ಸುಶಾಂತ್ ಸಿಂಗ್ ಸಾವಿಗೆ ಸಲ್ಮಾನ್ ಖಾನ್ ಪರೋಕ್ಷ ಕಾರಣ?: ಪ್ರಕರಣಕ್ಕೆ ಟ್ವಿಸ್ಟ್

ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಒಂದು ತಿಂಗಳು ಕಳೆದಿದೆ. ಅದರ ತನಿಖೆ ನಡೆಸುತ್ತಿರುವ ಬಾಂದ್ರಾ ಪೊಲೀಸರು ಅನೇಕರಿಂದ ಹೇಳಿಕೆಗಳನ್ನು ಪಡೆದುಕೊಂಡಿದೆ. ಪ್ರಕರಣದ ಕುರಿತು ಪೊಲೀಸರು ಅಂತಿಮ ವರದಿ ಸಲ್ಲಿಸಲು ಇನ್ನೂ ಸಮಯ ಬೇಕಾಗಬಹುದು. ಇನ್ನೊಂದೆಡೆ ಸುಶಾಂತ್ ಸಿಂಗ್ ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕರು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸುತ್ತಲೇ ಇದ್ದಾರೆ.

Recommended Video

ಶಿವಣ್ಣನ ಈ ದಾಖಲೆಯನ್ನು ಯಾವ ಭಾಷೆಯ ಯಾವ ನಟನೂ ಮಾಡಿಲ್ಲ | Shivarajkumar | Pratham | Oneindia Kannada

ಅನೇಕ ಸೆಲೆಬ್ರಿಟಿಗಳಿಗೆ ಮ್ಯಾನೇಜರ್ ಆಗಿ ಕೆಲಸ ಮಾಡಿರುವ ರೇಷ್ಮಾ ಶೆಟ್ಟಿ ಅವರಿಂದ ಸುಶಾಂತ್ ಸಾವಿನ ಸಂಬಂಧ ಬಾಂದ್ರಾ ಪೊಲೀಸರು ಶುಕ್ರವಾರ ಹೇಳಿಕೆ ದಾಖಲಿಸಿಕೊಂಡಿದ್ದರು. ಸುಮಾರು ಐದು ಗಂಟೆ ರೇಷ್ಮಾ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಮುಂದೆ ಓದಿ...

ಸಲ್ಮಾನ್ ಖಾನ್ ಜತೆ ಕೆಲಸ

ಸಲ್ಮಾನ್ ಖಾನ್ ಜತೆ ಕೆಲಸ

ಬಾಲಿವುಡ್‌ನ ಪ್ರಮುಖ ಟ್ಯಾಲೆಂಟ್ ಮ್ಯಾನೇಜರ್‌ಗಳಲ್ಲಿ ಒಬ್ಬರಾಗಿರುವ ರೇಷ್ಮಾ ಶೆಟ್ಟಿ, ಬಾಲಿವುಡ್‌ನ 'ಎ ಲಿಸ್ಟ್‌'ನಲ್ಲಿರುವ ಕಲಾವಿದರ ಸಿನಿಮಾ ಒಪ್ಪಂದಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಹಿಂದೆ ಸಲ್ಮಾನ್ ಖಾನ್ ಅವರಿಗೂ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಇಬ್ಬರೂ ದೂರವಾಗಲು ಕಾರಣ ಎನ್ನುವುದು ಬಹಿರಂಗವಾಗಿಲ್ಲ.

