For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವೈರಸ್‌ನಿಂದ ಗುಣಮುಖರಾದರೂ ಕನಿಕಾ ಕಪೂರ್‌ಗೆ ತಪ್ಪದ ಸಂಕಷ್ಟ

  |

  ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿ ಆಸ್ಪತ್ರೆಯಿಂದ ಕೊನೆಗೂ ಬಿಡುಗಡೆಯಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು ನಿಜವಾದ ಪರೀಕ್ಷೆಗಳನ್ನು ಮುಂದೆ ಎದುರಿಸಬೇಕಾಗಿದೆ. ಲಕ್ನೋದಲ್ಲಿನ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸುಮಾರು 18 ದಿನ ಚಿಕಿತ್ಸೆ ಪಡೆದಿದ್ದ ಕನಿಕಾ ಕಪೂರ್ ಆರೋಗ್ಯ ವರದಿಯಲ್ಲಿ ಸತತ ಎರಡು ಬಾರಿ ಕೊರೊನಾ ವೈರಸ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಹೊರಬಂದಿದ್ದಾರೆ.

  ಕೊರೊನ ಇರೋದು ಗೊತ್ತಿದ್ರು ಎಲ್ಲರಿಗು ಪಾರ್ಟಿ ಕೊಟ್ಟ ಬಾಲಿವುಡ್ ಗಾಯಕಿ..? | Kanikka kapoor | Filmibeat Kannada

  ಆದರೆ, ಅವರು ಚೇತರಿಸಿಕೊಂಡ ಬಳಿಕವೂ ಸಂಪೂರ್ಣ ಗುಣಮುಖರಾಗಿದ್ದಾರೆ ಎನ್ನುವಂತಿಲ್ಲ. ಹೀಗಾಗಿ ಅವರು 14 ದಿನಗಳ ಕ್ವಾರೆಂಟೀನ್ ಅವಧಿಯನ್ನು ಮನೆಯಲ್ಲಿ ಕಳೆಯಬೇಕಿದೆ. ಲಕ್ನೋದಲ್ಲಿರುವ 'ಬೇಬಿ ಡಾಲ್' ಖ್ಯಾತಿಯ ಗಾಯಕಿ ತಮ್ಮ ಕ್ವಾರೆಂಟೀನ್ ಅವಧಿಯನ್ನು ಸಂಪೂರ್ಣವಾಗಿ ಕಳೆದ ಬಳಿಕ ಪೊಲೀಸರ ವಿಚಾರಣಗೆ ಒಳಗಾಗಲಿದ್ದಾರೆ. ಮುಂದೆ ಓದಿ...

  ಅಯ್ಯೋ ನನಗೆ ಕೊರೊನಾ ವೈರಸ್ ಬಂದಿಲ್ಲ, ನಾನು ಹುಷಾರಾಗಿದ್ದೇನೆ ಎಂದ ನಟಿಅಯ್ಯೋ ನನಗೆ ಕೊರೊನಾ ವೈರಸ್ ಬಂದಿಲ್ಲ, ನಾನು ಹುಷಾರಾಗಿದ್ದೇನೆ ಎಂದ ನಟಿ

  14 ದಿನಗಳ ಬಳಿಕ ವಿಚಾರಣೆ

  14 ದಿನಗಳ ಬಳಿಕ ವಿಚಾರಣೆ

  'ಲಕ್ನೋದ ಮುಖ್ಯ ಆರೋಗ್ಯಾಧಿಕಾರಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕನಿಕಾ ಕಪೂರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರ ವಿರುದ್ಧದ ಪ್ರಕರಣಗಳ ಹಿನ್ನೆಲೆಯಲ್ಲಿ ಅವರನ್ನು ತನಿಖೆಗೆ ಒಳಪಡಿಸಬೇಕಿದೆ. 14 ದಿನಗಳ ಅವಧಿ ಮುಗಿದ ನಂತರ ವಿಚಾರಣೆ ಮಾಡಲಾಗುವುದು' ಎಂದು ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ತಿಳಿಸಿದ್ದಾರೆ.

