14 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಸೂರ್ಯವಂಶ ನಾಯಕಿ: ಉದ್ಯಮಿ ಪತಿಗೆ ವಿಚ್ಛೇದನ?

ಕನ್ನಡ ಚಿತ್ರರಂಗದ ಸಖತ್ ಎಂಟರ್‌ಟೈನಿಂಗ್ ಸಿನಿಮಾಗಳ ಪಟ್ಟಿಯಲ್ಲಿ 'ಸೂರ್ಯವಂಶ' ಸಿನಿಮಾ ಕೂಡ ನಿಲ್ಲುತ್ತೆ. ಸಾಹಸ ಸಿಂಹ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳ ಪಟ್ಟಿ ಸೇರಿಕೊಂಡಿದೆ.

ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ಕಾಂಬಿನೇಷನ್ ಹಾಸ್ಯ ಪ್ರಿಯರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿತ್ತು. ಇವರೊಂದಿಗೆ ಸಿನಿಮಾದಲ್ಲಿ ವಿಜಯಲಕ್ಷ್ಮಿ ಹಾಗೂ ಇಶಾ ಕೊಪ್ಪಿಕರ್ ಇಬ್ಬರು ನಾಯಕಿಯರಿದ್ದರು. ಎಸ್. ನಾರಾಯಣ್ ನಿರ್ದೇಶಿಸಿದ ಈ ಸಿನಿಮಾವನ್ನು ಇಂದಿಗೂ ಸಿನಿಪ್ರಿಯರು ಮರೆತಿಲ್ಲ.

Suryavamsha actress isha koppikar has ended her marriage of 14 years with Timmy Narang

ಇದೇ 'ಸೂರ್ಯವಂಶ' ಸಿನಿಮಾದಲ್ಲಿ ಸಿನಿಪ್ರಿಯರ ಮನಗೆದ್ದಿದ್ದ ನಾಯಕಿ ಇಶಾ ಕೊಪ್ಪಿಕರ್ ಅನ್ನು ಪ್ರೇಕ್ಷಕರು ಇಂದಿಗೂ ಮರೆತಿಲ್ಲ. ಕನ್ನಡದ ನಟಿಯಲ್ಲದೇ ಇದ್ದರೂ ಕನ್ನಡತಿಯಂತೆಯೇ ಹಲವು ಸಿನಿಮಾಗಳಲ್ಲಿ ನಟಿಸಿ ಮನಗೆದ್ದಿದ್ದ ಈಕೆಯ ಬಾಳಲ್ಲೀಗ ಬಿರುಗಾಳಿ ಎದ್ದಿದೆ. ಸುಮಾರು 14 ವರ್ಷದ ದಾಂಪತ್ಯ ಬದುಕಿಗೆ ಸೂರ್ಯವಂಶದ ನಾಯಕಿ ಅಂತ್ಯ ಹಾಡಿದ್ದಾರೆ.

ಇಶಾ ಕೊಪ್ಪಿಕರ್ 2009, ನವೆಂಬರ್ 29ರಂದು ಹೋಟೆಲ್ ಉದ್ಯಮಿ ಟಿಮ್ಮಿ ನಾರಂಗ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ರಿಯಾನ್ನ ಅನ್ನೋ 9 ವರ್ಷದ ಮಗಳು ಇದ್ದಾರೆ. ಸುಮಾರು 14 ವರ್ಷಗಳ ಕಾಲ ಜೊತೆ ಸಂಸಾರ ನಡೆಸಿದ್ದ ಈ ಜೋಡಿ ಈಗ ಬೇರೆಯಾಗಿದ್ದಾರೆ. 2023, ನವೆಂಬರ್‌ನಲ್ಲಿ ಪತಿ ಟಿಮ್ಮಿ ನಾರಂಗ್ ಅವರ ಮನೆಯಿಂದ ಹೊರಬಂದಿದ್ದಾರೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

Suryavamsha actress isha koppikar has ended her marriage of 14 years with Timmy Narang

ಸೂರ್ಯವಂಶ ನಟಿ ಇಶಾ ಕೊಪ್ಪಿಕರ್ ಹಾಗೂ ಪತಿ ಟಿಮ್ಮಿ ನಾರಂಗ್ ನಡುವೆ ಹಲವು ದಿನಗಳಿಂದ ಹೊಂದಾಣಿಕೆ ಸಮಸ್ಯೆಯಿತ್ತು. ಇಬ್ಬರೂ ತಮ್ಮ ದಾಂಪತ್ಯವನ್ನು ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಪ್ರಯತನ್ನ ಪಟ್ಟಿದ್ದರು. ಆದರೆ, ಅದು ಸಾಧ್ಯವಾಗದೇ ಇದ್ದಾಗ ಕೊನೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆಂದು ಬಾಲಿವುಡ್ ಶಾದೀಸ್‌ನಲ್ಲಿ ವರದಿಯಾಗಿದೆ.

