ಮದುವೆ ಪೋಸ್ಟ್‌ಪೋನ್ ಆದ ಬಳಿಕ ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಭೇಟಿ ಕೊಟ್ಟ ಸ್ಮೃತಿ ಮಂದಾನ ಭಾವಿ ಪತಿ
ಭಾರತದ ಮಹಿಳಾ ತಂಡದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದಾನ ಹಾಗೂ ಮ್ಯೂಸಿಕ್ ಡೈರೆಕ್ಟರ್ ಪಲಾಶ್ ಮುಚ್ಚಲ್ ಮದುವೆ ಮುಂದೂಡಲ್ಪಟ್ಟಿದೆ. ನವೆಂಬರ್ 23ಕ್ಕೆ ಇವರಿಬ್ಬರ ಮದುವೆ ನಡೆಯಬೇಕಿತ್ತು. ಆದರೆ, ಸ್ಮೃತಿ ಮಂದಾನ ತಂದೆಯ ಆರೋಗ್ಯ ಹಠಾತ್ ಆರೋಗ್ಯ ತಪ್ಪಿದ್ದರಿಂದ ಮದುವೆಯನ್ನು ಪೋಸ್ಟ್‌ಪೋನ್ ಮಾಡಲಾಗಿತ್ತು. ಆರಂಭದಲ್ಲಿ ಇದು ತಂದೆಯ ಅನಾರೋಗ್ಯದಿಂದಲೇ ಮದುವೆ ನಿಂತಿದೆ ಎಂದುಕೊಳ್ಳಲಾಗಿತ್ತು.
ಆದರೆ, ಸ್ಮೃತಿ ಮಂದಾನ ತಂದೆಯ ಹಿಂದೆನೇ ಪಲಾಶ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಮದುವೆ ನಿಂತಿರುವ ಒತ್ತಡದಿಂದ ಅಸ್ವಸ್ಥರಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾಗಿ ವರದಿಯಾಗಿತ್ತು. ಇದೇ ವೇಳೆ ಪಲಾಶ್ ಮುಚ್ಚಲ್ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದಿದ್ದವು. ಪಲಾಶ್ ಮುಚ್ಚಲ್ ವಿರುದ್ಧ ಸ್ಮೃತಿ ಮಂದಾನಗೆ ಮೋಸ ಮಾಡಿರುವ ಆರೋಪಗಳು ಕೂಡ ಕೇಳಿ ಬಂದಿದ್ದವು.

ಈ ಎಲ್ಲಾ ಆರೋಪಗಳ ಮಧ್ಯೆ ಪಲಾಶ್ ಮುಚ್ಚಲ್ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಮಧ್ಯೆ ಡಿಸೆಂಬರ್ 7ರಂದು ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಲ್ ಮದುವೆ ನಡೆಯಲಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಈ ಬೆನ್ನಲ್ಲೇ ಸ್ಮೃತಿ ಮಂದಾನ ಸಹೋದರ ಇದೆಲ್ಲ ಗಾಳಿ ಸುದ್ದಿಯಷ್ಟೇ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಪಲಾಶ್ ಮುಚ್ಚಲ್ ಪ್ರೇಮಾನಂದ ಜಿ ಮಹಾರಾಜ್ ಆಶ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸ್ಮೃತಿ ಮಂದಾನ ಭಾವಿ ಪತಿ ಪಲಾಶ್ ಮುಚ್ಚಲ್ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಆಧ್ಯಾತ್ಮಿಕ ಶಾಂತಿಗಾಗಿ ಬೃಂದಾವನಕ್ಕೆ ತೆರಳಿರಬಹುದು ಎಂಬ ಊಹಾಪೋಹಗಳು ಹರಡಿವೆ. ಅದಕ್ಕೆ ತಕ್ಕಂತೆ ಸೋಶಿಯಲ್ ಮೀಡಿಯಾದಲ್ಲಿ ಪಲಾಶ್ ಮುಚ್ಚಲ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರೇಮಾನಂದ ಜಿ ಮಹಾರಾಜ್ ಆಶ್ರಮದಲ್ಲಿ ಮುಖಕ್ಕೆ ಮಾಸ್ಕ್ಕ ಧರಿಸಿಕೊಂಡು ಕೈ ಮುಗಿದು ಕೂತಿರುವ ಫೋಟೋ ವೈರಲ್ ಆಗಿತ್ತು.
ಡಿಸೆಂಬರ್ 2ರಂದು ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ ಮಾಸ್ಕ್ ಧರಿಸಿದ ವ್ಯಕ್ತಿ ಪಲಾಶ್ ಮುಚ್ಚಲ್ ಎಂದು ರೆಡ್ಡಿಟ್ ಯೂಸರ್ ಒಬ್ಬರು ಪ್ರತಿಪಾದಿಸಿದರು. ಯಾಕಂದ್ರೆ, ಅವರ ಕೈಗಳಲ್ಲಿ, ಬೆರಳುಗಳಲ್ಲಿ ಮೆಹೆಂದಿ ಗುರುತುಗಳು ಕಾಣಿಸಿಕೊಂಡಿವೆ. ಹಾಗೇ ಪಲಾಶ್ ಮುಚ್ಚಲ್ ಕೈಯಲ್ಲಿ ಜಪಮಾಲೆ ಚೀಲ ಕೂಡ ಇವೆ. ಅದನ್ನೆಲ್ಲ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಮಾಡುತ್ತಿದ್ದಾರೆ.

ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳು ಬರುತ್ತಿವೆ. ನೆಟ್ಟಿಗರು ಪಲಾಶ್ ಜೊತೆ ಅವರ ಅಮ್ಮ ಹಾಗೂ ಅಂಗರಕ್ಷಕರೂ ಇದ್ದಿದ್ದು ಗಮನಿಸಿದ್ದಾರೆ. ಇದನ್ನು ನೋಡಿ ನೆಟ್ಟಿಗರು ವಿಷಯ ಸಿಕ್ಕಾಪಟ್ಟೆ ಗಂಭೀರವಾಗಿದೆ ಎಂದು ಸೂಚಿಸುತ್ತಿದೆ ಎನ್ನುತ್ತಿದ್ದಾರೆ. ಅಪ್ಪ-ಅಮ್ಮನ ಜೊತೆ ಅವರ ಆಪ್ತ ನಟ ರಾಜ್‌ಪಾಲ್ ಯಾದವ್ ಕಾಣಿಸಿಕೊಂಡಿದ್ದಾರೆ. ನೆಟ್ಟಿಗರೂ ಅದನ್ನೂ ಗುರುತಿಸಿದ್ದಾರೆ. ಪಲಾಶ್ ಮುಚ್ಚಲ್ ಅವರು ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ.
ಆದರೆ, ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಲ್ ಇಬ್ಬರ ಮದುವೆ ಸದ್ಯಕ್ಕಂತೂ ನಡೆಯುವ ಸಾಧ್ಯತೆಯಿಲ್ಲ ಎನಿಸುತ್ತಿದೆ. ಡಿಸೆಂಬರ್ 7ಕ್ಕೆ ಮದುವೆ ಎಂದು ಹಬ್ಬಿದ ಸುದ್ದಿ ಕೂಡ ಸುಳ್ಳಾಗಿದೆ. ಅಲ್ಲದೆ ಮದುವೆ ಯಾವಾಗ ಅನ್ನೋದನ್ನು ಸ್ಮೃತಿ ಮಂದಾನ ಹಾಗೂ ಅವರ ಕುಟುಂಬ ಆಗಿಲಿ, ಇಲ್ಲ ಪಲಾಶ್ ಮುಚ್ಚಲ್ ಕುಟುಂಬದವರಾಗಲಿ ಮಾಹಿತಿಯನ್ನು ಹಂಚಿಕೊಂಡಿಲ್ಲ. ಅಲ್ಲದೆ ಪಲಾಶ್ ಮುಚ್ಚಲ್ ಮೇಲಿನ ಆರೋಪಗಳಿಗೂ ಸ್ಮೃತಿ ಮಂದಾನ ಕ್ಲಾರಿಟಿ ಕೊಟ್ಟಿಲ್ಲ.


Click it and Unblock the Notifications











