ನಿಜ ಜೀವನದ ಹೀರೋ ಎಂದು ಮತ್ತೆ ಸಾಬೀತು ಮಾಡಿದ ಸೋನು ಸೂದ್! ವಿಡಿಯೋ ನೋಡಿ

ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ಸೋನು ಸೂದ್ ನಿಜ ಜೀವನದಲ್ಲಿ ಹೀರೋ ಎಂಬುದು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಭಾರತದ ಜನರಿಗೆ ಅರ್ಥವಾಗಿದೆ.

ಮೊದಲ ಲಾಕ್‌ಡೌನ್ ಸಮಯದಲ್ಲಿ ಸರ್ಕಾರದ ಇಲಾಖೆಯೊಂದು ಮಾಡಬಹುದಾದ ಕೆಲಸಗಳನ್ನು ಸೋನು ಸೂದ್ ಒಬ್ಬರೇ ಸಣ್ಣ ಗುಂಪಿನ ಸಹಾಯದೊಂದಿಗೆ ಮಾಡಿದ್ದರು. ದೇಶದ ಹಲವು ನಗರಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಸ್ವಂತ ಖರ್ಚಿನಲ್ಲಿ ತಲುಪಿಸಿದ್ದರು ಸೋನು ಸೂದ್.

ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್ ಮಾಡಿದ ಸಹಾಯಕ್ಕಾಗಿ ಅವರನ್ನು ಮಸೀಹಾ (ದೇವರು) ಎಂದು ಕರೆಯಲಾಗುತ್ತದೆ. ಲಾಕ್‌ಡೌನ್ ನಂತರವೂ ಅವರು ತಮ್ಮ ಸಾಮಾಜಿಕ ಕಾರ್ಯಗಳನ್ನು ಹಾಗೆಯೇ ಮುಂದುವರೆಸಿದ್ದಾರೆ. ಇದೀಗ ಅಚಾನಕ್ಕಾಗಿ 19 ವರ್ಷದ ಬಾಲಕನ ಜೀವ ಉಳಿಸುವ ಮೂಲಕ ಸೋನು ಸೂದ್ ಮತ್ತೊಮ್ಮೆ ತಾವು ನಿಜ ಜೀವನದ ಹೀರೋ ಎಂಬುದನ್ನು ಸಾಬೀತು ಮಾಡಿದ್ದಾರೆ.

ಸೋನು ಸೂದ್ ಇದೀಗ ಪಂಜಾಬ್ ಚುನಾವಣೆ ಪ್ರಚಾರದಲ್ಲಿ ತೊಡಿಗಿಸಕೊಂಡಿದ್ದಾರೆ. ಸೋನು ಸೂದ್‌ರ ಸಹೋದರಿ ಮಾಳವಿಕ ಸೂದ್ ಪಂಜಾಬ್‌ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸೋನು ಸೂದ್ ರಾತ್ರಿ ತಮ್ಮ ಕಾರಿನಲ್ಲಿ ಪ್ರಯಾಣಿಸುವಾಗ ಫ್ಲೈ ಓವರ್‌ ಒಂದರ ಮೇಲೆ ಅಪಘಾತವೊಂದು ಸಂಭವಿಸಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವಕ

ಕಾರಿನಿಂದ ಇಳಿದು ಬಂದ ಸೋನು ಸೂದ್ ಹಾಗೂ ಅವರ ಕೆಲವು ಗೆಳೆಯರು ಅಪಘಾತಕ್ಕೆ ಒಳಗಾಗಿದ್ದ ಮಾರುತಿ ಡಿಜೈರ್ ಕಾರಿನ ಬಳಿ ಧಾವಿಸಿದ್ದಾರೆ. ಕಾರಿನ ಒಳಗೆ ಸುಮಾರು 19 ವರ್ಷದ ಬಾಲಕ ತೀವ್ರಗಾಯದೊಂದಿಗೆ ಡ್ರೈವಿಂಗ್ ಸೀಟ್‌ ಮೇಲೆ ಪ್ರಜ್ಞಾ ಶೂನ್ಯನಾಗಿ ಬಿದ್ದಿದ್ದ. ಆದರೆ ಕಾರಿಗೆ ಸೆಂಟ್ರಲ್ ಲಾಕ್ ಇದ್ದಿದ್ದರಿಂದ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ.

