Singham Again: 'ಸೂರ್ಯವಂಶಿ', 'ಸಿಂಬಾ' ಜೊತೆ ಬರ್ತಿದ್ದಾನೆ 'ಸಿಂಗಂ'.. ರೋಹಿತ್ ಶೆಟ್ಟಿ ಆಕ್ಷನ್ ಹೆಂಗಿರುತ್ತೋ?

ಹನ್ನೆರಡು ವರ್ಷಗಳ ನಂತರ ಸಿಂಗಂ ಮತ್ತೆ ಅಬ್ಬರಿಸಲು ರೆಡಿಯಾಗಿದ್ದಾನೆ. ನಿರ್ದೇಶಕ ರೋಹಿತ್ ಶೆಟ್ಟಿ ಕ್ರಿಯೇಟ್ ಮಾಡಿರುವ ಸಿಂಗಂ ಫ್ರಾಂಚೈಸಿಯ ಹೊಸ ಸಿನಿಮಾದ ಮುಹೂರ್ತ ನಿನ್ನೆಯಷ್ಟೇ ನಡೆದಿದೆ. ಮೊದಲಿಗೆ ತಮಿಳಿನಲ್ಲಿ ಸೂರ್ಯ ನಾಯಕನಟನಾಗಿ ನಟಿಸಿದ್ದ 'ಸಿಂಗಂ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಿ ಅದೇ ಹೆಸರಿನಲ್ಲಿ ಹೊರತಂದಿದ್ರು ರೋಹಿತ್ ಶೆಟ್ಟಿ.

ಅಜಯ್ ದೇವಗನ್ ನಾಯಕನಾಗಿ ನಟಿಸಿದ್ದ ಆ 'ಸಿಂಗಂ 'ಸೂಪರ್ ಹಿಟ್ ಚಿತ್ರವಾಗಿತ್ತು. ಅನ್ಯಾಯದ ವಿರುದ್ಧ ಸಿಡಿದೇಳುವ ಪ್ರಾಮಾಣಿಕ ಪೊಲೀಸ್ ಆಫೀಸರ್ ಒಬ್ಬನ ಕಥೆಯದು. ನಂತರ ತಮಿಳಿನಲ್ಲಿ ಸೂರ್ಯ 'ಸಿಂಗಂ 2' ಮಾಡಿದಾಗ ಹಿಂದಿಯಲ್ಲೂ ಇದೇ ತಂಡ 'ಸಿಂಗಂ 2' ಮಾಡಿ ಬಾಕ್ಸಾಫೀಸ್ ದೋಚಿತ್ತು.

ranveer-ajay-devgn-akshay-singham-again

ಈ ಎರಡೂ ಚಿತ್ರಗಳು ಕಂಡ ಯಶಸ್ಸು, ಇಂಥಾ ಕಥೆಗಳು ಜನರಿಗೆ ಇಷ್ಟವಾದ ಪರಿಯನ್ನು ಗಮನಿಸಿದ ಚಿತ್ರತಂಡ ನಂತರ 'ಸೂರ್ಯವಂಶಿ' ಚಿತ್ರವನ್ನು ಹೊರತಂದಿತ್ತು. ರೋಹಿತ್ ಶೆಟ್ಟಿ ನಿರ್ದೇಶಿಸಿದ್ದ 'ಸೂರ್ಯವಂಶಿ' ಸಿನಿಮಾದಲ್ಲಿ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಹೀರೊ. ಆದರೆ, 'ಸೂರ್ಯವಂಶಿ' ಚಿತ್ರದಲ್ಲಿ 'ಸಿಂಗಂ' ಲಿಂಕ್ ಕೊಡಲಾಗಿತ್ತು. ಅದಾದ ನಂತರ ಬಂದ ಸಿನಿಮಾವೇ 'ಸಿಂಬಾ'. ಇದು ಕೂಡಾ ಪೊಲೀಸ್ ಆಫೀಸರ್ ಸಮಾಜ ಸುಧಾರಿಸೋ ಕಥೆಯ ಹೊಂದಿತ್ತು.

ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ರೋಹಿತ್ ಶೆಟ್ಟಿಯ ನಿರ್ದೇಶನ ಮತ್ತೊಂದು ಖಡಕ್ ಪೊಲೀಸ್ ಸ್ಟೋರಿ ಯಶಸ್ವಿಯಾಗುವಂತೆ ಮಾಡಿತ್ತು. ಈ ನಾಲ್ಕೂ ಸಿನಿಮಾಗಳಿಗೆ ಒಂದಲ್ಲಾ ಒಂದು ಕಡೆ ಸಣ್ಣದೊಂದು ಲಿಂಕ್ ಕೊಟ್ಟೇ ಇದ್ರು ರೋಹಿತ್. ಸಿಂಬಾ ಕೊನೆಯಲ್ಲೆಲ್ಲೋ ಪರದಾಡುವಾಗ 'ಸಿಂಗಂ' ಬಂದು ಒಂದು ಸಹಾಯ ಹಸ್ತ ಚಾಚೋದು ಅಥವಾ 'ಸೂರ್ಯವಂಶಿ' ಬಂದು ಹೆಲ್ಪ್ ಮಾಡೋದು, ಈ ರೀತಿಯ ಲಿಂಕ್‌ನಿಂದ ಈ ಮೂವರೂ ಸಮಾಜದ ಓರೆಕೋರೆಗಳನ್ನು ತಿದ್ದುವ, ಅಗತ್ಯ ಇರುವ ಬಲಹೀನರ ಪಾಲಿಗೆ ಶಕ್ತಿ- ಬೆಂಬಲ ಕೊಡುವ ಉದ್ದೇಶಕ್ಕಾಗಿ ಒಟ್ಟಿಗೆ ದುಡಿಯುವ ಖಡಕ್ ಪೊಲೀಸ್ ಆಫೀಸರ್‌ಗಳಾಗಿ ಜನ ಮತ್ತು ಬಾಕ್ಸಾಫೀಸ್ ಎರಡನ್ನೂ ಗೆದ್ದಿದ್ರು.

ranveer-ajay-devgn-akshay-singham-again

ಇದೆಲ್ಲಾ ಶುರುವಾಗಿ 12 ವರ್ಷ ಕಳೆದಿದೆ. ರೀಮೇಕ್ ಸಿನಿಮಾಗಳಿಂದ ಶುರುವಾಗಿದ್ದಾದ್ರೂ ನಂತರದ ಒರಿಜಿನಿಲ್ ಮುಂದುವರಿಕೆಯಿಂದಾಗಿ ರೋಹಿತ್ ಶೆಟ್ಟಿ ತಮ್ಮದೇ ಒಂದು ಕಾಪ್ ಯೂನಿವರ್ಸ ಕಟ್ಟಿದ್ದಾರೆ. ಈಗ ಇದೇ ಪೊಲೀಸ್ ಜಗತ್ತಿನಲ್ಲಿ ಮತ್ತೊಂದು ಹೊಸ ಸಿನಿಮಾ ಶುರುವಾಗಿದೆ. ಈ ಚಿತ್ರದ ಹೆಸರು 'ಸಿಂಗಂ ಅಗೇನ್'.

ನಿನ್ನೆ(ಸೆಪ್ಟೆಂಬರ್ 16) ಶನಿವಾರ ಮುಂಬೈನಲ್ಲಿ ಈ ಸಿನಿಮಾದ ಮುಹೂರ್ತ ನಡೆಯಿತು. ನಿರ್ದೇಶಕ ರೋಹಿತ್ ಶೆಟ್ಟಿ ಜೊತೆ ಅಜಯ್ ದೇವಗನ್ ಮತ್ತು ರಣ್ವೀರ್ ಸಿಂಗ್ ಫುಲ್ ಫಾರ್ಮಲ್ಸ್ ನಲ್ಲಿ ಪಕ್ಕಾ ಪೊಲೀಸ್ ಆಫೀಸರ್‌ಗಳಂತೆ ಡ್ರೆಸ್ ಮಾಡಿಕೊಂಡು ಹಾಜರಿದ್ರು. ಇನ್ನು ಇವರೆಲ್ಲರೂ ಇನ್‌ಸ್ಟಾಗ್ರಾಂನಲ್ಲಿ ಚಿತ್ರಗಳ ಜೊತೆ ಹೊಸ ಸಿನಿಮಾದ ಘೋಷಣೆ ಮಾಡಿದ್ದಾರೆ. ಮುಹೂರ್ತದಲ್ಲಿ ಕಾಣಿಸಿಕೊಳ್ಳದಿದ್ದವ್ರು ಎಂದರೆ ಅಕ್ಷಯ್ ಕುಮಾರ್ ಒಬ್ರೇ.

