ಆಮಿರ್ ಖಾನ್ ನಟನೆ 'ಓವರ್‌ಆಕ್ಟಿಂಗ್' ಎಂದಿದ್ದ ರಾಜಮೌಳಿ: ಬಾಲಿವುಡ್ ನಿರ್ದೇಶಕ ಬಿಚ್ಚಿಟ್ಟ ಗುಟ್ಟೇನು?

ಒಂದ್ಕಡೆ ಆಮಿರ್ ಖಾನ್.. ಇನ್ನೊಂದು ಕಡೆ ರಾಜಮೌಳಿ.. ಇಬ್ಬರೂ ಭಾರತೀಯ ಚಿತ್ರರಂಗದ ದಿಗ್ಗಜರು. ಆಮಿರ್ ಖಾನ್ ನಟನೆಯಲ್ಲಿ ಪರ್ಫೆಕ್ಷನಿಸ್ಟ್, ಇನ್ನೊಂದು ಕಡೆ ನಿರ್ದೇಶನದಲ್ಲಿ ರಾಜಮೌಳಿ ಉಸ್ತಾದ್. ಇಬ್ಬರೂ ಸೇರಿ ಒಂದು ಸಿನಿಮಾ ಮಾಡಲಿ ಅನ್ನೋದು ಅದೆಷ್ಟೋ ಸಿನಿ ಪ್ರಿಯರ ಕನಸು.

ಆದರೆ, ಆಮಿರ್ ಖಾನ್ ಹಾಗೂ ರಾಜಮೌಳಿ ಇಬ್ಬರೂ ತಮ್ಮದೇ ಬೇರೆ ಬೇರೆ ಹಾದಿ ಹಿಡಿದು ಹೊರಟಿದ್ದಾರೆ. ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದು ಸದ್ಯಕ್ಕಂತೂ ಅಸಾಧ್ಯದ ಮಾತು. ಯಾಕಂದ್ರೆ, ಆಮಿರ್ ಖಾನ್ ಸದ್ಯಕ್ಕೆ ಸಿನಿಮಾ ಮಾಡೋ ಮೂಡಿನಲ್ಲಿ ಇಲ್ಲ. ಅತ್ತ ರಾಜಮೌಳಿ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್‌ ಬಾಬು ಆಕ್ಷನ್ ಕಟ್ ಹೇಳುವ ತವಕದಲ್ಲಿದ್ದಾರೆ.

aamir-khan-rajamouli-mansoor-khan-overacting

ಈ ಮಧ್ಯೆ ಆಮಿರ್ ಖಾನ್ ಸಂಬಂಧಿ ಹಾಗೂ ನಿರ್ದೇಶಕ ಮನ್ಸೂರ್ ಖಾನ್ ಇವರಿಬ್ಬರ ಬಗ್ಗೆ ಒಂದು ಹೇಳಿಕೆ ಕೊಟ್ಟಿದ್ದಾರೆ. ಆಮಿರ್ ಖಾನ್ ನಟನೆ ಬಗ್ಗೆ ರಾಜಮೌಳಿ ಅಭಿಪ್ರಾಯವೇನು? ಅನ್ನೋದನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅದೇ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಆಮಿರ್ ಖಾನ್ ನಟನೆ ಬಗ್ಗೆ ರಾಜಮೌಳಿ ಏನು ಹೇಳಿದ್ದರು? ಆ ಘಟನೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಆಮಿರ್ ಖಾನ್ ಓವರ್‌ಆಕ್ಟಿಂಗ್ ಮಾಡಿದ್ದಾರೆ

ಆಮಿರ್ ಖಾನ್ ಸಂಬಂಧಿ ಹಾಗೂ ನಿರ್ದೇಶಕ ಮನ್ಸೂರ್ ಖಾನ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಇಂಟ್ರೆಸ್ಟಿಂಗ್ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ. ಇತ್ತೀಚೆಗೆ ಆಮಿರ್ ಖಾನ್ ನಟಿಸಿದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ನೋಡಿ ರಾಜಮೌಳಿ ನೀಡಿದ ಪ್ರತಿಕ್ರಿಯೆ ನೀಡಿದ್ದರು. "ಆಮಿರ್ ಖಾನ್ ಎಷ್ಟು ಓವರ್‌ಆಕ್ಟಿಂಗ್ ಮಾಡುತ್ತಾರೆ" ಎಂದಿದ್ದರು. ಅದನ್ನು ನಿರ್ದೇಶಕ ಮನ್ಸೂರ್ ಖಾನ್ ನೆನಪಿಸಿಕೊಂಡಿದ್ದಾರೆ. ಆಮಿರ್ ನಟನೆ ಬಗ್ಗೆ ರಾಜಮೌಳಿ ಕಮೆಂಟ್ ಮಾಡಿದ್ದನ್ನು ಬಾಲಿವುಡ್ ನಿರ್ದೇಶಕ ಹಾಗೂ ಸಂಬಂಧಿ ನೆನಪಿಸಿಕೊಂಡಿದ್ದಾರೆ.

