10 ನಿಮಿಷ ನಿಂತು ಹೋಗಿದ್ದ ಶ್ರೇಯಸ್ ತಲ್ಪಾಡೆ ಹೃದಯಕ್ಕೆ ಮರು ಜೀವ ಬಂದಿದ್ದೇಕೆ? ನಟ ಹೇಳಿದ್ದೇನು?

ಹಿಂದಿ ಹಾಗೂ ಮರಾಠಿ ಚಿತ್ರರಂಗದ ಜನಪ್ರಿಯರ ನಟ ಶ್ರೇಯಸ್ ತಲ್ಪಾಡೆ. ಇತ್ತೀಚೆಗೆ ಸಿನಿಮಾ ಶೂಟಿಂಗ್ ಮುಗಿಸಿ, ಮನೆಗೆ ತೆರಳಿದ ಬಳಿಕ ದೇಹದಲ್ಲಿ ಆಯಾಸ ಕಾಣಿಸಿಕೊಂಡಿತ್ತು. 47 ವರ್ಷದ ಈ ನಟನಿಗೆ ಮುಂಬೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು.

ನಟ ಶ್ರೇಯಸ್ ತಲ್ಪಾಡೆ ಮಲ್ಟಿಸ್ಟಾರರ್ ಸಿನಿಮಾ 'ವೆಲ್‌ಕಮ್ ಟು ದಿ ಜಂಗಲ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಇದೇ ಸಿನಿಮಾದ ಶೂಟಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದಂತೆ ಅವರ ದೇಹದಲ್ಲಿ ಆಯಾಸ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಧ್ಯದಲ್ಲಿಯೇ ಕುಸಿದು ಬಿದ್ದಿದ್ದರು ಎಂದು ವರದಿಯಾಗಿತ್ತು.

Shreyas Talpade says he was clinicaly dead for 10 mints after Heart Attack

ಈಗ ಶ್ರೇಯಸ್ ತಲ್ಪಾಡೆ ಚೇತರಿಸಿಕೊಳ್ಳುತ್ತಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅಂದು ಆದ ಅನುಭವವನ್ನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ "10 ನಿಮಿಷ ಹೃದಯ ನಿಂತೇ ಹೋಗಿತ್ತು. ಅದಕ್ಕೆ ವೈದ್ಯರು ಹೇಗೆ ಮರು ಜೀವ ನೀಡಿದ್ರು?" ಅನ್ನೋದನ್ನು ಶ್ರೇಯಸ್ ತಲ್ಪಾಡೆ ಹೇಳಿಕೊಂಡಿದ್ದಾರೆ.

ಹೃದಯಾಘಾತಕ್ಕೆ ಒಳಗಾದ ಕೆಲವು ದಿನಗಳ ಬಳಿಕ ಟೈಮ್ಸ್ ಆಫ್ ಇಂಡಿಯಾಗೆ ಶ್ರೇಯಸ್ ತಲ್ಪಾಡೆ ಆ ಘಟನೆಯ ಬಗ್ಗೆ ರಿವೀಲ್ ಮಾಡಿದ್ದಾರೆ. ಹೃದಯಾಘಾತಕ್ಕೆ ಒಳಗಾದ ಬಳಿಕ 'ಕ್ಲಿನಿಕಲಿ ಡೆಡ್' ಆಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಹೃದಯಾಘಾತವಾಗುತ್ತಿದ್ದಂತೆ ಇವರ ಹೃದಯ 10 ನಿಮಿಷಗಳ ಕಾಲ ನಿಂತು ಹೋಗಿತ್ತು ಎಂದು ಹೇಳಿಕೊಂಡಿದ್ದಾರೆ.

