ಬೆಳಗಾದರೆ ಉರ್ಫಿ ಜಾವೇದ್ ಮುಖ ಹೀಗೆ ಊದಿಕೊಳ್ಳುತ್ತೆ; ಫೋಟೊ ಶೇರ್ ಮಾಡಿ ಆರೋಗ್ಯ ಸಮಸ್ಯೆ ಹೇಳಿಕೊಂಡ ಉರ್ಫಿ!?
ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಸದಾ ಸುದ್ದಿಯಲ್ಲಿಇರುತ್ತಾರೆ. ಬಾಲಿವುಡ್‌ನ ಪಾಪಾರಾಜಿಗಳ ಮುಂದೆ ವಿಚಿತ್ರ ಕಾಸ್ಟ್ಯೂಮ್ ಧರಿಸಿ, ಕ್ಯಾಮರಾಗೆ ಪೋಸ್ ಕೊಡುತ್ತಾ, ವೈರಲ್ ಆಗುತ್ತಲೇ ಇರುತ್ತಾರೆ. ಉರ್ಫಿ ಜಾವೇದ್ ಇದೇ ಕಾರಣಕ್ಕೆ ಸಿಕ್ಕಪಟ್ಟೆ ಫೇಮಸ್.
ಉರ್ಫಿ ಜಾವೇದ್ ವಿಚಿತ್ರ ಡ್ರೆಸ್ ಸೆನ್ಸ್ ನೋಡಿ ಕಾಮೆಂಟ್ ಮಾಡಿ ಮಾಡಿ ಸುಸ್ತಾದವರಿಗೇನು ಕಮ್ಮಿಯಿಲ್ಲ. ಆದರೂ, ಉರ್ಫಿ ಜಾವೇದ್ ಇದೆಲ್ಲವನ್ನೂ ತಲೆಕೆಡಿಸಿಕೊಳ್ಳಲೂ ಇಲ್ಲ. ತನಗೆ ಬೇಕಾದ ಹಾಗೇ ಕಾಸ್ಟ್ಯೂಮ್ ಡಿಸೈನ್ ಮಾಡಿಸಿಕೊಂಡು ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗೋದು ಇಂದಿಗೂ ನಿಂತಿಲ್ಲ.

ಉರ್ಫಿ ಜಾವೇದ್ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಪೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಅವರ ಮುಖ ಊದಿಕೊಂಡಿತ್ತು. ಈ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತನಗೆ ಆರೋಗ್ಯ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ನನ್ನ ಮುಖ ಊದಿಕೊಂಡಿರುತ್ತೆ ಎಂದು ಹೇಳಿ ಆರೋಗ್ಯ ಸಮಸ್ಯೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ತನ್ನ ಮುಖ ಊದಿಕೊಳ್ಳುವುದಕ್ಕೆ ಕಾರಣವೇನು? ಅನ್ನೋದನ್ನು ಆ ಫೋಟೊಗಳ ಜೊತೆನೇ ಹಂಚಿಕೊಂಡಿದ್ದಾರೆ. ಊದಿದ ಮುಖಗಳನ್ನು ನೋಡಿ ಕೆಲವರು ಇದು ಫಿಲ್ಲರ್ಸ್ ಸಮಸ್ಯೆ ಎಂದು ಕಾಮೆಂಟ್ ಮಾಡಿದ್ದರು. ಫಿಲ್ಲರ್ಸ್ ಅಂದರೆ, ಶಸ್ತ್ರ ಚಿಕಿತ್ಸೆ ಇಲ್ಲದೆ ಮುಖ ಅಂದವನ್ನು ಹೆಚ್ಚಿಕೊಳ್ಳಬಹುದಾದ ಒಂದು ವಿಧಾನ. ಆದರೆ, ಉರ್ಫಿ ಜಾವೇದ್ ಇದು ಫಿಲ್ಲರ್ಸ್ ಸಮಸ್ಯೆ ಅಲ್ಲ ಎಂದು ಹೇಳಿದ್ದಾರೆ.
"ನನ್ನ ಮುಖ ಊದಿಕೊಂಡಿದ್ದರ ಬಗ್ಗೆ ನಾನು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೇನೆ. ನನ್ನ ಊದಿದಕ್ಕೆ ಫಿಲ್ಲರ್ಸ್ ಕಾರಣ ಅಂತ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನನಗೆ ಅಲರ್ಜಿಯ ಸಮಸ್ಯೆಯಿದೆ. ಸಾಕಷ್ಟು ಸಂದರ್ಭಗಳಲ್ಲಿ ನನ್ನ ಮುಖ ಊದಿಕೊಂಡಿರುತ್ತೆ. ಪ್ರತಿ ಎರಡು ದಿನಕ್ಕೊಮ್ಮೆ ನಾನು ಬೆಳಗ್ಗೆ ಏಳುವಾಗ ನನ್ನ ಮುಖ ಹೀಗೆ ಊದಿಕೊಂಡಿರುತ್ತೆ. ಯಾವಾಗಲೂ ಹೀಗಾದಾಗ ನಾನು ಕಿರಿಕಿರಿಯನ್ನು ಅನುಭವಿಸುತ್ತೇನೆ" ಎಂದು ಉರ್ಫಿ ಜಾವೇದ್ ಬರೆದುಕೊಂಡಿದ್ದಾರೆ.
" ಗೆಳೆಯರೇ ಇದು ಫಿಲ್ಲರ್ಸ್ ಸಮಸ್ಯೆ ಅಲ್ಲ. ಅಲರ್ಜಿಯಿಂದ ಆಗುತ್ತಿದೆ. ಇಮ್ಯೂನೋಥೆರಪಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನನ್ನನ್ನು ಹೀಗೆ ನೋಡಿದರೆ, ಅಂದು ಅಲರ್ಜಿಯಿಂದ ಬಳಲುತ್ತಿದ್ದೇನೆ ಎಂದು ತಿಳಿಯಿರಿ. ಮಾಮೂಲಿ ಫಿಲ್ಲರ್ಸ್ ಬಿಟ್ಟರೆ ಬೇರೆ ಏನನ್ನೂ ನಾನು ಮಾಡಿಸಿಕೊಳ್ಳುವುದಿಲ್ಲ. ಇದನ್ನು ನಾನು ನನಗೆ 18 ವರ್ಷವಿದ್ದಾಗಿನಿಂದ ಮಾಡಿಕೊಂಡು ಬಂದಿದ್ದೇನೆ. ಎಂದಾದರೂ ಊದಿಕೊಂಡ ಮುಖ ನೋಡಿದಾಗ, ನನಗೆ ಸಲಹೆ ನೀಡಲು ಬರಬೇಡಿ." ಎಂದು ಊರ್ಫಿ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ.
ಉರ್ಫಿ ಜಾವೇದ್ ತನಗೆ ಆರೋಗ್ಯ ಸಮಸ್ಯೆಯಿದೆ ಎಂದು ಓಪನ್ ಆಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಆಕೆಯ ಬಗ್ಗೆ ಸಾಕಷ್ಟು ಟೀಕೆಗಳು ಬಂದರೂ ಅದನ್ನೆಲ್ಲ ಎದುರಿಸಿ, ತನ್ನ ಸಮಸ್ಯೆಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.


Click it and Unblock the Notifications











