Sonam Kapoor : ಬಿಗಿ ಬಟ್ಟೆ ಧರಿಸಿ ಬಂದ ಗರ್ಭಿಣಿ ಸೋನಂ ಕಪೂರ್‌ಗೆ ನೆಟ್ಟಿಗರಿಂದ ಫುಲ್ ಕ್ಲಾಸ್!

ಬಾಲಿವುಡ್ ನಟಿ ಸೋನಂ ಕಪೂರ್ ಖುಷಿ ವಿಚಾರ ಒಂದನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. 2018ರ ಮೇ8 ರಂದು ಬಹಳ ಅದ್ಧೂರಿಯಾಗಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸೋನಂ ಕಪೂರ್ ಇದೀಗ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸ್ವತಃ ಸೋನಂ ಕಪೂರ್ ದಂಪತಿಗಳು ಈ ಖುಷಿ ವಿಚಾರವನ್ನು ಅಭಿಮಾನಿಗಳಲ್ಲಿ ಒಂದು ವಾರದ ಹಿಂದೆ ಹಂಚಿಕೊಂಡಿದ್ದರು. ಈ ಸುದ್ದಿ ತಿಳಿದು ಸೋನಂ ಕಪೂರ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದರು.

ಮದುವೆ ಆದ ಬಳಿಕ ಮುಂಬೈ ಬಿಟ್ಟು ಆನಂದ್ ಆಹುಜಾ ಜೊತೆ ಲಂಡನ್‌ನಲ್ಲಿ ಸೆಟಲ್ ಆಗಿದ್ದ ಸೋನಂ ಕಪೂರ್ ಒಂದಷ್ಟು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಇದೀಗ ಪ್ರೆಗ್ನೆಂಸ್ಸಿ ಅನೌನ್ಸ್ ಆದ ಬಳಿಕ ನಟಿ ಮೊದಲ ಬಾರಿಗೆ ಕ್ಯಾಮರ ಕಣ್ಣಿಗೆ ಬಿದ್ದಿದ್ದಾರೆ. ಸೋನಂ ಅವತಾರಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಸುದ್ದಿ ತಿಳಿದು ಫ್ಯಾನ್ಸ್ ಕೂಡ ಫುಲ್ ಖುಷ್

ಸುದ್ದಿ ತಿಳಿದು ಫ್ಯಾನ್ಸ್ ಕೂಡ ಫುಲ್ ಖುಷ್

ಬಾಲಿವುಡ್ ನಟಿ ಸೋನಂ ಕಪೂರ್ ಕಳೆದ ವಾರವಷ್ಟೆ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಸುದ್ದಿ ತಿಳಿದು ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ. ಇದಾದ ಒಂದು ವಾರದಲ್ಲಿ ಸೋನಂ ಕಪೂರ್ ಮತ್ತು ಪತಿ ಆನಂದ್ ಆಹುಜಾ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಮುಂಬೈನಲ್ಲಿ ಇರುವ ಸೋನಂ ಮತ್ತು ಆನಂದ್ ಆಹುಜಾ ಇತ್ತೀಚೆಗೆ ಒಂದು ಖಾಸಗಿ ರೆಸ್ಟೊರೆಂಟ್ ಓಪನಿಂಗ್‌ಗೆ ತೆರಳಿದ್ದರು.

ಗರ್ಭಿಣಿ ಅನ್ನೋದನ್ನು ಮರೆತ ನಟಿ

ಗರ್ಭಿಣಿ ಅನ್ನೋದನ್ನು ಮರೆತ ನಟಿ

ಈ ಸಂದರ್ಭದಲ್ಲಿ ಬಿಳಿ ಶರ್ಟ್ ಮತ್ತು ಜಾಗರ್ ಪ್ಯಾಂಟ್ ಧರಿಸಿದ್ರೆ, ಸೋನಂ ತಾನು ಗರ್ಭಿಣಿ ಅನ್ನೋದನ್ನು ಮರೆತು ಬಿಳಿ ಮತ್ತು ನೀಲಿ ಬಣ್ಣದ ಬ್ಲೇಸರ್ ಸೂಟ್ ಧರಿಸಿದ್ದಾರೆ. ಪ್ರೆಗ್ನೆಂನ್ಸಿ ಟೈಮ್‌ನಲ್ಲಿ ಇಂತಹ ಬಟ್ಟೆಗಳನ್ನು ಧರಿಸೋದನ್ನು ಸಾಕಷ್ಟು ಮಂದಿ ನಿರಾಕರಿಸುತ್ತಾರೆ. ಯಾಕಂದ್ರೆ ಗರ್ಭದಲ್ಲಿರುವ ಮಗುವಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ. ಆದರೆ ಸೋನಂ ಕಪೂರ್ ಧರಿಸಿದ್ದ ಪ್ಯಾಂಟ್ ತುಂಬ ಬಿಗಿಯಾಗಿ ಇದ್ದಂತೆ ಕಾಣುತ್ತಿದ್ದು, ನೆಟ್ಟಿಗರು ಈ ಸಂದರ್ಭದಲ್ಲಿ ಇಂತಹ ಡ್ರೆಸ್ ಬೇಕಿತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಗರ್ಭಿಣಿ ಸೋನಂ ಕಪೂರ್ ಈ ಡ್ರೆಸ್ ವಿಚಾರಕ್ಕೆ ಸಾಕಷ್ಟು ಚರ್ಚೆ ಕೂಡ ಆಗುತ್ತಿದೆ.

