Don't Miss!
- Sports
ವೇಗದ ಬೌಲರ್ ಉಮ್ರಾನ್, ಅರ್ಷ್ದೀಪ್ಗೆ ಒಲಿದು ಬಂದ ಅದೃಷ್ಟ: ಟೀಮ್ ಇಂಡಿಯಾದಲ್ಲಿ ಅವಕಾಶ
- Lifestyle
Shukra Gochar May 2022:ಮೇ 23ಕ್ಕೆ ಮೇಷ ರಾಶಿಗೆ ಶುಕ್ರ ಸಂಚಾರ: 6 ರಾಶಿಗಳಿಗೆ ಅನುಕೂಲಕರ, 6 ರಾಶಿಯವರು ಹುಷಾರಾಗಿರಬೇಕು
- News
Breaking News; ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರಕಾರ
- Technology
ಎಸ್ಬಿಐ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ನೀಡಿದ ಸರ್ಕಾರ!
- Finance
Gold Rate Today: ಸತತವಾಗಿ ಚಿನ್ನದ ದರ ಹೆಚ್ಚಳ, ಮೇ 22ರ ಬೆಲೆ ಪರಿಶೀಲಿಸಿ
- Education
ICSI CS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಲಿವುಡ್‌ನಲ್ಲಿ ಸೋತು ಸುಣ್ಣವಾದ ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾಗಳು
ರಾಜಮೌಳಿ ನಿರ್ದೇಶಿಸಿದ ಪ್ಯಾನ್ ಇಂಡಿಯಾ ಸಿನಿಮಾ ಬಾಹುಬಲಿ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಹಿಂದಿಗೆ ಡಬ್ ಆದ ಸಿನಿಮಾವೊಂದು ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 500 ಕೋಟಿ ಗಳಿಕೆ ಕಾಣುತ್ತಿದ್ದಂತೆ ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗ ತೊಡಗಿತ್ತು. ಆದರೆ, ಬಾಹುಬಲಿ ಯಶಸ್ಸಿನ ಹಿಂದೆ ಬಿದ್ದಿದ್ದ ಪ್ಯಾನ್ ಇಂಡಿಯಾಗಳು ಬಾಕ್ಸಾಪೀಸ್‌ನಲ್ಲಿ ಗೆಲ್ಲಲಿಲ್ಲ.
ಬಾಹುಬಲಿ ಸಿನಿಮಾದ ಯಶಸ್ಸನ್ನೇ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಕಾಣುವುದಕ್ಕೆ ಹಲವು ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ, ನಿರೀಕ್ಷೆ ಹುಟ್ಟಿಸಿ ಬಾಲಿವುಡ್‌ನಲ್ಲಿ ಬಿಡುಗಡೆಯಾದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತು ಸುಣ್ಣವಾಗಿವೆ. ಇಂತಹ ಸಿನಿಮಾಗಳ ದೊಡ್ಡ ಪಟ್ಟಿನೇ ಇದೆ. ಹಾಗಿದ್ದರೆ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ ಪ್ಯಾನ್ ಇಂಡಿಯಾ ಸಿನಿಮಾಗಳು ಯಾವುದು ಎಂದು ತಿಳಿಯಲು ಮುಂದೆ ಓದಿ.

ಗೆಲ್ಲಲಿಲ್ಲ ಮೋಹನ್ ಲಾಲ್ 'ಮರಕ್ಕರ್'
ಮೋಹನ್ ಲಾಲ್ ನಟಿಸಿದ 'ಮರಕ್ಕರ್' ಸಿನಿಮಾ ಮಲಯಾಳಂ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ. 100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೊದಲ ಸಿನಿಮಾ. ಸೂಪರ್‌ಸ್ಟಾರ್ ಮೋಹನ್ ಲಾಲ್ ವೃತ್ತಿ ಬದುಕಿನಲ್ಲಿಯೇ ಒಂದು ಮೈಲಿಗಲ್ಲಾಗುತ್ತೆ ಎಂದು ಊಹಿಸಿದ್ದ ಸಿನಿಮಾ. ಹೀಗಾಗಿ ಮಲಯಾಳಂ, ಕನ್ನಡ, ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲಿ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಯಿತು.