ಇಶಾ ಕೊಪ್ಪಿಕರ್ ವಿಚ್ಛೇದನದ ಬಗ್ಗೆ ಮಾಹಿತಿ ತಿಳಿಯಲು ಮಾಧ್ಯಮಗಳು ಯತ್ನಿಸಿದ್ದವು. ಅದಕ್ಕೆ ನೇರವಾಗಿ ಪ್ರತಿಕ್ರಿಯೆ ನೀಡದೆ ಹೋದರೂ, "ನನಗೆ ಈಗ ಹೇಳುವುದಕ್ಕೆ ಏನೂ ಇಲ್ಲ. ನನಗೆ ಇದೆಲ್ಲದರಿಂದ ಅಂತರ ಬೇಕು. ನಿಮ್ಮ ಸೂಕ್ಷ್ಮತೆಯನ್ನು ನಾನು ಪ್ರಶಂಸಿಸುತ್ತೇನೆ." ಎಂದು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇಶಾ ಹಾಗೂ ಟಿಮ್ಮಿ ಲವ್ ಸ್ಟೋರಿನೇ ಇಂಟ್ರೆಸ್ಟಿಂಗ್ ಆಗಿದೆ. ನಟಿ ಇಶಾ ಕೊಪ್ಪಿಕರ್ ಹಾಗೂ ಪ್ರೀತಿ ಜಿಂಟಾ ಇಬ್ಬರೂ ಉತ್ತಮ ಸ್ನೇಹಿತರು. ಮೊದಲ ಬಾರಿಗೆ ಇಶಾಗೆ ಬಾಲಿವುಡ್‌ ನಟಿ ಪ್ರೀತಿ ಜಿಂಟಾರಿಂದ ಹೋಟೆಲ್ ಉದ್ಯಮಿಯಾಗಿದ್ದ ಟಿಮ್ಮಿ ನಾರಂಗ್ ಪರಿಚಯವಾಗಿತ್ತು. ಆ ವೇಳೆ ಫೋನ್‌ ನಂಬರ್‌ಗಳು ಬದಲಾಗಿದ್ದವಷ್ಟೇ. ಯಾವಾಗಲೋ ಒಮ್ಮೊಮ್ಮೆ ಮಾತುಕತೆ ನಡೆಯುತ್ತಿತ್ತು. ಮೊದಲ ಡೇಟಿಂಗ್‌ನಲ್ಲಿ ಇಶಾ ಕೊಪ್ಪಿಕರ್ ತನ್ನ 20 ಮಂದಿ ಫ್ರೆಂಡ್ಸ್ ಜೊತೆ ಟಿಮ್ಮಿ ಭೇಟಿ ಮಾಡಿದ್ದರು. ಆ ಸಂದರ್ಭವನ್ನು ಟಿಮ್ಮಿ ನಾರಂಗ್ ಖುಷಿಯಾಗಿಯೇ ಸ್ವೀಕರಿಸಿದ್ದರು. ಅಲ್ಲಿಂದ ಇಬ್ಬರೂ ಪ್ರೀತಿ ಬೆಳೆದು ಮದುವೆವರೆಗೂ ಬಂದು ನಿಂತ್ತಿತ್ತು. ಇಷ್ಟೆಲ್ಲ ಅರ್ಥ ಮಾಡಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟು 14 ವರ್ಷ ಸಂಸಾರ ನಡೆಸಿ, ಈಗ ವಿಚ್ಛೇದನ ಪಡೆದಿದ್ದಾರೆ.

ಇಶಾ ಕೊಪ್ಪಿಕರ್ 'ಸೂರ್ಯವಂಶ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದರ ಹಿಂದೆನೇ ಕ್ರೇಜಿಸ್ಟಾರ್ ನಟಿಸಿದ್ದ 'ಓ ನನ್ನ ನಲ್ಲೆ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಆ ಬಳಿಕ 'ಹೂಂ ಅಂತಿಯಾ ಹೂಂ ಅಂತಿಯಾ', 'ಲೂಟಿ' ಹಾಗೂ 'ಕವಚ' ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೆ, ಹಿಂದಿ, ಮರಾಠಿ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ.

More from Filmibeat

English summary
Kannada movie Suryavamsha actress Isha Koppikar Parts Ways From Her Husband.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X