'ದೇವರು ನನ್ನ ಬ್ರಾ ಸೈಜ್‌ನ ಅಳತೆ ತೆಗೆದುಕೊಳ್ಳುತ್ತಿದ್ದಾನೆ' ಎಂದು ಶ್ವೇತಾ ತಿವಾರಿ: ಗರಂ ಆದ ಮಿನಿಸ್ಟರ್

ಬಾಲಿವುಡ್ ನಟಿ ಹಾಗೂ ಕಿರುತೆರೆ ನಟಿ ಶ್ವೇತಾ ತಿವಾರಿ ಬೇಡವಾದ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದಾರೆ. ಏಕ್ತಾ ಕಪೂರ್ ನಿರ್ಮಿಸಿದ್ದ 'ಕಸೌತಿ ಜಿಂದಗಿ ಕಿ' ಧಾರಾವಾಹಿಯ ಮೂಲಕ ಜನಪ್ರಿಯರಾಗಿರುವ ಶ್ವೇತಾ ತಿವಾರಿ ವೆಬ್ ಸಿರೀಸ್ ಒಂದರಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸಿರೀಸ್ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟು ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶ್ವೇತಾ ತಿವಾರಿ ನಟಿಸಿದ ಹೊಸ ವೆಬ್ ಸಿರೀಸ್ ಪ್ರಚಾರಕ್ಕೆ ಮಧ್ಯಪ್ರದೇಶದ ಭೋಪಾಲ್‌ಗೆ ತೆರಳಿದ್ದರು. ಈ ವೇಳೆ ಮಾಧ್ಯಮದವರ ಪ್ರಶ್ನಗೆ ಉತ್ತರಿಸುವ ಭರಾಟೆಯಲ್ಲಿ ಶ್ವೇತಾ ತಿವಾರಿ ತನ್ನ ಒಳ ಉಡುಪಿನ ಬಗ್ಗೆ ಮಾತಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕೆಂಡಾಮಂಡಲವಾಗಿದ್ದಾರೆ. ಅಷ್ಟಕ್ಕೂ ಶ್ವೇತಾ ತಿವಾರಿ ಕೊಟ್ಟ ಹೇಳಿಕೆ ಟೀಕೆಗೆ ಒಳಗಾಗುತ್ತಿರುವುದೇಕೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ...

ಶ್ವೇತಾ ತಿವಾರಿ ವಿವಾದಾತ್ಮಕ 'ಬ್ರಾ' ಹೇಳಿಕೆ

ಶ್ವೇತಾ ತಿವಾರಿ ವಿವಾದಾತ್ಮಕ 'ಬ್ರಾ' ಹೇಳಿಕೆ

ಕಿರುತೆರೆ ಹಾಗೂ ಬಾಲಿವುಡ್ ನಟಿ ಶ್ವೇತಾ ತಿವಾರಿ ಹೊಸ ವೆಬ್ ಸಿರೀಸ್ 'ಶೋ ಸ್ಟಾಪರ್' ನಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸಿರೀಸ್ ಪ್ರಚಾರಕ್ಕೆ ಇಡೀ ತಂಡ ಮಧ್ಯಪ್ರದೇಶದ ಭೋಪಾಲ್‌ಗೆ ಭೇಟಿ ನೀಡಿತ್ತು. ಈ ವೇಳೆ ಶ್ವೇತಾ ತಿವಾರಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುವ ಭರಾಟೆಯಲ್ಲಿ "ಆ ದೇವರು ನನ್ನ ಬ್ರಾ ಸೈಜ್‌ನ ಅಳತೆ ತೆಗೆದುಕೊಳ್ಳುತ್ತಿದ್ದಾನೆ." ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಶ್ವೇತಾ ತಿವಾರಿ ವಿರುದ್ಧ ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ್ ಮಿಶ್ರಾ ತಿರುಗಿಬಿದ್ದಿದ್ದಾರೆ.

ದೇವರು ಹಾಗೂ ಬ್ರಾ ಬಗ್ಗೆ ಹೇಳಿಕೆ ನೀಡಿದ್ದೇಕೆ?

ದೇವರು ಹಾಗೂ ಬ್ರಾ ಬಗ್ಗೆ ಹೇಳಿಕೆ ನೀಡಿದ್ದೇಕೆ?

