ತಂದೆಯ ಮಾಜಿ ಗೆಳತಿಯನ್ನೇ ಹೋಲುವ ಸೋನಾಕ್ಷಿ ಸಿನ್ಹಾ; ಆ ನಟಿ ಯಾರು? ಇಬ್ಬರ ರಿಯಾಕ್ಷನ್ ಏನು?

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಜಾಹೀರ್ ಇಕ್ಬಾಲ್ ಅವರನ್ನು ಜೂನ್ 23ರಂದು ಮುಂಬೈನ ಬಾಂದ್ರಾದ ಮನೆಯಲ್ಲಿ ವಿವಾಹ ಆಗಿದ್ದಾರೆ. ಇದೇ ಸಂದರ್ಭದಲ್ಲಿ ಸೋನಾಕ್ಷಿ ಸಿನ್ಹಾರನ್ನೇ ಹೋಲುವ ಮತ್ತೊಬ್ಬ ನಟಿಯ ಫೋಟೊವನ್ನು ಕೂಡ ವೈರಲ್ ಮಾಡಲಾಗುತ್ತಿದೆ.

ಈ ನಟಿಯೊಂದಿಗೆ ಸೋನಾಕ್ಷಿ ಸಿನ್ಹಾರನ್ನು ಹೋಲಿಕೆ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ. ಸೋನಾಕ್ಷಿ ಸಿನ್ಹಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ಆಕೆಯ ಲುಕ್ ನೋಡಿ ಸಿನಿಪ್ರಿಯರು ಅಚ್ಚರಿ ವ್ಯಕ್ತಪಡಿಸಿದ್ದರು. 2010ರಲ್ಲಿ ಸೋನಾಕ್ಷಿ ಸಿನ್ಹಾ 'ದಬಾಂಗ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅದೇ ವೇಳೆ ಹಿರಿಯ ನಟಿಯೊಂದಿಗೆ ಹೋಲಿಕೆ ಮಾಡಲಾಗಿತ್ತು. ಆ ನಟಿ ಮತ್ಯಾರೂ ಅಲ್ಲ 70 ಹಾಗೂ 80ರ ದಶಕದ ಫೇವರಿಟ್ ನಟಿ ರೀನಾ ರಾಯ್.

Sonakshi Sinha s resemblance Reena Roy is Shatrughan Sinha s rumoured girlfriend

ವಿಶೇಷ ಅಂದರೆ, ಹಿರಿಯ ನಟಿ ರೀನಾ ರಾಯ್ ಹೆಸರು ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ಜೊತೆ ತಳುಕು ಹಾಕಿಕೊಂಡಿತ್ತು. ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ಜೊತೆ ರೀನಾ ರಾಯ್ ಲವ್‌ನಲ್ಲಿ ಬಿದ್ದಿದ್ದರು ಅನ್ನುವ ಸುದ್ದಿಗಳು ಅಂದಿನ ದಿನಗಳಲ್ಲಿ ಹಬ್ಬಿದ್ದವು. 2010ರಲ್ಲಿ ಸೋನಾಕ್ಷಿ ಸಿನ್ಹಾ ಮೊದಲ ಸಿನಿಮಾ ರಿಲೀಸ್ ಆದಾಗ, ಇದೇ ರೀನಾ ರಾಯ್ ಜೊತೆ ಹೋಲಿಕೆ ಮಾಡಲಾಗಿತ್ತು.

ರೀನಾ ರಾಯ್ 70 ರ ದಶಕದಲ್ಲಿ ಬಾಲಿವುಡ್‌ನ ಸ್ಟಾರ್ ನಟಿಯಾಗಿದ್ದರು. ಅಂದಿನ ಕಾಲದ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ನಟಿಯೀಕೆ. ಅದರಲ್ಲೂ ಸೋನಾಕ್ಷಿ ಸಿನ್ಹಾ ತಂದೆ ಶತುಘ್ನ ಸಿನ್ಹಾ ಅವರೊಂದಿಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಹೀಗಾಗಿ ಅವರೊಂದಿಗೆ ಹೆಚ್ಚು ಆತ್ಮೀಯತೆ ಬೆಳೆದಿತ್ತು. ರೀನಾ ರಾಯ್ ಜೊತೆ ಶತ್ರುಘ್ನ ಸಿನ್ಹಾ ಲವ್ ಸ್ಟೋರಿ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಸುದ್ದಿ ಮಾಡಿತ್ತು.

