ಬಾಲಿವುಡ್ ನಟ ಗೋವಿಂದ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ; ವಿಚ್ಚೇನದ ಪತ್ನಿ ಅರ್ಜಿ.. ಇದು ಗಂಡ-ಹೆಂಡ್ತಿ ಮತ್ತು ಅವಳ ಕಥೆ!

ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟ ಗೋವಿಂದ ಹಾಗೂ ಪತ್ನಿ ಸುನಿತಾ ಅಹುಜಾ ನಡುವಿನ ಕೌಟುಂಬಿಕ ಕಲಹದ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಈ ಬಗ್ಗೆ ಬಹಿರಂಗವಾಗಿ ಗೋವಿಂದ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಪತ್ನಿ ಸುನಿತಾ ಅಹುಜಾ ಮಾತ್ರ ಪತಿ ಗೋವಿಂದ ಬಗ್ಗೆ ಆಗಾಗ ತಮ್ಮ ಅಸಮಧಾನವನ್ನು ಹೊರ ಹಾಕುತ್ತಲೇ ಇದ್ದರು. ಈಗ ಪತಿಯ ವಿರುದ್ಧ ರೊಚ್ಚಿಗೆದ್ದು ಮುಂಬೈನ ಬಾಂದ್ರಾದ ಫ್ಯಾಮಿಲಿ ಕೋರ್ಟ್‌ಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಸುನಿತಾ ಅಹುಜಾ ಸಲ್ಲಿಸಿದ ವಿಚ್ಚೇದನದ ಅರ್ಜಿಯಲ್ಲಿ ಗೋವಿಂದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಇದು ಬಾಲಿವುಡ್ ನಟನಿಗೆ ಕಂಟಕ ಆಗುವ ಸಾಧ್ಯತೆಯಿದೆ. ಗೋವಿಂದ ಪತ್ನಿ ಸುನಿತಾ ಅಹುಜಾ ಸಲ್ಲಿಸಿದ ಅರ್ಜಿಯಲ್ಲಿ ಪತಿ ಗೋವಿಂದ ವಿರುದ್ಧ ವಿಚ್ಚೇದನ ಕೇಳುತ್ತಿರುವುದಕ್ಕೆ "ವ್ಯಭಿಚಾರ, ಕ್ರೂರತೆ ಮತ್ತು ನಿರ್ಲಕ್ಷ್ಯ" ಕಾರಣ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ಬಗ್ಗೆ ಜೂನ್‌ನಿಂದ ವಿಚಾರಣೆ ನಡೆಯುತ್ತಿದೆ ಎಂದು ವರದಿ ಮಾಡಲಾಗಿದೆ.

Sunita Ahuja Files for Divorce from actor Govinda in Bandra Court Alleging Adultery amp amp Cruelty

ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟ ಗೋವಿಂದ ಬಗ್ಗೆ ಪತ್ನಿ ಅಸಮಧಾನವನ್ನು ಹೊರ ಹಾಕುತ್ತಲೇ ಇದ್ದರು. ತಾವಿಬ್ಬರು ಬೇರೆ ಬೇರೆ ವಾಸ ಮಾಡುತ್ತಿದ್ದೇವೆ ಎಂದು ಸುನಿತಾ ಅಹುಜಾ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಕೆಲಸದ ನೆನಪವೊಡ್ಡಿ ಗೋವಿಂದ ತನ್ನ ಕುಟುಂಬಕ್ಕೆ ಸಮಯವನ್ನೇ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. ಇವರ ಆರೋಪದ ಬೆನ್ನಲ್ಲೇ ಗೋವಿಂದ ನಟಿಯೊಬ್ಬರ ಜೊತೆ ಅಫೇರ ಇಟ್ಟುಕೊಂಡಿದ್ದಾರೆ. ಇದೇ ಇಷ್ಟಕ್ಕೆಲ್ಲ ಕಾರಣ ಎಂಬ ಸುದ್ದಿ ಹರಿದಾಡುವುದಕ್ಕೆ ಶುರು ಮಾಡಿದೆ.

