ಸೋನು ನಿಗಂ ಕತ್ತಿಗೆ ಆಗಿದ್ದೇನು? ಆರೋಗ್ಯದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ಗಾಯಕ

ಬಹುಭಾಷಾ ಗಾಯಕ ಸೋನು ನಿಗಂ ಧ್ವನಿಗೆ ಮರುಳಾಗದವರೇ ಇಲ್ಲ. ಇವರು ಹಾಡಿದ ಮೆಲೋಡಿ ಹಾಡುಗಳನ್ನು ಗುನುಗದ ಸಂಗೀತ ಪ್ರಿಯರೇ ಇಲ್ಲವೇನೋ. ಹಿಂದಿ, ಕನ್ನಡ ಭಾಷೆಯಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದರೂ, ಭಾರತದ ಹಲವು ಭಾಷೆಗಳ ಸಾಂಗ್‌ಗಳಿಗೆ ಸೋನು ನಿಗಂ ಧ್ವನಿಯಾಗಿದ್ದಾರೆ. ಈ ಕಾರಣಕ್ಕೆ 52 ವರ್ಷದ ಗಾಯಕ ಸೋನು ನಿಗಂಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.

ಗಾಯಕನಾಗಿದ್ದರೂ, ಫಿಟ್ ಅಂಡ್ ಫೈನ್ ಆಗಿದ್ದ ಸೋನು ನಿಗಂ ಇದ್ದಕ್ಕಿದ್ದ ಹಾಗೇ ಆರೋಗ್ಯ ಸಮಸ್ಯೆ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸೋನು ನಿಗಮ್ ಅವರು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕತ್ತಿನ ನರಗಳ ಒತ್ತಡದ ಸಮಸ್ಯೆಯಿಂದ ಬಳಲುತ್ತಿರೋದಾಗಿ ಹೇಳಿಕೊಂಡಿದ್ದಾರೆ.

Singer Sonu Nigam shared he has neck nerve compression health issue in his Instagram post

ಸೋನು ನಿಗಂ ತನ್ನ ಆರೋಗ್ಯದ ಬಗ್ಗೆ ನೀಡಿದ ಕಳವಳಕಾರಿ ಅಪ್‌ಡೇಟ್ ನೀಡಿದ್ದಾರೆ. ತೀವ್ರ ನೋವಿನ ನಡುವೆಯೂ ಅವರು ಲೈವ್ ಕಾನ್ಸರ್ಟ್‌ನಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಸದ್ಯ ಸೋನು ನಿಗಂ ಅವರ ಆರೋಗ್ಯದ ಬಗೆಗಿನ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಹಾಗಿದ್ದರೆ, ಸೋನು ನಿಗಂ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಏನು ಹೇಳಿದ್ದಾರೆ? ಅವರಿಗೆ ಅಂತಹದ್ದೇನಾಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

ಕತ್ತಿನ ನರಗಳಲ್ಲಿ ಒತ್ತಡ

ಗಾಯಕ ಸೋನು ನಿಗಂ ಕಳೆದ ಕೆಲವು ದಿನಗಳಿಂದ ಕತ್ತಿನ ಭಾಗದ ನರಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕುತ್ತಿಗೆ ಭಾಗದಲ್ಲಿರುವ ನರಗಳು ಒತ್ತಡಕ್ಕೆ ಒಳಪಟ್ಟಿವೆ. ಹೀಗಾಗಿ ತೀವ್ರ ನೋವನ್ನು ಅನುಭವಿಸುವಂತೆ ಆಗಿವೆ. ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದಂತೆ ಸಮಸ್ಯೆಯನ್ನು ತಿಳಿದುಕೊಳ್ಳುವುದಕ್ಕೆ ವೈದ್ಯಕೀಯ ತಪಾಸಣೆಯನ್ನು ಮಾಡಿಸಿದ್ದಾರೆ. ಈಗಾಗಲೇ MRI ಹಾಗೂ CT ಸ್ಕ್ಯಾನ್‌ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗೂ ಒಳಗಾಗಿದ್ದಾರೆ.

Also Read
"ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ": ಪರೋಕ್ಷವಾಗಿ ಸೋನು ನಿಗಂ ಟಾಂಗ್ ಕೊಟ್ಟರೇ ಗಣೇಶ್?

