ಸಂಕಷ್ಟದಲ್ಲಿರುವ ಮುನ್ನಾಭಾಯಿ ನಟನಿಗೆ ಸಹಾಯ ಮಾಡಲು ಮುಂದಾದ ಸೋನು ಸೂದ್

'ಮುನ್ನಾಭಾಯಿ ಎಂಬಿಬಿಎಸ್' ಚಿತ್ರದಲ್ಲಿ ಆಸ್ಪತ್ರೆ ಸ್ವಚ್ಛಗೊಳಿಸುವ ಕೆಲಸಗಾರನ ಪಾತ್ರದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದ ನಟ ಸುರೇಂದ್ರ ರಾಜನ್ ಅವರಿಗೆ ಸಹಾಯ ಮಾಡಲು ಸೋನು ಸೂದ್ ಮುಂದಾಗಿದ್ದಾರೆ.

Recommended Video

ವಲಸೆ ಕಾರ್ಮಿಕರಿಗೆ ನೆರವಾದ ಸೋನು ಸೂದ್ ಅವರನ್ನು ತಡೆದ ಪೋಲಿಸರು | Sonu Sood

'ಆರ್... ರಾಜ್ ಕುಮಾರ್' ಚಿತ್ರದಲ್ಲಿ ಸುರೇಂದ್ರ ರಾಜನ್ ಮತ್ತು ಸೋನು ಸೂದ್ ಒಟ್ಟಾಗಿ ಕೆಲಸ ಮಾಡಿದ್ದರು. ಲಾಕ್ ಡೌನ್ ಅವಧಿಯಲ್ಲಿ ದೇಶದ ವಿವಿಧೆಡೆ ಸಂಕಷ್ಟದಲ್ಲಿ ಇರುವ ದಿನಗೂಲಿ ಕಾರ್ಮಿಕರು, ವಲಸಿಗರು ಸೇರಿದಂತೆ ಅನೇಕರನ್ನು ಅವರ ಮನೆಗಳಿಗೆ ಕಳುಹಿಸಲು ಸಹಾಯ ಮಾಡುವ ಔದಾರ್ಯ ಮೆರೆದಿರುವ ಸೋನು ಸೂದ್, ತಮ್ಮ ಸಾಮಾಜಿಕ ಸೇವೆಯನ್ನು ಮುಂದುವರಿಸುವ ಮೂಲಕ ಶ್ಲಾಘನೆಗೆ ಒಳಗಾಗುತ್ತಿದ್ದಾರೆ. ಈಗ ಅವರು ಬಾಲಿವುಡ್‌ನ ಹಿರಿಯ ನಟನ ಸಹಾಯಕ್ಕೆ ಧಾವಿಸಿದ್ದಾರೆ. ಮುಂದೆ ಓದಿ...

ಮುಂಬೈನಲ್ಲಿ ಸಿಲುಕಿರುವ ನಟ

ಮುಂಬೈನಲ್ಲಿ ಸಿಲುಕಿರುವ ನಟ

ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಿಸುವುದಕ್ಕೂ ಮುನ್ನ ವೆಬ್ ಸೀರೀಸ್ ಒಂದರಲ್ಲಿ ನಟಿಸಲು ಹಿರಿಯ ನಟ ಸುರೇಂದ್ರ ರಾಜನ್ ಮುಂಬೈಗೆ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ಲಾಕ್ ಡೌನ್ ಜಾರಿಯಾಗಿದ್ದರಿಂದ ಅವರು ತಮ್ಮ ತವರೂರು ಸಟ್ನಾಗೆ ಮರಳಲು ಸಾಧ್ಯವಾಗದಂತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಸಹಾಯ ಮಾಡುತ್ತಿರುವ ಸೋನು ಸೂದ್

