Holi 2023: ಮದುವೆ ಬಳಿಕ ಮೊದಲ ಬಾರಿ ಹೋಳಿ ಹಬ್ಬ ಆಚರಿಸುತ್ತಿರುವ ಬಾಲಿವುಡ್ ಜೋಡಿ ಇವರೇ
ಬಾಲಿವುಡ್ ಮಂದಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಸಂಭ್ರಮಿಸುತ್ತಾರೆ. ಬಣ್ಣಗಳ ಹಬ್ಬ ಉತ್ತರ ಭಾರತದಲ್ಲಿ ಪವಿತ್ರ ಹಬ್ಬ ಅಷ್ಟೇ. ಇದರೊಂದಿಗೆ ಬಾಲಿವುಡ್ ಮಂದಿಗೆ ಹೋಳಿ ಪಾರ್ಟಿ ಅಂತಲೇ ಸೆಲೆಬ್ರೆಟ್ ಮಾಡುತ್ತಾರೆ. ಬಾಲಿವುಡ್ ಮಂದಿಯ ಪ್ರತಿಯೊಬ್ಬರ ಮನೆಗಳಲ್ಲೂ ಈ ಬಣ್ಣಗಳ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ. ಇವರಲ್ಲಿ ಕೆಲವರಿಗೆ ಈ ಬಾರಿಯ ಹೋಳಿ ಹಬ್ಬ ತುಂಬಾನೇ ಸ್ಪೆಷಲ್.
2023ರ ಹೋಳಿ ಹಬ್ಬ ಬಾಲಿವುಡ್‌ನಲ್ಲಿ ಕೆಲವು ಜೋಡಿ ಹಕ್ಕಿಗಳಿಗೆ ಸ್ಪೆಷಲ್. ಯಾಕಂದ್ರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಒಟ್ಟಿಗೆ ಹೋಳಿ ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಪತಿ-ಪತ್ನಿಯಾಗಿ ಇದೇ ಮೊದಲ ಬಾರಿಗೆ ಹೋಳಿ ಆಚರಿಸಿಕೊಳ್ಳುತ್ತಿರುವ ಜೋಡಿಗಳ ಪಟ್ಟಿ ಇಲ್ಲಿದೆ.

ಕಿಯಾರಾ ಅಡ್ವಾನಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ
ಬಣ್ಣಗಳ ಹಬ್ಬ ಹೋಳಿ ಬಂದೇ ಬಿಟ್ಟಿದೆ. ಇದು ಈ ಬಾರಿ ಬಾಲಿವುಡ್‌ನ ಕೆಲವು ಜೋಡಿಗಳಿಗೆ ನೆನಪಿನಲ್ಲಿ ಉಳಿಯುವಂತಹ ಹಬ್ಬ. ಅದರಲ್ಲಿ ಮೊದಲನೇ ಸಾಲಿನಲ್ಲಿ ಇರೋರು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಕಿಯಾರಾ ಅಡ್ವಾಣಿ. ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಈ ಜೋಡಿ ಒಟ್ಟಿಗೆ ಮೊದಲ ಹೋಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಹೀಗಾಗಿ 2023ರ ಹೋಳಿ ಹಬ್ಬ ಸಿದ್ಧಾರ್ಥ್ ಹಾಗೂ ಕಿಯಾರಾಗೆ ಸ್ಪೆಷಲ್.
ಅಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್‌ಗೂ ಹೋಳಿ ಹಬ್ಬ ತುಂಬಾನೇ ಸ್ಪೆಷಲ್. ಕಳೆದ ವರ್ಷ ಏಪ್ರಿಲ್ 14ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಇವರಿಗೂ ಈ ಬಾರಿಯ ಹೋಳಿ ಹಬ್ಬ ಸ್ಪೆಷಲ್. ಅಲ್ಲದೆ ಮಗಳು ರಾಹಾ ಈ ಸೆಲೆಬ್ರೆಟಿ ಜೋಡಿಯ ಮೊದಲ ಹೋಳಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮರುಗು ನೀಡಿದ್ದಾಳೆ. ಹೀಗಾಗಿ ಮಗಳೊಂದಿಗೆ ಹೋಳಿ ಹಬ್ಬದ ಆಚರಣೆಯ ಕ್ಷಣಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಸಾಧ್ಯತೆಯಿದೆ.

ಹನ್ಸಿಕಾ ಮತ್ತು ಸೊಹೇಲ್ ಕತುರಿಯಾ
ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಕೂಡ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸೊಹೇಲ್ ಕತುರಿಯಾರನ್ನು ಮದುವೆ ಆಗಿದ್ದರು. ಈ ಜೋಡಿಗೂ ಕೂಡ ಈ ಬಾರಿಯ ಹೋಳಿ ಹಬ್ಬ ಸ್ಪೆಷಲ್. ಹೀಗಾಗಿ ಹೋಳಿಯನ್ನು ಅದ್ಧೂರಿಯಾಗಿ ಸೆಲೆಬ್ರೆಟ್ ಮಾಡುತ್ತಿದ್ದೆ ಈ ಜೋಡಿ.
ರಿಚಾ ಚಡ್ಡಾ ಮತ್ತು ಅಲಿ ಫಜಲ್
ಬಾಲಿವುಡ್‌ನ ಬೋಲ್ಡ್ ನಟಿ ರಿಚಾ ಚಡ್ಡಾ ಹಾಗೂ ಅಲಿ ಫಜಲ್ ಇಬ್ಬರೂ ಕಳೆದ ವರ್ಷ ಅಕ್ಟೋಬರ್ 04ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ವರ್ಷ ಲವ್ ಬರ್ಡ್ಸ್ ಆಗಿದ್ದವರು ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಗೂ ಈ ಬಾರಿಯ ಹೋಳಿ ಹಬ್ಬ ಮೊದನೆಯದು. ಹೀಗಾಗಿ ಈ ಎಲ್ಲಾ ಜೋಡಿ ಅದ್ಧೂರಿಯಾಗಿ ಹೋಳಿಯನ್ನು ಆಚರಣೆ ಮಾಡಲಿದೆ.


Click it and Unblock the Notifications











