For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಅಭಿನಯದ ಕೊನೆಯ ಚಿತ್ರ ಒಟಿಟಿಯಲ್ಲಿ ಬಿಡುಗಡೆ: ಅಭಿಮಾನಿಗಳ ಅಸಮಾಧಾನ

  |

  ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ 'ದಿಲ್ ಬೆಚಾರ' ಮುಂದಿನ ತಿಂಗಳು ತೆರೆ ಕಾಣಲಿದೆ.

  ಬುಲೆಟ್ ಓಡಿಸಲು ಹೋಗಿ ಬಿದ್ದ ಶ್ರದ್ಧಾ ಶ್ರೀನಾಥ್ | Shraddha Srinath on Royal Enfield | Filmibeat Kannada

  ಕ್ಯಾಸ್ಟಿಂಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದ ಮುಖೇಶ್ ಚಾಬ್ರಾ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಸಂಘಿ ನಟಿಸಿದ್ದಾರೆ. ಜುಲೈ 24ರಂದು ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

  ಸುಶಾಂತ್ ಸಿಂಗ್ ಸಾವಿನ ಕುರಿತು ಮತ್ತೊಂದು ಮರಣೋತ್ತರ ಪರೀಕ್ಷೆ: ವರದಿಯಲ್ಲಿ ಏನಿದೆ?ಸುಶಾಂತ್ ಸಿಂಗ್ ಸಾವಿನ ಕುರಿತು ಮತ್ತೊಂದು ಮರಣೋತ್ತರ ಪರೀಕ್ಷೆ: ವರದಿಯಲ್ಲಿ ಏನಿದೆ?

  ಆದರೆ ಸುಶಾಂತ್ ಅವರ ಸಿನಿಮಾ ಬಿಡುಗಡೆ ವಿಚಾರವಾಗಿ ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರ ಬಿಡುಗಡೆ ವಿಳಂಬವಾಗಿದ್ದರೂ ಅಡ್ಡಿಯಿರಲಿಲ್ಲ. ನಾವು ಅವರ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡಲು ಬಯಸಿದ್ದೆವು. ಆದರೆ ಒಟಿಟಿಯಲ್ಲಿ ಬಿಡುಗಡೆ ಮಾಡುವ ಮೂಲಕ ಆ ಅವಕಾಶವನ್ನೇ ಕಿತ್ತುಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಸುಶಾಂತ್ ಕೊಡುಗೆಯನ್ನು ಸಂಭ್ರಮಿಸೋಣ

  ಸುಶಾಂತ್ ಕೊಡುಗೆಯನ್ನು ಸಂಭ್ರಮಿಸೋಣ

  'ಪ್ರೀತಿ, ಭರವಸೆ ಮತ್ತು ಕೊನೆಯಿಲ್ಲದ ನೆನಪುಗಳ ಕಥೆ. ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಸಂಪತ್ತನ್ನು ನಮ್ಮೆಲ್ಲರ ಮನಸಲ್ಲಿ ಮತ್ತಷ್ಟು ಆಳವಾಗಿಸುವ ಮೂಲಕ ಸಂಭ್ರಮಿಸೋಣ. ಎಲ್ಲರ ಮನೆ ಬಾಗಿಲಿಗೆ ದಿಲ್ ಬೆಚಾರಾ ಜುಲೈ 24ರಂದು ತೆರೆಗೆ ಬರಲಿದೆ' ಎಂದು ಮುಕೇಶ್ ಛಾಬ್ರಿಯಾ ಹೇಳಿದ್ದಾರೆ.

  ನನ್ನ ಆಪ್ತ ಸ್ನೇಹಿತ

  ನನ್ನ ಆಪ್ತ ಸ್ನೇಹಿತ

  'ಸುಶಾಂತ್ ಅವರು ನನ್ನ ಪದಾರ್ಪಣೆಯ ಚಿತ್ರದ ಹೀರೋ ಮಾತ್ರವಲ್ಲ, ನನ್ನ ಕಷ್ಟ ಸುಖಗಳಲ್ಲಿ ನನ್ನ ಜತೆಗಿದ್ದ ಆಪ್ತ ಸ್ನೇಹಿತ ಕೂಡ. 'ಕಾಯ್ ಪೋ ಚೇ'ಯಿಂದ 'ದಿಲ್ ಬೆಚಾರಾ'ವರೆಗೂ ನಾವು ಆತ್ಮೀಯತೆ ಹೊಂದಿದ್ದೆವು. ನನ್ನ ಮೊದಲ ಸಿನಿಮಾ ತಾವೇ ಮಾಡುವುದಾಗಿ ಅವರು ಮಾತು ಕೊಟ್ಟಿದ್ದರು' ಎಂದಿದ್ದಾರೆ.

  ಬಿಹಾರದಲ್ಲಿ ಕರಣ್, ಸಲ್ಮಾನ್, ಆಲಿಯಾ ಭಟ್ ಸಿನಿಮಾಗಳಿಗೆ ನಿಷೇಧ?ಬಿಹಾರದಲ್ಲಿ ಕರಣ್, ಸಲ್ಮಾನ್, ಆಲಿಯಾ ಭಟ್ ಸಿನಿಮಾಗಳಿಗೆ ನಿಷೇಧ?

