ಗೆಳೆಯ ಸುಶಾಂತ್ ಸಿಂಗ್ ರಜಪೂತ್ ನೆನೆದು ಮಿಸ್ ಯು ಎಂದ ರಿಯಾ ಚಕ್ರವರ್ತಿ

ಬಾಲಿವುಡ್ ನಟ ಸುಶಾಂತ್ ರಜಪೂತ್‌ ಹುಟ್ಟಿದ ದಿನವಿದು (ಜನವರಿ 21). ಒಂದ ವೇಳೆ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳದೆ ಇದ್ದಿದ್ದರೆ, ಅಭಿಮಾನಿಗಳೊಂದಿಗೆ ಬರ್ತ್‌ಡೇ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಸುಶಾಂತ್ ರಜಪೂತ್ ಬದುಕು ದುರಂತ ಅಂತ್ಯ ಕಂಡಿದೆ. ಇದು ಸುಶಾಂತ್ ಸಿಂಗ್ ರಜಪೂತ್ ಕಣ್ಮರೆಯಾದ ಬಳಿಕ ಬಂದಿರುವ ಎರಡನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ರಿಯಾ ಚಕ್ರವರ್ತಿ ಶೇರ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಅವರ ಅಭಿಮಾನಿಗಳು ಬಾಲಿವುಡ್ ವಿರುದ್ಧ ತಿರುಗಿಬಿದ್ದಿದ್ದರು. ಸುಶಾಂತ್ ಸಿಂಗ್ ಸಾವಿಗೆ ರಿಯಾ ಚಕ್ರವರ್ತಿಯೇ ಕಾರಣ ಅಂತ ಮೇಲೆ ಕುಟುಂಬ ಬೊಟ್ಟು ಮಾಡಿ ತೋರಿಸಿತ್ತು. ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಕೇಸ್‌ನಲ್ಲಿ ರಿಯಾ ಚಕ್ರವರ್ತಿ ಹೆಸರು ತಳುಕು ಹಾಕಿಕೊಂಡಿತ್ತು. ಹೀಗಾಗಿ ಅನಿವಾರ್ಯವಾಗಿ ಕೆಲ ದಿನಗಳು ಜೈಲಿನಲ್ಲಿ ಕಾಲ ಕಳೆಯಬೇಕಿತ್ತು. ಜಾಮೀನ ಮೇಲೆ ರಿಲೀಸ್ ಆಗಿದ್ದ ರಿಯಾ ವಿರುದ್ಧ ಇಂದಿಗೂ ಅವರ ಅಭಿಮಾನಿಗಳು ಕಿಡಿ ಕಾರುತ್ತಲೇ ಇದ್ದಾರೆ.

Recommended Video

ಜೈಲಿನಿಂದ ಹೊರಬಂದ ನಂತರ ಮೊದಲ ಭಾರಿಗೆ ಮಾದ್ಯಮಗಳ ಕಣ್ಣಿಗೆ ಬಿದ್ದ ರಿಯಾ | Filmibeat Kannada

ಸುಶಾಂತ್ ಜೊತೆಗಿನ ವಿಡಿಯೋ ಶೇರ್ ಮಾಡಿದ ರಿಯಾ

ಸುಶಾಂತ್ ಹಾಗೂ ರಿಯಾ ಚಕ್ರವರ್ತಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ವೃತ್ತಿ ಹಾಗೂ ವೈಯುಕ್ತಿಕ ಜೀವನ ಎರಡರನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದ ಜೋಡಿ ಒಟ್ಟಿಗೆ ಜಿಮ್‌ನಲ್ಲೂ ವರ್ಕ್‌ಔಟ್ ಮಾಡುತ್ತಿದ್ದರು. ಈ ವೇಳೆ ಇಬ್ಬರೂ ಜೊತೆಗೆ ಜಿಮ್‌ನಲ್ಲಿ ಮಸ್ತಿ ಮಾಡಿದ್ದ ವಿಡಿಯೋವನ್ನು ಸುಶಾಂತ್ ಹುಟ್ಟುಹಬ್ಬದ ನೆನಪಿಗಾಗಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ.

