Border 2 Advance Booking: ಅಡ್ವಾನ್ಸ್ ಬುಕಿಂಗ್‌ನಲ್ಲಿ 'ಧುರಂಧರ್' ಅನ್ನೂ ಹಿಂದಿಕ್ಕಿದ 'ಬಾರ್ಡರ್ 2'

ಕಳೆದ ವರ್ಷ ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಖಾಡೆ ಮಲಗಿದ್ದೇ ಹೆಚ್ಚು. ಆದರೆ ವರ್ಷದ ಕೊನೆಯಲ್ಲಿ ತೆರೆಕಂಡ 'ಧುರಂಧರ್' ಸಿನಿಮಾ ಗಲ್ಲಾಪಟ್ಟಿಗೆಯನ್ನೇ ಅಲ್ಲಾಡಿಸಿಬಿಟ್ಟಿತ್ತು. 2025ರಲ್ಲಿ ತೆರೆಕಂಡ ಸಿನಿಮಾಗಳು ಅದಾಗಲೇ ಮಾಡಿದ್ದ ಬಾಕ್ಸಾಫೀಸ್ ದಾಖಲೆಗಳನ್ನು ಧೂಳೀಪಟ ಮಾಡಿತ್ತು. ಇದರಲ್ಲಿ ಕನ್ನಡದ 'ಕೆಜಿಎಫ್ 2', 'ಕಾಂತಾರ ಚಾಪ್ಟರ್ 1' ಕೂಡ ಸೇರ್ಪಡೆಯಾಗಿದೆ.

'ಧುರಂಧರ್' ಬರೆದ ದಾಖಲೆಯನ್ನು ಮುರಿಯುವುದಕ್ಕೆ 'ಟಾಕ್ಸಿಕ್' ಸಿನಿಮಾದಿಂದಲೇ ಸಾಧ್ಯ ಅಂತ ಬಾಲಿವುಡ್ ಮಂದಿನೇ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಸದ್ಯ ಪರಿಸ್ಥಿತಿ ನೋಡಿದರೆ, ಯಶ್ ಸಿನಿಮಾ 'ಟಾಕ್ಸಿಕ್' ರಿಲೀಸ್‌ಗೂ ಮುನ್ನವೇ ಮತ್ತೊಂದು ಸಿನಿಮಾ 'ಧುರಂಧರ್' ದಾಖಲೆಯನ್ನು ಪೀಸ್ ಪೀಸ್ ಮಾಡುವ ಲಕ್ಷಣಗಳು ಕಾಣಿಸುತ್ತಿವೆ. ಅದು ಮತ್ಯಾವುದೂ ಅಲ್ಲ 'ಬಾರ್ಡರ್ 2'.

Sunny Deol Varun Dhawan starrer Border 2 Advance Booking Crossed Ranveer Akshay Khanna Dhurandhar

ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್, ಅಹಾನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನ ದಿಗ್ಗಜರಾದ ಭೂಷಣ್ ಕುಮಾರ್, ಕಿಶನ್ ಕುಮಾರ್, ಜೆಪಿ ದತ್ತ, ನಿಧಿ ದತ್ತ 'ಬಾರ್ಡರ್ 2' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಇದೇ ಜನವರಿ 23 ರಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಕೇವಲ 48 ಗಂಟೆಗಳಲ್ಲಿಯೇ 'ಧುರಂಧರ್' ದಾಖಲೆಯನ್ನು ಅಳಿಸಿ ಹಾಕಿದೆ.

9 ಸಾವಿರ ಸ್ಕ್ರೀನ್‌ಗಳಲ್ಲಿ 'ಬಾರ್ಡರ್ 2'