'ಶೋ ಸ್ಟಾಪರ್' ವೆಬ್ ಸಿರೀಸ್‌ನಲ್ಲಿ 'ಮಹಾಭಾರತ' ಸರಣಿಯಲ್ಲಿ ಶ್ರೀ ಕೃಷ್ಣನ ಪಾತ್ರದಲ್ಲಿ ನಟಿಸಿದ ಸೌರಭ್ ಜೈನ್ ಕೂಡ ನಟಿಸುತ್ತಿದ್ದಾರೆ. ಪೌರಾಣಿಕ ಪಾತ್ರ ಮಾಡಿದ್ದ ಸೌರಭ್ ಈ ಸಿರೀಸ್‌ನಲ್ಲಿ ಬ್ರಾ ಫಿಟ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಪಾತ್ರವನ್ನು ವಿವರಿಸುವ ವೇಳೆ ಶ್ವೇತಾ ತಿವಾರಿ ತಮಾಷೆಯಾಗಿ 'ದೇವರು ನನ್ನ ಬ್ರಾ ಸೈಜ್‌ನ ಅಳತೆಯನ್ನು ತೆಗೆದುಕೊಳ್ಳುತ್ತಿದ್ದಾನೆ.' ಎಂದು ಹೇಳಿದ್ದರು. ಇದು ಶ್ರೀಕೃಷ್ಣನಾಗಿದ್ದ ಸೌರಭ್ ತಿವಾರಿ ಬ್ರಾ ಫಿಟ್ಟರ್ ಪಾತ್ರ ಮಾಡುತ್ತಿರುವುದರಿಂದ ಈ ಹೇಳಿಕೆ ನೀಡಿದ್ದರು. ಇದೇ ಈಗ ವಿವಾದಕ್ಕೀಡಾಗಿದೆ.

ಮಧ್ಯಪ್ರದೇಶದ ಗೃಹ ಮಂತ್ರಿ ಸಿಟ್ಟಾಗಿದ್ದೇಕೆ ಏಕೆ?

ಮಧ್ಯಪ್ರದೇಶದ ಗೃಹ ಮಂತ್ರಿ ಸಿಟ್ಟಾಗಿದ್ದೇಕೆ ಏಕೆ?

ಶ್ವೇತಾ ತಿವಾರಿ ಹೇಳಿಕೆ ಮಧ್ಯಪ್ರದೇಶದ ಗೃಹ ಮಂತ್ರಿ ನರೋತ್ತಮ್ ಮಿಶ್ರಾ ಸಿಟ್ಟಿಗೆ ಕಾರಣವಾಗಿದೆ. ನರೋತ್ತಮ್ ಮಿಶ್ರಾ ಅವರು ಭೋಪಾಲ್ ಪೊಲೀಸ್ ಆಯುಕ್ತರಿಗೆ 24 ಗಂಟೆಯೊಳಗೆ ಈ ವಿಚಾರವಾಗಿ ಸಂಪೂರ್ಣ ವರದಿ ನೀಡುವಂತೆ ತಿಳಿಸಿದ್ದಾರೆ. "ನಾನು ಶ್ವೇತಾ ತಿವಾರಿ ಅವರ ಹೇಳಿಕೆಯನ್ನು ಕೇಳಿದ್ದೇನೆ. ಶ್ವೇತಾ ತಿವಾರಿ ಯಾವ ಆಧಾರದ ಮೇಲೆ ಈ ಹೇಳಿಕೆ ನೀಡಿದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತೆ. ನಾನು ಭೋಪಾಲ್ ಪೊಲೀಸ್ ಕಮಿಷನರ್ ಅವರಿಗೆ ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದೇನೆ." ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

'ಶೋ ಸ್ಪಾಪರ್' ಕತೆಯೇನು?

'ಶೋ ಸ್ಪಾಪರ್' ಕತೆಯೇನು?

ಇಷ್ಟು ಕಿರುತೆರೆಯಲ್ಲಿ ನಟಿಸುತ್ತಿದ್ದ ಶ್ವೇತಾ ತಿವಾರಿ ಈಗ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ನಟಿಸಿರುವ ಶ್ವೇತಾ ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಳ್ಳಿದ್ದಾರೆ. 'ಶೋ ಸ್ಟಾಪರ್' ಫ್ಯಾಷನ್ ಇಂಡಸ್ಟ್ರಿಗೆ ಸಂಬಂಧಿಸಿದ ವೆಬ್ ಸೀರಿಸ್. ಶ್ವೇತಾ ತಿವಾರಿ ಜೊತೆ ಸೌರಭ್ ರಾಜ್ ಜೈನ್ ಮತ್ತು ರೋಹಿತ್ ರಾಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಚಿತ್ರೀಕರಣ ಮಾಡಿರುವುದರಿಂದ ಅಲ್ಲೇ ಪ್ರಚಾರ ಮಾಡಲು ತಂಡ ನಿರ್ಧರಿಸಿತ್ತು.

More from Filmibeat

English summary
Bollywood actress Shweta Tiwari says god is taking size of my bra this statement leads in controversy. Shweta Tiwari made the statement in Bhopal during the promotion of her web series 'Show Stopper'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X