"ಶ್ರೀದೇವಿ ಸಾವು ಆಕಸ್ಮಿಕವಲ್ಲ.. ಹಾವಿನ ವಿಷ ಕೊಟ್ಟು ಕೊಂದಿದ್ದಾರೆ":ಗಂಭೀರ ಆರೋಪ ಮಾಡಿದ್ಯಾರು?
'ಅತಿಲೋಕ ಸುಂದರಿ' ಶ್ರೀದೇವಿ ದಿಢೀರನೇ ದುಬೈನಲ್ಲಿ ಸಾವನ್ನಪ್ಪಿದ್ದರು. ಫೆಬ್ರವರಿ 24, 2018ರಂದು ಶ್ರೀದೇವಿ ಸಾವಿನ ಸುದ್ದಿ ಹೊರಬರುತ್ತಿದ್ದಂತೆ ಅಭಿಮಾನಿಗಳು ಕುಸಿದು ಹೋಗಿದ್ದರು. ಆರೋಗ್ಯವಾಗಿದ್ದ ನಟಿಗೆ ದಿಢೀರನೇ ಏನಾಯ್ತು? ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪುದು ಅಂದರೆ ಏನು? ವಿದೇಶದಲ್ಲಿ ಅಂತಹದ್ದೇನು ನಡೀತು? ಅಂತ ಪ್ರಶ್ನೆಗಳನ್ನು ಹಾಕಿಕೊಳ್ಳುವುದಕ್ಕೆ ಶುರುವಿಟ್ಟುಕೊಂಡಿದ್ದರು.
ಇನ್ನೊಂದು ಕಡೆ ಶ್ರೀದೇವಿ ಸಾವು ಆಕಸ್ಮಿಕವಲ್ಲ. ಅಲ್ಲಿ ನಟಿಯ ಕೊಲೆ ಆಗಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಕೆಲವರು ಬೋನಿ ಕಪೂರ್ ವಿರುದ್ಧವೇ ಅನುಮಾನವನ್ನು ವ್ಯಕ್ತಪಡಿಸಿದ್ದರು. ಬಳಿಕ ದುಬೈ ಪೊಲೀಸರು ಶ್ರೀದೇವಿ ಸಾವು ಬಾತ್‌ಟಬ್‌ನಲ್ಲಿ ಮುಳುಗಿದ್ದರಿಂದಲೇ ಆಗಿದೆ ಎಂದು ಮರಣೋತ್ತರ ವರದಿ ನೀಡಿರೋದಾಗಿ ವರದಿಯಾಗಿತ್ತು.

ಆದರೆ, ಅಸಲಿಗೆ ಅಲ್ಲಿ ಏನು ನಡೀತು ಅನ್ನೋದು ಇನ್ನೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅದಕ್ಕೆ ಕಾರಣ ದೀಪ್ತಿ ಪಿನ್ನಿಟಿ ಅನ್ನೋ ಮಹಿಳೆ ಮಾಡಿರೋ ಆರೋಪ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರೋ ಸಂದರ್ಶನದಲ್ಲಿ ಶ್ರೀದೇವಿಯನ್ನು ಹಾವಿನ ವಿಷದಿಂದ ಸಾಯಿಸಲಾಗಿದೆ ಎಂದು ದೀಪ್ತಿ ಪಿನ್ನಿಟ್ಟಿ ಹೇಳಿಕೆ ಕೊಟ್ಟಿದ್ದರು. ಅಸಲಿಗೆ ಈಕೆ ಯಾರು? ಈಕೆಯ ವಾದವೇನು? ಶ್ರೀದೇವಿ ಸಾವಿಗೂ ಈಕೆನೂ ಏನು ಸಂಬಂಧ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ದಿ ಲ್ಯಾಬಿರಿಂತ್ ಅನ್ನೋ ಯೂಟ್ಯೂಬ್ ಚಾನೆಲ್ ಕಳೆದ ಕೆಲವು ದಿನಗಳ ಹಿಂದಷ್ಟೇ ದೀಪ್ತಿ ಪಿನ್ನಿಟಿ ಅನ್ನುವವರ ಸಂದರ್ಶನವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಶ್ರೀದೇವಿಯ ನಿಗೂಢ ಸಾವಿನ ಬಗ್ಗೆ ಈ ಮಹಿಳೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶ್ರೀದೇವಿ ಸಹಜ ಅಲ್ಲ ಎಂದು ಹೇಳಿರೋದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಈಕೆ ಮಾಡಿರುವ ಆರೋಪವೇನು? ಯಾಕಿಷ್ಟು ಗಂಭೀರವಾಗಿ ಪರಿಗಣಿಸಲಾಗಿದೆ ಅನ್ನೋದು ಇಲ್ಲಿ ಮುಖ್ಯ. ಅಂದ್ಹಾಗೆ, ದೀಪ್ತಿ ಪಿನ್ನಿಟಿ ಒಬ್ಬ ಉದ್ಯಮಿ. ಆದರೂ, ಸ್ವಯಂ ಪ್ರೇರಿತರಾಗಿ ಸುಶಾಂತ್ ಸಿಂಗ್ ರಜಪೂತ್ ಹಾಗೂ ಶ್ರೀದೇವಿ ಸಾವಿನ ಬಗ್ಗೆ ಖಾಸಗಿಯಾಗಿ ತನಿಖೆ ಮಾಡುತ್ತಿದ್ದಾರೆ. ತನಗೆ ತನಿಖಾ ಸಂಸ್ಥೆಯೊಂದಿಗೆ ಸಂಪರ್ಕವಿರುವುದಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಸಿಬಿಐಗೆ ಹಾರ್ಡ್ ಡ್ರೈ ನೀಡಿದ್ದಾಗಿ ಮಾಹಿತಿ ಹಂಚಿಕೊಂಡಿದ್ದರು. ಈಗ ಮಾಧ್ಯಮಗಳಲ್ಲಿ ಶ್ರೀದೇವಿ ಸಾವಿನ ಬಗ್ಗೆ ಆಗಿರುವ ವರದಿಗೂ ದುಬೈನಲ್ಲಿ ನಡೆದ ಘಟನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿಕೊಂಡಿದ್ದಾರೆ.

