ಬಾಲಿವುಡ್‌ನ ಹಿಟ್ ಚಿತ್ರದ ಸೀಕ್ವೆಲ್‌ನಲ್ಲಿ ಸ್ಟಾರ್ ನಟರ ಮಕ್ಕಳು?

ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಅಭಿನಯದ 'ಧಡ್ಕನ್' 2000ರಲ್ಲಿ ಬಿಡುಗಡೆಯಾಗಿತ್ತು. ಆ ಕಾಲದ ಅತ್ಯಂತ ಗಳಿಕೆ ಕಂಡ ಚಿತ್ರಗಳಲ್ಲಿ ಅದು ಒಂದಾಗಿತ್ತು. ಆ ಚಿತ್ರದ ಹಾಡುಗಳು ಈಗಲೂ ಜನಪ್ರಿಯ.

ಸೂಪರ್ ಹಿಟ್ ಆಗಿದ್ದ ಆ ಚಿತ್ರದ ಸೀಕ್ವೆಲ್ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇದರಲ್ಲಿ ಮತ್ತೆ ಅಕ್ಷಯ್ ಕುಮಾರ್ ಹಾಗೂ ಸುನಿಲ್ ಶೆಟ್ಟಿ ಜತೆಯಾಗುತ್ತಾರೆ ಎನ್ನಲಾಗಿತ್ತು. ಆದರೆ ಅದರಲ್ಲಿ ಅವರಿಬ್ಬರೂ ಈ ಸಿನಿಮಾದಲ್ಲಿ ನಟಿಸುವುದಿಲ್ಲ. ಈ ಸಿನಿಮಾಕ್ಕೆ ತಾವಿಬ್ಬರೂ ತುಂಬಾ ವಯಸ್ಸಾದವರು ಆಗ್ತೀವಿ ಎಂದು ಇಬ್ಬರಿಗೂ ಅನಿಸಿದೆ. ಅದರ ಬದಲು ನಮ್ಮ ಮಕ್ಕಳು ನಟಿಸಬಹುದು ಎಂಬ ಸುಳಿವನ್ನು ಸುನಿಲ್ ಶೆಟ್ಟಿ ನೀಡಿದ್ದಾರೆ.

ಹೀಗಾಗಿ ಚಿತ್ರಮಂದಿರದಲ್ಲಿ ದಾಖಲೆಯ ಪ್ರದರ್ಶನ ಕಂಡಿದ್ದ 'ಧಡ್ಕನ್' ಚಿತ್ರದ ಎರಡನೆಯ ಆವೃತ್ತಿಯಲ್ಲಿ ಸ್ಟಾರ್ ನಟರಿಬ್ಬರ ಮಕ್ಕಳು ನಟಿಸುವ ಮೂಲಕ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ. ಮುಂದೆ ಓದಿ...

ರೊಮ್ಯಾನ್ಸ್ ಮಾಡಲು ನಮಗೆ ವಯಸ್ಸಾಯ್ತು

ರೊಮ್ಯಾನ್ಸ್ ಮಾಡಲು ನಮಗೆ ವಯಸ್ಸಾಯ್ತು

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನಿಲ್ ಶೆಟ್ಟಿ, 'ನಾನು ಮತ್ತು ಅಕ್ಷಯ್ ಇಬ್ಬರಿಗೂ ವಯಸ್ಸಾಗಿದೆ. ನಮ್ಮಂತಹ ವಯಸ್ಸಾದವರು ತೆರೆಯ ಮೇಲೆ ರೊಮ್ಯಾನ್ಸ್ ಮಾಡುವುದನ್ನು ನೋಡಲು ಯಾರಿಗೂ ಆಸಕ್ತಿ ಇರುವುದಿಲ್ಲ. ಆದರೆ ಸೀಕ್ವೆಲ್‌ಅನ್ನು ನಮ್ಮ ಮಕ್ಕಳು ಮಾಡಿದರೆ ಚೆನ್ನಾಗಿರುತ್ತದೆ. ಆದರೆ ಆ ಚಿತ್ರದ ಭಾಗವಾಗಲು ಶಿಲ್ಪಾ ಮಗಳು ತುಂಬಾ ಮುದ್ದು ಮತ್ತು ಚಿಕ್ಕವಳು' ಎಂದಿದ್ದಾರೆ.

