ಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಗೊಳಿಸಿದ ಬಾಲಿವುಡ್ ತಾರೆಯರು

By Bharath Kumar

ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆ ನಿನ್ನೆ (ಮೇ 8) ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮುಂಬೈನ ಬಾಂದ್ರಾದಲ್ಲಿ ಇರುವ Rockdale ಬಂಗಲೆಯಲ್ಲಿ ಸೋನಂ ಕಪೂರ್-ಆನಂದ್ ಅಹುಜಾ ವಿವಾಹ ಮಹೋತ್ಸವ ನೆರವೇರಿತು.

ಸಿಖ್ ಸಂಪ್ರದಾಯದಂತೆ ನಟಿ ಸೋನಂ ಕಪೂರ್ ಕೊರಳಿಗೆ ಆನಂದ್ ಅಹುಜಾ ಮಂಗಳಸೂತ್ರ ಧಾರಣೆ ಮಾಡಿದರು. ನಟಿ ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಕರಿಷ್ಮಾ ಕಪೂರ್, ರಾಣಿ ಮುಖರ್ಜಿ ಸೇರಿದಂತೆ ಬಾಲಿವುಡ್ ನ ಹಲವು ತಾರೆಯರು ಸೋನಂ-ಆನಂದ್ ಮದುವೆಗೆ ಸಾಕ್ಷಿ ಆದರು.

ಮದುವೆಯ ನಂತರ ಸಂಜೆ ಮುಂಬೈನ ಲೀಲಾ ಹೋಟೆಲ್ ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಈ ವಿಶೇಷ ಸಂದರ್ಭದಲ್ಲಿ ಐಶ್, ಕತ್ರಿನಾ, ಆಲಿಯಾ, ಶಾರೂಖ್ ಸೇರಿದಂತೆ ಅನೇಕರು ಭಾಗಿಯಾಗಿ, ಕುಣಿದು ಕುಪ್ಪಳಿಸಿದರು. ಹಾಗಿದ್ರೆ, ಅನಿಲ್ ಕಪೂರ್ ಪುತ್ರಿ ರಿಸಪ್ಷನ್ ನಲ್ಲಿ ಯಾರೆಲ್ಲ ಮಿಂಚಿದ್ರು ಎಂದು ಫೋಟೋ ಸಮೇತ ನೋಡಿ.....

ಸರಳ ಸುಂದರ ಜೋಡಿ

ಸರಳ ಸುಂದರ ಜೋಡಿ

ಮದುವೆಯಲ್ಲಿ ಅದ್ಧೂರಿಯಾಗಿ ಮಿಂಚಿದ ವಧು-ವರ ಸಂಜೆ ಆರತಕ್ಷತೆಯಲ್ಲಿ ಸಖತ್ ಕೂಲ್ ಆಗಿ ಕಾಣಿಸಿಕೊಂಡರು. ಸಿಲ್ವರ್ ಬಣ್ಣದ ಕ್ರಾಪ್ ಟಾಪ್ ಸ್ಕರ್ಟ್ ನಲ್ಲಿ ಸೋನಂ ಕಪೂರ್ ಯುವರಾಣಿಯಂತೆ ಕಂಗೊಳಿಸಿದ್ರೆ, ಶೆರ್ವಾನಿ ತೊಟ್ಟಿದ್ದ ಆನಂದ್ ಆಹುಜಾ ಯುವರಾಜನಂತಿದ್ದರು.

ಶಾರೂಖ್ ಖಾನ್ ದಂಪತಿ

ಶಾರೂಖ್ ಖಾನ್ ದಂಪತಿ

ಬಾಲಿವುಡ್ ನ ನವ ಜೋಡಿಗೆ ಶುಭಹಾರೈಸಲು ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಆಗಮಿಸಿದ್ದರು. ಸಂಜೆ ಆರತಕ್ಷತೆಯಲ್ಲಿ ಸಲ್ಮಾನ್ ಮತ್ತು ಶಾರೂಖ್ ಒಟ್ಟಿಗೆ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.

ಐಶ್-ಅಭಿ ದಂಪತಿ

ಐಶ್-ಅಭಿ ದಂಪತಿ

ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿ ಕೂಡ ಸೋನಂ ಆರತಕ್ಷತೆಯಲ್ಲಿ ಕಾಣಿಸಿಕೊಂಡರು.

ಆಲಿಯಾ-ರಣ್ಬೀರ್

ಆಲಿಯಾ-ರಣ್ಬೀರ್

ಬಾಲಿವುಡ್ ನ ಲವ್ ಬರ್ಡ್ಸ ಅಂತಾನೇ ಖ್ಯಾತಿ ಪಡೆದುಕೊಂಡಿರುವ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಒಟ್ಟಿಗೆ ಸೋನಂ ಕಪೂರ್ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.

ಕತ್ರಿನಾ ಕೈಫ್

ಕತ್ರಿನಾ ಕೈಫ್

ಕೆಂಪು ಬಣ್ಣ ಲೆಹೆಂಗಾ ತೊಟ್ಟಿದ್ದ ಕತ್ರಿನಾ ಕೈಫ್ ಸೋನಂ ಕಪೂರ್ ರಿಸಪ್ಷನ್ ನಲ್ಲಿ ಮಿಂಚಿದ್ದು ಹೀಗೆ.

ಅಕ್ಷಯ್ ಕುಮಾರ್ ದಂಪತಿ

ಅಕ್ಷಯ್ ಕುಮಾರ್ ದಂಪತಿ

ಬಿಟೌನ್ ಖಿಲಾಡಿ ಅಕ್ಷಯ್ ಕುಮಾರ್ ಮತ್ತು ಪತ್ನಿ ಟ್ವಿಂಕಲ್ ಖನ್ನಾ ಇಬ್ಬರು ಸೋನಂ ಕಪೂರ್ ಮತ್ತು ಆನಂದ್ ಆಹುಜಾ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.