1997ರಲ್ಲಿ ರಿಲೀಸ್ ಆಗಿದ್ದ 'ಬಾರ್ಡರ್' ಸಿನಿಮಾದ ಸೀಕ್ವೆಲ್ ಈ 'ಬಾರ್ಡರ್ 2'. ಸನ್ನಿ ಡಿಯೋಲ್ ಈ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ವರುಣ್ ಧವನ್ ಹಾಗೂ ದಿಲ್ಜಿತ್ ಹೊಸ ಸೇರ್ಪಡೆಯಾಗಿದ್ದಾರೆ. ಹಾಗೇ 2ನೇ ಪಾರ್ಟ್‌ನಲ್ಲಿ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ನಟಿಸಿರೋದು ವಿಶೇಷ. ಈ ಸಿನಿಮಾ ಭಾರತದಾದ್ಯಂತ ಸುಮಾರು 9 ಸಾವಿರ ಶೋಗಳನ್ನು ಹಾಕಲಾಗಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಅಡ್ವಾನ್ಸ್ ಬುಕಿಂಗ್‌ಗೆ ಮಸ್ತ್ ರೆಸ್ಪಾನ್ಸ್

'ಬಾರ್ಡರ್ 2' ಜನವರಿ 23ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಭಾರತದಲ್ಲಿ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿದೆ. ಅಡ್ವಾನ್ಸ್ ಬುಕಿಂಗ್ ಓಪನ್ ಆದ ಎರಡು ದಿನಗಳಲ್ಲಿ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. 48 ಗಂಟೆಗಳಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹಾಗೇ ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಈಗಾಗಲೇ 'ಬಾರ್ಡರ್ 2' ಅಡ್ವಾನ್ಸ್ ಬುಕಿಂಗ್‌ನಿಂದ ₹3.43 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ.

Sunny Deol Varun Dhawan starrer Border 2 Advance Booking Crossed Ranveer Akshay Khanna Dhurandhar

'ಧುರಂಧರ್' ಮೀರಿಸಿದ 'ಬಾರ್ಡರ್ 2'

ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ ನಟನೆಯ 'ಧುರಂಧರ್' ಸಿನಿಮಾವನ್ನೂ 'ಬಾರ್ಡರ್ 2' ಮೀರಿಸಿದೆ. ಬುಕ್‌ ಮೈ ಶೋನಲ್ಲಿ ಪ್ರತಿ ಗಂಟೆಗೆ 3 ಸಾವಿರ ಟಿಕೆಟ್‌ಗಳು ಸೇಲ್ ಆಗುತ್ತಿವೆ ಎಂದೂ ವರದಿಯಾಗಿದೆ. 'ಧುರಂಧರ್' ಸಿನಿಮಾ ಅಡ್ವಾನ್ಸ್ ಬುಕಿಂಗ್‌ನಿಂದ ₹2.5 ಕೋಟಿ ಕಲೆ ಹಾಕಿತ್ತು. ಆದರೆ, 'ಬಾರ್ಡರ್ 2' ಇನ್ನೂ ಎರಡು ದಿನ ಬಾಕಿ ಇರುವಂತೆಯೇ ಅದಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದೆ.

'ಬಾರ್ಡರ್ 2' ಲೆಕ್ಕಾಚಾರವೇನು?

'ಬಾರ್ಡರ್ 2'ಗೆ ಅಡ್ವಾನ್ಸ್ ಬುಕಿಂಗ್‌ನಲ್ಲಿ ಸಿಕ್ಕಿರೋ ಕಲೆಕ್ಷನ್ ಅನ್ನು 'ಧುರಂಧರ್' ಸಿನಿಮಾ ಹೋಲಿಕೆ ಮಾಡಿ ಲೆಕ್ಕಾಚಾರ ಮಾಡಲಾಗುತ್ತಿದೆ. ಅಡ್ವಾನ್ಸ್ ಬುಕಿಂಗ್‌ನಲ್ಲಿಯೇ 'ಧರುಂಧರ್‌' ಅನ್ನು ಮೀರಿಸಿದ್ದರಿಂದ 'ಬಾರ್ಡರ್ 2' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮೊದಲ ದಿನ ₹28 ಕೋಟಿ ಕಲೆ ಹಾಕಿದ್ದ 'ಧುರಂಧರ್' ಸಿನಿಮಾಗಿಂತ ಹೆಚ್ಚು ಕಲೆಕ್ಷನ್ ಮಾಡಿದರೆ, 'ಬಾರ್ಡರ್' ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿ ಮಾಡಬಹುದು.

More from Filmibeat

English summary
Sunny Deol, Varun Dhawan starrer Border 2 Advance Booking Crossed Ranveer, Akshay Khanna Dhurandhar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X