ಸಂಪೂರ್ಣ ಬೆತ್ತಲಾಗಿ ಸರಸರನೆ ಮರ ಏರಿದ ಖ್ಯಾತ ನಟ ; ಫ್ಯಾನ್ಸ್ ತಬ್ಬಿಬ್ಬು-ರೊಚ್ಚಿಗೆದ್ದ ಜನ
ಚಿತ್ರರಂಗದಲ್ಲಿ ಈಗ ಸ್ಫರ್ಧೆ ಹೆಚ್ಚಿದೆ. ಉಳಿಯಬೇಕು ಅಂದರೆ ಇಂದು ಕೇವಲ ಅಭಿನಯ ಮಾತ್ರ ಮುಖ್ಯ ಅಲ್ಲ. ಬದಲಿಗೆ ದೇಹ ದಂಡನೆ ಕೂಡ ಮುಖ್ಯ. ಹೀಗಾಗಿ ಆರೋಗ್ಯವೇ ಭಾಗ್ಯ ಎಂಬ ಮಂತ್ರವನ್ನು ಹೇಳುವ ಹಲವು ನಾಯಕ-ನಾಯಕಿಯರು ಜಿಮ್‌ನಲ್ಲಿ ಬೆವರು ಸುರಿಸುತ್ತಾರೆ. ದೈಹಿಕ ಫಿಟ್ನೆಸ್‌ಗೆ ಪ್ರಾಮುಖ್ಯತೆ ನೀಡುತ್ತಾರೆ. ಹಾಗಂಥ ಎಲ್ಲರೂ ಇಲ್ಲಿ ಜಿಮ್ ಬಾಗಿಲು ಬಡೆಯುವುದಿಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ತಮ್ಮ ದೇಹಸಿರಿ ಕಾಪಾಡಿಕೊಳ್ಳಲು...
ಯೋಗಾಭ್ಯಾಸ ಮಾಡುತ್ತಾರೆ. ಕೆಲವರು ವಾಕಿಂಗ್ ಮಾಡಿದರೆ ಇನ್ನೂ ಕೆಲವರು ಸೈಕ್ಲಿಂಗ್ ಮಾಡ್ತಾರೆ. ಮತ್ತೂ ಕೆಲವರು ಪ್ರಾಚೀನ ಸಮರ ಕಲೆಗಳಲ್ಲಿ ಒಂದಾದ ಕಲರಿಪಯಟ್ಟು ಅಭ್ಯಾಸ ಮಾಡುತ್ತಾರೆ. ಉದಾಹರಣೆಗೆ ವಿದ್ಯುತ್ ಜಾಮ್ವಾಲ್.

ಹೌದು, ವಿದ್ಯುತ್ ಜಾಮ್ವಾಲ್... ಬಾಲಿವುಡ್‌ನ ಸುರಸುಂದರ. ''ಫೋರ್ಸ್''.. ''ಕಮಾಂಡೋ''.. ''ಕಮಾಂಡೋ 2''.. ''ಕಮಾಂಡೋ 3''.. ''ಜಂಗ್ಲಿ''.. ''ಖುದಾ ಹಾಫೀಜ್''.. ''ಖುದಾ ಹಾಫೀಜ್ 2.. ''ಕ್ರ್ಯಾಕ್''.. ''ಸನಕ್''... ''IB71''.. ಹೀಗೆ ಹಲವು ಚಿತ್ರಗಳಲ್ಲಿ ತಮ್ಮ ಸಾಹಸಗಾಥೆಯ ಪ್ರದರ್ಶನ ಮಾಡಿರುವ ವಿದ್ಯುತ್ ತೆಲುಗಿನಲ್ಲಿ ''ಶಕ್ತಿ'' ಮತ್ತು ತಮಿಳಿನಲ್ಲಿ ''ಬಿಲ್ಲಾ 2'' ಹಾಗೂ ''ತುಪಾಕಿ'' ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಸದ್ಯ ಹಾಲಿವುಡ್‌ನ ಕೂಡ ಪ್ರವೇಶ ಮಾಡಿದ್ದಾರೆ.
ಇಂಥಾ ವಿದ್ಯುತ್ ಜಾಮ್ವಾಲ್ ಸದ್ಯ ಸಂಪೂರ್ಣ ಬೆತ್ತಲಾಗಿ ಮರವನ್ನು ಸರಸರನೇ ಏರಿದ್ದಾರೆ. ತಮ್ಮ ಈ ಸಾಹಸದ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿದ್ಯುತ್ ಜಾಮ್ವಾಲ್ ಅವರ ಈ ವಿಡಿಯೋ ಹಲ್‌ಚಲ್ ಎಬ್ಬಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ವಿದ್ಯುತ್ ತಮ್ಮ ಈ ಸಾಹಸವನ್ನು ಸಹಜ ಎಂದು ಕರೆದಿದ್ದಾರೆ. ಸಹಜ ಎಂದರೆ ಸ್ವಾಭಾವಿಕವಾಗಿ ಮತ್ತು ಸಹಜ ಸ್ಥಿತಿಯಲ್ಲಿರುವುದು ಎಂದರ್ಥ ಎಂದಿರುವ ವಿದ್ಯುತ್ ಮರ ಹತ್ತುವಾಗ ನಮ್ಮ ದೇಹದಲ್ಲಿರುವ ನರಮಂಡಲ ಪ್ರಕೃತಿಯ ಜೊತೆ ಸಂವಾದ ನಡೆಸುತ್ತೆ ಎಂದು ಹೇಳಿದ್ದಾರೆ. ಪ್ರಕೃತಿಯ ಶಕ್ತಿಯು ನೇರವಾಗಿ ನಮ್ಮ ಶರೀರ ತಲುಪುತ್ತೆ, ಏಕಾಗ್ರತೆ ಹೆಚ್ಚಾಗುತ್ತೆ, ದೇಹದ ಸಮತೋಲನ ಮತ್ತು ಸಮನ್ವಯವನ್ನು ಸುಧಾರಿಸುತ್ತದೆ ಎಂದು ವಿವರಿಸಿದ್ದಾರೆ.