ನೋವಿಗೆ ಫಿಸಿಯೋಥೆರಪಿ

ಸೋನು ನಿಗಂ ಔಷಧಿಗಳ ಜೊತೆಗೆ ಫಿಸಿಯೋಥೆರಪಿಯನ್ನು ನೀಡಲಾಗುತ್ತಿದೆ. ಫಿಸಿಯೋಥೆರಪಿ ಅತ್ಯಂತ ನೋವಿನಿಂದ ಕೂಡಿದೆ ಎಂದು ಸೋನು ನಿಗಂ ತಿಳಿಸಿದ್ದಾರೆ. ಸದ್ಯಕ್ಕೆ ಅವರು ಮಾತ್ರೆಗಳ ಮೂಲಕ ನೋವವನ್ನು ತಡೆದುಕೊಳ್ಳುತ್ತಿದ್ದಾರೆ. ನರಗಳನ್ನು ಸಡಿಲಗೊಳಿಸಲು ವೈದ್ಯರು ನೀಡಿರುವ ಮಾತ್ರೆಗಳಿಂದಾಗಿ ಅವರ ಧ್ಬನಿಯ ಮೇಲೆ ಪರಿಣಾಮ ಬೀರಿದೆ ಎಂದು ಸೋನು ನಿಗಂ ಹೇಳಿಕೊಂಡಿದ್ದಾರೆ.

ನೋವಿನ ನಡುವೆಯೂ ಪರ್ಫಾಮೆನ್ಸ್

ಸೋನು ನಿಗಂ ತಮಗಿರುವ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಮುಂಬೈನಲ್ಲಿ ನಡೆದ ಲೈವ್ ಕಾನ್ಸರ್ಟ್‌ನಲ್ಲಿ ಭಾಗವಹಿಸಿದ್ದರು. ಅದಕ್ಕೂ ಮುನ್ನ ತನ್ನ ಇನ್‌ಸ್ಟಾಗ್ರಾಂನಲ್ಲಿ ತಮಗಾದ ನೋವಿನ ಬಗ್ಗೆ ರಿವೀಲ್ ಮಾಡಿದ್ದಾರೆ. "ನನ್ನ ನರಗಳು ಒತ್ತಡಕ್ಕೆ ಒಳಪಟ್ಟಿವೆ. ಕಳೆದ ಒಂದು ವಾರದಿಂದ ನಾನು ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುತ್ತಿದ್ದೇನೆ. ಇದರ ಪರಿಣಾಮ ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಫಿಸಿಯೋಥೆರಪಿ ತುಂಬಾ ನೋವಿನಿಂದ ಕೂಡಿತ್ತು. ಹೀಗಾಗಿ ಈಗ ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಇದರಿಂದ ನನ್ನ ಗಂಟಲು ಕೂಡ ಸ್ವಲ್ಪ ಭಾರವಾಗಿದೆ" ಎಂದು ಸೋನು ನಿಗಂ ವಿಡಿಯೋದಲ್ಲಿ ಶೇರ್ ಮಾಡಿದ್ದಾರೆ.

ಸಂಗೀತ ಲೋಕದ ಗಣ್ಯರಿಂದ ಮೆಚ್ಚುಗೆ

ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಸೋನು ನಿಗಂ ಧ್ವನಿಯಲ್ಲಿ ವ್ಯತ್ಯಾಸ ಆಗಿದೆ. ಇದಕ್ಕೆ ದೈಹಿಕ ಬಳಲಿಕೆಯೂ ಕಾರಣ. ಆದರೂ ಸೋನು ನಿಗಂ ಲೈವ್ ಕಾನ್ಸರ್ಟ್‌ಗೆ ಮುಂದಾಗಿದ್ದಕ್ಕೆ ಅವರ ವೃತ್ತಿಪರ ಬದ್ಧತೆಯನ್ನು ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋನು ನಿಗಮ್ ಅವರ ಈ ಧೈರ್ಯ ಮತ್ತು ಬದ್ಧತೆಯನ್ನು ನೋಡಿ ಸಂಗೀತ ಲೋಕದ ಗಣ್ಯರು ಹಾಗೂ ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

English summary
Singer Sonu Nigam shared he has neck nerve compression health issue in his Instagram post.
Read more about: sonu nigam health singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X