twitter
    For Quick Alerts
    ALLOW NOTIFICATIONS  
    For Daily Alerts

    ಒಳ್ಳೆಯವರೋ, ಕೆಟ್ಟವರೋ ಇಲ್ಲಿ ಬೇಡ: ಸುಶಾಂತ್ ಕೇಸ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ವಜಾಗೊಳಿಸಿದ್ದಾರೆ.

    Recommended Video

    ಶಿವಣ್ಣನ ಮನೆಗೆ ಎಲ್ಲಾ ಹೀರೋಗಳು ಬಂದ್ರು ಆದ್ರೆ ದರ್ಶನ್, ಸುದೀಪ್ ಬರ್ಲಿಲ್ಲ. | Filmibeat Kannada

    ಅಲ್ಕಾ ಪ್ರಿಯಾ ಎಂಬುವವರು ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆದೇಶಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ಸುಶಾಂತ್ ಸಿಂಗ್ ಒಳ್ಳೆಯ ವ್ಯಕ್ತಿ. ಅವರು ನಾಸಾಕ್ಕೆ ತೆರಳಲು ಅನೇಕ ಮಕ್ಕಳಿಗೆ ಸಹಾಯ ಮಾಡಿದ್ದರು ಎಂದು ಅರ್ಜಿಯಲ್ಲಿ ಹೇಳಿದ್ದರು. ಒಬ್ಬ ವ್ಯಕ್ತಿ ಒಳ್ಳೆಯವನೋ ಅಥವಾ ಕೆಟ್ಟವನೋ ಎನ್ನುವುದು ತಮಗೆ ತಿಳಿದಿಲ್ಲ. ಆದರೆ ಈ ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು.

    ಲ್ಯಾಪ್ ಟಾಪ್, ಚಿನ್ನ, ಹಣ ಎಲ್ಲವನ್ನೂ ರಿಯಾ ದೋಚಿಕೊಂಡು ಹೋಗಿದ್ದಾರೆ: ಸುಶಾಂತ್ ಕುಟುಂಬ ಸ್ನೇಹಿತನ ಆರೋಪಲ್ಯಾಪ್ ಟಾಪ್, ಚಿನ್ನ, ಹಣ ಎಲ್ಲವನ್ನೂ ರಿಯಾ ದೋಚಿಕೊಂಡು ಹೋಗಿದ್ದಾರೆ: ಸುಶಾಂತ್ ಕುಟುಂಬ ಸ್ನೇಹಿತನ ಆರೋಪ

    ಪೊಲೀಸರ ತನಿಖೆ ನಡೆಯುತ್ತಿದೆ

    ಪೊಲೀಸರ ತನಿಖೆ ನಡೆಯುತ್ತಿದೆ

    'ಸುಶಾಂತ್ ಒಳ್ಳೆಯವರೇ ಅಥವಾ ಕೆಟ್ಟವರೇ ಎಂಬುದರ ಬಗ್ಗೆ ನಾವು ಚರ್ಚಿಸುವುದಿಲ್ಲ. ಈ ವಿಷಯವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಇದನ್ನು ವಜಾಗೊಳಿಸುತ್ತೇವೆ' ಎಂದು ನ್ಯಾಯಪೀಠ ಹೇಳಿತು.

    ಸಿಬಿಐಗೆ ವರ್ಗಾವಣೆಯಿಲ್ಲ

    ಸಿಬಿಐಗೆ ವರ್ಗಾವಣೆಯಿಲ್ಲ

    ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯನ್ನು ಯಾವ ಕಾರಣಕ್ಕೂ ಸಿಬಿಐಗೆ ಹಸ್ತಾಂತರಿಸುವುದಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿದ್ದಾರೆ. ಸುಶಾಂತ್ ಸಿಂಗ್ ಅವರದು ಆತ್ಮಹತ್ಯೆ ಎನ್ನುವುದು ಖಚಿತವಾಗಿದೆ. ಈ ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನು ಸಿಬಿಐಗೆ ವರ್ಗಾಯಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

    ಆರು ಮಂದಿ ವಿರುದ್ಧ ಎಫ್‌ಐಆರ್

    ಆರು ಮಂದಿ ವಿರುದ್ಧ ಎಫ್‌ಐಆರ್

    ಸುಶಾಂತ್ ತಂದೆ ಪಟ್ನಾ ಪೊಲೀಸರಿಗೆ ನೀಡಿರುವ ದೂರಿನ ಅನ್ವಯ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಪ್ರಚೋದನೆ, ಮೋಸ, ಕಳ್ಳತನ ಸೇರಿದಂತೆ ರಿಯಾ ಚಕ್ರವರ್ತಿ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ರಿಯಾ ಕುಟುಂಬದ ಸದಸ್ಯರು ಸೇರಿದಂತೆ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಮುಂಬೈಗೆ ಬಿಹಾರದ ನಾಲ್ವರು ಪೊಲೀಸರ ತಂಡ ತೆರಳಿದ್ದು, ಸುಶಾಂತ್ ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸುತ್ತಿದೆ. ರಿಯಾ ಅವರನ್ನು ವಿಚಾರಣೆ ನಡೆಸಲು ಪ್ರಯತ್ನಿಸಿದ್ದು, ಅವರು ಪೊಲೀಸರ ಕೈಗೆ ಸಿಕ್ಕಿಲ್ಲ. ಅಂಕಿತಾ ಲೋಖಂಡೆ ಸೇರಿದಂತೆ ಕೆಲವರ ಹೇಳಿಕೆ ಪಡೆಯುವ ಸಾಧ್ಯತೆ ಇದೆ.

    ವಿಚಾರಣೆಯ ವರ್ಗಾವಣೆಗೆ ಮನವಿ

    ವಿಚಾರಣೆಯ ವರ್ಗಾವಣೆಗೆ ಮನವಿ

    ಬಿಹಾರ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಇದಕ್ಕೆ ಅವಕಾಶ ನೀಡಬಾರದು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಸುಶಾಂತ್ ಕುಟುಂಬ ಕೂಡ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.

    'ಸತ್ಯ ಗೆಲ್ಲಲಿದೆ': ಸುಶಾಂತ್ ಸಿಂಗ್ ಮಾಜಿ ಪ್ರೇಯಸಿಯ ಹೇಳಿಕೆ'ಸತ್ಯ ಗೆಲ್ಲಲಿದೆ': ಸುಶಾಂತ್ ಸಿಂಗ್ ಮಾಜಿ ಪ್ರೇಯಸಿಯ ಹೇಳಿಕೆ

    English summary
    The Supreme Court has dismised a petition seeking CBI inquiry in bollywood actor Sushant Singh Rajput's case.
    Thursday, July 30, 2020, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X