  ನಿರ್ಲಕ್ಷ್ಯದಿಂದ ಸೋಂಕು ಹರಡಿದ ಆರೋಪ

  ನಿರ್ಲಕ್ಷ್ಯದಿಂದ ಸೋಂಕು ಹರಡಿದ ಆರೋಪ

  'ಕನಿಕಾ ಕಪೂರ್ ವಿರುದ್ಧ ಜೀವಕ್ಕೆ ಅಪಾಯಕಾರಿಯಾದ ಯಾವುದೇ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕೃತ್ಯ ಎಸಗಿರುವುದು, ಜೀವಕ್ಕೆ ಮಾರಕವಾದ ಸೋಂಕನ್ನು ಹರಡುವ ದುಷ್ಕೃತ್ಯ, ಸಾರ್ವಜನಿಕ ಸೇವಕರು ಸೂಚಿಸಿದ ಆದೇಶಗಳನ್ನು ಪಾಲಿಸದೆ ಇರುವುದು- ಪ್ರಕರಣಗಳನ್ನು ದಾಖಲಿಸಲಾಗಿದೆ' ಎಂದು ಹೇಳಿದ್ದಾರೆ.

  ಬಾಲಿವುಡ್ ನಿರ್ಮಾಪಕನ ಅವಳಿ ಹೆಣ್ಣುಮಕ್ಕಳಿಬ್ಬರಿಗೂ ಕೊರೊನಾ ಪಾಸಿಟಿವ್!ಬಾಲಿವುಡ್ ನಿರ್ಮಾಪಕನ ಅವಳಿ ಹೆಣ್ಣುಮಕ್ಕಳಿಬ್ಬರಿಗೂ ಕೊರೊನಾ ಪಾಸಿಟಿವ್!

  ಇನ್ನೂ ಎರಡು ಪ್ರತ್ಯೇಕ ಪ್ರಕರಣ

  ಇನ್ನೂ ಎರಡು ಪ್ರತ್ಯೇಕ ಪ್ರಕರಣ

  ಕನಿಕಾ ಕಪೂರ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದು ಮಾರ್ಚ್ 20ರಂದು ದೃಢಪಟ್ಟಿತ್ತು. ಅದರ ಮರುದಿನವೇ ಲಕ್ನೋದ ಹಜರತ್ ಗಂಜ್ ಪೊಲೀಸ್ ಸ್ಟೇಷನ್ ಮತ್ತು ಗೊಮ್ಟಿ ನಗರ್ ಪೊಲೀಸ್ ಠಾಣೆಗಳಲ್ಲಿ ಕೂಡ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ.

  ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್: ಮತ್ತೆ ಟ್ರೋಲಿಗರಿಗೆ ಆಹಾರಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್: ಮತ್ತೆ ಟ್ರೋಲಿಗರಿಗೆ ಆಹಾರ

  ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚನೆ

  ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚನೆ

  ಮನೆಯಲ್ಲಿ ಯಾರೊಂದಿಗೂ ಬೆರೆಯದೆ ಪ್ರತ್ಯೇಕವಾಗಿ ಇರುವಂತೆ ಕನಿಕಾ ಕಪೂರ್ ಅವರಿಗೆ ಸೂಚಿಸಲಾಗಿದೆ. ಲಂಡನ್‌ನಿಂದ ಬಂದಿದ್ದ ಕನಿಕಾ, ಅಧಿಕಾರಿಗಳ ಸಲಹೆಯನ್ನು ಮೀರಿ ಮನೆಯಲ್ಲಿಯೇ ಇರದೆ ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಅವರ ಸಂಪರ್ಕಕ್ಕೆ ಬಂದವರಿಗೂ ಕೊರೊನಾ ವೈರಸ್ ಹರಡಿರುವ ಸಾಧ್ಯತೆ ಇದ್ದು, ಅವರಲ್ಲಿ 200ಕ್ಕೂ ಅಧಿಕ ಮಂದಿಯನ್ನು ಗುರುತಿಸಿ ತಪಾಸಣೆ ಮಾಡಲಾಗಿದ್ದು, ಅವರಲ್ಲಿ ಸೋಂಕು ಕಂಡುಬಂದಿಲ್ಲ.

  English summary
  Bollywood singer Kanika Kapoor to be interrogated by Lucknow police only after 14 day home quarantine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X