ಶ್ರೀದೇವಿ ಪುತ್ರಿಯರು

ಶ್ರೀದೇವಿ ಪುತ್ರಿಯರು

ಕಪೂರ್ ಫ್ಯಾಮಿಲಿ ಮದುವೆ ಇದಾಗಿದ್ದರಿಂದ ತಮ್ಮದೇ ಮದುವೆಯಲ್ಲಿ ಶ್ರೀದೇವಿ ಮಕ್ಕಳು ಮತ್ತು ಪತಿ ಕಾಣಿಸಿಕೊಂಡಿದ್ದು ಹೀಗೆ. ಜಾಹ್ನವಿ ಕಪೂರ್, ಖುಷಿ ಕಪೂರ್ ಮತ್ತು ಬೋನಿ ಕಪೂರ್ ಒಟ್ಟಿಗೆ ಫೋಸ್ ಕೊಟ್ಟರು.

ಶಾಹೀದ್ ಕಪೂರ್ ದಂಪತಿ

ಶಾಹೀದ್ ಕಪೂರ್ ದಂಪತಿ

ನಟಿ ಶಾಹೀದ್ ಕಪೂರ್ ಮತ್ತು ಪತ್ನಿ ಮಿರಾ ರಜಪೂತ್ ಒಟ್ಟಿಗೆ ಸೋನಂ ಮದುವೆಯ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಮೀರಾ ರಜಪೂತ್ ಗರ್ಭೀಣಿಯಾಗಿದ್ದಾರೆ.

ರೇಖಾ ಜೊತೆ ಶಾರೂಖ್

ರೇಖಾ ಜೊತೆ ಶಾರೂಖ್

ಎವರ್ ಗ್ರೀನ್ ನಟಿ ರೇಖಾ ಕಪೂರ್ ಪುತ್ರಿಯ ಮದುವೆ ಆರತಕ್ಷತೆಯಲ್ಲಿ ಕಾಣಿಸಿಕೊಂಡರು. ಈ ವೇಳೆ ನಟ ಶಾರೂಖ್ ಖಾನ್ ರೇಖಾ ಅವರ ಜೊತೆ ಫೋಸ್ ಕೊಟ್ಟಿದ್ದು ವಿಶೇಷವಾಗಿತ್ತು.

ಬಾಲಿವುಡ್ ಜೋಡಿಹಕ್ಕಿ

ಬಾಲಿವುಡ್ ಜೋಡಿಹಕ್ಕಿ

ಸೋನಂ ಕಪೂರ್ ಆರತಕ್ಷತೆಗೆ ನಟ ವರುಣ್ ಧವನ್ ತಮ್ಮ ಗರ್ಲ್ ಫ್ರೆಂಡ್ ಜೊತೆಯಲ್ಲಿ ಬಂದಿದ್ದರು. ನತಾಶ ದಲಾಲ್ ಜೊತೆ ವರುಣ್ ಧವನ್ ಫೋಸ್ ಕೊಟ್ಟರು.

ಅರ್ಜುನ್ ಕಪೂರ್ ಮತ್ತು ರಣ್ವೀರ್ ಸಿಂಗ್

ಅರ್ಜುನ್ ಕಪೂರ್ ಮತ್ತು ರಣ್ವೀರ್ ಸಿಂಗ್

ಇನ್ನು ಬಾಲಿವುಡ್ ಬ್ಯಾಚುಲರ್ಸ್ ನಟ ಅರ್ಜುನ್ ಕಪೂರ್ ಮತ್ತು ರಣ್ವೀರ್ ಸಿಂಗ್ ಕೂಡ ಸೋನಂ ಕಪೂರ್ ಆರತಕ್ಷತೆಯಲ್ಲಿ ಮಿಂಚಿದರು.

ಕ್ವೀನ್ ಕಂಗನಾ

ಕ್ವೀನ್ ಕಂಗನಾ

ಬಾಲಿವುಡ್ ಕ್ವೀನ್ ಕಂಗನಾ ರನೌವತ್ ನಿರ್ದೇಶಕ ರಾಜಕುಮಾರ್ ಹಿರಾನಿ ಮತ್ತು ವಿನೋದ್ ಚೋಪ್ರಾ ಜೊತೆಯಲ್ಲಿ ಸೋನಂ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.

ಕರಣ್ ಜೋಹರ್

ಕರಣ್ ಜೋಹರ್

ಬಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ತಮ್ಮ ತಾಯಿಯ ಜೊತೆ ಸೋನಂ ಮದುವೆಯ ರಿಸಪ್ಷನ್ ನಲ್ಲಿ ಭಾಗವಹಿಸಿದ್ದರು.

ರಿಷಿ ಕಪೂರ್ ದಂಪತಿ

ರಿಷಿ ಕಪೂರ್ ದಂಪತಿ

ಹಿರಿಯ ನಟ ರಿಷಿ ಕಪೂರ್ ಮತ್ತು ಪತ್ನಿ ನೀತು ಕಪೂರ್ ಕೂಡ ಸೋನಂ ಮದುವೆ ಪಾರ್ಟಿಯಲ್ಲಿ ಭಾಗವಹಿಸಿದ್ದರು.

More from Filmibeat

English summary
May 8, Sonam Kapoor tied the knot with her long-time boyfriend Anand Ahuja and now the couple has arrived at their reception party that is taking place at hotel Leela, Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X