ಆದರೆ, ಈ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲೂ ಪೋಸ್ಟ್ ಮಾಡಿಕೊಂಡಿರೋ ಅಕ್ಷಯ್ ನಾನು ವಿದೇಶದಲ್ಲಿ ಇರೋದ್ರಿಂದ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ, 'ಸಿಂಗಂ ಅಗೇನ್' ಚಿತ್ರದ ಭಾಗವಾಗ್ತಿರೋದು ಬಹಳ ಖುಷಿಯ ವಿಚಾರ ಎಂದು ಬರೆದುಕೊಂಡಿದ್ದಾರೆ.

ಅಲ್ಲಿಗೆ ಸದ್ಯ ಮಾರ್ಕೆಟ್‌ನಲ್ಲಿ ಯಶಸ್ವಿಯಾಗಿರೋ ಮೂರು ನಾಯಕರು ಒಂದೇ ಸಿನಿಮಾದಲ್ಲಿ ಅದೂ ಪೊಲೀಸ್ ಆಫೀಸರ್‌ಗಳಾಗಿ ಕಾಣಿಸಿಕೊಳ್ಳೋದು ಫಿಕ್ಸ್ ಆಗಿದೆ. ಅಂದ್ಹಾಗೆ ರೋಹಿತ್ ಶೆಟ್ಟಿಯ ಕಾಪ್ ಯೂನಿವರ್ಸ್‌ನಲ್ಲಿ ಮೊದಲು ಬಂದ 'ಸಿಂಗಂ' ಸಿನಿಮಾ 2011ರಲ್ಲಿ ಬಿಡುಗಡೆಯಾಗಿತ್ತು. ಅಕ್ಷಯ್ ಕುಮಾರ್ ನಾಯಕತ್ವದ 'ಸೂರ್ಯವಂಶಿ' 2021ರಲ್ಲಿ ಬಿಡುಗಡೆಯಾದ್ರೆ ರಣ್ವೀರ್ ಸಿಂಗ್ ನಟನೆಯ 'ಸಿಂಬಾ' 2018ರಲ್ಲಿ ತೆರೆಕಂಡಿತ್ತು. ಶೀಘ್ರದಲ್ಲೇ ರೋಹಿತ್ ಶೆಟ್ಟಿ ಓಟಿಟಿಗೂ ಲಗ್ಗೆ ಇಡಲಿದ್ದು ಪ್ರೈಮ್ ವಿಡಿಯೋದಲ್ಲಿ 'ಇಂಡಿಯನ್ ಪೊಲೀಸ್ ಫೋರ್ಸ್' ಎನ್ನುವ ಸೀರಿಸ್ ಬಿಡುಗಡೆ ಮಾಡಲಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ, ವಿವೇಕ್ ಒಬೆರಾಯ್ ಮತ್ತು ಶಿಲ್ಪಾ ಶೆಟ್ಟಿ ಈ ಸೀರಿಸ್‌ನಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 'ಸಿಂಗಂ ಅಗೇನ್' ಚಿತ್ರದಲ್ಲಿ ನಟ ಅರ್ಜುನ್ ಕಪೂರ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ಅವರು ಸಖತ್ತಾಗಿ ಬಾಡಿ ಬಿಲ್ಡ್ ಮಾಡ್ತಿದ್ದಾರೆ ಎನ್ನುವ ಮಾತುಗಳೂ ಬಾಲಿವುಡ್ ಅಂಗಳದಲ್ಲಿ ಕೇಳಿಬರ್ತಿದೆ.

More from Filmibeat

English summary
Singham Again Rohit Shetty directs cop universe franchise with Ranveer Singh Akshay Kumar and Ajay Devgan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X