ಸುಶಾಂತ್ ಸಿಂಗ್ ಅವರ ಮುದ್ದಿನ ನಾಯಿ ಸತ್ತಿದ್ದು ನಿಜವೇ?: ವಾಸ್ತವವೇನು?
ಸುಶಾಂತ್ ಸಿಂಗ್ ರಜಪೂತ್ ಅವರ ಮುದ್ದಿನ ನಾಯಿ ಫಡ್ಜ್ ಅನ್ನಾಹಾರ ತ್ಯಜಿಸಿ ಮೂಕವಾಗಿ ರೋದಿಸುತ್ತಿದೆ ಎಂಬುದು ವರದಿಯಾಗಿತ್ತು. ಸುಶಾಂತ್ ಬಹುವಾಗಿ ಪ್ರೀತಿಸುತ್ತಿದ್ದ ನಾಯಿ, ಒಡೆಯನ ಅಗಲಿಕೆ ಬಳಿಕ ವೇದನೆ ಅನುಭವಿಸುತ್ತಿತ್ತು. ಸುಶಾಂತ್ ಅವರಿಗಾಗಿ ಮನೆಯ ಸುತ್ತಲೂ ಓಡಾಡುತ್ತಾ ಹುಡುಕುತ್ತಿತ್ತು.
ಸುಶಾಂತ್ ಮತ್ತು ಅವರ ನೆಚ್ಚಿನ ಫಡ್ಜ್ ನಡುವಿನ ಒಡನಾಟವನ್ನು ತೋರಿಸುವ ವಿಡಿಯೋಗಳು ಹಾಗೂ ಫೋಟೊಗಳು ವೈರಲ್ ಆಗಿದ್ದವು. ಫಡ್ಜ್ ಚೆನ್ನಾಗಿರಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದರು. ಆದರೆ ಸೋಮವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡತೊಡಗಿತ್ತು. ಸುಶಾಂತ್ ಅವರ ಸಾವಿನಿಂದ ತೀವ್ರ ನೊಂದಿದ್ದ ಅವರ ನಾಯಿ ಫಡ್ಜ್, ಅನ್ನಾಹಾರ ತ್ಯಜಿಸಿ ಇಂದು ಸತ್ತುಹೋಗಿದೆ ಎಂದು ಅನೇಕರು ಪೋಸ್ಟ್‌ಗಳನ್ನು ಹಾಕಿದ್ದರು. ಮುಂದೆ ಓದಿ...

ಮೃತಪಟ್ಟಿದೆ ಎಂಬ ಸುದ್ದಿ
ಸುಶಾಂತ್ ಸತ್ತ ಬಳಿಕ ಅವರಿಗಾಗಿ ಹುಡುಕಾಡಿದ ಫಡ್ಜ್‌ಗೆ (ಕಪ್ಪು ಲ್ಯಾಬ್ರಡಾರ್) ಅವರು ಮನೆಯಲ್ಲಿ ಇಲ್ಲದೆ ಇರುವುದು ಮತ್ತು ಏನೋ ಸಂಭವಿಸಿದೆ ಎಂಬ ಸುಳಿವು ನೋವುಂಟು ಮಾಡಿದೆ. ಇದರಿಂದ ಅದು ಆಹಾರ ಸೇವಿಸುವುದನ್ನು ನಿಲ್ಲಿಸಿತ್ತು. ಬಹುಶಃ ತನ್ನ ಒಡೆಯನನ್ನು ಮತ್ತೆ ನೋಡಲು ಸಾಧ್ಯವಿಲ್ಲ ಎಂದು ಅದಕ್ಕೆ ಅರ್ಥವಾಗಿರಬೇಕು. ಇಂದು ಅದು ಮೃತಪಟ್ಟಿದೆ ಎಂದು ಅನೇಕರು ಬರೆದುಕೊಂಡಿದ್ದರು.

ವದಂತಿಗಳಷ್ಟೇ...
ಆದರೆ ಇದು ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಲ್ಲ ವದಂತಿಗಳನ್ನು ಸುಶಾಂತ್ ಅವರಿಗೆ ಆಪ್ತರಾಗಿರುವ ಮೂಲಗಳು ನಿರಾಕರಿಸಿವೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ.