ಸುಮಾರು 35 ಮಂದಿಯಿಂದ ಹೇಳಿಕೆ

ಸುಮಾರು 35 ಮಂದಿಯಿಂದ ಹೇಳಿಕೆ

ಇದುವರೆಗೂ ಮುಂಬೈ ಪೊಲೀಸರು 35ಕ್ಕೂ ಹೆಚ್ಚು ಮಂದಿಯಿಂದ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಜೂನ್ 14ರಂದು ಸುಶಾಂತ್ ಬಾಂದ್ರಾದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದರು. ಅವರ ಸಾವು ಕೊಲೆಯೇ, ಅಥವಾ ಆತ್ಮಹತ್ಯೆಯೇ? ಅವರಿಗೆ ಯಾರ ಜತೆಗಾದರೂ ವೃತ್ತಿಪರ ವೈಷಮ್ಯವಿತ್ತೇ? ಅವರ ಮಾನಸಿಕ ಖಿನ್ನತೆಗೆ ಕಾರಣಗಳೇನು ಮುಂತಾದ ಸಂಗತಿಗಳನ್ನು ವಿವಿಧ ಆಯಾಮಗಳಿಂದ ತನಿಖೆ ಮಾಡುತ್ತಿದ್ದಾರೆ.

ಸುಶಾಂತ್ ಸಾವಿನ ಹಿಂದೆ ಅನೇಕ ಹೆಸರು

ಸುಶಾಂತ್ ಸಾವಿನ ಹಿಂದೆ ಅನೇಕ ಹೆಸರು

ಸುಶಾಂತ್ ಸಾವಿನ ಪ್ರಕರಣದಲ್ಲಿ ಸಲ್ಮಾನ್ ಖಾನ್, ಕರಣ್ ಜೋಹರ್, ರಿಯಾ ಚಕ್ರಬೊರ್ತಿ, ಮಹೇಶ್ ಭಟ್, ಸಂದೀಪ್ ಸಿಂಗ್, ಸೂರಜ್ ಪಾಂಚೋಲಿ, ಯಶ್ ರಾಜ್ ಫಿಲಂಸ್ ಮುಂತಾದವರ ಹೆಸರುಗಳು ಕೇಳಿಬರುತ್ತಿವೆ. ಸುಶಾಂತ್ ಸಾವಿನಿಂದ ಘಾಸಿಗೊಂಡಿರುವ ಅಭಿಮಾನಿಗಳು ಪ್ರಮುಖ ನಟರು, ನಿರ್ದೇಶಕರು ಮತ್ತು ನಿರ್ಮಾಪಕರು ಯಾವ ರೀತಿ ಅದಕ್ಕೆ ಸಂಬಂಧಿಸಿದ್ದಾರೆ ಎಂದು ಹಳೆಯ ವಿಡಿಯೋ, ಹೇಳಿಕೆಗಳನ್ನು ಹೊರಗಿಟ್ಟು ಆರೋಪ ಮಾಡುತ್ತಿದ್ದಾರೆ.

ಸುಶಾಂತ್ ಕಂಡರೆ ಸಲ್ಮಾನ್‌ಗೆ ಆಗುತ್ತಿರಲಿಲ್ಲ?

ಸುಶಾಂತ್ ಕಂಡರೆ ಸಲ್ಮಾನ್‌ಗೆ ಆಗುತ್ತಿರಲಿಲ್ಲ?

ರೇಷ್ಮಾ ಶೆಟ್ಟಿ ಅವರ ವಿಚಾರಣೆ ಬಳಿಕ ಸಲ್ಮಾನ್ ಖಾನ್ ಮತ್ತು ಸುಶಾಂತ್ ಸಿಂಗ್ ನಡುವೆ ಯಾವ ರೀತಿಯ ಸಂಬಂಧವಿತ್ತು ಎಂಬುದು ಚರ್ಚೆಯಲ್ಲಿದೆ. ಸಲ್ಮಾನ್ ಖಾನ್ ಹಾಗೂ ಸುಶಾಂತ್ ನಡುವೆ ಯಾವುದೇ ರೀತಿಯ ಮಾತುಕತೆ ಇರಲಿಲ್ಲ. ಆದರೆ ಸಲ್ಮಾನ್‌ಗೆ ಸುಶಾಂತ್ ಕಂಡರೆ ಆಗುತ್ತಿರಲಿಲ್ಲ. ಇದಕ್ಕೆ ಕಾರಣ ಸೂರಜ್ ಪಾಂಚೋಲಿ ಎಂದು ಹೇಳಲಾಗಿದೆ.