Sushant singh Rajput 36th birthday rhea chakraborty shares old video

ರಿಯಾ ಚಕ್ರವರ್ತಿ ಕೇವಲ ವಿಡಿಯೋವನ್ನಷ್ಟೇ ಶೇರ್ ಮಾಡಿಕೊಂಡಿಲ್ಲ. ಬದಲಾಗಿ ಈ ವಿಡಿಯೋಗೆ 'ಮಿಸ್ ಯೂ' ಎಂಬ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಇಬ್ಬರೂ ಜೊತೆ ತರಲೆ ಮಾಡಿದ ಈ ವಿಡಿಯೋ ನೋಡಿದ ಅಭಿಮಾನಿಗಳು ನೆಚ್ಚಿನ ನಟನನ್ನು ನೆನೆದಿದ್ದಾರೆ. ಕೆಲವರು ರಿಯಾ ಚಕ್ರವರ್ತಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಅಭಿಮಾನಿಗಳು ಕಮೆಂಟ್ ಮಾಡಿ ಶುಭ ಕೋರುತ್ತಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ವಿವಾದದಲ್ಲಿ ಸಿಲುಕಿದ್ದ ರಿಯಾ

ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿರುದ್ಧ ಇಡೀ ದೇಶವೇ ಬಾಲಿವುಡ್ ವಿರುದ್ಧ ತಿರುಗಿಬಿದ್ದಿದ್ದರು. ಇನ್ನೊಂದು ಕಡೆ ರಿಯಾ ಚಕ್ರವರ್ತಿ ಮೇಲೆ ಅನುಮಾನ ತೂಗುಗತ್ತಿ ನೇತಾಡುತ್ತಿತ್ತು. ಸುಶಾಂತ್ ಅಭಿಮಾನಿಗಳು ರಿಯಾ ಕಂಡರೆ ಕಿಡಿಕಾರುವಂತಹ ಸ್ಥಿತಿ ನಿರ್ಮಾಣ ಆಗಿತ್ತು. ಯಾಕಂದ್ರೆ, ಸುಶಾಂತ್ ಸಾವಿಗೆ ಕೆಲವೇ ದಿನಗಳ ಮುನ್ನರಿಯಾ ಚಕ್ರವರ್ತಿ, ಸುಶಾಂತ್ ಮನೆಯನ್ನು ತೊರೆದಿದ್ದರು. ಅಲ್ಲದೇ ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರೂ ಒಂಟಿಯಾಗಿ ಬಿಟ್ಟಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದರು.

Sushant singh Rajput 36th birthday rhea chakraborty shares old video

ಸುಶಾಂತ್ ಸಾವಿನ ಬಳಿಕ ರಿಯಾ ಚಕ್ರವರ್ತಿ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. ನಟ ಸುಶಾಂತ್ ಖಾತೆಯಿಂದ ರಿಯಾ ಚಕ್ರವರ್ತಿ ಅಕೌಂಟ್‌ಗೆ ಕೋಟಿಯಷ್ಟು ಹಣ ವರ್ಗಾವಣೆಯಾಗಿದೆ ಎಂದು ಸುಶಾಂತ್ ತಂದೆ ಆರೋಪ ಮಾಡಿದ್ದರು. ಇತ್ತ ರಿಯಾ ಹಾಗೂ ಅವರ ಸಹೋದರ ಸುಶಾಂತ್‌ಗೆ ಮಾದಕ ವಸ್ತುಗಳನ್ನು ಸಪ್ಲೈ ಮಾಡುತ್ತಿದ್ದರು ಎಂಬ ಆರೋಪಗಳನ್ನೂ ಹೊರಿಸಲಾಗಿತ್ತು. ಈ ವೇಳೆ ರಿಯಾ ಚಕ್ರವರ್ತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಸುಶಾಂತ್ ಸಿಂಗ್ ರಜಪೂತ್ ಒಂದು ವೇಳೆ ಬದುಕಿದ್ದರೆ, ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಸುಶಾಂತ್ ಕೊನೆಯದಾಗಿ ನಟಿಸಿದ ಸಿನಿಮಾ 'ದಿಲ್ ಬೇಚಾರ' ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆ ಬಳಿಕ ಅಭಿಮಾನಿಗಳು ಸುಶಾಂತ್ ಸಿಂಗ್ ನೆನಪಿಗಾಗಿಯೇ ಸಿನಿಮಾ ವೀಕ್ಷಿಸಿದ್ದರು. ಕಾಕತಾಳೀಯವೆಂದರೆ, ಈ ಕೊನೆಯ ಸಿನಿಮಾದಲ್ಲೂ ಸುಶಾಂತ್ ಸಿಂಗ್ ರಜಪೂತ್ ಪಾತ್ರ ಸಾವನ್ನಲ್ಲೇ ಅಂತ್ಯ ಕಂಡಿತ್ತು.

More from Filmibeat

English summary
Sushant singh Rajput 36th birthday Rhea chakraborty shares old video. Actress Rhea chakraborty captioned says 'I miss you'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X