ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆ ಸ್ಮೃತಿ ಮಂದಾನ ಭಾವಿ ಪತಿ ಪಲಾಶ್ ಮುಚ್ಚಲ್; ವಿಡಿಯೋ ವೈರಲ್!

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟರ್ ಹಾಗೂ ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಮದುವೆ ಮುಂದೂಡಲ್ಪಟ್ಟಿದೆ. ಬಹು ಕಾಲದ ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ನವೆಂಬರ್ 23ರಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ಮದುವೆ ದಿನವೇ ಸ್ಮೃತಿ ಮಂದಾನ ತಂದೆಯ ಆರೋಗ್ಯ ಏರು-ಪೇರಾಗಿದ್ದರಿಂದ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಸ್ಮೃತಿ ಮಂದಾನ ತಂದೆ ಆರೋಗ್ಯ ಸುಧಾರಿಸಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇತ್ತ ಮದುವೆ ನಿಂತಿದ್ದರಿಂದ ಒತ್ತಡಕ್ಕೆ ಸಿಲುಕಿದ್ದ ಪಲಾಶ್ ಮುಚ್ಚನ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಸ್ಮೃತಿ ಮಂದಾನ ಹಾಗೂ ಪಲಾಶ್ ಮದುವೆ ನಿಂತಿದ್ದರಿಂದ ಊಹಾ-ಪೋಹಗಳು ಹುಟ್ಟಿಕೊಂಡಿವೆ. ಜೊತೆಗೆ ನೆಟ್ಟಿಗರು ಕೆಲವು ವಿಡಿಯೋಗಳನ್ನು ವೈರಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

Smriti Mandhana fianc Palash Muchhal old video with Hardik Pandya s Ex-Wife Natasa Stankovic went Viral

ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂದಾನ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಎರಡೂ ಮನೆಯವರನ್ನು ಒಪ್ಪಿಸಿ ಮದುವೆಗೆ ಮುಂದಾಗಿದ್ದರು. ಆದ್ರೀಗ ತಂದೆ ಅನಾರೋಗ್ಯದಿಂದ ಮದುವೆ ನಿಂತಿದ್ದಾಗಿ ಹೇಳಲಾಗುತ್ತಿದ್ದರೂ, ಹಿನ್ನೆಲೆಯಲ್ಲಿ ಪಲಾಶ್ ಮುಚ್ಚನ್ ಅಫೇರ್‌ಗಳು ಕಾರಣವೆಂದು ಹೇಳಲಾಗುತ್ತಿದೆ. ಸಂಗೀತ ನಿರ್ದೆಶಕ ಪಲಾಶ್ ಮುಚ್ಚಲ್ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದಾನಗೆ ಮೋಸ ಮಾಡಿದ್ದಾರೆಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ಬಗ್ಗೆ ನೋಡುವುದಾರೇ.

ಮದುವೆ ನಿಲ್ಲುತ್ತಿದ್ದಂತೆ ಸ್ಮೃತಿ ಮಂದಾನಗೆ ಮೋಸ ಮಾಡಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಕೆಲವು ಸ್ಕ್ರೀನ್‌ಶಾಟ್‌ಗಳು ಸದ್ದು ಮಾಡುತ್ತಿವೆ. ಹಾಗೇ ಪಲಾಶ್ ಕೆಲವು ಯುವತಿಯರೊಂದಿಗೆ ಇರುವ ಫೋಟೋಗಳು ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ ನೆಟ್ಟಿಗರು ಮತ್ತೊಂದು ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಅದೂ ಬಾಲಿವುಡ್‌ನ ಹಾಡೊಂದಕ್ಕೆ ಪಲಾಶ್ ಮುಚ್ಚಲ್ ಹಾಗೂ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಮಸ್ತಿ ಮಾಡುತ್ತಿರುವ ವಿಡಿಯೋ ಆಗಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಲಾಶ್ ಹಾಗೂ ನತಾಶಾ ಸ್ಟಾಂಕೋವಿಕ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಕಾರಿನಲ್ಲಿ ಬಾಲಿವುಡ್ ಗಾಯಕ ಬಾದ್‌ಷಾ ಅವರ ಫೇಮಸ್ ಸಾಂಗ್ "ಡಿಜೆ ವಾಲೆ ಬಾಬು" ಸಾಂಗ್ ಪ್ಲೇ ಆಗುತ್ತಿದ್ದು, ಇಬ್ಬರೂ ಆ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಹಾಡು ನತಾಶಾಗೆ ರಾತ್ರೋರಾತ್ರಿ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ವಿಡಿಯೋದಲ್ಲಿ "ದುನಿಯಾ ರಖೂಂ ಜೂತೋಂ ಕೆ ನೀಚೆ.. ತೂ ಕಹೇ ತೋ ಬನ್ ಜಾಊಂ ಡಿಜೆ.. ದಿನ್ ರಾತ್ ಬಜಾಊಂ ಗಾನೆ.. ಹಿಂದಿ ಇಂಗ್ಲಿಷ್ ನಯೇ ಪುರಾನೆ.." ಎಂದು ಹಾಡುತ್ತಿದ್ದರೆ, ಪಲಾಶ್ ಮುಚ್ಚಲ್ ಕೂಡ ಎಂಜಾಯ್ ಮಾಡುತ್ತಿದ್ದರು. ಈ ಹಳೆ ವಿಡಿಯೋ ಈಗ ಎಲ್ಲೆಡೆ ಸಂಚಲನ ಸೃಷ್ಟಿಸುತ್ತಿದೆ.

Smriti Mandhana fianc Palash Muchhal old video with Hardik Pandya s Ex-Wife Natasa Stankovic went Viral

ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಲ್ ಮದುವೆ ಮುಂದೂಡಿಕೆ, ವಂಚನೆ ಆರೋಪಗಳ ಮಧ್ಯೆ ಈ ವಿಡಿಯೋ ಕ್ಲಿಪ್ ವೈರಲ್ ಆಗಿದೆ. Reddit ನಲ್ಲಿ priyansh_gif ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳ ಮೇಲೆ ಕಮೆಂಟ್‌ಗಳನ್ನು ಪಾಸ್ ಮಾಡುತ್ತಿದ್ದಾರೆ. ನೆಟ್ಟಿಗರು ಕೂಡ ಹತ್ತು ಹಲವು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.

ಇದರ ಜೊತೆಗೆ ಮೇರಿ ಡಿ ಕೋಸ್ಟಾ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಚಾಟ್‌ಗಳು ಪಲಾಶ್ ಮತ್ತು ಇನ್ನೊಬ್ಬ ಮಹಿಳೆಯ ನಡುವಿನ ಸಂಭಾಷಣೆಯ ವಿಡಿಯೋಗಳನ್ನು ಒಳಗೊಂಡಿದೆ. ಸ್ಮೃತಿ ಮಂದಾನ ಜೊತೆ ಸಂಬಂಧದಲ್ಲಿದ್ದಾಗಲೇ ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ಮಾತನಾಡುತ್ತಿದ್ದರು ಎಂದು ಆರೋಪ ಮಾಡಲಾಗಿದೆ. ಸದ್ಯ ವಿಡಿಯೋ ಹಾಗೂ ಚಾಟ್‌ಗಳ ಸತ್ಯಾಂಶ ಹೊರ ಬಿದ್ದಿಲ್ಲ.

More from Filmibeat

English summary
Smriti Mandhana fiancé Palash Muchhal old video with Hardik Pandya’s Ex-Wife Natasa Stankovic went Viral;
Read more about: viral video actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X