ಮೂರೇ ವಾರದಲ್ಲಿ ರಾ ಒನ್ ಗೋ...ವಿಂದ !

Ra One
ಇನ್ನಿಲ್ಲದಂತೆ ಪ್ರಚಾರ ಗಿಟ್ಟಿಸಿಕೊಂಡಿದ್ದ ರಾ ಒನ್ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಮುನ್ನುಗಲು ವಿಫಲವಾಗಿದೆ. ಚಿತ್ರವನ್ನು ಮೂರೇ ವಾರದಲ್ಲಿ ಪ್ರೇಕ್ಷಕರು ಸಾರಾಸಗಾಟವಾಗಿ ತಿರಸ್ಕರಿಸಿದ್ದಾರೆ. ಕಳೆದ ವಾರ ಬಿಡುಗಡೆಗೊಂಡ ರಣಬೀರ್ ಕಪೂರ್ ಅಭಿನಯದ ರಾಕ್ ಸ್ಟಾರ್ ಚಿತ್ರ ರಿಲೀಸ್ ಆದ ನಂತರವಂತೂ ರಾ ಒನ್ ಚಿತ್ರ ಗಳಿಕೆಯಲ್ಲಿ ಮುಖಭಂಗ ಅನುಭವಿಸಿದೆ.

ಮೊದಲ 12 ದಿನದಲ್ಲಿ ಸುಮಾರು 112 ಕೋಟಿ ಗಳಿಕೆ ಕಂಡಿದ್ದ ರಾ ಒನ್, ನಂತರ ಯಶಸ್ವಿ ಪ್ರದರ್ಶನ ಕಾಣುವಲ್ಲಿ ವಿಫಲವಾಗಿದೆ. ಚಿತ್ರ ಬಿಡುಗಡೆಗೊಂಡ ಎರಡನೇ ವಾರದಲ್ಲಿ ದೊಡ್ಡ ಬಜೆಟ್ ಚಿತ್ರ ರಿಲೀಸ್ ಆಗದಿದ್ದರೂ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿದೆ. ಮೂರನೇ ವಾರದಲ್ಲಿ ರಾಕ್ ಸ್ಟಾರ್ ಚಿತ್ರ ಬಿಡುಗಡೆಯಾದ ನಂತರವಂತೂ ಚಿತ್ರ ಕಲೆಕ್ಷನ್ ನಲ್ಲಿ ಎದ್ದೇಳುತ್ತಲೇ ಇಲ್ಲ.

ಸಲ್ಮಾನ್ ಅಭಿನಯದ ಬಾಡಿಗಾರ್ಡ್ ಚಿತ್ರ ಇದಕ್ಕಿಂತ ಹೆಚ್ಚು ನಿರ್ಮಾಪಕರಿಗೆ ಲಾಭ ತಂದಿತ್ತು. ಚಿತ್ರದ ಡಿಸ್ತ್ರಿಬ್ಯೂಶನ್ ಹಕ್ಕು ಪಡೆದವರು ಕೈ ಸುಟ್ಟು ಕೊಂಡಿದ್ದಾರೆನ್ನುವ ಸುದ್ದಿ ಬಾಲಿವುಡ್ ನಲ್ಲಿ ಚಾಲ್ತಿಯಲ್ಲಿದೆ. ರಾಜಸ್ಥಾನ, ಪಶ್ಚಿಮಬಂಗಾಳ, ಒರಿಸ್ಸಾ, ಬಿಹಾರ್, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ದೆಹಲಿ, ಗುಜರಾತ್ ನಲ್ಲಿ ಹಂಚಿಕೆದಾರರಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಐಬಿಎನ್ ಲೈವ್ ವರದಿ ಮಾಡಿದೆ.

ಚಿತ್ರದ ತಮಿಳು ಮತ್ತು ತೆಲುಗು ಅವತರಿಣಿಕೆಗಳಂತೂ ಸಂಪೂರ್ಣ ನೆಲಕಚ್ಚಿವೆ. ಈ ಮೂಲಕ ಆಂಧ್ರ ಮತ್ತು ತಮಿಳುನಾಡು ಭಾಗಕ್ಕೆ ರೈಟ್ಸ್ ಪಡೆದವರಿಗೆ ದೊಡ್ಡ ನಷ್ಟವಾಗಿದೆ. ಆದರೆ ಚಿತ್ರವನ್ನು ಈಗಾಗಲೇ ಮಾರಾಟ ಮಾಡಿದ್ದ ಶಾರೂಖ್ ಖಾನ್ ಮತ್ತು ಇರೋಸ್ ಇಂಟರ್ನ್ಯಾಷನಲ್ ಗೆ ಇದರಿಂದ ಯಾವುದೇ ನಷ್ಟವಿಲ್ಲದಿದ್ದರೂ ಡಿಸ್ತ್ರಿಬ್ಯೂಟರ್ ಗಳ ಜೊತೆ ಮಾತಾಡಿ ಪರಿಹಾರ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.

More from Filmibeat

English summary
Shah Rukh Khan starrer Ra One fail to do well in box office. The film collection drastically reduced after first week. Most of the distributors in Central, West and East part of India has lost money, even in Andhra Pradesh, Tamilnadu and Karnataka as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X