Smriti Mandhana: ನಿಂತಿದ್ದ ಸ್ಮೃತಿ ಮಂದಾನ ಮದುವೆ ಡಿಸೆಂಬರ್ 7ಕ್ಕೆ ನಡೆಯುತ್ತಾ? ಸ್ಮೃತಿ ಸಹೋದರ ಹೇಳಿದ್ದೇನು?

ಎಲ್ಲವೂ ಸರಿಯಾಗಿ ಇದ್ದಿದ್ದರೆ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಮದುವೆ ಈಗಾಗಲೇ ಆಗಬೇಕಿತ್ತು. ಬಹು ಕಾಲದ ಗೆಳೆಯ ಮ್ಯೂಸಿಕ್ ಕಂಪೋಸರ್ ಪಲಾಶ್ ಮುಚ್ಚಲ್ ಜೊತೆ ಮದುವೆಗೆ ಡೇಟ್ ಫಿಕ್ಸ್ ಆಗಿತ್ತು. ಇನ್ನೇನು ಮದುವೆಗೆ ಇನ್ನೊಂದು ದಿನ ಅನ್ನುವಾಗಲೇ ಈ ಮದುವೆ ನಿಂತಿತ್ತು. ಸ್ಮೃತಿ ಮಂದಾನ ಅವರ ತಂದೆಗೆ ಹೃದಯ ಸಂಬಂಧಿ ಸಮಸ್ಯೆ ಎದುರಾಗಿದ್ದರಿಂದ ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿತ್ತು.

ಸ್ಮೃತಿ ಮಂದಣ್ಣ ಹಾಗೂ ಪಲಾಶ್ ಮುಚ್ಚಲ್ ಮದುವೆ ಪೋಸ್ಟ್‌ಪೋನ್ ಆಗುತ್ತಿದ್ದಂತೆ ನೂರಾರು ಊಹಾಪೂಹಗಳು ಹುಟ್ಟಿಕೊಂಡಿದ್ದವು. ಗೆಳತಿಯರೊಂದಿಗೆ ಪಲಾಶ್ ಮುಚ್ಚಲ್ ಅವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು. ಪಲಾಶ್ ಮುಚ್ಚಲ್ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದಾನಗೆ ಮೋಸ ಮಾಡಿದ್ದರಿಂದ ಈ ಮದುವೆ ನಿಂತಿದೆ ಎಂದು ಪುಕಾರು ಹಬ್ಬಿದೆ.

Smriti Mandhana brother Shravan clarified sister marriage with Palaash Muchhal on December 7

ನವೆಂಬರ್ 23ರಂದು ನಡೆಯಬೇಕಿದ್ದ ಮದುವೆ ಪೋಸ್ಟ್‌ಪೋನ್ ಆದ ಬಳಿಕ ಮತ್ತೆ ಹೊಸ ಸುದ್ದಿಯೊಂದು ಹಬ್ಬಿತ್ತು. ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಲ್ ವಿವಾಹ ಡಿಸೆಂಬರ್ 7ರಂದು ನಡೆಯುತ್ತೆ ಎಂಬ ಪುಕಾರು ಹಬ್ಬಿತ್ತು. ಕೇವಲ ಆಪ್ತರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎಂದು ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಸ್ಮೃತಿ ಮಂದಾನ ಸಹೋದರ ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಸ್ಮೃತಿ ಮಂದಾನ-ಪಲಾಶ್ ಮುಚ್ಚಲ್ ಮದುವೆ ಮಹಾರಾಷ್ಟ್ರ ಸಾಂಗ್ಲಿಯಲ್ಲಿ ನಡೆಯಬೇಕಿತ್ತು. ಕ್ರಿಕೆಟ್ ಪ್ರೇಮಿಗಳು ಈ ವಿವಾಹವನ್ನು ಎದುರು ನೋಡುತ್ತಿದ್ದರು. ಸ್ಮೃತಿ ಮಂದಾನ ತಂದೆ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ಪಲಾಶ್ ಮುಚ್ಚಲ್ ಕೂಡ ಹಾಸ್ಪಿಟಲ್‌ಗೆ ಸೇರಿಕೊಂಡಿದ್ದರು. ಈ ಘಟನೆ ನಡೆದ ಬಳಿಕ ಎರಡೂ ಕುಟುಂಬದವರೂ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಸ್ಮೃತಿ ಮಂದಣ್ಣ ಮದುವೆ ಸಮಾರಂಭದ ಫೋಟೋಗಳನ್ನು ಡಿಲೀಟ್ ಮಾಡುತ್ತಿದ್ದಂತೆ ಹಲವು ಅನುಮಾನಗಳನ್ನು ಹುಟ್ಟಿಕೊಂಡಿತ್ತು.