  ಒಂಟಿಯಾಗಿ ಬಿಟ್ಟುಹೋದರು...

  ಒಂಟಿಯಾಗಿ ಬಿಟ್ಟುಹೋದರು...

  'ನಾವು ಜತೆಗೂಡಿ ಅನೇಕ ಯೋಜನೆಗಳನ್ನು ಮಾಡಿದ್ದೆವು. ಜತೆಗಿದ್ದು ಎಷ್ಟೋ ಕನಸುಗಳನ್ನು ಕಂಡಿದ್ದೆವು. ಆದರೆ ಈ ಸಿನಿಮಾ ಬಿಡುಗಡೆ ಮಾಡುವ ಮುನ್ನ ನನ್ನನ್ನು ಒಂಟಿಯಾಗಿ ಬಿಟ್ಟುಹೋಗುತ್ತಾರೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ' ಎಂದು ಭಾವುಕರಾಗಿ ಹೇಳಿದ್ದಾರೆ.

  ಯಾರೂ ನೋಡಿರದ ಉಡುಗೊರೆ

  ಯಾರೂ ನೋಡಿರದ ಉಡುಗೊರೆ

  ದಿನ್ ಬೆಚಾರಾ ಚಿತ್ರವು ಜಾನ್ ಗ್ರೀನ್ ಅವರ ಜನಪ್ರಿಯ ಕಾದಂಬರಿ 'ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್'ನ ಅಧಿಕೃತ ರೀಮೇಕ್ ಆಗಿದ್ದು, ಸಂಜನಾ ಸಂಘಿ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಗೆ ನಟನೆಯ ಕಲೆಗಳನ್ನು ಹೇಳಿಕೊಟ್ಟು ತಿದ್ದಿದ್ದ ಸುಶಾಂತ್ ಬಗ್ಗೆ ಸಂಜನಾ ಅನೇಕ ಭಾವುಕ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

  ನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿ

  ಸುಶಾಂತ್ ಅವರೆಡೆಗಿನ ಪ್ರೀತಿ ಮತ್ತು ಸಿನಿಮಾ ಕುರಿತ ಅವರ ಪ್ರೀತಿಗಾಗಿ ಈ ಚಿತ್ರವು ಎಲ್ಲ ಚಂದಾದಾರರು ಮತ್ತು ಚಂದಾದಾರರಾಗದವರಿಗೂ ಲಭ್ಯವಾಗಲಿದೆ. ಯಾರೂ ಇದುವರೆಗೂ ನೋಡಿರದ ಉಡುಗೊರೆ ಇದು ಎಂದು ಸಂಜನಾ ತಿಳಿಸಿದ್ದಾರೆ.

  ಸುಶಾಂತ್ ಬಗ್ಗೆ ಸಿನಿಮಾ

  ಸುಶಾಂತ್ ಬಗ್ಗೆ ಸಿನಿಮಾ

  ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬೆನ್ನಲ್ಲೇ ಅವರ ಕುರಿತು ಎರಡು ಸಿನಿಮಾಗಳು ತಯಾರಾಗಲು ಸಿದ್ಧತೆ ನಡೆದಿದೆ. ಶಾಮಿಕ್ ಮೌಲಿಕ್ ನಿರ್ದೇಶನದಲ್ಲಿ 'ಸೂಸೈಡ್ ಆರ್ ಮರ್ಡರ್?- ಎ ಸ್ಟಾರ್ ವಾಸ್ ಲಾಸ್ಟ್' ಎಂಬ ಶೀರ್ಷಿಕೆಯ ಚಿತ್ರ ಇತ್ತೀಚೆಗೆ ಘೋಷಣೆಯಾಗಿತ್ತು.

  ಮತ್ತೊಂದು ಚಿತ್ರಕ್ಕೆ ಸಜ್ಜು

  ಮತ್ತೊಂದು ಚಿತ್ರಕ್ಕೆ ಸಜ್ಜು

  ಈಗ ನಿರ್ದೇಶಕ ಸನೋಜ್ ಮಿಶ್ರಾ, ಸುಶಾಂತ್ ಬದುಕನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ 'ಸುಶಾಂತ್' ಎಂಬ ಶೀರ್ಷಿಕೆ ಇರಿಸಿದ್ದಾರೆ. ಆದರೆ ಇದು ಸುಶಾಂತ್ ಅವರ ಬಯೋಪಿಕ್ ಅಲ್ಲ. ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಮುಂಬೈಗೆ ಬರುವ ಶ್ರಮಿಕರ ಕಥೆ ಇದು. ಬಾಲಿವುಡ್‌ನಲ್ಲಿ ಕಿರುಕುಳದಿಂದ ದುಡುಕಿನ ಹೆಜ್ಜೆ ತೆಗೆದುಕೊಳ್ಳುವಂತೆ ಒತ್ತಡ ಅನುಭವಿಸುವವರ ಕುರಿತಾಗಿ ಕಥೆ ಹೇಳಲಾಗುತ್ತದೆ. ಈ ಚಿತ್ರವನ್ನು ಬಿಹಾರ ಮತ್ತು ಮುಂಬೈನಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

  English summary
  Sushant Singh Rajput’s last movie ‘Dil Bechara’ to release on OTT on July 24, fans unhappy with the OTT release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X