ದಕ್ಷಿಣದ ನಟಿಯರಿಗೆ ಬಾಲಿವುಡ್‌ನಲ್ಲಿ ಸೋಲು: ರಶ್ಮಿಕಾ ಮಂದಣ್ಣ ಭವಿಷ್ಯವೇನು?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಸೆಟಲ್ ಆಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳು ಬಾಲಿವುಡ್‌ನಲ್ಲಿ ಸೆಟ್ಟೇರುತ್ತಿರುವುದರಿಂದ ಮುಂಬೈನಲ್ಲಿಯೇ ನೆಲೆಸಿದ್ದಾರೆ. ಬಾಲಿವುಡ್‌ನ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಎರಡು-ಮೂರು ಆಫರ್‌ಗಳನ್ನು ಬಾಚಿಕೊಂಡಿದ್ದಾರೆ.

ಇಂದು ರಶ್ಮಿಕಾ ಮಂದಣ್ಣ ಅಭಿನಯದ ಬಾಲಿವುಡ್ ಸಿನಿಮಾ ಬಿಡುಗಡೆ ಆಗುತ್ತಿದೆ. ಅಮಿತಾಬ್ ಬಚ್ಚನ್ ಜೊತೆ ನಟಿಸಿರೋ ಆ ಸಿನಿಮಾವೇ 'ಗುಡ್ ಬೈ'. ಈ ಸಿನಿಮಾ ಬಳಿಕ ರಶ್ಮಿಕಾ ಮಂದಣ್ಣ ಭವಿಷ್ಯ ಏನಾಗಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ.

ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ ಬಗ್ಗೆ ಇಷ್ಟೊಂದು ಕುತೂಹಲ ಮೂಡಲು ಕಾರಣವಿದೆ. ದಕ್ಷಿಣ ಭಾರತದ ಯಂಗ್ ನಟಿಯರು ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಪರದಾಡಿದ್ದಾರೆ. ಈಗ ರಶ್ಮಿಕಾ ಸರದಿ. ಈ ಹಿಂದೆ ಪರದಾಡಿದ ನಟಿಯರು ಎದುರಿಸಿದ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಾರಾ? ಅನ್ನೋ ಪ್ರಶ್ನೆ ಎದ್ದಿದೆ.

ಬಾಲಿವುಡ್‌ನಲ್ಲಿ ನಟಿಯರಿಗೆ ಸೋಲು

ಬಾಲಿವುಡ್‌ನಲ್ಲಿ ನಟಿಯರಿಗೆ ಸೋಲು

ದಕ್ಷಿಣ ಭಾರತದಲ್ಲಿ ಸಕ್ಸಸ್‌ಫುಲ್ ಸಿನಿಮಾಗಳನ್ನು ನೀಡಿರುವ ನಟಿಯರು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಪೂಜಾ ಹೆಗ್ಡೆ, ತಮನ್ನಾ, ಕಾಜಲ್ ಅಗರ್ವಾಲ್, ತ್ರಿಶಾ ಕೂಡ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಇವರಿಗೆ ಬಾಲಿವುಡ್‌ನಲ್ಲಿ ಒಂದು ಬ್ಲಾಕ್ ಬಸ್ಟರ್ ಸಿನಿಮಾ ನೀಡಲು ಸಾಧ್ಯವಾಗಿಲ್ಲ. ಸೂಪರ್‌ ಹಿಟ್ ಸಿನಿಮಾ ನೀಡಿದ ಯಶಸ್ಸಿನ ಗುಟ್ಟನ್ನು ಅನುಭವಿಸಲೇ ಇಲ್ಲ. ಬಳಿಕ ವಿದಿಯಿಲ್ಲದೆ ದಕ್ಷಿಣದ ಸಿನಿಮಾಗಳಲ್ಲಿಯೇ ನಟಿಸಬೇಕಾಯ್ತು. ಈಗ ರಶ್ಮಿಕಾ ಭವಿಷ್ಯ ನಿರ್ಧಾರವಾಗೋ ಸಮಯ ಬಂದಿದೆ.