ಪಾರ್ಟಿಯೊಂದರಲ್ಲಿ ಸುಶಾಂತ್-ಸೂರಜ್ ಜಗಳ

ಪಾರ್ಟಿಯೊಂದರಲ್ಲಿ ಸುಶಾಂತ್-ಸೂರಜ್ ಜಗಳ

ಸಲ್ಮಾನ್ ಖಾನ್ ಮತ್ತು ಸೂರಜ್ ಪಾಂಚೋಲಿ ಅವರ ನಡುವೆ ಉತ್ತಮ ಸಂಬಂಧವಿದೆ. ಹಿರಿಯ ನಿರ್ಮಾಪಕ ಆದಿತ್ಯ ಪಾಂಚೋಲಿ ಮಗ ಸೂರಜ್ ಅವರನ್ನು ಬಾಲಿವುಡ್‌ಗೆ ಹೀರೋ ಆಗಿ ಪರಿಚಯಿಸಿದ್ದೇ ಸಲ್ಮಾನ್ ಖಾನ್. ಅಲ್ಲದೆ, ಜಿಯಾ ಖಾನ್ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಸಲ್ಮಾನ್ ಖಾನ್ ಪ್ರಯತ್ನಿಸಿದ್ದಾರೆ ಎಂದು ಸ್ವತಃ ಜಿಯಾ ಖಾನ್ ತಾಯಿ ಆರೋಪಿಸಿದ್ದರು. ಪಾರ್ಟಿಯೊಂದರಲ್ಲಿ ಸೂರಜ್ ಮತ್ತು ಸುಶಾಂತ್ ನಡುವೆ ಜಗಳ ನಡೆದಿತ್ತು. ಈ ವಿಚಾರವನ್ನು ಸಲ್ಮಾನ್‌ಗೆ ಸೂರಜ್ ತಿಳಿಸಿದ್ದರು. ಇದರಿಂದ ಸುಶಾಂತ್ ವಿರುದ್ಧ ಸಲ್ಮಾನ್ ಮಸಲತ್ತು ಮಾಡಲು ಆರಂಭಿಸಿದ್ದರು ಎನ್ನಲಾಗಿದೆ. ಆದರೆ ತಮ್ಮಿಬ್ಬರ ನಡುವೆ ಜಗಳ ನಡೆದಿತ್ತು ಎನ್ನುವುದನ್ನು ಸೂರಜ್ ನಿರಾಕರಿಸಿದ್ದಾರೆ.

ಸುಶಾಂತ್‌ಗೆ ಸಲ್ಮಾನ್ ಅಡ್ಡಗಾಲು?

ಸುಶಾಂತ್‌ಗೆ ಸಲ್ಮಾನ್ ಅಡ್ಡಗಾಲು?

ಅಲ್ಲಿಂದ ಸಲ್ಮಾನ್ ಖಾನ್, ಸುಶಾಂತ್ ಅವರ ಸಿನಿಮಾಗಳಿಗೆ ಅಡ್ಡಗಾಲು ಹಾಕಲು ಪ್ರಾರಂಭಿಸಿದ್ದರು. ಸುಶಾಂತ್‌ಗೆ ಅವಕಾಶಗಳು ಸಿಗಬಾರದು ಎಂದು ಪಟ್ಟು ಹಿಡಿದರು. ಯಶ್ ರಾಜ್ ಫಿಲಂಸ್ ಬ್ಯಾನರ್‌ನಡಿ ಸುಶಾಂತ್ ಒಪ್ಪಂದ ಮಾಡಿಕೊಂಡಿದ್ದರು. ಅವರ ಸಿನಿಮಾಗಳ ಯಶಸ್ಸಿಗೆ ತಕ್ಕಂತೆ ಸಂಭಾವನೆ ಹೆಚ್ಚಿಸಲು ಕರಾರು ಮಾಡಲಾಗಿತ್ತು. ಅದರಂತೆ ಡಿಟೆಕ್ಟಿವ್ ಬ್ಯೋಮಕೇಶ್ ಭಕ್ಷಿ ಮತ್ತು ಶುದ್ಧ್ ದೇಸಿ ರೊಮ್ಯಾನ್ಸ್ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ನಂತರ ಶೇಖರ್ ಕಪೂರ್ ನಿರ್ದೇಶನದ 'ಪಾನಿ' ಚಿತ್ರದಲ್ಲಿ ನಟಿಸಬೇಕಿತ್ತು. ಈ ಚಿತ್ರದ ಬಗ್ಗೆ ಬಹಳ ಕನಸು ಕಂಡಿದ್ದ ಸುಶಾಂತ್, ಅದಕ್ಕಾಗಿ ತಯಾರಿ ಕೂಡ ನಡೆಸಿದ್ದರು.