aamir-khan-rajamouli-mansoor-khan-overacting

"ಇದ್ದರೂ ಇರಬಹುದು ಎಂದು ಕೊಂಡೆ"

ಆಮಿರ್ ಖಾನ್ ಬಗ್ಗೆ ರಾಜಮೌಳಿ ಕಮೆಂಟ್ ಮಾಡಿದ್ದನ್ನು ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ. 'ಬಾಹುಬಲಿ' ಹಾಗೂ 'RRR' ಅಂತಹ ಮೆಗಾ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ರಾಜಮೌಳಿ ಮಾತು ಕೇಳಿ ಮನ್ಸೂರ್ ಖಾನ್ ಕನ್ಫ್ಯೂಸ್ ಆಗಿದ್ದರು. " ರಾಜಮೌಳಿ ಅಂತಹವರು ಓವರ್‌ಆಕ್ಟಿಂಗ್ ಮಾಡಿದ್ದಾರೆ ಅಂತ ಹೇಳಿದಾಗ, ಇವರಿಗೂ ಹೀಗೆ ಅನಿಸಿರಬೇಕಾದರೆ. ಓವರ್‌ಆಕ್ಟಿಂಗ್ ಮಾಡಿರಬಹುದು ಎಂದು ನನಗೆ ನಾನೇ ಹೇಳಿಕೊಂಡೆ" ಎಂದು ಮನ್ಸೂರ್ ಖಾನ್ ಪಿಟಿಐಗೆ ಹೇಳಿಕೆ ಕೊಟ್ಟಿದ್ದಾರೆ.

'ಲಾಲ್‌ ಸಿಂಗ್ ಚಡ್ಡ'ದಲ್ಲಿ ಓವರ್‌ಆಕ್ಟಿಂಗ್ ಮಾಡಿದ್ರಾ?

ರಾಜಮೌಳಿಯಂತೆಯೇ ನಿರ್ದೇಶಕ ಮನ್ಸೂರ್ ಖಾನ್‌ಗೂ 'ಲಾಲ್ ಸಿಂಗ್ ಚಡ್ಡ'ದಲ್ಲಿ ಆಮಿರ್ ಖಾನ್ ಓವರ್‌ಆಕ್ಟಿಂಗ್ ಮಾಡಿದ್ದಾರೆ ಎಂದು ಎನಿಸಿತ್ತು. " ನನಗೆ ಸ್ಕ್ರಿಪ್ಟ್ ಇಷ್ಟ ಆಗಿತ್ತು. ಲೇಖಕಾ ಅಟುಲ್ ಕುಲ್ಕರ್ಣಿ ಉತ್ತಮ ಕೆಲಸ ಮಾಡಿದ್ದರು. ಹೌದು, ಆಮಿರ್ ಖಾನ್ ತನ್ನ ಭಾವನೆಗಳು ಅತಿಯಾಗಿಯೇ ವ್ಯಕ್ತಪಡಿಸಿದ್ದರು ಎಂದು ನನಗೂ ಅನಿಸಿತ್ತು" ಎಂದು 'ಕಯಾಮತ್‌ ಸೇ ಕಯಾಮತ್ ತಕ್' ಸಿನಿಮಾ ನಿರ್ದೇಶಿಸಿದ ಮನ್ಸೂರ್ ಖಾನ್ ಹೇಳಿದ್ದಾರೆ.

ಎಲ್ಲದರಿಂದ ಹೊರ ಬರುತ್ತಾನೆ ಆಮಿರ್

ಇಷ್ಟೇ ಅಲ್ಲದೆ ಆಮಿರ್ ಖಾನ್ ತನ್ನ ಸಂಬಂಧಿ ಹಾಗೂ ನಟ ಆಮಿರ್ ಖಾನ್ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಾಯ್‌ಕಾಟ್ ವಿವಾದ 'ಲಾಲ್ ಸಿಂಗ್ ಚಡ್ಡ' ಸಿನಿಮಾದ ಮೇಲೆ ದೊಡ್ಡ ಪರಿಣಾಮವನ್ನೇ ಬೀರಿತ್ತು. "ಲಾಲ್ ಸಿಂಗ್ ಚಡ್ಡ ಸಿನಿಮಾ ಸೋಲುನಿಂದ ಆಮಿರ್ ಖಾನ್‌ಗೆ ವೃತ್ತಿ ಹಾಗೂ ವೈಯಕ್ತಿಕ ಜೀವನಕ್ಕೆ ದೊಡ್ಡ ಏಟು ಕೊಟ್ಟಿತ್ತು. ಆದರೆ, ಇದೆಲ್ಲದರಿಂದ ಆಮಿರ್ ಹೊರಬರುತ್ತಾರೆ" ಎಂದು ಮನ್ಸೂರ್ ಖಾನ್ ಹೇಳಿದ್ದಾರೆ.

More from Filmibeat

English summary
SS Rajamouli thought that Aamir Khan overacting' in Laal Singh Chaddha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X