"ಗಾಳಿಸುದ್ದಿಗಳ ಪಯಣ ಇಲ್ಲಿಗೆ ಮುಗೀತು":ಕುಡಿದು ಮುಂಬೈ ರಸ್ತೆಯಲ್ಲಿ ಅಡ್ಡಾಡಿದ್ದ ವಿಡಿಯೋಗೆ ಸನ್ನಿ ಡಿಯೋಲ್ ಹೇಳಿದ್ದೇನು?

ಬಾಲಿವುಡ್ ಸ್ಟಾರ್ ನಟ ಸನ್ನಿ ಡಿಯೋಲ್ ಇತ್ತೀಚೆಗೆ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಇವರು ನಟಿಸಿದ 'ಗದರ್ 2' ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ರೂಪಾಯಿ ಲೂಟಿ ಮಾಡಿತ್ತು. ಆ ಬಳಿಕ ಮುಂಬೈನ ರಸ್ತೆಯಲ್ಲಿ ಕುಡಿದು ಓಡಾಡಿದ ವಿಡಿಯೋ ಒಂದು ವೈರಲ್ ಆಗಿತ್ತು.

ಸನ್ನಿ ಡಿಯೋಲ್ ಮುಂಬೈ ರಸ್ತೆಯಲ್ಲಿ ಓಂಟಿಯಾಗಿ ಕುಡಿದು ಓಡಾಡುತ್ತಿದ್ದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ವಿಡಿಯೋವನ್ನು ನೋಡುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದರು.

Sunny Deol roaming drunk on Mumbai streets actor clarifies on video viral

ವೈರಲ್ ಆದ ಈ ವಿಡಿಯೋ ಸನ್ನಿ ಡಿಯೋಲ್ ಮಧ್ಯ ರಾತ್ರಿ ಮುಂಬೈನ ರಸ್ತೆಯಲ್ಲಿ ಕುಡಿದು ತೂರಾಡುತ್ತಾ, ಆಟೋ ರಿಕ್ಷಾ ಏರುವ ಸನ್ನಿವೇಶವನ್ನು ಸೆರೆ ಹಿಡಿಯಲಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಸನ್ನಿ ಡಿಯೋಲ್‌ಗೆ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದರು. ಈ ವಿಡಿಯೋ ವಿವಾದಕ್ಕೆ ತಿರುಗಿತ್ತಿದ್ದಂತೆ ಸನ್ನಿ ಡಿಯೋಲ್ ಸ್ಪಷ್ಟನೆ ನೀಡಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ಸನ್ನಿ ಡಿಯೋಲ್ ಸ್ಪಷ್ಟನೆ ನೀಡಲು ಮತ್ತೊಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟರ್ (‍X) ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿ "ಗಾಳಿಸುದ್ದಿಗಳ ಪಯಣ ಇಲ್ಲಿಗೆ ಮುಗಿಯುತ್ತೆ" ಎಂದು ಬರೆದು ರೂಮರ್‌ಗೆ ತಿಲಾಂಜಲಿ ಇಟ್ಟಿದ್ದಾರೆ.

ಸನ್ನಿ ಡಿಯೋಲ್ ಹಂಚಿಕೊಂಡ ವಿಡಿಯೋ, ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದ ದೃಶ್ಯಗಳ ಬಗ್ಗೆ ಸ್ಪಷ್ಟತೆ ನೀಡಿದೆ. ಈ ವಿಡಿಯೋದಲ್ಲಿ ಸನ್ನಿ ಡಿಯೋಲ್ ಕುಡಿದು ತೂರಾಡುತ್ತಾ ಬರುತ್ತಿರುವ ವಿಡಿಯೋವನ್ನು ಕೆಲವರು ಕ್ಯಾಮರಾ ಹಿಡಿದು ಸೆರೆ ಹಿಡಿಯುತ್ತಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ಸನ್ನಿ ಡಿಯೋಲ್ ಹೊಸ ಸಿನಿಮಾದ ಶೂಟಿಂಗ್ ಇರಬಹುದು ಎಂದು ಅಂದಾಜಿಸಲಾಗಿದೆ.

ಬಾಲಿವುಡ್ ನಟ ವಿಡಿಯೋ ಶೇರ್ ಮಾಡುತ್ತಿದ್ದಂತೆ, ಅಭಿಮಾನಿಗಳು ನಿರಾಳರಾಗಿದ್ದಾರೆ. ಅದೇ ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿಕ್ರಿಯೆ ನೀಡುವುದಕ್ಕೆ ಶುರು ಮಾಡಿದ್ದಾರೆ. " ನಿಮ್ಮನ್ನು ವಿರೋಧಿಸುವವರು ತಪ್ಪು ತಿಳಿದುಕೊಂಡಿದ್ದಾರೆಂದು ಸಾಬೀತು ಮಾಡಿದ್ದೀರಿ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. " ನಾನು ನಿಮ್ಮ ಡೈ ಹಾರ್ಡ್ ಅಭಿಮಾನಿ. ನೀವು ಕುಡಿಯೋದಿಲ್ಲ ಅನ್ನೋದು ನನಗೆ ಗೊತ್ತಿದೆ." ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

"ಇದೊಂದು ಅದ್ಭುತ ಪ್ರಚಾರ ತಂತ್ರ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. "ಸರ್ ಜಿ ನನ್ನನ್ನು ಹುಡುಕುತ್ತಿದ್ದಾರೆ. ನಾನು 5 ನಿಮಿಷದಲ್ಲಿ ಬಂದೆ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸನ್ನಿ ಡಿಯೋಲ್‌ ಹೊಸ ಸಿನಿಮಾಗೆ ಶುಭ ಕೋರಿದ್ದಾರೆ.

ಸನ್ನಿ ಡಿಯೋಲ್ ಇತ್ತೀಚೆಗೆ ಮೆಗಾ ಹಿಟ್ ಕೊಟ್ಟು ಕಮ್‌ ಬ್ಯಾಕ್ ಮಾಡಿದ್ದಾರೆ. ಆಗಸ್ಟ್ 11ರಂದು ರಿಲೀಸ್ ಆಗಿದ್ದ ಈ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುಮಾರು 525 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದು ಅವರ ವೃತ್ತಿ ಬದುಕಿನಲ್ಲೇ ಅತೀ ಗಳಿಕೆ ಕಂಡ ಸಿನಿಮಾ. 'ಗದರ್ 2' ಸಿನಿಮಾ ಹಿಟ್ ಆಗುತ್ತಿದ್ದಂತೆ ಸನ್ನಿ ಡಿಯೋಲ್‌ಗೆ ಮತ್ತೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

More from Filmibeat

English summary
Bollywood actor Sunny Deol clarifies on drunken video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X