'ಸೈರಾ ನರಸಿಂಹ ರೆಡ್ಡಿ' ಬಾಕ್ಸಾಫೀಸ್ ಫ್ಲಾಪ್
'ಸೈರಾ ನರಸಿಂಹ ರೆಡ್ಡಿ' ಪ್ಯಾನ್ ಇಂಡಿಯಾ ರಿಲೀಸ್ ಮಾಡಲಾಗಿತ್ತು. ಮೆಗಾಸ್ಟಾರ್ ಚಿರಂಜೀವಿ ಎರಡೂವರೆ ದಶಕಗಳ ಬಳಿಕ ಮತ್ತೆ ಹಿಂದಿ ಸಿನಿಮಾಗಳು ಬಿಡುಗಡೆಯಾಗುವ ಏರಿಯಾಗಳಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಬ್ ಬಚ್ಚನ್, ತಮನ್ನಾ, ವಿಜಯ್ ಸೇತುಪತಿ, ಕಿಚ್ಚ ಸುದೀಪ್ ಅಂತಹ ದಿಗ್ಗಜರೇ ಇದ್ದ ಸಿನಿಮಾ ಬಾಲಿವುಡ್‌ನಲ್ಲಿ ಗೆಲ್ಲಲಿಲ್ಲ. ಮೆಗಾಸ್ಟಾರ್ ಚಿರಂಜೀವಿ ಬಾಲಿವುಡ್‌ನಲ್ಲಿ ಈ ಹಿಂದೆ ಮಾಡಿದ ಜಾದು ಮಾಡಲಿಲ್ಲ.

ನಡೆಯಲಿಲ್ಲ ರಜಿನಿಕಾಂತ್ 'ದರ್ಬಾರ್'
ಸೂಪರ್‌ಸ್ಟಾರ್ ರಜಿನಿಕಾಂತ್ ನಟಿಸಿದ 'ದರ್ಬಾರ್' ಸಿನಿಮಾ 2020ರಲ್ಲಿ ತೆರೆಕಂಡಿತ್ತು. ಎ ಆರ್ ಮುರುಗದಾಸ್ ನಿರ್ದೇಶನದ ಸಿನಿಮಾ ಆಗಿದ್ದರಿಂದ ಸಹಜವಾಗಿಯೇ ಕುತೂಹಲ ಕೆರಳಿಸಿತ್ತು. ಹಿಂದಿಯಲ್ಲಿ ಘಜನಿ ಯಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದರಿಂದ ಮುರುಗದಾಸ್ ನಿರ್ದೇಶಕದ 'ದರ್ಬಾರ್' ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಅಲ್ಲದೆ ಇದೇ ಮೊದಲ ಬಾರಿಗೆ ರಜಿನಿಕಾಂತ್ ಜೊತೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡ ಖಳನಾಯಕನಾಗಿ ನಟಿಸಿದ್ದರು. ಆದರೆ, ದರ್ಬಾರ್ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

ಕಿಚ್ಚನ 'ಪೈಲ್ವಾನ್'ಗೆ ಸೋಲು
ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ನಿರೀಕ್ಷೆ ಹುಟ್ಟಿಸಿದ್ದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದು. ಕೆಜಿಎಫ್ ಬಳಿಕ ಕನ್ನಡದ ಸಿನಿಮಾವೊಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಕಂಡಿತ್ತು. ಆದರೆ, ಪೈಲ್ವಾನ್ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಲಿಲ್ಲ. ಕಿಚ್ಚ ಸುದೀಪ್ ಬಾಲಿವುಡ್ ಚಿತ್ರರಂಗಕ್ಕೆ ಪರಿಚಯವಿದ್ದರೂ, ಸಿನಿಮಾ ನೋಡಲು ಜನ ಬರೆಲೇ ಇಲ್ಲ. ಪೈಲ್ವಾನ್ ರಿಲೀಸ್ ಆದ ಕೆಲವೇ ದಿನಗಳಲ್ಲಿ ಪೈರಸಿ ಆಗಿದ್ದರಿಂದ ಸೋಲಿಗೆ ಕಾರಣ ಎನ್ನಲಾಗಿತ್ತು.

ವಿಜಯ್ ಸಿನಿಮಾ 'ಪುಲಿ' ಫ್ಲಾಪ್
ಬಾಹುಬಲಿ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ತೆರೆಕಂಡ ದಕ್ಷಿಣ ಭಾರತದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಪುಲಿ'. ದಳಪತಿ ವಿಜಯ್ , ಕಿಚ್ಚ ಸುದೀಪ್ ಹಾಗೂ ಶ್ರೀದೇವಿ ನಟನೆಯ ಸಿನಿಮಾ 'ಪುಲಿ'. ಶ್ರೀದೇವಿಯಂತ ಫೇಸ್ ಇದ್ದರೂ, ಸಿನಿಮಾ ಮಾತ್ರ ಗೆಲ್ಲಲಿಲ್ಲ. ತಮಿಳಿನಲ್ಲೇ 'ಪುಲಿ' ಪ್ಲ್ಯಾಪ್ ಆಗಿದ್ದರಿಂದ ಬಾಲಿವುಡ್ ಅನಿವಾರ್ಯವಾಗಿ ಸೋಲನ್ನು ಅನುಭವಿಸಬೇಕಾಗಿತ್ತು.