For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್: ಮತ್ತೆ ಟ್ರೋಲಿಗರಿಗೆ ಆಹಾರ

  |

  ಲಂಡನ್‌ನಿಂದ ಕೊರೊನಾ ವೈರಸ್ ಹೊತ್ತು ತರುವ ಮೂಲಕ ಸಂಸತ್‌ನಲ್ಲಿಯೂ ಕಳವಳ ಹುಟ್ಟಿಸಿದ್ದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊನೆಗೂ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅವರ ಕೊನೆಯ ಆರೋಗ್ಯ ತಪಾಸಣೆಯ ವರದಿಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಎಂದು ದೃಢಪಟ್ಟಿರುವುದರಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

  ನಮಗೂ ಕೂಡ ಭಯವಾಗಿದೆ ಎಂದ ಸಲ್ಮಾನ್ ಖಾನ್ | Salman Khan | Filmibeat Kannada

  ಲಂಡನ್‌ನಿಂದ ಲಕ್ನೋದ ನಿವಾಸಕ್ಕೆ ಮರಳಿ ಬಂದಿದ್ದ ಕನಿಕಾ ಕಪೂರ್, ಕೊರೊನಾ ವೈರಸ್ ಕುರಿತಾದ ಸರ್ಕಾರದ ಎಚ್ಚರಿಕೆಗಳ ನಡುವೆಯೂ ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಇದರಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಅವರ ಮಗ ಮತ್ತು ಸಂಸದ ದುಷ್ಯಂತ್ ಸೇರಿದಂತೆ ಸುಮಾರು 400 ಮಂದಿ ಪಾಲ್ಗೊಳ್ಳುವ ಮೂಲಕ ಕನಿಕಾ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಇದರಿಂದಾಗಿ ಸಂಸತ್‌ಗೂ ಕೊರೊನಾ ವೈರಸ್ ಭೀತಿ ತಗುಲಿತ್ತು. ಆದರೆ ಅದೃಷ್ಟವಶಾತ್ ಎಲ್ಲರ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಈ ನಡುವೆ ಕನಿಕಾ ಚಿಕಿತ್ಸೆಗೆ ಸ್ಪಂದಿಸದೆ ಇರುವುದು ಕಳವಳ ಮೂಡಿಸಿತ್ತು. ಮುಂದೆ ಓದಿ...

  ಕೊನೆಗೂ ವರದಿಯಲ್ಲಿ ನೆಗೆಟಿವ್

  ಕೊನೆಗೂ ವರದಿಯಲ್ಲಿ ನೆಗೆಟಿವ್

  ಕನಿಕಾ ಕಪೂರ್ ಅವರ ಸತತ ಐದು ವೈದ್ಯಕೀಯ ಪರೀಕ್ಷೆಗಳಲ್ಲಿಯೂ ಪಾಸಿಟಿವ್ ಬಂದಿತ್ತು. ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಆಗಾಗ್ಗೆ ಕೊರೊನಾ ವೈರಸ್ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅದರಲ್ಲಿ ಸತತ ಎರಡು ಬಾರಿ ನೆಗೆಟಿವ್ ಬಂದರೆ ಮಾತ್ರ ಅವರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ತೀರ್ಮಾನಿಸಲಾಗುತ್ತದೆ. ಆರನೇ ಹಾಗೂ ಕೊನೆಯ ತಪಾಸಣೆಗಳಲ್ಲಿ ಕನಿಕಾ ಅವರ ವರದಿ ನೆಗೆಟಿವ್ ಬಂದಿದೆ.

  ಆರನೇ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಆದ ಗಾಯಕಿ ಕನಿಕಾ ಕಪೂರ್ಆರನೇ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಆದ ಗಾಯಕಿ ಕನಿಕಾ ಕಪೂರ್

  18 ದಿನಗಳ ಬಳಿಕ ಕನಿಕಾ ಬಿಡುಗಡೆ

  18 ದಿನಗಳ ಬಳಿಕ ಕನಿಕಾ ಬಿಡುಗಡೆ

  ಉತ್ತರ ಪ್ರದೇಶದ ಲಕ್ನೋದಲ್ಲಿನ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನಿಕಾ ಕಪೂರ್ ಅವರ ವೈದ್ಯಕೀಯ ವರದಿಯಲ್ಲಿ ಎರಡು ಬಾರಿ ನೆಗೆಟಿವ್ ಬಂದಿದ್ದರಿಂದ ಬಿಡುಗಡೆ ಮಾಡಲಾಗಿದೆ. 18 ದಿನಗಳ ಬಳಿಕ ಕನಿಕಾ ಬಿಡುಗಡೆಯಾಗಿದ್ದಾರೆ.