ಸದ್ಯ ಈ ವಿಡಿಯೋಗೆ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಲವರು ವಿದ್ಯುತ್ ಜಾಮ್ವಾಲ್ ಈ ಸಾಹಸ ಕಲೆಯನ್ನು ಮೆಚ್ಚಿಕೊಂಡರೆ ಇನ್ನೂ ಕೆಲವರು ಖ್ಯಾತೆ ತೆಗೆಯುತ್ತಿದ್ದಾರೆ. ನಿಮಗೇನಾದರೂ ಹುಚ್ಚು ಹಿಡಿದಿದೆಯಾ..? ಬೆತ್ತಲೆಯಾಗಿ ಯಾಕೆ ಓಡಾಡುತ್ತಿದ್ದೀರಾ..? ಮೂರ್ಖ ಶಿಖಾಮಣಿ.. ನಾಚಿಕೆಯಾಗಲ್ವಾ..? ಎಂದೆಲ್ಲಾ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೇ ವಿದ್ಯುತ್ ಜಾಮ್ವಾಲ್ ಈ ರೀತಿ ಬೆತ್ತಲೆಯಾಗಿ ಮರವೇರುತ್ತಿರುವುದು, ಓಡಾಡುತ್ತಿರುವುದು, ಇದು ಮೊದಲೇನಲ್ಲ. 2023ರಲ್ಲಿ ತಮ್ಮ ಹುಟ್ಟುಹಬ್ಬದಂದು ವಿದ್ಯುತ್ ಹಿಮಾಲಯದ ತಪ್ಪಲಿನಲ್ಲಿ ಬೆತ್ತಲೆಯಾಗಿ ಓಡಾಡಿದ್ದರು. ಬೆತ್ತಲೆಯಾಗಿಯೇ ಅಡುಗೆ ಮಾಡುತ್ತಾ ಝರಿಯ ನೀರಿನಲ್ಲಿ ಸ್ನಾನವನ್ನು ಮಾಡಿದ್ದರು. ದೈವಿಕ ವಾಸಸ್ಥಾನ.. 14 ವರ್ಷಗಳ ಹಿಂದೆ ಈ ಅಭ್ಯಾಸ ಶುರುವಾಯ್ತು. ನನಗಿದು ಅರಿವಿಗೆ ಬರುವ ಮೊದಲೇ ಪ್ರತಿ ವರ್ಷ 7-10 ದಿನಗಳನ್ನು ಏಕಾಂಗಿಯಾಗಿ ಕಳೆಯುವುದು ನನ್ನ ಜೀವನದ ಅವಿಭಾಜ್ಯ ಅಂಗವಾಯಿತು ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡು ಬರೆದುಕೊಂಡಿದ್ದರು. ಆಗಲೂ ಕೂಡ ಕೆಲವರು ತಕರಾರು ತೆಗೆದಿದ್ದರು.
ರಾಮ್ ಗೋಪಾಲ್ ವರ್ಮಾ ಅಂದು ವಿದ್ಯುತ್ ಹಂಚಿಕೊಂಡಿದ್ದ ಫೋಟೊಗಳಿಗೆ ಪ್ರತಿಕ್ರಿಯೆ ನೀಡಿದ್ದರು. ವಿದ್ಯುತ್ ಜಾಮ್ವಾಲ್ ಅವರೇ.. ನೀವು ಸರಿಯಾದ ಸಮಯದಲ್ಲಿ ನಿಮ್ಮೊಳಗಿನ ಮೃಗವನ್ನು (ಅನಿಮಲ್) ಹೊರಗೆ ತಂದಿದ್ದೀರಿ. ನೀವು ನಿಜವಾಗಿಯೂ ಗ್ರೀಕ್ ಗಾಡ್ ರೀತಿ ಕಾಣಿಸುತ್ತಿದ್ದೀರಿ ಎಂದು ಆರ್‌ಜಿವಿ ಬರೆದುಕೊಂಡಿದ್ದರು. ನಿಮಗೆ ಮಿಲಿಯನ್ ಸೆಲ್ಯೂಟ್ ಎಂದು ಕೂಡ ವರ್ಮಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದರು. ಈಗ ವಿದ್ಯುತ್ ಜಾಮ್ವಾಲ್ ಸಂಪೂರ್ಣ ಬೆತ್ತಲೆಯಾಗಿ ಸರಸರನೆ ಮರ ಹತ್ತಿದ್ದಾರೆ.


Click it and Unblock the Notifications