ಆದಿತ್ಯ ಚೋಪ್ರಾಗೆ ಸಲ್ಮಾನ್ ಬೆದರಿಕೆ

ಆದಿತ್ಯ ಚೋಪ್ರಾಗೆ ಸಲ್ಮಾನ್ ಬೆದರಿಕೆ

ಅತ್ತ ಸಲ್ಮಾನ್ ಈ ಚಿತ್ರವನ್ನು ನಿಲ್ಲಿಸುವಂತೆ ಯಶ್ ರಾಜ್ ಸಂಸ್ಥೆ ಮೇಲೆ ಒತ್ತಡ ಹೇರತೊಡಗಿದ್ದರು. ಆದಿತ್ಯ ಚೋಪ್ರಾ ಒಪ್ಪದೆ ಇದ್ದಾಗ 'ಸುಲ್ತಾನ್' ಮತ್ತು 'ಟೈಗರ್ ಜಿಂದಾ ಹೈ' ಚಿತ್ರಗಳಲ್ಲಿ ನಟಿಸುವುದಿಲ್ಲ ಎಂಬ ಬೆದರಿಕೆ ಹಾಕಿದ್ದರು. ಈ ಎರಡೂ ಚಿತ್ರಗಳ ಮೇಲೆ ಆಗಲೇ ಬಹಳ ಬಂಡವಾಳ ಹೂಡಿದ್ದರಿಂದ ವಿಧಿಯಿಲ್ಲದೆ 'ಪಾನಿ' ಚಿತ್ರವನ್ನು ನಿಲ್ಲಿಸಿದರು. ಪಾನಿ ಚಿತ್ರದ ಸಿದ್ಧತೆಯೂ ಐದು ಕೋಟಿ ರೂ ವೆಚ್ಚ ಮಾಡಲಾಗಿತ್ತು.

ಕೈತಪ್ಪಿದ ಪ್ರಮುಖ ಚಿತ್ರಗಳು

ಕೈತಪ್ಪಿದ ಪ್ರಮುಖ ಚಿತ್ರಗಳು

ಯಶ್ ರಾಜ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರಿಂದ ಸುಶಾಂತ್ ಅವರು ಸಂಜಯ್ ಲೀಲಾ ಭನ್ಸಾಲಿ ಅವರ ಕಡೆಯಿಂದ ಬಂದ ಎರಡು ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಈ ನಡುವೆ 'ಪಾನಿ' ಕೂಡ ನಿಂತು ಹೋಯಿತು. ಅವರಿಗೆ ಸಿಗಬೇಕಿದ್ದ ಪ್ರಮುಖ ಚಿತ್ರಗಳಲ್ಲಿ ಹೆಚ್ಚಿನವರು ರಣವೀರ್ ಸಿಂಗ್‌ ಪಾಲಾದವು. ಅವುಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಯಶಸ್ಸು ಕೂಡ ಕಂಡವು. ಇದರಿಂದ ಸುಶಾಂತ್ ಖಿನ್ನತೆಗೆ ಒಳಗಾಗತೊಡಗಿದರು. ಇದೆಲ್ಲವೂ ಅವರನ್ನು ಮಾನಸಿಕವಾಗಿ ಜರ್ಜರಿತವಾಗುವಂತೆ ಮಾಡಿತ್ತು ಎಂದು ಹೇಳಲಾಗಿದೆ.

More from Filmibeat

English summary
Sushant Singh Rajput's death case: sources says Salman Khan has pressurized producer Aditya Chopra to shelve Paani movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X