ತೋಳಿನಲ್ಲಿ ಎತ್ತಿಕೊಂಡು ಓಡಿದ ಸೋನು ಸೂದ್

ತೋಳಿನಲ್ಲಿ ಎತ್ತಿಕೊಂಡು ಓಡಿದ ಸೋನು ಸೂದ್

ಬಳಿಕ ಹೇಗೋ ಕಾರಿನ ಒಂದು ಬಾಗಿಲು ತೆಗೆದು ಸ್ವತಃ ಸೋನು ಸೂದ್ ಕಾರಿನ ಒಳಕ್ಕೆ ಹೋಗಿ ಡ್ರೈವಿಂಗ್ ಸೀಟ್‌ನಲ್ಲಿ ಗಾಯಗೊಂಡು ಪ್ರಜ್ಞಾಹೀನನಾಗಿ ಬಿದ್ದಿದ್ದ ಯುವಕನನ್ನು ಅಮಾನತ್ತು ತಮ್ಮ ತೋಳಿನಲ್ಲಿ ಎತ್ತಿಕೊಂಡು ತಮ್ಮ ಕಾರಿನತ್ತ ಓಡಿ ತಮ್ಮ ಕಾರಿಗೆ ಹಾಕಿಕೊಂಡು ಹತ್ತಿರದ ಖಾಸಗಿ ಆಸ್ಪತ್ರೆಗೆ ಯುವನನ್ನು ದಾಖಲಿಸಿದ್ದಾರೆ ಸೋನು ಸೂದ್. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.

ಯುವಕನ ಜೀವಕ್ಕೆ ತೊಂದರೆಯಿಲ್ಲ

ಯುವಕನ ಜೀವಕ್ಕೆ ತೊಂದರೆಯಿಲ್ಲ

ನಂತರ ಮತ್ತೊಂದು ವಿಡಿಯೋದಲ್ಲಿ ಯುವಕ ರಕ್ತ ಸಿಕ್ತನಾಗಿ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದಾನೆ, ಸೋನು ಸೂದ್ ಸಹ ಅಲ್ಲಿಯೇ ಇದ್ದಾರೆ. ಯುವತಿಯೊಬ್ಬರು ಯುವಕನಿಗೆ ಏನೂ ತೊಂದರೆ ಇಲ್ಲ ಎಂದು ಹೇಳಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ಸೋನು ಸೂದ್ ಫೌಂಡೇಶನ್ ಸೇರಿದಂತೆ ಹಲವರು ಹಂಚಿಕೊಂಡಿದ್ದಾರೆ. ಸೋನು ಸೂದ್‌ರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಸೋನು ಸೂದ್

ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಸೋನು ಸೂದ್

2020ರಿಂದ ಸೋನು ಸೂದ್ ಸತತವಾಗಿ ಸಾಮಾಜಿಕ ಸೇವೆ ಮಾಡುತ್ತಲೇ ಬರುತ್ತಿದ್ದಾರೆ. ಮೊದಲ ಲಾಕ್‌ಡೌನ್‌ನಲ್ಲಿ ಕಾರ್ಮಿಕರಿಗೆ ಸಹಾಯ ಮಾಡಿದ್ದ ಸೋನು ಸೂದ್ ಹಲವು ಮಂದಿಗೆ ಲಾಕ್‌ಡೌನ್ ಮುಗಿವ ವರೆಗೆ ಊಟದ ವ್ಯವಸ್ಥೆ ಮಾಡಿದ್ದರು. ಬಳಿಕ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಸಿಲಿಂಡರ್ ವಿತರಣೆ, ಆಕ್ಸಿಜನ್ ಕಾನ್‌ಸಂಟ್ರೇಟರ್‌ಗಳ ವಿತರಣೆ ಮಾಡಿದ್ದರು. ಜೊತೆಗೆ ರೆಮ್‌ಡಿಸಿವರ್ ಇಂಜೆಕ್ಷನ್‌ಗಳು ಲಭ್ಯವಾಗುವಂತೆ ಮಾಡಿದ್ದರು. ಆ ನಂತರವೂ ಸಾಮಾಜಿಕ ಕಾರ್ಯ ಮುಂದುವರೆಸಿರುವ ಸೋನು ಸೂದ್ ವೈದ್ಯಕೀಯ, ಶಿಕ್ಷಣಕ್ಕಾಗಿ ಸಹಾಯ ಕೋರಿ ತಮಗೆ ಸಂದೇಶ ಕಳಿಸುವ ಬಹುತೇಕರಿಗೆ ಸಹಾಯ ಮಾಡುತ್ತಾರೆ. ಆ ಬಗೆಗಿನ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಸೋನು ಸೂದ್‌ರ ಸಹೋದರಿ ಮಾಳವಿಕ ಸೂದ್ ಪಂಜಾಬ್‌ನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸಹೋದರಿಯ ಪರವಾಗಿ ಸೋನು ಸೂದ್ ಪ್ರಚಾರ ನಡೆಸಿದ್ದಾರೆ.

More from Filmibeat

English summary
Actor Sonu Sood saves a 19 year young boy who was injured seriously in an car accident. Video of Sonu Sood helping the boy went viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X