ರಶ್ಮಿಕಾ ಮಂದಣ್ಣ 'ಗುಡ್‌ ಬೈ'

ರಶ್ಮಿಕಾ ಮಂದಣ್ಣ 'ಗುಡ್‌ ಬೈ'

'ಗುಡ್‌ ಬೈ' ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಸಿನಿಮಾ ಅಲ್ಲ. ಇದು ಅಸಲಿಗೆ ಅವರ ಎರಡನೇ ಬಾಲಿವುಡ್ ಸಿನಿಮಾ. ಆದರೆ, ಇದೇ ಮೊದಲ ಸಿನಿಮಾವಾಗಿ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 07 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಆದರೆ, ರಶ್ಮಿಕಾ ನಟಿಸಿದ ಈ ಸಿನಿಮಾ ಬಾಲಿವುಡ್‌ ಬಜ್ ಹುಟ್ಟಾಕುವಲ್ಲಿ ಸೋತಿದೆ. ರಶ್ಮಿಕಾ ನಟಿಸಿದ ಉಳಿದ ಸಿನಿಮಾಗಳಂತೆ ಈ ಹೆಚ್ಚೇನು ಸೌಂಡ್ ಮಾಡಿಲ್ಲ. ಹೀಗಾಗಿ ಬಾಲಿವುಡ್‌ನಲ್ಲಿ ರಶ್ಮಿಕಾ ಟೇಕಾಫ್‌ ಬಗ್ಗೆ ಸಿನಿಪಂಡಿತರು ಕುತೂಹಲದಿಂದ ನೋಡುತ್ತಿದ್ದಾರೆ.

ರಶ್ಮಿಕಾ ಎಂಟ್ರಿಗೆ ಸೋಲೇ ಇಲ್ಲ

ರಶ್ಮಿಕಾ ಎಂಟ್ರಿಗೆ ಸೋಲೇ ಇಲ್ಲ

ರಶ್ಮಿಕಾ ಮಂದಣ್ಣ ಇದೂವರೆಗೂ ಯಾವುದೇ ಭಾಷೆಯಲ್ಲಿ ನಟಿಸಿದ ಮೊದಲ ಸಿನಿಮಾ ಹಿಟ್‌ ಲಿಸ್ಟ್ ಸೇರಿದೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳು ಗೆದ್ದಿವೆ. ಈಗ ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಭವಿಷ್ಯ ಹೇಗಿರುತ್ತೆ? ಮೊದಲ ಸಿನಿಮಾ ಬಾಲಿವುಡ್‌ನಲ್ಲೂ ಹಿಟ್ ಲಿಸ್ಟ್ ಸೇರುತ್ತಾ? ಅಥವಾ ಇದೇ ಮೊದಲ ಬಾರಿಗೆ ಸೋಲಿನ ಕಹಿ ನೋಡಬೇಕಾಗುತ್ತಾ? ಅನ್ನೋದನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

'ಗುಡ್‌ಬೈ' ಮಾಸ್‌ ಸಿನಿಮಾ ಅಲ್ಲ

'ಗುಡ್‌ಬೈ' ಮಾಸ್‌ ಸಿನಿಮಾ ಅಲ್ಲ

ರಶ್ಮಿಕಾ ಮಂದಣ್ಣ 'ಪುಷ್ಪ' ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರ ಬಾಲಿವುಡ್‌ ಸಿನಿಪ್ರಿಯರ ಮನಗೆದ್ದಿತ್ತು. ಹೀಗಾಗಿ ಹಿಂದಿ ಏರಿಯಾಗಳಲ್ಲಿ ರಶ್ಮಿಕಾ ಮಂದಣ್ಣ ಪರಿಚಯವಿದೆ. ಇನ್ನು 'ಕ್ವೀನ್' ಅಂತಹ ಸೂಪರ್‌ ಹಿಟ್ ಸಿನಿಮಾ ನೀಡಿದ್ದ ವಿಹಾಸ್ ಬೆಹಲ್ 'ಗುಡ್‌ಬೈ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜೊತೆ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ಸಿನಿಮಾ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಬಾಲಿವುಡ್ ಇದೆ.

More from Filmibeat

English summary
South Heroine Failure In Bollywood: What About Rashmika With Goodbye, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X