ಹರಿದ್ವಾರದಲ್ಲಿ ಶ್ರೀದೇವಿ ಅಸ್ತಿ ವಿಸರ್ಜನೆ
Recommended Video

ಭಾರತ ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ನಟಿ ಶ್ರೀದೇವಿ ಫೆಬ್ರವರಿ 24 ರಂದು ದುಬೈನ ಹೋಟೆಲ್ ವೊಂರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಸಾವು ಕೋಟ್ಯಾಂತರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಇದೀಗ, ಶ್ರೀದೇವಿಯ ಅಸ್ತಿಯನ್ನ ಹರಿದ್ವಾರದಲ್ಲಿ ವಿಸರ್ಜನೆ ಮಾಡಲಾಗಿದೆ.
ಶ್ರೀದೇವಿ ಪತಿ ಬೋನಿ ಕಪೂರ್ ಶ್ರೀದೇವಿಯ ಅಸ್ತಿಯನ್ನ ಹರಿದ್ವಾರದಲ್ಲಿ ವಿಸರ್ಜನೆ ಮಾಡಿದ್ದಾರೆ. ಸಂಪ್ರದಾಯ ಪ್ರಕಾರ ವಿಧಿ ವಿಧಾನಗಳನ್ನ ಪೂರೈಸಿದ ನಂತರ ಗಂಗಾ ನದಿಯಲ್ಲಿ ಅಸ್ತಿ ವಿಸರ್ಜನೆ ಮಾಡಲಾಗಿದೆ.
ಹರಿದ್ವಾರದಲ್ಲಿ ಶ್ರೀದೇವಿ ಅಸ್ತಿ ವಿಸರ್ಜನ: ಚಿತ್ರಗಳಲ್ಲಿ ನೋಡಿ
ಈ ವೇಳೆ ನಟ ಬೋನಿ ಕಪೂರ್ ಸಹೋದರ ಅನಿಲ್ ಕಪೂರ್, ಡಿಸೈನರ್ ಮನೀಶ್ ಮಲ್ಹೋತ್ರ, ಅಮರ್ ಸಿಂಗ್ ಕೂಡ ಭಾಗವಹಿಸಿದ್ದರು.

ಮತ್ತೊಂದೆಡೆ ಅಗಲಿದ ಶ್ರೀದೇವಿ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲು ಬೋನಿ ಕಪೂರ್ ನಿರ್ಧರಿಸಿದ್ದಾರೆ. ಶೇಖರ್ ಕಪೂರ್ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ಸ್ವತಃ ಬೋನಿ ಕಪೂರ್ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಶೇಖರ್ ಕಪೂರ್ ಅವರು ಶ್ರೀದೇವಿ ಕುಟುಂಬಕ್ಕೆ ಆಪ್ತರಾಗಿದ್ದಾರೆ.
ಶ್ರೀದೇವಿ ನಟನೆ ಮತ್ತು ಬೋನಿ ಕಪೂರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಸೂಪರ್ ಹಿಟ್ ಸಿನಿಮಾ 'ಮಿಸ್ಟರ್ ಇಂಡಿಯಾ' ಚಿತ್ರವನ್ನ ಇವರೇ ನಿರ್ದೇಶನ ಮಾಡಿದ್ದರು. ಅದೇ ಸಲುಗೆಯಿಂದ ಈಗ ಸಾಕ್ಷ್ಯಚಿತ್ರ ಹೊರತರಲು ಸಿದ್ದತೆ ನಡೆಸಿದ್ದಾರೆ.


Click it and Unblock the Notifications