  ಕನಿಕಾ ವಿರುದ್ಧ ಕ್ರಮ ಸಾಧ್ಯತೆ

  ಕನಿಕಾ ಕಪೂರ್ ಅವರು ನಿರ್ಲಕ್ಷ್ಯ ವಹಿಸಿ ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಹಾಗೂ ಅಧಿಕಾರಿಗಳಿಗೆ ಅಸಹಕಾರ ತೋರಿಸಿದ್ದರೆಂದು ಲಕ್ನೋದ ಮುಖ್ಯ ಆರೋಗ್ಯಾಧಿಕಾರಿ ನೀಡಿದ್ದ ದೂರಿನ ಅನ್ವಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಕನಿಕಾ ಈಗ ಬಿಡುಗಡೆಯಾಗಿರುವುದರಿಂದ ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

  ನೀವಿಲ್ಲಿ ಪೇಷೆಂಟ್ ಅಷ್ಟೇ, ಸ್ಟಾರ್ ಥರ ವರ್ತಿಸಬೇಡಿ: ಗಾಯಕಿಗೆ ವೈದ್ಯರಿಂದ ಕ್ಲಾಸ್ನೀವಿಲ್ಲಿ ಪೇಷೆಂಟ್ ಅಷ್ಟೇ, ಸ್ಟಾರ್ ಥರ ವರ್ತಿಸಬೇಡಿ: ಗಾಯಕಿಗೆ ವೈದ್ಯರಿಂದ ಕ್ಲಾಸ್

  ವೈದ್ಯರಿಂದ ತರಾಟೆಗೆ ಒಳಗಾಗಿದ್ದ ಕನಿಕಾ

  ವೈದ್ಯರಿಂದ ತರಾಟೆಗೆ ಒಳಗಾಗಿದ್ದ ಕನಿಕಾ

  ಆಸ್ಪತ್ರೆ ಸೇರಿದ ಬಳಿಕವೂ ಕನಿಕಾ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಆಸ್ಪತ್ರೆ ಸ್ವಚ್ಛವಿಲ್ಲ ಎಂಬ ಕಿರಿಕ್ ಮಾಡಿದ್ದರು. ಇದಕ್ಕೆ ನೀವು ಸ್ಟಾರ್ ಥರ ವರ್ತಿಸಬೇಡಿ. ರೋಗಿ ತರಹವೇ ಇರಿ ಎಂದು ವೈದ್ಯರು ಖಡಕ್ ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಅವರು ತಮ್ಮ ಎಲ್ಲ ಹಳೆಯ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಂನಿಂದ ತೆಗೆದುಹಾಕಿದ್ದರು.

  ಟ್ರೋಲಿಗರಿಗೆ ಆಹಾರವಾದ ಕನಿಕಾ

  ಕನಿಕಾ ಬಿಡುಗಡೆಯಾಗುತ್ತಿದ್ದಂತೆಯೇ ನೆಟಿಜನ್‌ಗಳು ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಮತ್ತೆ ಯಾವಾಗ ಪಾರ್ಟಿ ಮಾಡುತ್ತೀರಿ ಎಂದು ಕೆಣಕಿದ್ದಾರೆ. 'ಕನಿಕಾ ದೇಹದಲ್ಲಿ ಮತ್ತೊಂದು ಪರೀಕ್ಷೆ ಮಾಡಲು ರಕ್ತವೇ ಇಲ್ಲದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ' ಎಂದು ಕಿಚಾಯಿಸಿದ್ದಾರೆ. ಕನಿಕಾ ಕಪೂರ್ ಅವರೇ ಕೊನೆಗೂ ಬಿಡುಗಡೆಯಾಗಿರುವಾಗ ಭಾರತದಲ್ಲಿ ಕೊರೊನಾ ಕೂಡ ಅಂತ್ಯಗೊಳ್ಳಲಿದೆ ಎಂಬ ಭಾವಿಸಿದ್ದೇನೆ ಎಂದು ಕಾಲೆಳೆದಿದ್ದಾರೆ.

  ಕೊರೊನಾ ಸೋಂಕು ಹೊತ್ತು ತಂದ ಬಾಲಿವುಡ್ ಗಾಯಕಿ ವಿರುದ್ಧ ಎಫ್‌ಐಆರ್ ದಾಖಲುಕೊರೊನಾ ಸೋಂಕು ಹೊತ್ತು ತಂದ ಬಾಲಿವುಡ್ ಗಾಯಕಿ ವಿರುದ್ಧ ಎಫ್‌ಐಆರ್ ದಾಖಲು

  English summary
  Bollywood singer who was in hospital from 18 days after she tested positive with coronavirus has discharged finally as her 6th test revealed negative.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X