ಹೌಟರ್‌ಫ್ಲೈ ವರದಿಯ ಪ್ರಕಾರ ಗೋವಿಂದಾ ಪತ್ನಿ ಸುನಿತಾ ಅಹುಜಾ ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 13 (1) (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ನ್ಯಾಯಾಲಯವು ಮೇ 25ರಂದು ಗೋವಿಂದಗೆ ಸಮನ್ಸ್ ಕೂಡ ಜಾರಿಗೊಳಿಸಿತ್ತು. ಅಂದಿನಿಂದ ಜೂನ್‌ ತಿಂಗಳವರೆಗೆ ಇಬ್ಬರೂ ರಾಜಿ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

Sunita Ahuja Files for Divorce from actor Govinda in Bandra Court Alleging Adultery amp amp Cruelty

ಇದರ ಜೊತೆಗೆ ಗೋವಿಂದ ಪತ್ನಿ ಸುನಿತಾ ಅಹುಜಾ ನ್ಯಾಯಾಲಯಕ್ಕೆ ನಿರಂತರವಾಗಿ ಹಾಜರಾಗುತ್ತಿದ್ದರೆ. ಆದರೆ, ಗೋವಿಂದ ಮಾತ್ರ ನಿರಂತರವಾಗಿ ವಿಚಾರಣೆಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆಂದು ವರದಿ ಮಾಡಲಾಗಿದೆ. ಸುನಿತಾ ಅಹುಜಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತನ್ನ ಕೌಟುಂಬಿಕ ಸಮಸ್ಯೆ ಬಗ್ಗೆ ಹೇಳಿಕೊಂಡು ಬೇಸರ ಹೊರ ಹಾಕಿದ್ದರು. ಅಲ್ಲಿಂದ ಇವರಿಬ್ಬರ ನಡುವಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದು ಹೇಳಲಾಗುತ್ತಿದೆ.

ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಹೊರ ಬೀಳುತ್ತಿದ್ದಂತೆ ಗೋವಿಂದ ಅವರ ಅಫೇರ್ ಮ್ಯಾಟರ್ ಕೂಡ ಹೊರ ಬಿದ್ದಿದೆ. ಗೋವಿಂದ 30 ವರ್ಷದ ಮರಾಠಿ ನಟಿಯೊಂದು ಸಲಿಗೆಯಿಂದ ಇದ್ದಾರೆ. ಇಬ್ಬರ ನಡುವೆ ಬಾಂಧವ್ಯ ಗಾಢವಾಗಿದೆ. ಇದೇ ಕಾರಣಕ್ಕೆ ಬಾಲಿವುಡ್ ನಟ ಗೋವಿಂದ ಹಾಗೂ ಅವರ ಪತ್ನಿ ಸುನಿತಾ ಅಹುಜಾ ದಾಂಪತ್ಯ ಮುರಿದು ಬಿದ್ದಿದ್ದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಪತ್ನಿ ಸುನಿತಾ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.

ಗೋವಿಂದ ಹಾಗೂ ಸುನಿತಾ ಅಹುಜಾ ಇಬ್ಬರೂ 1987ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗೋವಿಂದ ತಾನು ಮದುವೆಯಾದ ವಿಷಯವನ್ನು ಕೆಲವು ದಿನಗಳ ಕಾಲ ರಹಸ್ಯವಾಗಿಯೇ ಇಟ್ಟಿದ್ದರು. ಗೋವಿಂದ ಮದುವೆಯಾದ ವೇಳೆ ಅವರಿಗೆ ಫಿಮೇಲ್ ಫಾಲೋವರ್ಸ್ ಹೆಚ್ಚಿದ್ದರು. ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದರು ಎಂದೂ ಹೇಳಲಾಗಿತ್ತು. ಆದರೆ, ಇದು ರಹಸ್ಯವನ್ನು ಹೆಚ್ಚು ದಿನ ಕಾಪಾಡಿಕೊಳ್ಳುವುದಕ್ಕೆ ಆಗಲಿಲ್ಲ. ಈ ಜೋಡಿ 1988ರಲ್ಲಿ ಮಗಳು ಟಿನಾ ಜನಿಸಿದರೆ, 1997ರಲ್ಲಿ ಪುತ್ರ ಯಶ್‌ವರ್ಧನ್ ಜನಿಸಿದ್ದರು. ಈಗ 61ನೇ ವಯಸ್ಸಿನಲ್ಲಿ ವಿಚ್ಛೇದನದ ವಿಷಯವಾಗಿ ಕೋರ್ಟ್‌ಗೆ ಅಲೆಯಬೇಕಾಗಿದೆ.

More from Filmibeat

English summary
Sunita Ahuja Files for Divorce from Bollywood actor Govinda in Bandra Court Alleging Adultery & Cruelty.
Read more about: govinda wife divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X