ಬಳಿಕ ಇದೇ ಸಿನಿಮಾದ ಸೀಕ್ವೆಲ್ 'ಸ್ತ್ರೀ 2' ಆಗಸ್ಟ್ 15ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಇಂದಿಗೆ (ಆಗಸ್ಟ್ 21) ಈ ಸಿನಿಮಾ ರಿಲೀಸ್ ಆಗಿ ಏಳು ದಿನಗಳಾಗಿವೆ. ಈ ಏಳು ದಿನಗಳಲ್ಲಿ 'ಸ್ತ್ರೀ 2' ಕಲೆಕ್ಷನ್ ನೋಡಿ ಬಾಲಿವುಡ್ ಮಂದಿನೇ ಬೆಚ್ಚಿ ಬಿದ್ದಿದೆ.

'ಸ್ತ್ರೀ 2' ವೀಕೆಂಡ್‌ನಲ್ಲಿ ಅಷ್ಟೇ ಅಲ್ಲ. ಬದಲಾಗಿ ವೀಕ್‌ಡೇಸ್‌ನಲ್ಲೂ ಅದ್ಧೂರಿ ಕಲೆಕ್ಷನ್ ಮಾಡುತ್ತಿದೆ. ಜನರು ಮುಗಿಬಿದ್ದಿದ್ದು ಈ ಹಾರರ್ ಕಾಮಿಡಿ ಸಿನಿಮಾವನ್ನು ನೋಡುವುದಕ್ಕೆ ಥಿಯೇಟರ್‌ಗೆ ನುಗ್ಗುತ್ತಿದ್ದಾರೆ. ಈಗಾಗಲೇ ಪ್ರಭಾಸ್ ನಟನೆಯ 'ಕಲ್ಕಿ 2898ಎಡಿ' ಸಿನಿಮಾ ಹಿಂದಿ ಅವತರಣೆಯ ಕಲೆಕ್ಷನ್ ಅನ್ನು 'ಸ್ತ್ರೀ 2' ಸಿನಿಮಾ ಹಿಂದಿಕ್ಕಿದೆ ಎನ್ನಲಾಗಿದೆ. ಈ ಏಳು ದಿನಗಳಲ್ಲಿ 'ಸ್ತ್ರೀ 2' ಸಿನಿಮಾ ಕಲೆಕ್ಷನ್ ಹೇಗಿದೆ?
7 ದಿನವೂ ಬಾಕ್ಸಾಫೀಸ್‌ನಲ್ಲಿ ಸದ್ದು
ಸಾಮಾನ್ಯವಾಗಿ ವಾರದ ಆರಂಭದ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಡ್ರಾಪ್ ಆಗುತ್ತೆ. ಆದರೆ, ಬುಧವಾರದಂದೂ (ಆಗಸ್ಟ್ 21) 'ಸ್ತ್ರೀ 2' ಸಿನಿಮಾದ ಕಲೆಕ್ಷನ್ ಅದ್ಭುತವಾಗಿದೆ. ಸಿನಿಮಾ ಟ್ರೇಡ್ ಬಗ್ಗೆ ಮಾಹಿತಿ ನೀಡುವ Sacnilk ಪೊರ್ಟಲ್ ಇಂದಿನ 'ಸ್ತ್ರೀ 2' ಸಿನಿಮಾದ ಅಂದಾಜು ಗಳಿಕೆಯನ್ನು ರಿವೀಲ್ ಮಾಡಿದೆ. ಆ ವರದಿ ಪ್ರಕಾರ, 'ಸ್ತ್ರೀ 2' ಸಿನಿಮಾ ಏಳನೇ ದಿನ 14.2 ಕೋಟಿ ರೂಪಾಯಿ (early report)ಕಲೆಕ್ಷನ್ ಮಾಡಿದೆ.
7 ದಿನಗಳಲ್ಲಿ ಮ್ಯಾಜಿಕ್ ಕಲೆಕ್ಷನ್
ಏಳನೇ ದಿನದ ಕಲೆಕ್ಷನ್ 14.2 ಕೋಟಿ ರೂಪಾಯಿಯನ್ನು ಸೇರಿದರೆ, ಇದೂವರೆಗೂ 'ಸ್ತ್ರೀ 2' ಸಿನಿಮಾ 269.55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಮೊದಲ ವಾರದಲ್ಲಿಯೇ ಇದು ದಾಖಲೆ ಕಲೆಕ್ಷನ್ ಎನ್ನಬಹುದು. ಪ್ರಮುಖ ಪಾತ್ರದಲ್ಲಿ ಶ್ರದ್ಧಾ ಕಪೂರ್ ಹಾಗೂ ರಾಜ್‌ಕುಮಾರ್ ರಾವ್ ನಟಿಸಿದ್ದು, ಅಕ್ಷಯ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ತಾರಾಗಣ ಇಲ್ಲದೇ ಇದ್ದರೂ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗಿದೆ.

'ಕಲ್ಕಿ 2898 ಎಡಿ' ಹಿಂದಿಕ್ಕಿದ 'ಸ್ತ್ರೀ 2'
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ನಟನೆಯ 'ಕಲ್ಕಿ 2898ಎಡಿ' ಸಿನಿಮಾದ ಹಿಂದಿ ವರ್ಷನ್ ಮೊದಲ ವಾರ 162.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 'ಸ್ತ್ರೀ 2' ಆ ರೆಕಾರ್ಡ್ ಅನ್ನು ಬ್ರೇಕ್ ಮಾಡಿದೆ. ಆದರೆ, ಎಲ್ಲಾ ಭಾಷೆಯಿಂದಲೂ ಗಳಿಸಿದ ಕಲ್ಕಿಯ ಗಳಿಕೆಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಮೊದಲ ಏಳು ದಿನಗಳಲ್ಲಿ ತೆಲುಗು ವರ್ಷನ್ 212 ಕೋಟಿ ರೂಪಾಯಿ, ತಮಿಳು 23.1 ಕೋಟಿ ರೂಪಾಯಿ, ಕನ್ನಡ 2.8 ಕೋಟಿ ರೂಪಾಯಿ ಹಾಗೂ ಮಲಯಾಳಂ 14.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎಲ್ಲಾ ಸೇರಿ 414.85 ಕೋಟಿ ರೂಪಾಯಿ ಗಳಿಸಿತ್ತು. ಆದರೆ, 'ಸ್ತ್ರೀ 2' ಈ ದಾಖಲೆಯನ್ನು ಮುರಿಯಲಿಲ್ಲ.
500 ಕೋಟಿ ರೂ. ಟಾರ್ಗೆಟ್
'ಸ್ತ್ರೀ 2' ಸಿನಿಮಾದ ಕ್ರೇಜ್ ಹೀಗೆ ಮುಂದುವರೆದರೆ ಇನ್ನೊಂದು ವಾರದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ 500 ಕೋಟಿ ರೂಪಾಯಿ ದಾಟುವ ಎಲ್ಲಾ ಸಾಧ್ಯತೆನೂ ಇದೆ. ಅಂದ್ಹಾಗೆ ಅಮರ್ ಕೌಶಿಕ್ ನಿರ್ದೇಶಿಸಿರುವ ಈ ಸಿನಿಮಾ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಶ್ರದ್ಧಾ ಕಪೂರ್, ರಾಜ್ ಕುಮಾರ್ ರಾವ್ ಜೊತೆ ಪಂಕಜ್ ತ್ರಿಪಾಠಿ, ಅಪಾರಶಕ್ತಿ ಖುರಾನ ಹಾಗೂ ಅಭಿಷೇಕ್ ಬ್ಯಾನರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications










