ಸೋನಂ ಕಪೂರ್ ಮದುವೆಗೆ 'ಈ' ನಟಿಯರೆಲ್ಲ ಯಾಕೆ ಹೋಗ್ಲಿಲ್ಲ.?
ಕಳೆದ ಒಂದು ವಾರದಿಂದ ಇಡೀ ಬಾಲಿವುಡ್, ನಟಿ ಸೋನಂ ಕಪೂರ್ ಮದುವೆ ಸಂಭ್ರಮದಲ್ಲಿ ಮುಳುಗಿದೆ. ಉದ್ಯಮಿ ಆನಂದ್ ಅಹುಜಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಂ ಕಪೂರ್ ವಿವಾಹಕ್ಕೆ ಅನೇಕ ಬಾಲಿವುಡ್ ಗಣ್ಯರು ಸಾಕ್ಷಿ ಆಗಿದ್ದರು.
ಕಿಂಗ್ ಖಾನ್ ಶಾರುಖ್, ಬಾಲಿವುಡ್ ಟೈಗರ್ ಸಲ್ಮಾನ್ ಖಾನ್, ಕರಣ್ ಜೋಹರ್, ರಣ್ವೀರ್ ಸಿಂಗ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್, ಬಿಗ್ ಬಿ ಅಮಿತಾಬ್ ಬಚ್ಚನ್, ಅಭಿಶೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಶಿಲ್ಪಾ ಶೆಟ್ಟಿ, ಅರ್ಜುನ್ ಕಪೂರ್, ಜಾಹ್ನವಿ ಕಪೂರ್, ಬೋನಿ ಕಪೂರ್, ಹಿರಿಯ ನಟಿ ರೇಖಾ ಸೇರಿದಂತೆ ಹಲವು ತಾರೆಯರು ಸೋನಂ ಕಪೂರ್ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಆದ್ರೆ, ಕೆಲವು ನಟಿಯರು ಮಾತ್ರ ಸೋನಂ ಕಪೂರ್ ಮದುವೆಯಲ್ಲಿ ಮಿಸ್ ಆಗಿದ್ದರು. ಯಾರವರು.? ಅವೆರಲ್ಲಾ ಸೋನಂ ಮದುವೆಗೆ ಯಾಕೆ ಬರಲಿಲ್ಲ.? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ದೀಪಿಕಾ ಪಡುಕೋಣೆ ಬರಲಿಲ್ಲ.!
ನಟಿ ಸೋನಂ ಕಪೂರ್ ಗೂ ದೀಪಿಕಾ ಪಡುಕೋಣೆಗೂ ಆಗ್ಬರಲ್ಲ ಎಂಬ ಗುಸುಗುಸು ಬಾಲಿವುಡ್ ನಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಈ ನಡುವೆ ಸೋನಂ ಕಪೂರ್ ಮದುವೆಯಲ್ಲಿ ದೀಪಿಕಾ ಮಿಸ್ ಆಗಿರುವುದು ಹಲವು ಕಪೋಲಕಲ್ಪಿತ ಕಥೆಗಳಿಗೆ ನಾಂದಿ ಹಾಡಬಹುದು. ಆದ್ರೆ, ವಾಸ್ತವ ಏನಪ್ಪ ಅಂದ್ರೆ, ದೀಪಿಕಾ ಪಡುಕೋಣೆ MET Gala ಸಮಾರಂಭದಲ್ಲಿ ಬಿಜಿಯಾಗಿರುವುದರಿಂದ ಸೋನಂ ಕಪೂರ್ ಮದುವೆಗೆ ಬಂದಿಲ್ಲ.

ಪ್ರಿಯಾಂಕಾ ರದ್ದೂ ಅದೇ ಕಥೆ
ದೀಪಿಕಾ ಪಡುಕೋಣೆ ಜೊತೆಗೆ ನಟಿ ಪ್ರಿಯಾಂಕಾ ಛೋಪ್ರಾ ಕೂಡ MET Gala ಸಮಾರಂಭದಲ್ಲಿ ಬಿಜಿಯಾಗಿದ್ದಾರೆ. ಹೀಗಾಗಿ, ಪ್ರಿಯಾಂಕಾ ಕೂಡ ಸೋನಂ ಮದುವೆಯಲ್ಲಿ ಗೈರು ಹಾಜರ್ ಆಗಿದ್ದರು.

ಪರಿಣಿತಿ ಛೋಪ್ರ ಕೂಡ ಬಂದಿಲ್ಲ
ಆಸ್ಟ್ರೇಲಿಯಾದಲ್ಲಿ ಕಮರ್ಶಿಯಲ್ ಒಂದರ ಶೂಟಿಂಗ್ ನಲ್ಲಿ ಪಾಲ್ಗೊಂಡಿರುವುದರಿಂದ, ಪರಿಣಿತಿ ಛೋಪ್ರ ಕೂಡ ಸೋನಂ ಕಪೂರ್ ಮದುವೆಗೆ ಬರಲಾಗಲಿಲ್ಲ.

ಸೋನಾಕ್ಷಿ ಸಿನಿಮಾದಲ್ಲಿ ಬಿಜಿ
ಕ್ವಾಲಲಂಪುರ್ ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಸೋನಾಕ್ಷಿ ಸಿನ್ಹ ತೊಡಗಿದ್ದಾರೆ. ಆದ್ದರಿಂದ, ಅವರೂ ಕೂಡ ಸೋನಂ ಕಪೂರ್ ಮದುವೆಯನ್ನ ಮಿಸ್ ಮಾಡಿಕೊಂಡರು.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೋಹ್ಲಿ ಕೂಡ ಮಿಸ್ಸಿಂಗ್
ಐಪಿಎಲ್ ಮ್ಯಾಚ್ ಇರುವುದರಿಂದ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಕೂಡ ಸೋನಂ ಕಪೂರ್ ಮದುವೆಗೆ ಆಬ್ಸೆಂಟ್ ಆದರು. ಟ್ವಿಟ್ಟರ್ ಮೂಲಕ ಸೋನಂ ಕಪೂರ್ ಗೆ ಅನುಷ್ಕಾ ಶರ್ಮಾ ಶುಭಾಶಯಗಳನ್ನು ತಿಳಿಸಿದ್ದಾರೆ.


Click it and Unblock the Notifications