ದೀಪ್ತಿ ಪಿನ್ನಿಟಿ ತನಿಖೆಯ ಪ್ರಕಾರ ಶ್ರೀದೇವಿ ಸಾವು ಆಕಸ್ಮಿಕವಲ್ಲ. ಅವರನ್ನು ಮಾಮುಷಿ ಅನ್ನೋ ಡೇಂಜರಸ್ ಹಾವಿನ ವಿಷ ಕೊಟ್ಟು ಸಾಯಿಸಿರೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. "ನಾವು ಸಂಪೂರ್ಣ ತನಿಖೆಯನ್ನು ಮಾಡಿದಾಗ ಶ್ರೀದೇವಿಗೆ ಮಾಮುಷಿ ವಿಷವನ್ನು ಕೊಟ್ಟು ಸಾಯಿಸಿರೋದು ಗಮನಕ್ಕೆ ಬಂದಿದೆ. ಶ್ರೀದೇವಿ ಸಾಯುವುದಕ್ಕೆ 130 ಗಂಟೆಗಳ ಹಿಂದೆನೇ ವಿಷವನ್ನು ನೀಡಲಾಗಿದೆ. ಒರಿಜಿನಲ್ ಪೋಸ್ಟ್ ಮಾರ್ಟಮ್ ಪ್ರಕಾರ, ದುಬೈ ಸಮಯ ಸಂಜೆ 6.30ಕ್ಕೆ ಫೆಬ್ರವರಿ 23, 2018ರಂದೇ ಶ್ರೀದೇವಿ ಸಾವನ್ನಪ್ಪಿದ್ದರು." ಎಂದು ದೀಪ್ತಿ ಹೇಳಿಕೆ ಕೊಟ್ಟಿದ್ದಾರೆ.
ಇಷ್ಟೇ ಅಲ್ಲದೆ, " ಶ್ರೀದೇವಿ ಸಾಯುವುದಕ್ಕೆ 5 ದಿನ ಮುನ್ನ ಮುಂಬೈನಲ್ಲೇ ಈ ವಿಷವನ್ನು ನೀಡಲಾಗಿತ್ತು. ಇದು ನಿಧಾನವಾಗಿ ಒಂದೊಂದೇ ಅಂಗವನ್ನು ಡ್ಯಾಮೇಜ್ ಮಾಡಿದೆ. ಈ ವಿಷ ಎಲ್ಲಿಂದ ಬಂದಿದೆ? ಯಾರು ಕೊಟ್ಟಿದ್ದಾರೆ? ಅನ್ನೋದು ಗೊತ್ತಿದೆ. ಅದನ್ನು ಆನ್‌ಲೈನ್‌ನಲ್ಲಿ ರಿವೀಲ್ ಮಾಡುವ ಹಾಗಿಲ್ಲ." ಎಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಅಸಲಿಗೆ ದೀಪ್ತಿ ಪಿನ್ನಿಟಿ ಹೇಳಿದ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ? ನಿಜವಾಗಿಯೂ ತನಿಖೆ ಮಾಡಿದ್ದಾರೆಯೇ? ಈ ಮಾಹಿತಿ ಎಲ್ಲ ಹೇಗೆ ಸಿಕ್ಕಿದೆ? ಅನ್ನೋದನ್ನು ಅಧಿಕೃತವಾಗಿ ದೃಢೀಕರಣ ಮಾಡಿಲ್ಲ. ಹೀಗಾಗಿ ಇವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕೋ ಬೇಡವೋ ಅನ್ನೋ ಗೊಂದಲ ಕೂಡ ಇದೆ.
ಒಂದು ತಿಂಗಳ ಹಿಂದಷ್ಟೇ ಬೋನಿ ಕಪೂರ್ ಪತ್ನಿಯ ಸಾವಿನ ಬಗ್ಗೆ ಮಾತಾಡಿದ್ದರು. "ಶ್ರೀದೇವಿ ಸಾವಿ ಸಹಜ ಅಲ್ಲ ಆಕಸ್ಮಿಕ" ಎಂದಿದ್ದರು. " ಶ್ರೀದೇವಿ ತುಂಬಾ ಡಯೆಟ್ ಮಾಡುತ್ತಿದ್ದರು. ಯಾವಾಗಲೂ ಸುಂದರವಾಗಿ ಕಾಣಬೇಕು ಅನ್ನೋದು ಅವರ ಆಸೆಯಾಗಿತ್ತು. ಅವರು ಕುಸಿದು ಬೀಳುವುದು ಹೊಸದೇನು ಆಗಿರಲಿಲ್ಲ. ಈ ಹಿಂದೆ ಚಿತ್ರೀಕರಣದಲ್ಲಿ ಕುಸಿದು ಬಿದ್ದಿದ್ದನ್ನು ನಟ ನಾಗಾರ್ಜುನಾ ಕೂಡ ತಿಳಿದ್ದರು." ಎಂದು ಬೋನಿ ಕಪೂರ್ ಸಂದರ್ಶನ ಕೊಟ್ಟ ಬೆನ್ನಲ್ಲೇ ಆರೋಪ ಮಾಡಲಾಗಿದೆ.


Click it and Unblock the Notifications











