ರಾಜಮೌಳಿ,ಮಣಿರತ್ನಂ,ಬನ್ಸಾಲಿನೂ ಅಲ್ಲ: ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ನಿರ್ದೇಶಕ ಯಾರು?

ಒಂದು ಸಿನಿಮಾ ಅಂದ್ಮೇಲೆ ನಿರ್ದೇಶಕ ಇರಲೇ ಬೇಕು. ಈತ ಇಡೀ ಪ್ರಾಜೆಕ್ಟ್‌ನ ಸೂತ್ರಧಾರ. ಆ ಸಿನಿಮಾ ಹಿಟ್ ಆದರೂ, ಸೋತರೂ ಹೀರೊಗೆ ಹೇಗೆ ಕ್ರೆಡಿಟ್ ಹೋಗುತ್ತೋ ಹಾಗೇ ನಿರ್ದೇಶಕನೂ ಹೋಗುತ್ತೆ.

ಭಾರತದಲ್ಲಿ ಜಗತ್ತೇ ಮೆಚ್ಚಿದ ನಿರ್ದೇಶಕರಿದ್ದಾರೆ. ಕಾಮಿಡಿ, ಸಸ್ಪೆನ್ಸ್, ಫ್ಯಾಂಟಿಸಿ, ಐತಿಹಾಸಿಕ, ಪೌರಾಣಿಕ ಹೀಗೆ ಬಗೆ ಬಗೆಯ ಕಥೆಯನ್ನು ತೆರೆಮೇಲೆ ತರುವ ನಿರ್ದೇಶಕರಿದ್ದಾರೆ. ಇತ್ತೀಚೆಗೆ ರಾಜಮೌಳಿ, ಮಣಿರತ್ನಂ, ರಾಜ್ ಕುಮಾರ್ ಹಿರಾನಿ, ರೋಹಿತ್ ಶೆಟ್ಟಿ ಹೆಸರುಗಳು ಚಾಲ್ತಿಯಲ್ಲಿವೆ.

Siddharth Anand is highest paid director not Rajamouli,Bhansali, Rajkumar Hirani

'RRR' ಸಿನಿಮಾ ಬಳಿಕವಂತೂ ರಾಜಮೌಳಿ ಗ್ಲೋಬಲ್ ಲೆವೆಲ್‌ನಲ್ಲೂ ಫೇಮಸ್ ಆಗಿದ್ದಾರೆ. ಆದರೂ, ಅತೀ ಹೆಚ್ಚು ಸಂಭಾವನೆ ಪಡೆಯೋ ನಿರ್ದೇಶಕರ ಇವರಲ್ಲ. ಸೋಲೇ ಕಾರಣದ ನಿರ್ದೇಶಕ ರಾಜ್‌ಕುಮಾರ್ ಹಿರಾನಿನೂ ಅಲ್ಲ. ಕ್ಲಾಸಿಕ್ ಸಿನಿಮಾಗಳ ನಿರ್ದೇಶಕ ಮಣಿರತ್ನಂ ಕೂಡ ಅಲ್ಲ. ಆಕ್ಷನ್ ಡೈರೆಕ್ಟರ್ ರೋಹಿತ್ ಶೆಟ್ಟಿನೂ ಅಲ್ಲ. ಹಾಗಿದ್ರೆ ಮತ್ಯಾರು?

ಇವರು ಯಾರೂ ಅಲ್ಲ

ಭಾರತದಲ್ಲಿ ಒಂದು ವರ್ಷಕ್ಕೆ ಸಾವಿರಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗುತ್ತವೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಅತೀ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತವೆ. ಈ ಎಲ್ಲಾ ಭಾಷೆಯಲ್ಲೂ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕರಿದ್ದಾರೆ.

Siddharth Anand is highest paid director not Rajamouli,Bhansali, Rajkumar Hirani

ರಾಜ್‌ಮೌಳಿ, ರೋಹಿತ್ ಶೆಟ್ಟಿ, ಆನಂದ್ ಎಲ್ ರೈ, ಸಂಜಯ್ ಲೀಲಾ ಬನ್ಸಾಲಿ, ಪ್ರಶಾಂತ್ ನೀಲ್, ಲೋಕೇಶ್ ಕನಗರಾಜ್ ಅಂತ ನಿರ್ದೇಶಕರು ಮೆಗಾ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೂ, ಇವರಿಗಿಂತಲೂ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕನಿದ್ದಾನೆ. ಆತನ ವಯಸ್ಸು ಕೇವಲ 44 ವರ್ಷ.