ನಿರ್ಮಾಪಕರಿಂದಲೂ ಒಪ್ಪಿಗೆ

ನಿರ್ಮಾಪಕರಿಂದಲೂ ಒಪ್ಪಿಗೆ

'ನಮ್ಮ ಮಕ್ಕಳನ್ನು ಹಾಕಿಕೊಂಡು ಸಿನಿಮಾ ಮಾಡುವ ಬಗ್ಗೆ ನಿರ್ಮಾಪಕ ರತನ್ ಜೈನ್ ಜತೆ ನಾವು ಈಗಾಗಲೇ ಅಭಿಪ್ರಾಯ ಹಂಚಿಕೊಂಡಿದ್ದೇವೆ. ಅದನ್ನು ಅವರೂ ಕೂಡ ಇಷ್ಟಪಟ್ಟಿದ್ದಾರೆ' ಎಂದು ಸುನಿಲ್ ಶೆಟ್ಟಿ ತಿಳಿಸಿದ್ದಾರೆ. ಇವರಿಬ್ಬರ ಮಕ್ಕಳಾದ ಆರವ್ ಕುಮಾರ್ ಮತ್ತು ಅಹಾನ್ ಶೆಟ್ಟಿ ಗ್ರ್ಯಾಂಡ್ ಎಂಟ್ರಿ ನೀಡುವ ಸಾಧ್ಯತೆ ಇದೆ.

ಮುಂದಿನ ವರ್ಷ ಸಿನಿಮಾ ಶುರು

ಮುಂದಿನ ವರ್ಷ ಸಿನಿಮಾ ಶುರು

ಸಿನಿಮಾದ ಬಗ್ಗೆ ಯೋಜನೆ, ಮಾತುಕತೆ ಆರಂಭವಾಗಿದ್ದವು. ಆದರೆ ಕೊರೊನಾ ವೈರಸ್ ಕಾರಣದಿಂದ ಈ ಕಾರ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ. ಯಾವುದೇ ಸ್ಕ್ರೀನ್ ಟೆಸ್ಟ್ ಅಥವಾ ಲುಕ್ ಟೆಸ್ಟ್ ಮಾಡಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ 2021ರಲ್ಲಿ ನಾವು ಚಿತ್ರೀಕರಣ ಆರಂಭಿಸಬಹುದು ಎಂದು ರತನ್ ಜೈನ್ ಹೇಳಿದ್ದಾರೆ.

ಬರಲಿದೆಯೇ ಹೇರಾ ಫೇರಿ 3 ?

ಬರಲಿದೆಯೇ ಹೇರಾ ಫೇರಿ 3 ?

ಹಾಗೆಯೇ ಸುನಿಲ್ ಶೆಟ್ಟಿ ಮತ್ತು ಅಕ್ಷಯ್ ಕುಮಾರ್ ನಟನೆಯ ಮತ್ತೊಂದು ಸೀಕ್ವೆಲ್ ಬಗ್ಗೆಯೂ ಚರ್ಚೆಯಾಗುತ್ತಿದೆ. ಅದು 'ಹೇರಾ ಫೇರಿ 3' ಸಿನಿಮಾದ್ದು. 'ಈ ಸಿನಿಮಾದ ಮಾತುಕತೆ ನಿಂತಿಲ್ಲ. ಈಗಲೂ ಚರ್ಚೆಯಲ್ಲಿದೆ. ಇದು ನಮ್ಮ ಮೂವರಿಂದಲೇ ಆಗಲಿದೆ. ಏಕೆಂದರೆ ಇದರ ಬಗ್ಗೆ ನಾವು ಬಹಳ ಬಹಳ ಸ್ಪಷ್ಟವಾಗಿದ್ದೇವೆ. ನಾವು ಖಂಡಿತವಾಗಿಯೂ ಈ ಸಿನಿಮಾ ಮಾಡುತ್ತೇವೆ' ಎಂದು ಜನವರಿಯಲ್ಲಿ ಸುನಿಲ್ ಶೆಟ್ಟಿ ತಿಳಿಸಿದ್ದರು.

More from Filmibeat

English summary
Bollywood actor Suniel Shetty said that, Dhadkan sequel movie should star Akshay Kumar's son and his son.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X