ಸಹಾಯ ಮಾಡುತ್ತಿರುವ ಸೋನು ಸೂದ್

ಮುಂಬೈ ನಗರಿಯಲ್ಲಿ ಸುರೇಂದ್ರ ರಾಜನ್ ಪರದಾಡುತ್ತಿರುವ ಸುದ್ದಿ ತಿಳಿದ ಸೋನು ಸೂದ್, ಮಧ್ಯಪ್ರದೇಶದಲ್ಲಿರುವ ಅವರ ಊರಿಗೆ ಮರಳಿ ಕಳುಹಿಸಲು ನೆರವಾಗುವ ಭರವಸೆ ನೀಡಿದ್ದಾರೆ. ಕಷ್ಟದಲ್ಲಿರುವ ಸಾವಿರಾರು ಜನರಿಗೆ ಮಿಡಿದಿರುವ ಸೋನು ಸೂದ್, ಬಾಲಿವುಡ್‌ನ ಸಹನಟರಿಗೂ ಸಹಾಯ ಮಾಡುತ್ತಿದ್ದಾರೆ.

ಸೋನು ಸೂದ್ ಅದ್ಭುತ ಕೆಲಸ

ಸೋನು ಸೂದ್ ಅದ್ಭುತ ಕೆಲಸ

'ಸೋನು ಸೂದ್ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಒಬ್ಬ ಮನುಷ್ಯ ಹೀಗೆ ಕೆಲಸ ಮಾಡುತ್ತಿರುವುದು ಅಚ್ಚರಿಯಾಗುತ್ತಿದೆ. ಜನರಿಗೆ ಸಹಾಯ ಮಾಡಲು ಅವರೊಳಗೆ ಬಹಳ ಶಕ್ತಿ ಇಲ್ಲದೆ ಇದ್ದರೆ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅವರು ಮಹತ್ವದ ಕೆಲಸ ಮಾಡುತ್ತಿದ್ದಾರೆ. ಸೋನು ಸೂದ್ ಅವರಂತಹ ಜನರು ಬಹಳ ವಿರಳ' ಎಂದು ಸುರೇಂದ್ರ ರಾಜನ್ ಹೇಳಿದ್ದಾರೆ.

ಯಾರನ್ನೂ ಅವಲಂಬಿಸುವುದಿಲ್ಲ

ಯಾರನ್ನೂ ಅವಲಂಬಿಸುವುದಿಲ್ಲ

ಸಂಜಯ್ ದತ್ ಅವರೊಂದಿಗೆ ಈಗಲೂ ಸಂಪರ್ಕದಲ್ಲಿ ಇರುವುದಾಗಿ ಹೇಳಿರುವ ಸುರೇಂದ್ರ, ಸಹಾಯಕ್ಕಾಗಿ ಅವರನ್ನು ಕೇಳಬಹುದಾಗಿತ್ತು. ಆದರೆ ಯಾರ ಮೇಲೆಯೂ ಅವಲಂಬನೆ ಹೊಂದಲು ನಾನು ಬಯಸುವುದಿಲ್ಲ' ಎಂದು ಹೇಳಿದ್ದಾರೆ.

ಆರೆಸ್ಸೆಸ್‌ನಿಂದ ರೇಷನ್

ಆರೆಸ್ಸೆಸ್‌ನಿಂದ ರೇಷನ್

ತಮ್ಮ ಬಳಿ ಇರುವ ಹಣವೆಲ್ಲವೂ ಹೆಚ್ಚೂ ಕಡಿಮೆ ಖಾಲಿಯಾಗಿದೆ. ಮನೆ ಬಾಡಿಗೆ ಕಟ್ಟಲೂ ಈಗ ಹಣವಿಲ್ಲದಂತಾಗಿದೆ ಎಂದಿರುವ ಅವರು, 'ನನ್ನ ಆಪ್ತರೊಬ್ಬರು ಮೂರು ತಿಂಗಳ ಬಾಡಿಗೆ 45,000 ರೂ. ನೀಡಿದ್ದಾರೆ. ನನಗೆ ದಿನಸಿ ಸಾಮಾನುಗಳನ್ನು ನೀಡುವ ಮೂಲಕ ಆರೆಸ್ಸೆಸ್ ಸಹಾಯ ಮಾಡಿದೆ' ಎಂದು ತಿಳಿಸಿದ್ದಾರೆ.

More from Filmibeat

English summary
Bollywood actor Sonu Sood has assured to help Munna Bhai actor Surendra Rajan who has been stranded in Mumbai since lockdown.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X