ಜನ್ಮದಿನದಂದು ಮತ್ತೊಂದು ಜನ ಮೆಚ್ಚುವ ಮಹತ್ಕಾರ್ಯಕ್ಕೆ ಮುಂದಾದ ಸೋನು ಸೂದ್

ಲಾಕ್ ಡೌನ್ ಆರಂಭವಾದ ಸಂದರ್ಭದಿಂದಲೂ ಎಲ್ಲರ ಮನಸ್ಸಿನಲ್ಲಿಯೂ ಜಾಗ ಪಡೆದ ನಟರೆಂದರೆ ಸೋನು ಸೂದ್. ತೆರೆಯ ಮೇಲೆ ಖಳನಾಯಕನಾಗಿ ಸೋನು ಸೂದ್ ಕಾಣಿಸಿಕೊಳ್ಳುತ್ತಾರಾದರೂ ನಿಜ ಬದುಕಿನಲ್ಲಿ ಅವರನ್ನು ಅನೇಕರು ತಮ್ಮ ಹೀರೋ ಎಂದೇ ಪರಿಗಣಿಸಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯ ಕಷ್ಟ ಕಿವಿಗೆ ಬಿದ್ದರೂ ಅವರಿಗೆ ಸಹಾಯ ಮಾಡಲು ಸೋನು ಮುಂದಾಗುತ್ತಿದ್ದಾರೆ.

Recommended Video

ಕೊಟ್ಟ ಮಾತನ್ನು ಉಳಿಸಿಕೊಂಡ ಸೋನು ಸೂದ್. | Sonu Sood Gifts Tractor | Filmibeat Kannada

ದೇಶದ ವಿವಿಧೆಡೆ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಲಾಕ್ ಡೌನ್ ಅವಧಿಯಲ್ಲಿ ಸಿಲುಕಿಕೊಂಡಿದ್ದ ನೂರಾರು ವಲಸಿಗರು ಅವರ ಊರು ತಲುಪಲು ವ್ಯವಸ್ಥೆ ಮಾಡಿದ್ದ ಸೋನು, ಈಗ ಕಷ್ಟದಲ್ಲಿರುವ ಕುಟುಂಬಗಳನ್ನು ಹುಡುಕಿ ಅವರಿಗೆ ನೆರವು ನೀಡುತ್ತಿದ್ದಾರೆ. ಇತ್ತೀಚೆಗೆ ಹೊಲ ಊಳಲು ಹೆಣ್ಣುಮಕ್ಕಳನ್ನೇ ಬಳಸಿಕೊಳ್ಳುತ್ತಿರುವ ಕುಟುಂಬದ ವಿಡಿಯೋ ಕಂಡು ಆ ಕುಟುಂಬಕ್ಕೆ ಟ್ರ್ಯಾಕ್ಟರ್ ಒದಗಿಸಿದ್ದರು.

ಜುಲೈ 30ರಂದು 47ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಸೋನು ಸೂದ್ ಮತ್ತೊಂದು ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಮುಂದೆ ಓದಿ.

ವಲಸಿಗರಿಗೆ ಉದ್ಯೋಗ

ವಲಸಿಗರಿಗೆ ಉದ್ಯೋಗ

ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಲಸಿಗರು ಸುರಕ್ಷಿತವಾಗಿ ತಮ್ಮ ಹುಟ್ಟೂರು ಸೇರುವಂತೆ ಮಾಡಿದ್ದ ಸೋನು, ಈಗ ಈ ಅವಧಿಯಲ್ಲಿ ಕೆಲಸ ಕಳೆದುಕೊಂಡು ಪರದಾಡುತ್ತಿರುವವರಿಗೆ ಕೆಲಸ ಒದಗಿಸಲು ಮಹತ್ವದ ಯೋಜನೆ ರೂಪಿಸಿದ್ದಾರೆ.

ಮೂರು ಲಕ್ಷ ಕೆಲಸ

ಮೂರು ಲಕ್ಷ ಕೆಲಸ

ಈ ತಿಂಗಳ ಆರಂಭದಲ್ಲಿ ಆರಂಭಿಸಿದ್ದ ಪ್ರವಾಸಿ ರೋಜ್‌ಗಾರ್ ಎಂಬ ಉದ್ಯೋಗ ಪೋರ್ಟಲ್‌ನಲ್ಲಿ ಮೂರು ಲಕ್ಷ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವುದಾಗಿ ತಮ್ಮ ಜನ್ಮದಿನದ ಸಂದರ್ಭದಲ್ಲಿ ಸೋನು ಸೂದ್ ಘೋಷಿಸಿದ್ದಾರೆ.

ಎಲ್ಲ ಸವಲತ್ತು ಇರಲಿದೆ

ಎಲ್ಲ ಸವಲತ್ತು ಇರಲಿದೆ

'ನನ್ನ ಹುಟ್ಟುಹಬ್ಬದ ವೇಳೆ ನನ್ನ ಕಡೆಯಿಂದ ಸಣ್ಣದೊಂದು ಪ್ರಯತ್ನ. ಪ್ರವಾಸಿ ರೋಜ್‌ಗಾರ್ ಡಾಟ್ ಕಾಮ್‌ನಲ್ಲಿ ಮೂರು ಲಕ್ಷ ಉದ್ಯೋಗ ಸಿಗಲಿದೆ. ಇದೆಲ್ಲವೂ ಉತ್ತಮ ಸಂಬಳ, ಪಿಎಫ್, ಇಎಸ್‌ಐ ಮತ್ತು ಇತರೆ ಸವಲತ್ತುಗಳನ್ನು ಒಳಗೊಂಡಿರಲಿದೆ' ಎಂದು ಸೋನು ತಿಳಿಸಿದ್ದಾರೆ.

ಕಪಿಲ್ ಶರ್ಮಾ ಶೋ

ಕಪಿಲ್ ಶರ್ಮಾ ಶೋ

ಸೋನು ಅವರಿಂದಾಗಿ ಸುರಕ್ಷಿತರಾಗಿ ತಮ್ಮ ಊರುಗಳಿಗೆ ತಲುಪಿರುವ ನೂರಾರು ಕಾರ್ಮಿಕರು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಹಿಳೆಯೊಬ್ಬಳು ತನಗೆ ಜನಿಸಿದ ಮಗುವಿಗೆ ಸೋನು ಸೂದ್ ನಾಮಕರಣ ಮಾಡಿದ್ದು, ಹೊಸದಾಗಿ ಆರಂಭಿಸಿದ ಅಂಗಡಿಗೆ ಸೋನು ಸೂದ್ ಹೆಸರಿಟ್ಟಿದ್ದು ಬಹಿರಂಗವಾಗಿತ್ತು. ಖ್ಯಾತ ಹಾಸ್ಯ ಕಾರ್ಯಕ್ರಮ 'ದಿ ಕಪಿಲ್ ಶರ್ಮಾ' ಪುನರಾರಂಭವಾಗುತ್ತಿದ್ದು, ಅದರಲ್ಲಿ ಮೊದಲ ಅತಿಥಿಯಾಗಿ ಸೋನು ಸೂದ್ ಭಾಗವಹಿಸಿದ್ದಾರೆ.

More from Filmibeat

English summary
Actor Sonu Sood has announced 3 lakh job offers as his birthday gift to migrant workers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X