Shreyas Talpade says he was clinicaly dead for 10 mints after Heart Attack

ತಾವು ಈ ಹಿಂದೆ ಎಂದಿಗೂ ಆಸ್ಪತ್ರೆಯಲ್ಲಿ ಅನಾರೋಗ್ಯದ ಸಂಬಂಧ ದಾಖಲಾಗಿರಲಿಲ್ಲ. ಆದರೆ, ತಮ್ಮ ಕುಟುಂಬದಲ್ಲಿ ಹೃದಯ ಸಂಬಂಧಿ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದಾರೆ. "ಕ್ಲಿನಿಕಲಿ ನಾನು ಡೆತ್ ಆಗಿತ್ತು. ನನಗೆ ತೀವ್ರ ಹೃದಯಾಘಾತವಾಗಿತ್ತು. ಇದು ನನ್ನ ಬದುಕಿಗೆ ಸಿಕ್ಕಿರೋ ಎರಡನೇ ಚಾನ್ಸ್" ಎಂದು ಶ್ರೇಯಸ್ ತಲ್ಪಾಡೆ ಹೇಳಿದ್ದಾರೆ.

ಶ್ರೇಯಸ್ ತಲ್ಪಾಡೆಗೆ ಡಿಸೆಂಬರ್ 14ರಂದು ಹೃದಯಾಘಾತ ಸಂಭವಿಸಿದ್ದಾಗ, ಅವರ ಪತ್ನಿ ದೀಪ್ತಿ ಹೇಗೆ ಆಸ್ಪತ್ರೆಗೆ ಸೇರಿಸಿದ್ರು ಅನ್ನೋ ಸಂಗತಿಯನ್ನು ಹಂಚಿಕೊಂಡಿದ್ದಾರೆ. " ಸಿನಿಮಾ ಶೂಟಿಂಗ್ ಮುಗಿಸಿದ ಬಳಿಕ ನನಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ನನ್ನ ಎಡಗೈನಲ್ಲಿ ನೋವು ಕಾಣಿಸಿಕೊಂಡಿತ್ತು. ನನಗೆ ನನ್ನ ವ್ಯಾನಿಟಿ ವ್ಯಾನ ಬಳಿ ಹೋಗುವುದಕ್ಕೂ ಕಷ್ಟ ಆಗಿತ್ತು. ನಾನು ಇದು ಸ್ನಾಯು ಸೆಳೆತ ಇರಬಹುದು ಎಂದು ಕೊಂಡಿದ್ದೆ. ಆ ವೇಳೆ ನಾವು ಆಕ್ಷನ್ ಸೀಕ್ವೆನ್ಸ್ ಅನ್ನು ಶೂಟಿಂಗ್ ಮಾಡುತ್ತಿದ್ದೆವು." ಎಂದು ಶ್ರೇಯಸ್ ಆ ದಿನದ ಘಟನೆಯನ್ನು ವಿವರಿಸಿದ್ದಾರೆ.

"ಕಾರಿನಲ್ಲಿ ಕೂರುತ್ತಿದ್ದಂತೆ ನಾನು ನೇರವಾಗಿ ಆಸ್ಪತ್ರೆಗೆ ಹೋಗಬೇಕು ಅನಿಸಿತ್ತು. ಆದರೆ, ನಾನು ಮೊದಲು ಮನೆಗೆ ಹೋಗೋಣ ಅಂದುಕೊಂಡೆ. ನನ್ನನ್ನು ಆಸ್ಥಿತಿಯಲ್ಲಿ ನೋಡುತ್ತಿದ್ದಂತೆ ನನ್ನ ಪತ್ನಿ ಹತ್ತೇ ನಿಮಿಷದಲ್ಲಿ ಆಸ್ಪತ್ರೆಗೆ ಕಡೆಗೆ ಹೊರಟೆವು. ಆಸ್ಪತ್ರೆಗೆ ಗೇಟ್ ಕಾಣಿಸುತ್ತಿತ್ತು. ಆದರೆ, ಯೂಟರ್ನ್ ಹಾಕಿ ಬರಬೇಕಿತ್ತು. ಅಷ್ಟರಲ್ಲೇ ನನ್ನ ಮುಖವು ನಿಶಕ್ತಿ ಕಾಣಿಸಿಕೊಂಡಿತ್ತು. ನಾನು ಪ್ರಜ್ಞೆ ತಪ್ಪಿದೆ." ಎಂದು ಶ್ರೇಯಸ್ ತಲ್ಪಾಡೆ ಹೇಳಿದ್ದಾರೆ.

More from Filmibeat

English summary
Shreyas Talpade says he was clinicly dead during heart attack
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X