ಸೋನಂ ಕಪೂರ್ ತಂದೆ ಅನಿಲ್ ಕಪೂರ್ ಉಪಸ್ಥಿತಿ

ಸೋನಂ ಕಪೂರ್ ತಂದೆ ಅನಿಲ್ ಕಪೂರ್ ಉಪಸ್ಥಿತಿ

ಈ ಖಾಸಗಿ ರೆಸ್ಟೊರೆಂಟ್ ಓಪನಿಂಗ್‌ಗೆ ಬಂದಿದ್ದ ದಂಪತಿಗಳು ಕ್ಯಾಮರಾಗೆ ಪೋಸ್ ನೀಡಿ ಅಲ್ಲಿ ಕೆಲ ಸಮಯ ಕಳೆದು ಅಲ್ಲಿಂದ ತೆರಳಿದ್ದಾರೆ. ಈ ಕಾರ್ಯಕ್ರಮಕ್ಕೆ ಸೋನಂ ಕಪೂರ್ ತಂದೆ ಅನಿಲ್ ಕಪೂರ್ ಕೂಡ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ಸಮಯದಲ್ಲಿ ತಂದೆಯ ಜೊತೆಗೂ ನಿಂತು ಸೋನಂ ಕಪೂರ್ ಪೋಟೊಗೆ ಪೋಸ್ ನೀಡಿದ್ದಾರೆ. ಬಳಿಕ ಸೋನಂ ಕಪೂರ್ ಮತ್ತು ಆನಂದ್ ಆಹುಜಾ ಕೊಂಚ ರೊಮ್ಯಾಂಟಿಕ್ ಆಗಿ ಪೋಸ್ ನೀಡಿ ದಂಪತಿಗಳು ಅಲ್ಲಿಂದ ತೆರಳಿದ್ದಾರೆ.

ಒಂದಷ್ಟು ಸಿನಿಮಾಗಳಲ್ಲಿಯೂ ಸೋನಂ ಬ್ಯುಸಿ

ಒಂದಷ್ಟು ಸಿನಿಮಾಗಳಲ್ಲಿಯೂ ಸೋನಂ ಬ್ಯುಸಿ

ಮದುವೆ ಆದ ಬಳಿಕ ಮುಂಬೈ ಬಿಟ್ಟು ಆನಂದ್ ಆಹುಜಾ ಜೊತೆ ಲಂಡನ್‌ನಲ್ಲಿ ಸೆಟಲ್ ಆಗಿದ್ದ ಸೋನಂ ಕಪೂರ್ ಒಂದಷ್ಟು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದರು. ಮದುವೆ ಬಳಿಕವೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸೋನಂ ಇದೀಗ ಗರ್ಭಿಣಿ ಅನ್ನೋ ವಿಚಾರ ಬಹಿರಂಗವಾಗಿದೆ. ಕಳೆದ ವಾರ ತನ್ನ ಇನ್‌ಸ್ಟಾಗ್ರಾಂನಲ್ಲಿ ಸೋನಂ ಮತ್ತು ಆನಂದ್ ಅಹುಜಾ ದಂಪತಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದು, ಫೋಟೊಶೂಟ್‌ ಕೂಡ ಮಾಡಿಸಿದ್ದಾರೆ. ಆನಂದ್ ಅಹುಜಾ ಮಡಿಲಿನಲ್ಲಿ ಮಲಗಿ ಪೋಸ್ ನೀಡಿರುವ ಸೋನಂ ಕಪೂರ್ ಕಪ್ಪು ಬಣ್ಣದ ಜಂಪ್ ಸೂಟ್ ಮಾದರಿಯ ಬಟ್ಟೆ ಧರಿಸಿದ್ದರು.

More from Filmibeat

English summary
Sonam Kapoor and Anand Ahuja make first appearance since pregnancy announcement. Sonam Kapoor trolled for her dress. Here is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X