ಇಷ್ಟೆಲ್ಲದರ ನಡುವೆ ಸ್ಮೃತಿ ಮಂದಣ್ಣ-ಪಲಾಶ್ ಮುಚ್ಚಲ್ ಮದುವೆ ಡಿಸೆಂಬರ್ 7ರಂದು ಆಪ್ತರ ಸಮ್ಮುಖದಲ್ಲಿ ನಡೆಯುತ್ತೆ ಎನ್ನುವ ಸುದ್ದಿ ಹಬ್ಬಿತ್ತು. ಇದೆಲ್ಲದಕ್ಕೂ ಸ್ಮೃತಿಯ ಸಹೋದರ ಶ್ರವಣ್ ಮಂದಾನ ಕ್ಲಾರಿಟಿ ಕೊಟ್ಟಿದ್ದಾರೆ. ಈ ಸುದ್ದಿಯಲ್ಲಿ ಯಾವುದೇ ರೀತಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

"ಈಗ ಹಬ್ಬಿರುವ ಗಾಳಿಸುದ್ದಿಗಳ ಬಗ್ಗೆ ನನಗೆ ಯಾವುದೇ ಐಡಿಯಾ ಇಲ್ಲ. ಇಲ್ಲಿವರೆಗೂ ಈ ಮದುವೆಯನ್ನು ಪೋಸ್ಟ್‌ಪೋನ್ ಮಾಡಲಾಗಿದೆ" ಎಂದು ಸ್ಮೃತಿ ಮಂದನಾ ಸಹೋದರ ಶ್ರವಣ್ ಮಂದಾನ ಹೇಳಿದ್ದಾರೆ. ಹೀಗಾಗಿ ಇನ್ನೂ ಮದುವೆ ಯಾವಾಗ ನಡೆಯುತ್ತೆ ಅನ್ನೋ ಬಗ್ಗೆ ಖಚಿತ ಮಾಹಿತಿ ಇಲ್ಲ. ಅಸಲಿಗೆ ಸ್ಮೃತಿ ಮಂದಾನ ಮುಂದಿನ ಹೆಜ್ಜೆ ಏನು ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಇತ್ತ ಮ್ಯೂಸಿಕ್ ಡೈರೆಕ್ಟರ್ ಪಲಾಶ್ ಮುಚ್ಚಲ್ ಕೂಡ ಮದುವೆ ಬಗ್ಗೆ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

ಎರಡೂ ಕುಟುಂಬಗಳು ಮದುವೆಯನ್ನು ಪೋಸ್ಟ್‌ಪೋನ್ ಮಾಡಿದ ಬಳಿಕ ಕೆಲವು ಊಹಾಪೋಹಗಳು ಹುಟ್ಟಿಕೊಂಡಿವೆ. ಅದರಲ್ಲೂ ಪಲಾಶ್ ಮುಚ್ಚಲ್ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆನೂ ಯಾರೂ ಕ್ಲಾರಿಟಿ ಕೊಟ್ಟಿಲ್ಲ. ಸ್ಮೃತಿ ಮಂದಾನ ಕೂಡ ತನ್ನ ಬಾವಿ ಪತಿಯ ವಿರುದ್ಧ ಆರೋಪಗಳು ಬಂದಾಗಲೂ ಕ್ಲಾರಿಟಿ ನೀಡುವುದಕ್ಕೆ ಹೋಗಿಲ್ಲ. ಇತ್ತ ಪಲಾಶ್ ಮುಚ್ಚಲ್ ಕೂಡ ಸೈಲೆಂಟ್ ಆಗಿರೋದು ಎಲ್ಲವೂ ಸರಿಯಿಲ್ಲ ಅನ್ನೋದನ್ನು ಹೇಳುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಬಹುದು.

More from Filmibeat

English summary
Smriti Mandhana brother Shravan clarified sister marriage with Palaash Muchhal on December 7.
Read more about: marriage music director
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X