ಶತುಘ್ನ ಸಿನ್ಹಾ ಇಬ್ಬರು ನಟಿಯರೊಂದಿಗೆ ಏಕಕಾಲಕ್ಕೆ ಅಫೇರ್ ಇಟ್ಟುಕೊಂಡಿದ್ದರು. ಒಂದ್ಕಡೆ ರೀನಾ ರಾಯ್ ಜೊತೆ ಡೇಟಿಂಗ್ ಮಾಡುತ್ತಿದ್ದರೆ. ಇನ್ನೊಂದು ಕಡೆ ಪೂನಂ ಚಂದಿರಮಣಿ ಜೊತೆ ಲವ್‌ನಲ್ಲಿ ಬಿದ್ದಿದ್ದರು. ಆದರೆ, ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾದಾಗ, ಪೂನಂ ಅವರನ್ನೇ ಆಯ್ಕೆ ಮಾಡಿಕೊಂಡರು. ಪೂನಂ ಜೊತೆ ಶತ್ರುಘ್ನ ಸಿನ್ಹಾ ವಿವಾಹವಾದ ಬಳಿಕವೂ ರೀನಾ ರಾಯ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿರಲಿಲ್ಲ. ಬಳಿಕ ರೀನಾ ರಾಯ್ ಪಾಕಿಸ್ತಾನದ ಕ್ರಿಕೆಟರ್ ಮೊಹ್ಸಿನ್ ಖಾನ್ ಅವರನ್ನು ಮದುವೆ ಆದರು.

Sonakshi Sinha s resemblance Reena Roy is Shatrughan Sinha s rumoured girlfriend

ಆದರೆ, ರೀನಾ ರಾಯ್ ಹಾಗೂ ಮೊಹ್ಸಿನ್ ಖಾನ್ ಅವರ ದಾಂಪತ್ಯ ಜೀವನ ಹೆಚ್ಚು ದಿನ ಉಳಿಯಲಿಲ್ಲ. ಆದರೆ, 80ರ ದಶಕದಲ್ಲಿ ಶತ್ರುಘ್ನ ಸಿನ್ಹಾ ಹಾಗೂ ರೀನಾ ರಾಯ್ ಅಫೇರ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸೋನಾಕ್ಷಿ ಸಿನ್ಹಾ ಮದುವೆಯಾದ ಬೆನ್ನಲ್ಲೇ ಇದೇ ರೀನಾ ರಾಯ್ ಜೊತೆ ಮತ್ತೆ ಸೋನಾಕ್ಷಿ ಸಿನ್ಹಾರನ್ನು ಹೋಲಿಕೆ ಮಾಡುತ್ತಿದ್ದಾರೆ. ನಟಿ ರೀನಾ ರಾಯ್ ಜೊತೆ ಹೋಲಿಕೆ ಮಾಡಿದ್ದಕ್ಕೆ ಈ ಹಿಂದೆನೇ ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯೆ ನೀಡಿದ್ದರು. "ನಾನು ನನ್ನ ಅಮ್ಮನನ್ನು ಬಿಟ್ಟರೆ, ಬೇರೆ ಯಾರಂತೆಯೂ ಕಾಣುವುದಿಲ್ಲ" ಎಂದು ಹೇಳಿದ್ದರು.

ಇದೇ ಪ್ರಶ್ನೆಗೆ 2023ರಲ್ಲಿ ರೀನಾ ರಾಯ್ ಕೂಡ ಪ್ರತಿಕ್ರಿಯೆ ನೀಡಿದ್ದರು. " ಇದೇ ಅಲ್ವಾ ಜೀವನದಲ್ಲಿ ಕೆಲವು ಕಾಕತಾಳೀಯ ಘಟನೆಗಳು ನಡೆದು ಹೋಗುತ್ತವೆ. ಜೀತೇಂದ್ರ ಅವರ ತಾಯಿ ಹಾಗೂ ನನ್ನ ಅಮ್ಮ ಇಬ್ಬರೂ ಅವಳಿ ಜವಳಿಯ ಹಾಗೆ ಕಾಣುತ್ತಾರೆ" ಎಂದು ಸೋನಾಕ್ಷಿ ಸಿನ್ಹಾ ಜೊತೆಗಿನ ಹೋಲಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.

More from Filmibeat

English summary
Sonakshi Sinha's resemblance actress Reena Roy:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X