ಎಲ್ಲ ನಾಯಿಗಳೂ ಸುರಕ್ಷಿತ
ಫಡ್ಜ್ ಮಾತ್ರವಲ್ಲದೆ, ಸುಶಾಂತ್ ಸಾಕಿದ್ದ ಎಲ್ಲ ನಾಲ್ಕೂ ನಾಯಿಗಳು ಸುರಕ್ಷಿತವಾಗಿವೆ ಮತ್ತು ಕ್ಷೇಮವಾಗಿವೆ. ಅವೆಲ್ಲವೂ ಸುಶಾಂತ್ ಅವರ ಮುಂಬೈನಲ್ಲಿನ ಹಳೆಯ ಮನೆ ಪಾವ್ನಾದಲ್ಲಿವೆ ಎಂದು ಅವರ ಆಪ್ತರು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಅವುಗಳನ್ನು ಯಾರು ನೋಡಿಕೊಳ್ಳುತ್ತಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ.

ಸುಶಾಂತ್‌ಗೆ ಹುಡುಕಾಡುತ್ತಿದೆ
ಸುಶಾಂತ್ ಕಣ್ಮರೆಯಿಂದ ಫಡ್ಜ್ ಕಂಗಾಲಾಗಿರುವುದು ನಿಜ. ಅದು ತುಂಬಾ ಬೇಸರದಲ್ಲಿದೆ. ಆದರೆ ಸತ್ತಿದೆ ಎಂಬ ಸುದ್ದಿ ಸುಳ್ಳು. ಈಗಲೂ ಮನೆಯಲ್ಲಿ ಓಡಾಡುತ್ತಾ ಸುಶಾಂತ್‌ಗಾಗಿ ಹುಡುಕಾಡುತ್ತಿದೆ. ಸುಶಾಂತ್ ಮತ್ತು ಫಡ್ಜ್ ಬಾಂಧವ್ಯವನ್ನು ತೋರಿಸುವ ವಿಡಿಯೋಗಳನ್ನು ಮನ್ವೀರ್ ಸಿಂಗ್ ಗುರ್ಜರ್ ಇತ್ತೀಚೆಗೆ ಶೇರ್ ಮಾಡಿದ್ದರು.

ಫಡ್ಜ್ ಜತೆ ರನ್ನಿಂಗ್
ತಮ್ಮ ಮುದ್ದಿನ ನಾಯಿ ಬಗ್ಗೆ ಸುಶಾಂತ್ ಟ್ವಿಟ್ಟರ್‌ನಲ್ಲಿ ಹಾಕಿದ್ದ ಹಳೆಯ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. 2018ರ ಡಿಸೆಂಬರ್‌ನಲ್ಲಿ ಫಡ್ಜ್ ಜತೆ ರನ್ನಿಂಗ್ ರೇಸ್ ಮಾಡುವ ವಿಡಿಯೋವನ್ನು ಸುಶಾಂತ್ ಪೋಸ್ಟ್ ಮಾಡಿದ್ದರು.

ಎಲ್ಲ ಮರೆತರೂ ತೊಂದರೆಯಿಲ್ಲ
ಅದರ ಕ್ಯಾಪ್ಷನ್ ಕಣ್ಣೀರು ತರಿಸುವಂತಿದೆ. 'ನೀನು ನನ್ನನ್ನು ನೆನಪಿಸಿಕೊಂಡರೆ ಸಾಕು. ಎಲ್ಲರೂ ನನ್ನನ್ನು ಮರೆತರೂ ತಾನು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಸುಶಾಂತ್ ಬರೆದಿದ್ದರು. ಸುಶಾಂತ್ ಅವರ ಪ್ರೇಮ ವೈಫಲ್ಯದ ಕಥೆ ಬಲ್ಲವರು, ಅವರ ಸಿನಿಮಾ ಜೀವನದ ಸವಾಲುಗಳು ಮತ್ತು ಸಂಕಷ್ಟಗಳನ್ನು ಅರಿತವರ ಹೃದಯದಲ್ಲಿ ಇದು ವೇದನೆ ಮೂಡಿಸುವಂತಿದೆ.


Click it and Unblock the Notifications