ಆ ನಿರ್ದೇಶಕ ಯಾರು?

ಭಾರತೀಯ ಚಿತ್ರರಂಗದ ದಿಗ್ಗಜರನ್ನೆಲ್ಲಾ ಹಿಂದಿಕ್ಕಿರೋ ಆ ನಿರ್ದೇಶಕ ಮತ್ಯಾರೂ ಅಲ್ಲ ಸಿದ್ಧಾರ್ಥ್ ಆನಂದ್. ಇತ್ತೀಚೆಗೆ ಬಾಲಿವುಡ್‌ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದ್ದ 'ಪಠಾಣ್' ಸಿನಿಮಾದ ನಿರ್ದೇಶಕ. ಶಾರುಖ್ ಖಾನ್‌ಗೆ ಮರುಜೀವ ಕೊಟ್ಟ ನಿರ್ದೇಶಕ. ಇದೇ ಸಿದ್ಧಾರ್ಥ್ ಆನಂದ್ ತಮ್ಮ ಮುಂದಿನ ಸಿನಿಮಾ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.

ಇದೂವರೆಗೂ ಸಿದ್ಧಾರ್ಥ್ ಆನಂದ್ ಸುಮಾರು 7 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ಸಲಾಂ ನಮಸ್ತೆ', 'ತ ರ ರಂ ಪಂ','ಬಚ್ನಾ ಏ ಹಸಿನೋ', ಅಂಜಾನಾ ಅಂಜಾನಿ, 'ಬ್ಯಾಂಗ್ ಬ್ಯಾಂಗ್', 'ವಾರ್' ಹಾಗೂ 'ಪಠಾಣ್'. ಇವುಗಳಲ್ಲಿ ಎರಡು ಸಿನಿಮಾಗಳು ಮೆಗಾ ಬ್ಲಾಕ್‌ಬಸ್ಟರ್ ಆಗಿದೆ. ಅದಕ್ಕೆ ನಿರ್ದೇಶಕನಿಗೆ ಬೇಡಿಕೆ ಹೆಚ್ಚಾಗಿದೆ.

ಸಿದ್ಧಾರ್ಥ್ ಆನಂದ್ ಸಂಭಾವನೆ ಎಷ್ಟು?

'ಪಠಾಣ್' ಬಳಿಕ ಸಿದ್ಧಾರ್ಥ್ ಆನಂದ್ 'ಟೈಗರ್ Vs ಪಠಾಣ್' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಬರೊಬ್ಬರಿ 40 ಕೋಟಿ ರೂ. ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ. ಇಲ್ಲಿವರೆಗೂ ಅತೀ ಹೆಚ್ಚು ಸಂಭಾವನೆ ಪಡೆದ ನಿರ್ದೇಶಕ ಎಂದು ವರದಿಯಾಗಿದೆ. ಅಲ್ಲದೆ ಬಾಲಿವುಡ್‌ನಲ್ಲಿ ಹೆಚ್ಚು ಸಂಭಾವನೆ ಪಡೆದಿದ್ದ 'ಬ್ರಹ್ಮಾಸ್ತ್ರ' ನಿರ್ದೇಶಕ ಆಯನ್ ಮುಖರ್ಜಿಯನ್ನು ಹಿಂದಿಕ್ಕಿದ್ದಾರೆ.

ಮೂಲಗಳ ಪ್ರಕಾರ, ಸಿದ್ಧಾರ್ಥ್ ಆನಂದ್, 'ಬಾಹುಬಲಿ' ನಿರ್ದೇಶಕ ಎಸ್‌ ಎಸ್ ರಾಜಮೌಳಿ, ಮಣಿರತ್ನಂ, ಸಂಜಯ್ ಲೀಲಾ ಬನ್ಸಾಲಿ ಅಂತಹ ನಿರ್ದೇಶಕರ ಸಂಭಾವನೆಯನ್ನು ಹಿಂದಿಕ್ಕಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Siddharth Anand is highest paid director not Rajamouli,Bhansali, Rajkumar Hirani or Rohit Shetty, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X